ಗೋವಿಗೆ ಸುಖ ಕಲ್ಪಿಸುವ ವ್ಯವಸ್ಥೆಯೇ ಗೋಸ್ವರ್ಗ:ರಾಘವೇಶ್ವರ ಶ್ರೀ

Team Udayavani, Jul 3, 2018, 5:11 PM IST

0107mum09.jpg

ಪುಣೆ: ಪುಣೆಯಲ್ಲಿ  ತಮ್ಮೂರಿನ ಸೊಗಡನ್ನು ಬಿಂಬಿಸುವ ಅಪರೂಪದ ಸುಂದರವಾದ ಸಮಾಜದ ಭವನವನ್ನು ನಿರ್ಮಿಸಿ ಸಮಾಜಕ್ಕೊಪ್ಪಿಸಿದ ಬಂಟ ಸಮಾಜದ ಸಾಧಕರನ್ನು ಅಭಿನಂದಿಸಬೇಕಾಗಿದೆ. ಇಂತಹ ಈ ಭವ್ಯವಾದ ಭವನದಲ್ಲಿ ಪುಣೆಯಲ್ಲಿನ ತುಳು-ಕನ್ನಡಿಗರನ್ನು ಒಗ್ಗೂಡಿಸಿಕೊಂಡು ಶ್ರೀ ಮಠದ ಪುಣೆ ಘಟಕ ಗೋಸ್ವರ್ಗದ ಮಹಾ ಅಭಿಯಾನದ ಕಾರ್ಯಕ್ರಮವನ್ನು ಗೋಮಾತೆಯ ಹೆಸರಿನಲ್ಲಿ  ಆಯೋಜಿಸಿರುವುದಕ್ಕೆ ಆನಂದವಾಗುತ್ತಿದೆ. ಇಂದು ದೇಶದೆÇÉೆಡೆ ಗೋಶಾಲೆಗಳು ಇದ್ದರೂ ಒಂದಲ್ಲ ಒಂದು ರೀತಿಯಲ್ಲಿ ಗೋವುಗಳ ಸುಖವನ್ನು ಹತ್ತಿಕ್ಕಲಾಗುತ್ತದೆ. ಕೃತಕ ಗರ್ಭಧಾರಣೆ, ತನ್ನ ಕರುವನ್ನೇ ಗೋವುಗಳಿಂದ ದೂರಮಾಡಲಾಗುತ್ತದೆ. ಹೆಚ್ಚಿನ ಗೋಶಾಲೆಗಳಲ್ಲಿ ಪರ್ಯಾಪ್ತ ಆಹಾರವಿಲ್ಲ. ರೈತರ ಮನೆಗಳಲ್ಲಿ ಸಾಕಷ್ಟು ಕ್ಲೇಶಗಳಿವೆ. ಅಂತೆಯೇ ಕಟುಕರಿಗೆ ಮಾರಾಟವಾಗುವಂತಹ ಪರಿಸ್ಥಿತಿಗಳನ್ನು ಕಂಡಾಗ ಮೂಡಿ ಬಂದ ಕಲ್ಪನೆಯೇ ಗೋಸ್ವರ್ಗ. ದೇಶೀಯ ಗೋವುಗಳ  ಇಚ್ಛೆಯಂತೆ, ಅವುಗಳ ಆಯ್ಕೆಯಂತೆ ಸ್ವತಂತ್ರವಾಗಿ ಯಾವುದೇ ರೀತಿಯ ಕಷ್ಟಗಳನ್ನು ಅನುಭವಿಸದೇ  ಸರ್ವ ವ್ಯವಸ್ಥೆಗಳನ್ನು ಮಾಡಿ ಬದುಕನ್ನು ಕಲ್ಪಿಸುವ ಉದ್ದೇಶದಿಂದ ನೈಸರ್ಗಿಕವಾದ ಗೋಸ್ವರ್ಗವನ್ನು ಆರಂಭಿಸಲಾಗಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ  ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ  ಶ್ರೀ  ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.

ಅವರು ಜೂ. 30ರಂದು ಪುಣೆ ಬಂಟರ ಭವನ ದಲ್ಲಿ ಜರಗಿದ ಗೋಸ್ವರ್ಗ  ಸಂವಾದ ಅಭಿಯಾನದಲ್ಲಿ ಮಾತನಾಡಿ, ಸುಮಾರು ನೂರು ಎಕರೆ ಪ್ರದೇಶದಲ್ಲಿ ಉತ್ತರ ಕನ್ನಡ ಜಿÇÉೆಯ ಸಿದ್ಧಾಪುರ ತಾಲೂಕಿನ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಗೋಸ್ವರ್ಗವನ್ನು ಮಾಡ ಲಾಗಿದೆ. ಇಲ್ಲಿ ಗೋವಿನ ಬಗೆಗಿನ ಪ್ರತಿಯೊಂದು ವ್ಯವಸ್ಥೆ ಯನ್ನೂ ಮಾಡಲಾಗುತ್ತದೆ. ಸದಾ ಕಾಲ ಗೋವುಗಳಿಗೆ ನೀರಿನ ವ್ಯವಸ್ಥೆ, ಆಹಾರದ ವ್ಯವಸ್ಥೆ, ಆಸ್ಪತ್ರೆಯ ವ್ಯವಸ್ಥೆ, ಪ್ರಸವ ವ್ಯವಸ್ಥೆ, ಗೋ ಸಂಶೋಧನಾ ಕೇಂದ್ರ, ಆಧ್ಯಾತ್ಮಿಕ ಕೇಂದ್ರ, ಸ್ವತ್ಛತಾ ಕೇಂದ್ರ ಅಲ್ಲದೆ ಮಧ್ಯದಲ್ಲಿ ಸರೋವರವನ್ನು ನಿರ್ಮಿಸಿ ಸಪ್ತ ದೇವತೆಗಳ ಸಾನ್ನಿಧ್ಯವನ್ನು ಕಲ್ಪಿಸಲಾಗಿದೆ. ಜನರಿಗೆ ಬಂದು ನೋಡುವ, ಉಳಿದುಕೊಳ್ಳುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಗೋದಾನ, ಗೋಪೂಜೆ, ರಥೋತ್ಸವವನ್ನೂ ಇಲ್ಲಿ ಆಯೋಜಿಸಲಾಗಿದೆ ಎಂದರು.

 ಈಗಾಗಲೇ ಸುಮಾರು 7 ಕೋ. ರೂ.ಗಳಷ್ಟು  ಖರ್ಚು ಮಾಡಲಾಗಿದ್ದು,  ಸುಮಾರು ಶೇ. 80ರಷ್ಟು ಕಾರ್ಯಗಳು ಮುಗಿದಿವೆ. ಗೋವು ಅನ್ನುವುದು ಇಡೀ ಸಂಸಾರಕ್ಕೆ ಸಂಬಂಧಿಸಿ¨ªಾಗಿದ್ದು ದೇಶೀಯ ಎಲ್ಲ ತಳಿಗಳನ್ನು ಇಲ್ಲಿ ಕಾಣಬಹುದಾಗಿದೆ. ಗೋಸ್ವರ್ಗದ ಬಗ್ಗೆ ಎಲ್ಲರೂ ತಿಳಿದುಕೊಳ್ಳಲು ಒಮ್ಮೆ ಅಗತ್ಯವಾಗಿ ಕಣ್ಣಾರೆ ಬಂದು ನೋಡಬೇಕಾಗಿದೆ. ಪ್ರೇರಣೆಯನ್ನು ಪಡೆದುಕೊಳ್ಳಬೇಕಾಗಿದೆ.  ಈ ಪುಣ್ಯ ಕಾರ್ಯದಲ್ಲಿ ನೀವೆಲ್ಲರೂ ಸಹಭಾಗಿಗಳಾಗಿ ಎಂದು ಸ್ವಾಮೀಜಿ ಅವರು ನುಡಿದರು. 

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಲವಾರು ಗುರುಭಕ್ತರು ಗೋಸ್ವರ್ಗದ ಬಗ್ಗೆ ಪ್ರಶ್ನೆಗಳನ್ನು ಕೇಳಿ ಸಂವಾದದಲ್ಲಿ  ಪಾಲ್ಗೊಂಡರು.

ಶ್ರೀಗಳನ್ನು ಮಹಿಳೆಯರು ಪೂರ್ಣಕುಂಭ ದೊಂದಿಗೆ  ಸ್ವಾಗತಿಸಿದರು. 
ಸಂತೋಷ್‌ ಶೆಟ್ಟಿ ಮತ್ತು  ದಿವ್ಯಾ ಎಸ್‌. ಶೆಟ್ಟಿ ದಂಪತಿ ಶ್ರೀಗಳನ್ನು  ಹಾರಾರ್ಪಣೆ ಮಾಡಿ ಸ್ವಾಗತಿಸಿದರು. ಶ್ರೀಗಳು ಭವನದ ಚಾವಡಿಯಲ್ಲಿ ದೀಪ ಪ್ರಜ್ವಲಿಸಿದರು. 
ಪ್ರವೀಣ್‌ ಶೆಟ್ಟಿ  ದಂಪತಿ, ಉದಯ ಕುಮಾರ್‌ ಕೊಡಂಕಲ್ಲು ಹಾಗೂ ಸೂರ್ಯನಾರಾಯಣ ಭಟ್‌ ಅವರು  ಶ್ರೀಗಳ ಪಾದಪೂಜೆ ನೆರವೇರಿಸಿದರು. 

ಈ ಸಂದರ್ಭ  ಕಾರ್ಗಿಲ್‌ ಯುದ್ಧದಲ್ಲಿ ಭಾಗವಹಿಸಿ ಕಾಲುಗಳ ಬಲ ಕಳೆದುಕೊಂಡ ಯೋಧ ಶಾಮರಾಜ್‌ ಎಡನೀರು  ಇವರನ್ನು  ಶ್ರೀಗಳು ಮಂತ್ರಾಕ್ಷತೆ ಹಾಗೂ  ಫಲಕ ನೀಡಿ ಸಮ್ಮಾನಿಸಿದರು.

ಕಾರ್ಯಕ್ರಮದಲ್ಲಿ  ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ, ಕನ್ನಡ ಸಂಘದ ಅಧ್ಯಕ್ಷ ಕುಶಲ್‌ ಹೆಗ್ಡೆ, ಪುಣೆ ತುಳುಕೂಟದ ಅಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು, ಪಿಂಪ್ರಿ-ಚಿಂಚಾÌಡ್‌ ಹೊಟೇಲ್‌ ಅಸೋಸಿಯೇಶನ್‌ ಅಧ್ಯಕ್ಷ ಕೆ. ಪದ್ಮನಾಭ ಶೆಟ್ಟಿ, ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿ, ಮಹಾಗಣಪತಿ ಯಕ್ಷಗಾನ ಮಂಡಳಿ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು, ರಾಮಚಂದ್ರಾಪುರ ಮಠ ಪುಣೆ ಘಟಕದ ಅಧ್ಯಕ್ಷ ಮದಂಗಲ್ಲು ಆನಂದ ಭಟ್‌, ಬಂಟ್ಸ್‌ ಅಸೋಸಿಯೇಶನ್‌ ಪುಣೆ ಮಾಜಿ ಅಧ್ಯಕ್ಷ ಜಯ ಶೆಟ್ಟಿ ಮಿಯ್ನಾರು, ಗುರುದೇವಾ ಸೇವಾ ಬಳಗದ ಕಾರ್ಯದರ್ಶಿ ರೋಹಿತ್‌ ಶೆಟ್ಟಿ ನಗ್ರಿಗುತ್ತು, ರಂಕಾ ಜುವೆಲರ್ಸ್‌ ನ ಓಂ ಪ್ರಕಾಶ್‌  ರಂಕಾ, ಕೃ. ಶಿ. ಹೆಗಡೆ, ಸುಧಾಕರ  ಶೆಟ್ಟಿ, ಚಂದ್ರಕಾಂತ ಹಾರಕೂಡೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ರಾಮಚಂದ್ರಾಪುರ ಮಠದ ಪುಣೆ ಘಟಕದ ಅಧ್ಯಕ್ಷ ಮದಂಗಲ್ಲು ಆನಂದ ಭಟ್‌, ಗುರಿಕ್ಕಾರ ಅನಂತ ಶರ್ಮ, ಉಪಾಧ್ಯಕ್ಷರಾದ ಮದಂಗಲ್ಲು ಅಶೋಕ್‌ ಭಟ್‌, ಉದಯಕುಮಾರ್‌ ಕೊಡಂಕಲ್ಲು, ಸೂರ್ಯನಾರಾಯಣ ಭಟ್‌, ಕಾರ್ಯದರ್ಶಿ ಶ್ಯಾಮ್‌ ಸುಂದರ್‌ ಭಟ್‌, ಕೋಶಾಧಿಕಾರಿ ಗಣೇಶ್‌ ಪ್ರಸಾದ್‌, ಮಹಿಳಾ ವಿಭಾಗದ ಹೇಮಾ ಭಟ್‌ ಮತ್ತು ಮಲ್ಲಿಕಾ ಭಟ್‌ ಇವರು  ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸುವಲ್ಲಿ ಶ್ರಮಿಸಿದರು. 

ಅನಂತ ಶರ್ಮ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪುಣೆ ಬಂಟರ ಸಂಘದ ವತಿಯಿಂದ ಸಭಾಂಗಣವನ್ನು ಪ್ರಾಯೋಜಿಸಲಾಗಿತ್ತು. ಪ್ರವೀಣ್‌ ಶೆಟ್ಟಿ ಪುತ್ತೂರು ಲಘು ಉಪಾಹಾರವನ್ನು ಪ್ರಾಯೋಜಿಸಿದ್ದರು. ನೂರಾರು ಸಂಖ್ಯೆಯಲ್ಲಿ ಗುರುಭಕ್ತರು ಉಪಸ್ಥಿತರಿದ್ದು ಮಂತ್ರಾಕ್ಷತೆ ಸ್ವೀಕರಿಸಿದರು. 

ನಮ್ಮ ನೂತನ  ಸಮಾಜದ ಭವನಕ್ಕೆ ಶ್ರೀಗಳು ಆಗಮಿಸಿರುವುದು ಸಂತಸ ತಂದಿದೆ. ಪೂಜ್ಯ ಶ್ರೀಗಳು  ತಾಯಿ ಸಮಾನವಾದ ಗೋವುಗಳ ಬಗ್ಗೆ ಅಪಾರ ವಾದ ಆಸ್ಥೆಯನ್ನಿಟ್ಟುಕೊಂಡು ಅವನ್ನು ಉಳಿಸಲು, ಸಂರಕ್ಷಿಸಲು ಸಮಾಜಮುಖೀ ಚಿಂತನೆಯೊಂದಿಗೆ ಗೋವುಗಳ ಸ್ವತ್ಛಂದ ವಾದ ಜೀವನಕ್ಕೆ ವ್ಯವಸ್ಥೆ ಕಲ್ಪಿಸುವ ಗೋ ಸ್ವರ್ಗವನ್ನು ಸ್ಥಾಪಿಸಿ ಅಭಿಯಾನವನ್ನು ಕೈಗೊಂಡು ಜನರಲ್ಲಿ  ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿರುವುದು ಅಭಿಮಾನದ ವಿಷಯವಾಗಿದೆ. ಇಂತಹ ಉತ್ತಮ ಧ್ಯೇಯೋದ್ದೇಶಗಳನ್ನು  ಕೈ ಗೊಳ್ಳುವ ಪೂಜ್ಯ ಸಂತರ ಕಾರ್ಯಗಳಿಗೆ ನಾವೆಲ್ಲರೂ ಕೈಜೋಡಿಸೋಣ 
– ಸಂತೋಷ್‌ ಶೆಟ್ಟಿ  ಇನ್ನ  ಕುರ್ಕಿಲ್‌ಬೆಟ್ಟು (ಅಧ್ಯಕ್ಷರು : ಪುಣೆ ಬಂಟರ ಸಂಘ)
 
ಚಿತ್ರ -ವರದಿ : ಕಿರಣ್‌ ಬಿ. ರೈ ಕರ್ನೂರು

ಟಾಪ್ ನ್ಯೂಸ್

Mahakumbh Mela: ಪ್ರಯಾಗ್ ರಾಜ್‌ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು‌ ಬೆದರಿಕೆ

Mahakumbh Mela: ಪ್ರಯಾಗ್ ರಾಜ್‌ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು‌ ಬೆದರಿಕೆ

siddanna-2

HMPV: ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ

Tulu movie Daskath will release in Kannada soon

Daskath ಮೆಚ್ಚಿದ ಪ್ರೇಕ್ಷಕರಿಗೆ ಬಿಗ್‌ ನ್ಯೂಸ್‌ ಕೊಟ್ಟ ಚಿತ್ರತಂಡ

BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್;‌ ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ

BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್;‌ ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ

Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…

Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…

ಸಚಿವ ಸತೀಶ್ ಜಾರಕಿಹೊಳಿ

Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mahakumbh Mela: ಪ್ರಯಾಗ್ ರಾಜ್‌ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು‌ ಬೆದರಿಕೆ

Mahakumbh Mela: ಪ್ರಯಾಗ್ ರಾಜ್‌ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು‌ ಬೆದರಿಕೆ

siddanna-2

HMPV: ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ

Tulu movie Daskath will release in Kannada soon

Daskath ಮೆಚ್ಚಿದ ಪ್ರೇಕ್ಷಕರಿಗೆ ಬಿಗ್‌ ನ್ಯೂಸ್‌ ಕೊಟ್ಟ ಚಿತ್ರತಂಡ

BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್;‌ ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ

BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್;‌ ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ

Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…

Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.