ಪುಣೆ ತುಳುಕೂಟದ ವಾರ್ಷಿಕ ಕ್ರೀಡೋತ್ಸವ
Team Udayavani, Dec 18, 2017, 4:47 PM IST
ಪುಣೆ: ಸಂಘ-ಸಂಸ್ಥೆಗಳ ಮೂಲಕ ಇಂತಹ ಕ್ರೀಡೋತ್ಸವವನ್ನು ಆಚರಿಸಿಕೊಂಡು ದಿನನಿತ್ಯದ ನಮ್ಮ ಜೀವನದಲ್ಲಿ ನಿಯಮಿತ ವಾಗಿ ವ್ಯಾಯಾಮ ಮಾಡಿಕೊಂಡು ದೇಹಾರೋಗ್ಯವನ್ನು ಕಾಪಾಡುವಂತೆ ನಮ್ಮೆಲ್ಲರನ್ನೂ ಜಾಗೃತಿ ಮೂಡಿಸುವ ಕಾರ್ಯ ಅಭಿನಂದನೀಯವಾಗಿದೆ. ನಮ್ಮ ದೇಹವೆಂದರೆ ದೇಗುಲವಿದ್ದಂತೆ. ಶರೀರವೇ ಜೀವನದ ಪ್ರಮುಖ ಮಾಧ್ಯಮವಾಗಿದೆ. ಅದನ್ನು ಆರೋಗ್ಯವಂತರಾಗಿ ಜತನದಿಂದ ಕಾಪಾಡಿಕೊಂಡರೆ ನಮ್ಮ ಜೀವನ ಸಾರ್ಥಕ ವೆನಿಸುತ್ತದೆ ಎಂದು ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷರಾದ ಸದಾನಂದ ಕೆ. ಶೆಟ್ಟಿ ಅವರು ನುಡಿದರು.
ಡಿ. 17ರಂದು ನಗರದ ಗರ್ವಾರೆ ಕಾಲೇಜು ಮೈದಾನದಲ್ಲಿ ನಡೆದ ಪುಣೆ ತುಳುಕೂಟದ ವಾರ್ಷಿಕ ಕ್ರೀಡೋತ್ಸವವನ್ನು ದೀಪ ಬೆಳಗಿಸಿ ಬಲೂನು ಹಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪುಣೆ ತುಳುಕೂಟ ಪುಣೆಯಲ್ಲಿ ಜಾತಿ, ಮತ, ಧರ್ಮಗಳ ಭೇದವಿಲ್ಲದೆ ತುಳುನಾಡಿನ ಎಲ್ಲರನ್ನೂ ಪುಣೆಯಲ್ಲಿ ಒಗ್ಗೂಡಿಸಿಕೊಂಡು ಮಾಡುತ್ತಿರುವ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಮಾದರಿಯಾಗಿವೆ. ಇಂದಿನ ಕ್ರೀಡೋತ್ಸವದಲ್ಲಿ ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿ ಎಂದು ನುಡಿದು ಶುಭ ಹಾರೈಸಿದರು.
ಈ ಸಂದರ್ಭ ಉಪಸ್ಥಿತರಿದ್ದ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಎಲ್ಲರೂ ಸಮಾನತೆಯೊಂದಿಗೆ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಬೇಕಾಗಿದೆ. ನಮ್ಮ ಮಕ್ಕಳು ಟಿವಿ, ಮೊಬೈಲ್, ಇಂಟರ್‌ನೆಟ್ ಇನ್ನಿತರ ಸಾಮಾಜಿಕ ಜಾಲತಾಣಗಳ ಮುಖಾಂತರ ಆಟವಾಡುತ್ತಾ ಕಾಲ ಕಳೆಯುವುದು ಸರ್ವೇ ಸಾಮಾನ್ಯವಾಗಿದೆ. ಮೈದಾನದಲ್ಲಿ ದೈನಂದಿನ ವ್ಯಾಯಾಮ ಅಗತ್ಯವಾಗಿದ್ದು ಮಕ್ಕಳನ್ನು ನಾವು ಪ್ರೇರೇಪಿಸಬೇಕಾಗಿದೆ ಎಂದರು.
ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಮಿಯಾರು ರಾಜ್‌ಕುಮಾರ್ ಎಂ. ಶೆಟ್ಟಿ, ಉಪಾಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ, ಕೋಶಾಧಿಕಾರಿ ಸಂತೋಷ್ ಶೆಟ್ಟಿ ಎಣ್ಣೆಹೊಳೆ, ಕ್ರೀಡಾ ಕಾರ್ಯಾಧ್ಯಕ್ಷ ಯಶವಂತ್ ಶೆಟ್ಟಿ ತಾಮಾರು, ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾಯವಾದಿ ರೋಹನ್ ಶೆಟ್ಟಿ, ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಸುಜಾತಾ ಡಿ. ಶೆಟ್ಟಿ, ಮಹಿಳಾ ವಿಭಾಗದ ಕ್ರೀಡಾ ಸಂಯೋಜಕರಾಗಿರುವ ರಂಜಿತಾ ರಮೇಶ್ ಶೆಟ್ಟಿ ಮತ್ತು ರಮಾ ಶೆಟ್ಟಿ ಉಪಸ್ಥಿತರಿದ್ದರು.
ಅತಿಥಿಗಳನ್ನು ಪುಷ್ಪಗುತ್ಛ, ಸ್ಮರಣಿಕೆ ಯನ್ನಿತ್ತು ಗೌರವಿಸಲಾಯಿತು. ಕ್ರೀಡಾ ಕಾರ್ಯಾಧ್ಯಕ್ಷ ಯಶವಂತ್ ಶೆಟ್ಟಿ ಕ್ರೀಡಾ ಜ್ಯೋತಿಯೊಂದಿಗೆ ಕ್ರೀಡಾಳುಗಳೊಂದಿಗೆ ಪಥಸಂಚಲನ ನಡೆಸಿದರು. ನಂತರ ಚಿಕ್ಕ ಮಕ್ಕಳಿಂದ ಹಿರಿಯರವರೆಗೆ ವಿವಿಧ ವಯೋಮಿತಿಗನುಗುಣವಾಗಿ ಕ್ರೀಡಾಸ್ಪರ್ಧೆ ಗಳನ್ನು ಆಯೋಜಿಸಲಾಯಿತು.
ಮಕ್ಕಳಿಗೆ 25 ಮೀ., 50 ಮೀ. ಓಟ, ಬುಕ್ ಬ್ಯಾಲೆನ್ಸ್, ಪೊಟಾಟೋ ಪಿಕ್ಕಿಂಗ್ ರೇಸ್, ಪುರುಷರಿಗಾಗಿ ಲಗೋರಿ, ವಾಲಿಬಾಲ್, 100 ಮೀ. ಓಟ, ಶಾಟ್‌ಪುಟ್, ಗೋಣಿ ಚೀಲ ಓಟ, ಹಗ್ಗ ಜಗ್ಗಾಟ, ಮಹಿಳೆಯರಿಗಾಗಿ ಥ್ರೋಬಾಲ್, 100 ಮೀ. ಓಟ, ಸೂಜಿ ನೂಲು ಓಟ, ಹಗ್ಗ ಜಗ್ಗಾಟ ಮೊದಲಾದ ವೈವಿಧ್ಯಮಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕ್ರೀಡಾಕೂಟ ದಲ್ಲಿ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಭೋಜನ, ಚಹಾ ಪಾನೀಯಗಳ ವ್ಯವಸ್ಥೆ ಮಾಡಲಾಗಿತ್ತು.
ಸಂಘದ ಪದಾಧಿಕಾರಿಗಳಾದ ಕÇÉಾಡಿ ಶ್ರೀಧರ ಶೆಟ್ಟಿ, ದಿವಾಕರ ಶೆಟ್ಟಿ ಮಾಣಿಬೆಟ್ಟು, ವಿಶ್ವನಾಥ ಶೆಟ್ಟಿ, ಶರತ್ ಶೆಟ್ಟಿ ಉಳೆಪಾಡಿ, ಹರಿಶ್ಚಂದ್ರ ಆಚಾರ್ಯ, ವಿಕೇಶ್ ರೈ ಶೇಣಿ, ಮಹಿಳಾ ವಿಭಾಗದ ನಯನಾ ಶೆಟ್ಟಿ, ಶಕುಂತಳಾ ಆರ್. ಶೆಟ್ಟಿ, ಸುಜಾತಾ ಡಿ. ಶೆಟ್ಟಿ, ಸರಿತಾ ತುಷಾರ್ ಶೆಟ್ಟಿ, ಶಶಿಕಲಾ ಎ. ಶೆಟ್ಟಿ, ನವಿತಾ ಪೂಜಾರಿ, ರಂಜಿತಾ ಆರ್. ಶೆಟ್ಟಿ, ರಮಾ ಶೆಟ್ಟಿ, ಸರಿತಾ ಯಶವಂತ್ ಶೆಟ್ಟಿ, ಗೀತಾ ಪೂಜಾರಿ, ಸರಸ್ವತಿ ಕುಲಾಲ್, ಪ್ರಿಯಾ ಎಚ್. ದೇವಾಡಿಗ ಹಾಗೂ ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕ್ರೀಡಾಕೂಟದಲ್ಲಿ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸದಸ್ಯರು, ಪುಣೆ ತುಳುಕೂಟದ ಚಿಂಚಾÌಡ್ ಪ್ರಾದೇಶಿಕ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪುಣೆ ತುಳುಕೂಟದಿಂದ ತುಳುನಾಡ ಬಾಂಧವರಿಗಾಗಿ ಸಾಮಾಜಿಕ, ಸಾಂಸ್ಕೃತಿಕ ಕ್ರೀಡಾ ಸಂಬಂಧಿತ ಹತ್ತು ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಾ ಪುಣೆಯಲ್ಲಿನ ತುಳುವರೆಲ್ಲರನ್ನು ಒಗ್ಗಟ್ಟಿನಿಂದ ಬೆಸೆಯುವ ಕಾರ್ಯವನ್ನು ಮಾಡುತ್ತಾ ಬಂದಿದ್ದೇವೆ. ನಾವು ಹೊರನಾಡಿನಲ್ಲಿದ್ದರೂ ಸಂಘ ಸಂಸ್ಥೆಗಳ ಮೂಲಕ ಒಗ್ಗಟ್ಟಿನಿಂದ ಬೆರೆತುಕೊಂಡು ನಮ್ಮ ಅಸ್ಮಿತೆಯನ್ನು ಕಾಯ್ದುಕೊಳ್ಳುವ ಉದ್ದೇಶ ನಮ್ಮದಾಗಿದೆ. ಇಂದಿನ ಕ್ರೀಡೋತ್ಸವದಲ್ಲಿ ಎಲ್ಲರೂ ಸಂಭ್ರಮೋÇÉಾಸದಿಂದ ಭಾಗವಹಿಸಿ ಕ್ರೀಡೋತ್ಸವವನ್ನು ಯಶಸ್ವಿಗೊಳಿಸುವಂತೆ ವಿನಂತಿಸುತ್ತಿದ್ದೇನೆ
– ತಾರಾನಾಥ ಕೆ. ರೈ ಮೇಗಿನಗುತ್ತು (ಅಧ್ಯಕ್ಷರು : ಪುಣೆ ತುಳುಕೂಟ).
ಚಿತ್ರ-ವರದಿ : ಕಿರಣ್ ಬಿ. ರೈ ಕರ್ನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.