![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 28, 2020, 2:55 PM IST
ಅಂದು ಕೆಲಸದಿಂದ ಮರಳಿ ಮನೆಗೆ ಬರಲು ತಡವಾಗಿತ್ತು. ನಾಳೆ ಬೆಳಗಾದರೆ ದೀಪಾವಳಿ. ರಾತ್ರಿ ಎಲ್ಲ ತಯಾರಿ ಮುಗಿಸಿ ಮಲಗಿದ್ದಾಗಿತ್ತು. ರಜೆಯಿರದ ಕಾರಣ ಬೆಳಗ್ಗೆ ಯುನಿವರ್ಸಿಟಿಗೆ ಹೊರಡುವಾಗ ರಂಗೋಲಿ ಪುಡಿ ಇದೆಯಾ ಎಂದು ನೋಡಿದರೆ ಇರಲಿಲ್ಲ ಖಾಲಿಯಾಗಿತ್ತು. ಕೆಲಸ ಮುಗಿಸಿ ಮಾರ್ಕೆಟ್‌ಗೆ ಹೋದರೆ ಸಂಜೆ ಲಕ್ಷ್ಮಿ ಪೂಜೆಗೆ ವಿಳಂಬವಾಗತ್ತೆ ಏನು ಮಾಡಲಿ ? ಎನ್ನುವ ಚಿಂತೆಯಲ್ಲಿ ಡ್ನೂಟಿ ಮುಗಿಸಿ ಮನೆಗೆ ಮರಳಿದೆ.
ಆ ಕ್ಷಣಕ್ಕೆ ಹೊಳೆದಿದ್ದು ಅಕ್ಕಿ ಹಿಟ್ಟು, ಅರಿಸಿನ, ಕುಂಕುಮ. ನನ್ನ ಮದುವೆಗೆ ಮೊದಲು ಒಮ್ಮೆ ಬಾಲ್ಯದಲ್ಲಿ ಅಪ್ಪ ರಂಗೋಲಿಯನ್ನು ಬಿಳಿ ಮಣ್ಣು, ಅಕ್ಕಿ ಹಿಟ್ಟಿನಿಂದಲೂ ಬಿಡಿಸುತ್ತಿದ್ದರೆಂದು ಹೇಳಿದ್ದು ನೆನಪಿತ್ತು. ಅಂತೆಯೇ ಅಕ್ಕಿಹಿಟ್ಟು, ಅರಿಸಿನ, ಕುಂಕುಮ ಬಳಸಿ ನಾನೂ ಮಗಳೂ ಸೇರಿ ರಂಗೋಲಿ ರಚಿಸಿದೆವು.
ಬೆಂಗಳೂರಿನ ಮನೆಗಳ ಮುಂದೆ ಬೆಳಗ್ಗೆ ಎದ್ದು ಸಾಲು ಸಾಲು ರಂಗೋಲಿ ನೋಡುವುದು ನನ್ನ ಮಕ್ಕಳಿಗೆ ಹಬ್ಬ. ಜಯನಗರದ 4ನೇ ಬ್ಲಾಕ್‌ಗೆ ಹೋಗಿ ರಂಗೋಲಿ, ಬಣ್ಣ ತಂದು ರಂಗೋಲಿ ಬಿಡಿಸಲು ಬಾರದೆ ಮನೆ ತುಂಬ ಅವನ್ನು ಚೆಲ್ಲುವುದೇ ಒಂದು ಸಂಭ್ರಮ.
ನನ್ನ ಮಗಳಿಗೆ ಕುತೂಹಲ ಪ್ರಾರಂಭವಾಗಿದ್ದು ಹಿಟ್ಟಿನಿಂದ ರಂಗೋಲಿ ಬಿಡಿಸಿದ್ದು ಯಾಕೆ ? ಊರಲ್ಲೂ ಮಾಡುತ್ತಾರಾ, ರಂಗೋಲಿ ಯಾಕೆ ಬಿಡಿಸುವುದು? ಇತ್ಯಾದಿ..
ವಿದೇಶದಲ್ಲಿ ನೆಲೆಸಿರುವ ಅಲ್ಲಿಯೇ ಬೆಳೆದ ಮಕ್ಕಳಿಗೆ ರಂಗೋಲಿ, ದೀಪಾವಳಿಯ ದೀಪ ಎಲ್ಲದರಲ್ಲಿಯೂ ಎಳೆ ಎಳೆಯಾಗಿ ಕನ್ನಡದ ಕಂಪು ಹರಡುವುದು ಬಲು ಸೊಗಸು. ಮಕ್ಕಳಿರಲಿ, ದೊಡ್ಡವರಿರಲಿ ವಿದೇಶದಲ್ಲಿರಲಿ, ಸ್ವದೇಶದಲ್ಲಿರಲಿ ಕೆಲವು ವಿಷಯ ತಿಳಿದಿರಲೇಬೇಕು.
ರಂಗೋಲಿಯ ಹಿನ್ನೆಲೆ
ಮಹಾಕಾವ್ಯಗಳು ಜನ್ಮತಾಳುವ ಪೂರ್ವದಲ್ಲೇ ರಂಗೋಲಿ ಇತ್ತು, ಯಾಕೆಂದರೆ ಮಹಾಕಾವ್ಯಗಳಲ್ಲಿಯೂ ರಂಗೋಲಿಯ ಉಲ್ಲೇಖವಿದೆ ಎಂದು ಪೂರ್ವಜರು ಹೇಳಿದ ನೆನಪು ಇಂದಿಗೂ ಇದೆ.
ಆಡಂಬರವಷ್ಟೆ ಅಲ್ಲ, ಧಾರ್ಮಿಕವಾಗಿ ದೇವರನ್ನು ಆಹ್ವಾನಿಸಲು, ಮನೆಯ ಒಳಗೆ ಬರಮಾಡಿಕೊಳ್ಳಲು, ಸ್ವಾಗತಿಸಲು ಮನೆಯ ಮುಂಭಾಗ, ಹೊಸ್ತಿಲಲ್ಲಿ, ದೇವರ ಕೋಣೆಯಲ್ಲಿ ರಂಗೋಲಿ ಬರೆಯುವರೆಂಬ ಉಲ್ಲೇಖವಿದೆ.
ಚಿತ್ರಲಕ್ಷ ಎನ್ನುವ ಕಾವ್ಯದ ಪ್ರಕಾರ ಒಬ್ಬ ರಾಜನ ಮಗ ಅಸುನೀಗಿದಾಗ ಬ್ರಹ್ಮನಲ್ಲಿ ಜೀವದಾನಕ್ಕಾಗಿ ಮೊರೆಹೋದ ರಾಜನಿಗೆ, ಬ್ರಹ್ಮನು ರಾಜನ ಮಗನ ಚಿತ್ರ ಬರೆಯಲು ಹೇಳುತ್ತಾನೆ, ರಾಜ ತನ್ನ ಮಗನ ರೂಪ ಬಿಡಿಸಿದ್ದು ಮೊದಲ ರಂಗೋಲಿ ಎನ್ನುವ ಉಲ್ಲೇಖವಿದೆ.
ವಿಧಗಳು
ಮೂಲತಃ ಅಕ್ಕಿಹಿಟ್ಟು, ಬಿಳಿ ಬಣ್ಣದ ಮಣ್ಣು, ಮರಳು, ಹೂವಿನ ಪಕಳೆಗಳಿಂದ ನೈಸರ್ಗಿಕ ರಸಾಯನದಿಂದ ರಂಗೋಲಿ ಬರೆಯಲ್ಪಡುತ್ತಿತ್ತು.
ಮನೆಯಲ್ಲಿ ದೇವಸ್ಥಾನಗಳಲ್ಲಿ, ಮದುವೆ ಇನ್ನಿತರ ಸಮಾರಂಭಗಳಲ್ಲಿ ಸಾಮಾನ್ಯ ರೀತಿಯ ರಂಗೋಲಿ ಬರೆದರೆ, ವಿಶಿಷ್ಟ ಪೂಜೆ ಪುನಸ್ಕಾರ ಮಾಡುವಾಗ ಮಹತ್ವಕ್ಕೆ ಅನುಗುಣವಾಗಿ, ಕ್ರಮಬದ್ಧವಾಗಿ ಇದರ ಬಗ್ಗೆ ಜ್ಞಾನ ಇರುವವರು ಮಾತ್ರ ಮಂಡಲ ರಚಿಸುತ್ತಾರೆ. ಇನ್ನು ಸ್ಥಳದಿಂದ ಸ್ಥಳಕ್ಕೆ ರಂಗೋಲಿಯ ರೂಪ ತನ್ನ ಆಕಾರವನ್ನು ಬದಲಿಸಿದರೆ ಮಾಡರ್ನ್ ಯುಗದಲ್ಲಿ ಹಲವು ಆಕಾರ ಪಡೆದ್ದು ನಿಜ ಸಂಗತಿ.
ವೈಜ್ಞಾನಿಕ ಕಾರಣ
ಪೂರ್ವಜರ ಹೇಳಿಕೆಯಂತೆ ಮನೆಯ ಮುಂಭಾಗದಲ್ಲಿ ಹಿಟ್ಟಿನಿಂದ ರಂಗೋಲಿ ಬರೆದರೆ ಇರುವೆ, ಕ್ರಿಮಿ ಕೀಟಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ. ಅಂಗಳದÇÉೇ ಹಿಟ್ಟನ್ನು ತಿಂದು ಮರಳಲಿ ಎನ್ನುವುದು.
ಇದನ್ನೂ ಓದಿ:ದುಬಾೖ ಎಂಬ ವಿಸ್ಮಯ ಲೋಕ
ವೈಶಿಷ್ಟ್ಯ
ಕಲೆಗೆ ಡಿಗ್ರಿಯ ಅವಶ್ಯಕತೆಯಿಲ್ಲ. ಗಣಿತದ ( geometrical shapes) ಆಕಾರಗಳು ಅಡಕವಾಗಿರುವ ರಂಗೋಲಿಯನ್ನು ಸರಳವಾಗಿ ಆಕರ್ಷಕವಾಗಿ, ಯಾವುದೇ ಸ್ಕೇಲ್, ಮಾಪನ ಬಳಸದೆ ಚಿತ್ರಿಸುವುದು ಒಂದು ಕಲೆ. ಆಯತ, ತ್ರಿಕೋನ, ಸಮಾನಾಂತರ ರೇಖೆ, ಚಚೌಕ ಮುಂತಾದ ಗಣಿತದ ಆಕಾರ ಹೊಂದಿರುವ ರಂಗೋಲಿಯನ್ನು ಗಣಿತ ಅರಿಯದ ಜನರೂ ತರ್ಕಬದ್ಧವಾಗಿ ಬಿಡಿಸುತ್ತಾರೆ. ಇದು ಸಂಸ್ಕೃತಿಯ ಪ್ರತೀಕದ ಸಂಗಡ ಬುದ್ಧಿಮತ್ತೆಯ ಮೆರಗೂ ಸಹ.
ಡಾ| ವಾಣಿ ಸಂದೀಪ, ಸೌದಿ ಅರೇಬಿಯ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.