ಜೂ. 15 ರಿಂದ ವಾಶಿಯ ಬಾಲಾಜಿ ಮಂದಿರದ ರಜತೋತ್ಸವ ಸಂಭ್ರಮ

ಪರಿವಾರ ದೇವರ 22ನೇ ವರ್ಧಂತಿ ಮತ್ತು ನವಗ್ರಹ ದೇವರ 18ನೇ ವರ್ಧಂತಿ ಮಹೋತ್ಸವ

Team Udayavani, Jun 14, 2019, 2:40 PM IST

1306MUM12

ನವಿ ಮುಂಬಯಿ: ವಾಶಿಯ ಶ್ರೀ ಬಾಲಾಜಿ ಮಂದಿರದ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ರಜತ ಮಹೋತ್ಸವ ಸಂಭ್ರಮವು ಗೌಡ ಸಾರಸ್ವತ್‌ ಬ್ರಾಹ್ಮಣ ಸಮಾಜದ ಕುಲಗುರು ದೈವಕ್ಯ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಹಾಗೂ ಶ್ರೀ ಸಂಸ್ಥಾನ ಕಾಶೀ ಮಠ ವಾರಣಾಸಿ ಕಾಶೀ ಮಠಾಧೀಶ ಶ್ರೀಮದ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಜೂ. 15ರಂದು ಮೊದಲ್ಗೊಂಡು ಜೂ. 16ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ.

ವರ್ಷಂಪ್ರತಿ ಶ್ರೀ ಲಕ್ಷಿ¾à ವೆಂಕಟರಮಣ ಮಂದಿರದ ವರ್ಧಂತ್ಯೋತ್ಸವ ವಿಧಿವತ್ತಾಗಿ ಆಚರಿಸಲಾಗುತ್ತಿದ್ದು ಈ ಬಾರಿ ರಜತ ಸಂಭ್ರಮದ ಅಂಗವಾಗಿ ವಿವಿಧ ಸೇವೆಗಳೊಂದಿಗೆ ಆಯೋಜಿಸಲು ನಿರ್ಧರಿಸಲಾಗಿದೆ. ಪರಿವಾರ ದೇವತೆಗಳ 22ನೇ ವರ್ಧಂತಿ ಮಹೋತ್ಸವವು ಮತ್ತು ನವಗ್ರಹ ದೇವತೆಗಳ 18ನೇ ವರ್ಧಂತಿ ಮಹೋತ್ಸವ ತ್ರಿದಿನಗಳಲ್ಲಿ ಬೆಳಗ್ಗೆ 7ರಿಂದ ರಾತ್ರಿ 8.30 ರವರೆಗೆ ನಡೆಯಲಿದೆ. ಜೂ. 14ರಂದು ಸಂಜೆ ಶ್ರೀಮದ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ದೇವಸ್ಥಾನಕ್ಕೆ ಪಾದಾರ್ಪಣೆಗೈದು ನಾಲ್ಕು ದಿನಗಳ ಕಾಲ ಮೊಕ್ಕಾಂ ಹೂಡಿ ದೇವರಿಗೆ ಪೂಜೆ ನೆರವೇರಿಸ‌ಲಿದ್ದಾರೆ.

ಜೂ. 15 ರಂದು ಬೆಳಗ್ಗೆ 7ರಿಂದ ದೇವತಾ ಪ್ರಾರ್ಥನೆ, ಗುರುಪೂಜೆ, ದೇವಾನಂದಿನಿ ಸಮಾರಾಧನೆ, ಋತ್ವಿಜವರಣ, ಬೆಳಗ್ಗೆ 8ರಿಂದ ವೆಂಕಟೇಶ ಹಾಗೂ ಪರಿವಾರ ದೇವತಾ ಮೂಲ ಮಂತ್ರ ಜಪ ನಡೆಯಲಿದೆ. ಜೂ. 16ರಂದು ಪರಿವಾರ ದೇವತಾ ಪ್ರತಿಷ್ಠಾ ವರ್ಧಂತಿ ನಡೆಯಲಿದ್ದು, ಬೆಳಗ್ಗೆ 7ರಿಂದ ಮೂಲ ಮಂತ್ರ ಜಪ, ಶ್ರೀ ಲಕ್ಷಿ¾à ಹೃದಯ ಪಾರಾಯಣ ಹವನ ಜರಗಲಿದೆ.

ಜೂ. 17ರಂದು ಲಘು ವಿಷ್ಣು ಹವನ ಮತ್ತು ಲಕ್ಷ ತುಳಸಿ ಅರ್ಚನೆ ಕಾರ್ಯಕ್ರಮ, ಜೂ. 20 ರಂದು ನಾಗ ದೇವತೆಯ ಪ್ರತಿಷ್ಟಾ ವರ್ಧಂತಿ ಮಹೋತ್ಸವ ನಡೆಯಲಿದೆ. ಭಕ್ತಾಭಿಮಾನಿಗಳ ಸಹಕಾರದಿಂದ ಪ್ರಸಕ್ತ ವರ್ಷ ಆಡಳಿತ ಮಂಡಳಿಯು ಶ್ರೀ ವೆಂಕಟರಮಣ ಮತ್ತು ಶ್ರೀದೇವಿ, ಭೂದೇವಿಗೆ ಬೆಳ್ಳಿಯ ಆಭೂಷಣಗಳನ್ನು ಸಿದ್ಧಪಡಿದ್ದು ಶ್ರೀಮದ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ದೇವರಿಗೆ ಅರ್ಪಿಸಲಿದ್ದಾರೆ.

ಜಿಎಸ್‌ಬಿ ಸಭಾ ನವಿ ಮುಂಬಯಿ
ನವಿ ಮುಂಬಯಿಯ ಹಲವಾರು ದೇವಸ್ಥಾನಗಳ ಪೈಕಿ ವಾಶಿಯ ಶ್ರೀ ಲಕ್ಷಿ¾à ವೆಂಕಟರಮಣ ದೇವರನ್ನೊಳಗೊಂಡಿರುವ ಬಾಲಾಜಿ ಮಂದಿರ ಒಂದಾಗಿದೆ. ಇದು ಪ್ರತಿಷ್ಠಿತ ಹಾಗೂ ಉನ್ನತ ಸ್ಥಾನ ಪಡೆದಿರುವ ಒಂದು ಧಾರ್ಮಿಕ ಕೇಂದ್ರವೂ ಹೌದು. ವಾಶಿಯ ಹೃದಯ ಭಾಗದಲ್ಲಿರುವ ಧಾರ್ಮಿಕ ಕೇಂದ್ರಕ್ಕೆ ಮೂಲೆಗಳಿಂದಲೂ ಸಮಾಜದಸಹಸ್ರಾರು ಭಕ್ತಾಭಿಮಾನಿಗಳನ್ನು ಆಗಮಿಸುತ್ತಿದ್ದಾರೆ. ಮಂದಿರದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಅತೀ ಸುಂದರವಾದ ಶ್ರೀ ವೆಂಕಟರಮಣ ದೇವರ ಮತ್ತು ಎಡ ಬದಿಯಲ್ಲಿ ಶ್ರೀದೇವಿ ಹಾಗೂ ಬಲ ಬದಿಯಲ್ಲಿ ಭೂದೇವಿ ವಿಗ್ರಹವು ತಿರುಮಲ ತಿರುಪತಿ ದೇವಸ್ಥಾನದ ಕೊಡುಗೆಯಾಗಿರುತ್ತದೆ. ಮಂದಿರದ ಮೇಲಂತಸ್ತಿನ ನಾಲ್ಕು ಮೂಲೆಗಳಲ್ಲಿರುವ ಶ್ರೀ ಮುಖ್ಯಪ್ರಾಣ, ಶ್ರೀ ಗಣಪತಿ, ಶ್ರೀ ಲಕ್ಷಿ¾, ಶ್ರೀ ಗರುಡ ಮತ್ತು ನೆಲ ಅಂತಸ್ತಿನಲ್ಲಿರುವ ಭಗವಾನ್‌ ಸುಬ್ರಹ್ಮಣ್ಯ, ನಾಗ ದೇವತೆ ಮತ್ತು ನವಗ್ರಹಗಳಿಗೆ ನಿತ್ಯ ಪೂಜೆಗಳು ನಡೆಯುತ್ತಿರುವುದು ವಿಶೇಷತೆಯಾಗಿದೆ.

ಮಂದಿರಕ್ಕೆ ರಜತ ಸಂಭ್ರಮ
1978ರಲ್ಲಿ ಸ್ಥಾಪನೆಗೊಂಡ ಜಿಎಸ್‌ಬಿ ಸಭಾ ನವಿ ಮುಂಬಯಿ ಸ್ವಸಮಾಜದ ಹಿತದೃಷ್ಟಿಯೊಂದಿಗೆ ಆಧ್ಯಾತ್ಮಿಕ, ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆಗಳಲ್ಲಿ ತೊಡಗಿಸಿಕೊಂಡು ಸಮಾಜೋಭಿವೃದ್ಧಿಯಲ್ಲಿ ಕಾರ್ಯಪ್ರವೃತ್ತಗೊಂಡಿದೆ. ಉಪನಗರ ನವಿ ಮುಂಬಯಿಯ ವಾಶಿಯಲ್ಲಿ ಸಿಡ್ಕೊà ನಿವೇಶನ ಖರೀದಿಸಿ ತನ್ನ ಸಂಚಾಲಕತ್ವದಲ್ಲಿ ಶ್ರೀ ಬಾಲಾಜಿಕ ಮಂದಿರವನ್ನು ಸ್ಥಾಪಿಸಿ ಶ್ರದ್ಧಾಕೇಂದ್ರವಾಗಿಸಿ ಶ್ರೀದೇವರ ಸೇವೆಯಲ್ಲಿ ನಿರತವಾಗಿದೆ. ಬಾಲಾಜಿಯ ವಿಗ್ರಹವು ಸ್ವರ್ಣಾಭರಣಗಳಿಂದ ಮತ್ತು ಚಿನ್ನದ ಕಿರೀಟದಿಂದ ರಾರಾಜಿಸುತ್ತಿದೆ. ಈ ಮಂದಿರವು ದಿನಕಳೆದಂತೆ ಸದ್ಭಕ್ತರ ಆಕರ್ಷಣೀಯ ಧಾರ್ಮಿಕ ಕೇಂದ್ರವಾಗಿ ಪರಿವರ್ತನೆಗೊಳ್ಳುತ್ತಿದೆ. ದೇವಸ್ಥಾನದ ಟ್ರಸ್ಟ್‌ ಕೂಡಾ ವಿವಿಧ ಸೇವೆಗಳಲ್ಲಿ ನಿರತವಾಗಿ ಆರ್ಥಿಕ ಸಂಕಷ್ಟದಲ್ಲಿರುವ ಸಮಾಜ ಬಾಂಧವರಿಗೆ ಶೈಕ್ಷಣಿಕ ನೆರವು ಮತ್ತು ವೈದ್ಯಕೀಯ ಸಹಾಯವನ್ನೂ ಮಾಡುತ್ತಿದೆ.
ರಜತ ಮಹೋತ್ಸವ ಸಂಭ್ರಮದಲ್ಲಿ ಜಿಎಸ್‌ಬಿ ಸಮಾಜ ಬಾಂಧವರು, ಭಕ್ತಾಭಿಮಾನಿಗಳು ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ಜಿಎಸ್‌ಬಿ ಸಭಾ ನವಿ ಮುಂಬಯಿ ಅಧ್ಯಕ್ಷ ಎಸ್‌. ಆರ್‌. ಪೈ, ಕಾರ್ಯಾಧ್ಯಕ್ಷ ದೀಪಕ್‌ ಬಿ. ಶೆಣೈ, ಗೌರವ ಕಾರ್ಯದರ್ಶಿ ವಸಂತ್‌ ಕುಮಾರ್‌ ಬಂಟ್ವಾಳ ಮತ್ತು ಕೋಶಾಧಿಕಾರಿ ಪ್ರೇಮಾನಂದ ಮಲ್ಯ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

16

Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.