![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 4, 2018, 4:31 PM IST
ಪುಣೆ: ಪುಣೆ ತುಳುಕೂಟದ ವಾರ್ಷಿಕ ಮಹಾಸಭೆಯು ಡಿ. 2 ರಂದು ನಗರದ ವಾರ್ಜೆಯ ಹೊಟೇಲ್ ನ್ಯೂ ಸಾಗರ್ ಇದರ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು ಇವರ ಅಧ್ಯಕ್ಷತೆಯಲ್ಲಿ ಜರಗಿತು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ತಾರಾನಾಥ ಕೆ ರೈ ಮೇಗಿನಗುತ್ತು, ಸ್ಥಾಪಕಾಧ್ಯಕ್ಷ ಜಯ ಕೆ. ಶೆಟ್ಟಿ, ಗೌರವಾಧ್ಯಕ್ಷ ಮಿಯ್ನಾರು ರಾಜ್ ಕುಮಾರ್ ಎಂ. ಶೆಟ್ಟಿ, ಪಿಂಪ್ರಿ-ಚಿಂಚಾÌಡ್ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ ಕುರ್ಕಾಲ್, ಉಪಾಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ, ಪ್ರಧಾನ ಕಾರ್ಯದರ್ಶಿ ಕಿರಣ್ ಬಿ. ರೈ ಕರ್ನೂರು, ಕೋಶಾಧಿಕಾರಿ ಸಂತೋಷ್ ಶೆಟ್ಟಿ ಎಣ್ಣೆಹೊಳೆ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಜಾತಾ ಡಿ, ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾಯವಾದಿ ರೋಹನ್ ಪಿ. ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಕಿರಣ್ ಬಿ. ರೈ ಕರ್ನೂರು ವಾರ್ಷಿಕ ಕಾರ್ಯಚಟುವಟಿಕೆಗಳ ವರದಿಯನ್ನು ಸಭೆಯ ಮುಂದಿಟ್ಟರು. ಕೋಶಾಧಿಕಾರಿ ಸಂತೋಷ್ ಶೆಟ್ಟಿ ಎಣ್ಣೆಹೊಳೆ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಲೆಕ್ಕಪತ್ರವನ್ನು ಸರ್ವಾನುಮತದಿಂದ ಅನುಮೋದಿಸಲಾಯಿತು.
ಈ ಸಂದರ್ಭ 2018-20 ರ ಅವಧಿಗೆ ಸಂಘದ ನೂತನ ಅಧ್ಯಕ್ಷರನ್ನಾಗಿ ಹೊಟೇಲ್ ಉದ್ಯಮಿ ಮೋಹನ್ ಶೆಟ್ಟಿ ಎಣ್ಣೆಹೊಳೆ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಗೊಳಿಸಲಾಯಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯನ್ನಾಗಿ ಸುಜಾತಾ ಡಿ. ಶೆಟ್ಟಿ ಅವರನ್ನು ಆಯ್ಕೆಗೊಳಿಸಲಾಯಿತು. ಅದೇ ರೀತಿ ಯುವ ವಿಭಾಗದ ಕಾರ್ಯಾಧ್ಯಕ್ಷರನ್ನಾಗಿ ನ್ಯಾಯವಾದಿ ರೋಹನ್ ಪಿ. ಶೆಟ್ಟಿ ಅವರನ್ನು ಪುನರಾಯ್ಕೆಗೊಳಿಸಲಾಯಿತು. ಸಂಘದ ಗೌರವಾಧ್ಯಕ್ಷರಾಗಿ ತಾರಾನಾಥ ಕೆ ರೈ ಮೇಗಿನಗುತ್ತು ರವರನ್ನು ನೇಮಕಗೊಳಿಸಲಾಯಿತು.
ಈ ಸಂದರ್ಭ ಪುಣೆ ತುಳುಕೂಟದ ಪಿಂಪ್ರಿ-ಚಿಂಚಾÌಡ್ ಪ್ರಾದೇಶಿಕ ಸಮಿತಿಯನ್ನು ಸಮಿತಿಯ ಯಶಸ್ವಿ ಕಾರ್ಯವೈಖರಿ ಹಾಗೂ ಪಿಂಪ್ರಿ ಚಿಂಚಾÌಡ್ ಪರಿಸರದಲ್ಲಿರುವ ತುಳುನಾಡ ಬಾಂಧವ-ಸದಸ್ಯರ ಸಂಖ್ಯೆ ಗಣನೀಯವಾಗಿ ಏರಿದ ಪರಿಣಾಮವಾಗಿ ಸಮಿತಿಯನ್ನು ಪ್ರತ್ಯೇಕವಾದ ಸಂಸ್ಥೆಯಾಗಿಸುವ ಪ್ರಸ್ತಾವವನ್ನು ಅಧ್ಯಕ್ಷ ತಾರಾನಾಥ ಕೆ. ರೈ ಸಭೆಯ ಮುಂದಿಟ್ಟರು. ಈ ಬಗ್ಗೆ ಸದಸ್ಯರೆಲ್ಲರ ಒಮ್ಮತದ ನಿರ್ಧಾರದಂತೆ ಇನ್ನು ಮುಂದೆ ಪ್ರಾದೇಶಿಕ ಸಮಿತಿಯ ಬದಲಾಗಿ ತುಳುಕೂಟ ಪಿಂಪ್ರಿ-ಚಿಂಚಾÌಡ್ ಎನ್ನುವ ಸ್ವತಂತ್ರ ಸಂಸ್ಥೆಯಾಗಿ ಕಾರ್ಯಾಚರಿಸಲು ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಸಂಘದ ಸ್ಥಾಪಕಾಧ್ಯಕ್ಷ ಜಯ ಕೆ. ಶೆಟ್ಟಿ ಅವರು ಮಾತನಾಡಿ, ನಮ್ಮ ಸಂಘವು ಇಂದು ಹೆಮ್ಮರವಾಗಿ ಬೆಳೆದರೂ ಸಂಘಕ್ಕೊಂದು ಸ್ವಂತ ಕಚೇರಿಯನ್ನು ಹೊಂದದಿರುವುದಕ್ಕೆ ಬೇಸರವಾಗುತ್ತಿದೆ. ಮುಂದೆ ಈ ಬಗ್ಗೆ ಕಾರ್ಯಪ್ರವೃತ್ತವಾಗಬೇಕಿದೆ ಎಂದರು. ಸಂಘದ ಯುವ ವಿಭಾಗದ ಕಾರ್ಯಾಧ್ಯಕ್ಷ ರೋಹನ್ ಪಿ. ಶೆಟ್ಟಿ ಮಾತನಾಡಿ, ಮತ್ತೂಮ್ಮೆ ನನ್ನ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ ಸಮಿತಿಗೆ ವಂದನೆಗಳು. ನಾನು ಕೇವಲ ಹೆಸರಿಗೆ ಮಾತ್ರ ಕಾರ್ಯಾಧ್ಯಕ್ಷ ಆದರೆ ನನ್ನ ಸಮಿತಿಯ ಎಲ್ಲರಿಗೂ ಅಷ್ಟೇ ಜವಾಬ್ದಾರಿಯಿದೆ. ಇದುವರೆಗೆ ಸಂಘದ ಅಧ್ಯಕ್ಷ ತಾರಾನಾಥ ರೈ, ಕಾರ್ಯಕಾರಿ ಸಮಿತಿ ,ಮಹಿಳಾ ವಿಭಾಗ ಎಲ್ಲರೂ ಉತ್ತಮ ಸಹಕಾರ ನೀಡಿ¨ªಾರೆ. ಎಲ್ಲರಿಗೂ ವಂದನೆಗಳು ಎಂದರು.
ನೂತನವಾಗಿ ಆಯ್ಕೆಗೊಂಡ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ಸುಜಾತಾ ಡಿ. ಶೆಟ್ಟಿ ಅವಕಾಶ ನೀಡಿದ ಸಂಘಕ್ಕೆ ವಂದನೆಗಳು. ಮುಂದೆಯೂ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಆಶಿಸಿದರು. ಸಂಘದ ಸಲಹಾ ಸಮಿತಿ ಸದಸ್ಯ ವಿಶ್ವನಾಥ ಶೆಟ್ಟಿ ಪಾಂಗಾಳ ಮಾತನಾಡಿ, ಪುಣೆಯಲ್ಲಿ ತುಳುಕೂಟ ಇಂದು ಉತ್ತಮ ಹಾದಿಯಲ್ಲಿ ಮುನ್ನಡೆಯುತ್ತಿದೆ. ಮುಂದೆ ಇದೊಂದು ಕಲ್ಪವೃಕ್ಷದಂತೆ ಕಾರ್ಯನಿರ್ವಹಿಸಬೇಕಾಗಿದೆ. ಪ್ರತಿಯೋರ್ವರೂ ನಮ್ಮದೇ ಸಂಘ ಎಂಬ ಅಭಿಮಾನ ಬೆಳೆಸಿಕೊಳ್ಳಬೇಕಾಗಿದೆ ಎಂದರು.
ಸಲಹಾ ಸಮಿತಿ ಸದಸ್ಯರಾದ ಪ್ರವೀಣ್ ಶೆಟ್ಟಿ ಪುತ್ತೂರು ಮಾತನಾಡಿ, ಪುಣೆಯಲ್ಲಿ ಇಂದು ಎಲ್ಲಕ್ಕಿಂತ ದೊಡ್ಡದಾದ ಸಂಘವೆಂದರೆ ಅದು ತುಳುಕೂಟ. ಆದರೆ ಸಂಘ ಇಷ್ಟು ವರ್ಷಗಳಾದರೂ ಸ್ವಂತ ಕಚೇರಿಯನ್ನು ಹೊಂದಿಲ್ಲ. ಮುಂದೆ ಬರುವ ನೂತನ ಕಾರ್ಯಕಾರಿ ಸಮಿತಿ ಈ ಬಗ್ಗೆ ಕಾರ್ಯರೂಪಕ್ಕಿಳಿಯಬೇಕಾಗಿದೆ. ನನ್ನಿಂದಾದ ನೆರವನ್ನು ನಾನು ನೀಡುತ್ತೇನೆ. ಸಂಘದ ಹಿತವರ್ಧನೆಯಲ್ಲಿ ಸದಸ್ಯರೆಲ್ಲರೂ ತೊಡಗಿಸಿಕೊಂಡು ಸಂಘವನ್ನು ಆದರ್ಶ ಸಂಘವಾಗಿಸುವಲ್ಲಿ ಸಹಕಾರ ನೀಡಬೇಕಾಗಿದೆ ಎಂದರು.
ಪಿಂಪ್ರಿ-ಚಿಂಚಾÌಡ್ ಸಮಿತಿಯ ಉಪಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಉಜಿರೆ ಮಾತನಾಡಿ, ಪಿಂಪ್ರಿ-ಚಿಂಚಾÌಡ್ ಪರಿಸರದಲ್ಲಿ ತುಳುಕೂಟದ ಪ್ರಾದೇಶಿಕ ಸಮಿತಿಗೆ ಅವಕಾಶ ನೀಡಿದ ಹಾಗೂ ಸಂಘಟನಾತ್ಮಕವಾಗಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದ ಪುಣೆ ತುಳುಕೂಟಕ್ಕೆ ಕೃತಜ್ಞತೆಗಳು. ಇದೀಗ ಸಮಿತಿಯ ಬೆಳವಣಿಗೆ, ಕ್ಷೇತ್ರ ವಿಸ್ತರಿತಗೊಂಡ ಪರಿಣಾಮವಾಗಿ ನಮಗೆ ಸ್ವತಂತ್ರವಾಗಿ ಮುನ್ನಡೆಯುವ ಅವಕಾಶವನ್ನು ನೀಡಿದ ಸಂಘಕ್ಕೆ ಮತ್ತೂಮ್ಮೆ ವಂದನೆಗಳು. ಭವಿಷ್ಯದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಹಿಂದಿನಂತೆಯೇ ಪ್ರೀತಿ ಸೌಹಾರ್ದತೆಯಿಂದ ಸಾಂಘಿಕ ಕಾರ್ಯವನ್ನು ಮಾಡೋಣ ಎಂದರು.
ನೂತನ ಅಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಾತಾ ಡಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರೋಹನ್ ಪಿ. ಶೆಟ್ಟಿಯವರಿಗೆ ಸಂಘದ ಮಾಜಿ ಅಧ್ಯಕ್ಷರು ಹಾಗೂ ಸಲಹಾ ಸಮಿತಿ ಸದಸ್ಯರು ಪುಷ್ಪಗುತ್ಛವನ್ನಿತ್ತು ಅಭಿನಂದಿಸಿದರು. ತುಳುಕೂಟ ಪಿಂಪ್ರಿ-ಚಿಂಚಾÌಡ್ ಹೆಸರು ಬದಲಾವಣೆಗೊಂಡು ನೂತನ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕುರ್ಕಾಲ್ ಇವರನ್ನು ಪುಷ್ಪಗುತ್ಛನೀಡಿ ಅಭಿನಂದಿಸಲಾಯಿತು.
ಸಭೆಯಲ್ಲಿ ಸಲಹಾ ಸಮಿತಿ ಸದಸ್ಯರಾದ ನಾಟ್ಯಗುರು ಮದಂಗಲ್ಲು ಆನಂದ ಭಟ್, ಪುಣೆಯ ಉದ್ಯಮಿ ಹರಿಪ್ರಸಾದ್ ಶೆಟ್ಟಿ ಅಂಜಾರುಬೀಡು, ನಿತಿನ್ ಶೆಟ್ಟಿ ನಿಟ್ಟೆ, ಸುಂದರ ಶೆಟ್ಟಿ ಎಣ್ಣೆಹೊಳೆ, ಶ್ರೀಧರ ಶೆಟ್ಟಿ ಕÇÉಾಡಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶಕುಂತಳಾ ಆರ್. ಶೆಟ್ಟಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಉಪಸ್ಥಿತರಿದ್ದರು. ಅಧ್ಯಕ್ಷ ತಾರಾನಾಥ ಕೆ. ರೈ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಕಿರಣ್ ಬಿ. ರೈ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸಂತೋಷ್ ಶೆಟ್ಟಿ ವಂದಿಸಿದರು.
ಪುಣೆ ತುಳುಕೂಟದಲ್ಲಿ ಬಹಳಷ್ಟು ವರ್ಷಗಳಿಂದ ಸೇವೆ ಸಲ್ಲಿಸಿದ ನನಗೆ ಇಂದು ಸಮಿತಿಯವರು ನನ್ನ ಮೇಲೆ ಪ್ರೀತಿ, ವಿಶ್ವಾಸವಿಟ್ಟು ಸಂಘದ ಅಧ್ಯಕ್ಷತೆ ವಹಿಸುವ ಅವಕಾಶ ನೀಡಿರುವುದಕ್ಕೆ ಕೃತಜ್ಞತೆಗಳು. ಸ್ಥಾಪಕಾಧ್ಯಕ್ಷ ಜಯ ಶೆಟ್ಟಿ, ಮಾಜಿ ಅಧ್ಯಕ್ಷ ಮಿಯ್ನಾರು ರಾಜ್ ಕುಮಾರ್ ಎಂ. ಶೆಟ್ಟಿ ಹಾಗೂ ತಾರಾನಾಥ ರೈ ಅವರ ನೇತೃತ್ವದಲ್ಲಿ ಸಂಸ್ಥೆ ಉತ್ತಮವಾಗಿ ಬೆಳೆದಿದೆ. ಈ ಸಂಘವನ್ನು ಇನ್ನಷ್ಟು ಸಮೃದ್ಧವಾಗಿ ಬೆಳೆಸುವಲ್ಲಿ ಸದಸ್ಯರೆಲ್ಲರ ಪೂರ್ಣ ಸಹಕಾರ ಬೇಕಾಗಿದೆ. ನಿಮ್ಮೆಲ್ಲರ ಆಶೋತ್ತರದಂತೆ ಸಂಸ್ಥೆಯನ್ನು ಮುನ್ನಡೆಸಲು ಪ್ರಾಮಾಣಿಕವಾಗಿ ತೊಡಗಿಕೊಳ್ಳುತ್ತೇನೆ .
– ಮೋಹನ್ ಶೆಟ್ಟಿ ಎಣ್ಣೆಹೊಳೆ, ನೂತನ ಅಧ್ಯಕ್ಷರು
You seem to have an Ad Blocker on.
To continue reading, please turn it off or whitelist Udayavani.