ರಾಷ್ಟ್ರ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ವಿಶೇಷವಾದುದು
Team Udayavani, Sep 6, 2017, 11:16 AM IST
ಮುಂಬಯಿ: ಶೈಕ್ಷಣಿಕ ಪ್ರಕ್ರಿಯೆಯ ಮೂಲಕ ದೇಶದ ಭವಿಷ್ಯವನ್ನು ಮತ್ತು ರಾಷ್ಟ್ರವನ್ನು ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಸಮಗ್ರ ವಾದುದು. ಸಮಾಜದಲ್ಲಿ ತಮ್ಮ ಸೇವೆ ಮತ್ತು ಸಮರ್ಪಣೆಗಾಗಿ ಹಾಗೂ ಭಾವೀ ಪ್ರಜೆಗಳನ್ನು ರೂಪಿಸುವಲ್ಲಿ ಅವರು ಮಹತ್ತರವಾದ ಗೌರವವನ್ನು ಹೊಂದಿದ್ದಾರೆ. ಸಮಾಜದ ಜನತೆ ತಮ್ಮ ಜೀವನದಲ್ಲಿ ಬದಲಾವಣೆ ತಂದುಕೊಟ್ಟ ಶಿಕ್ಷಕರನ್ನು ನೆನಪಿಸಿಕೊಳ್ಳುವುದು ಮತ್ತು ತಮ್ಮ ಯಶಸ್ಸಿಗೆ ಕಾರಣರಾದ ಶಿಕ್ಷಕರ ಮಹತ್ವದ ಪಾತ್ರವನ್ನು ಗುರುತಿಸಿ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ರಾಯನ್ ಅಂತಾರಾಷ್ಟ್ರೀಯ ಶೈಕ್ಷಣಿಕ ಸಮೂಹ ಸಂಸ್ಥೆಗಳ ಪ್ರವರ್ತಕಿ ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ನುಡಿದರು.
ಸೆ. 3ರಂದು ಕಾಂದಿವಲಿಯ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ರಕ್ಷಕ ಪಾಲಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಸೆ. 5ರಂದು ಡಾ| ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನ. ನಮ್ಮ ದೇಶದ ಎರಡನೇ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ್ದ ಡಾ| ಸರ್ವಪಳ್ಳಿ ಒಬ್ಬ ಮಹಾನ್ ತತ್ವಜ್ಞಾನಿ, ಒಬ್ಬ ಮಹಾನ್ ಶಿಕ್ಷಕ, ಒಬ್ಬ ಮಹಾನ್ ಶಿಕ್ಷಣತಜ್ಞರೂ ಆಗಿದ್ದರು. ನಮ್ಮ ಶಿಕ್ಷಕರು ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಅದ್ಭುತ ಕೊಡುಗೆಗಳಿಗೆ ಗೌರವಿಸುವ ದಿನವಾಗಿ ನಾವು ಶಿಕ್ಷಕರ ದಿನವನ್ನು ಆಚರಿಸುತ್ತಿದ್ದೇವೆ. ಈ ಮಹಾನ್ ವ್ಯಕ್ತಿಯ ಹುಟ್ಟುಹಬ್ಬ ದಿನ ನಿಜಕ್ಕೂ ಎಲ್ಲಾ ಶಿಕ್ಷಕರ ಪಾಲಿಗೆ ಹೆಮ್ಮೆಯ ದಿನ. ಈ ದಿನವು ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಜೀವನವನ್ನು ತ್ಯಾಗ ಮಾಡಿದ ಶಿಕ್ಷಕರಿಗೆ ಗೌರವವನ್ನು ಅರ್ಪಿಸುವ ದಿನವಾಗಿದೆ. ಪ್ರತಿಯೊಬ್ಬ ಶಿಕ್ಷಕ ಪ್ರತಿ ಮಗುವನ್ನು ಆತ್ಮವಿಶ್ವಾಸವುಳ್ಳ, ಸದೃಢ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಹೊಂದಿದ್ದಾರೆ.
ವಿದ್ಯಾರ್ಥಿಗಳ ಬೆಳವಣಿಗೆಗೆ ಮಾರ್ಗದರ್ಶನ ನೀಡು ವುದು ಮಾತ್ರವಲ್ಲ ಜೀವನ ಪೂರ್ತಿ ಕಲಿಯು ವಿಕೆಗೆ ಪ್ರೇರೇಪಣೆ ನೀಡಿ ಒಬ್ಬ ಉತ್ತಮ ನಾಗರಿಕರಂತೆ ಪರಿಶುದ್ಧರಾಗಿ ಬೆಳೆಯಲು ದಾರಿದೀಪ ಆಗುವವರೇ ನಿಜವಾದ ಶಿಕ್ಷಕರಾಗಿದ್ದಾರೆ. ಹಾಗಾಗಿ ಶಿಕ್ಷಕರು ಶಿಲ್ಪಿಗಳು, ರಾಷ್ಟ್ರ ನಿರ್ಮಾಪಕರು. ಪ್ರತಿ ಮಗುವಿನಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಅನ್ವೇಷಿಸಿ, ಕೌಶಲವನ್ನು ಅರ್ಥೈಸಿಕೊಂಡು ಅದಕ್ಕೆ ಸಂಪೂರ್ಣ ಪುಷ್ಟಿ ನೀಡುವವರು.
ಕಳೆದ ಕೆಲವು ದಶಕ ಗಳಿಂದ ಹೆತ್ತವರು ತಮ್ಮ ಮಕ್ಕಳನ್ನು ವಿಶ್ವ ಮಟ್ಟದ ಜಾಗತಿಕ ನಾಗರಿಕರನ್ನಾಗಿ ಬೆಳೆಸಲು ಒತ್ತಾಯಿಸುತ್ತಿದ್ದಾರೆ. ಅವರ ಬೇಡಿಕೆ ಗಳಿಗೆ ಪ್ರತಿಕ್ರಿಯಿಸಲು ನಮಗೆ ವಿಶ್ವ ಮಟ್ಟದ ಶಿಕ್ಷಕರ ಅಗತ್ಯವಿದೆ. ಹಾಗಾಗಿ ಇಂದು ಶಿಕ್ಷಕರು ಸಂತೃಪ್ತರಾಗಿರಲು ಸಾಧ್ಯವಿಲ್ಲ. ತಮ್ಮ ಬೆರಳ ತುದಿಯಲ್ಲಿ ಲಭ್ಯವಿರುವ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಲು ಅವರು ಮುಂದಡಿ ಇಡಲು ಸಿದ್ಧರಾಗಿರಬೇಕು. ವಿಷಯದ ಪರಿಣತಿ, ಶಿಸ್ತಿನ ಉಲ್ಲೇಖಗಳು, ಸಂವೇದನಾತ್ಮಕ ಮತ್ತು ಸಹಕಾರಿ ಕಲಿಕೆಗೆ ನವೀನ ವಿಧಾನಗಳ ಮೇಲೆ ಶಿಕ್ಷಕರ ಗಮನ ಇರಬೇಕು. ಶಿಕ್ಷಕರು ಬೋಧಕರಿಗಿಂತ ಮೇಲ್ಪಟ್ಟವರು. ಅವರು ತಮ್ಮ ವಿದ್ಯಾರ್ಥಿಗಳಲ್ಲಿ ಸಂಶೋಧನೆಗೆ ಸಹಾಯ ಮಾಡಲು ನಿರಂತರ ಮಾರ್ಗದರ್ಶಕರು. ಒಂದೆಡೆ ಶಿಕ್ಷಕರು ಶಿಕ್ಷಣದ ಶ್ರೇಷ್ಠತೆ ಬಗ್ಗೆ ಗಮನ ನೀಡಬೇಕು, ಇನ್ನೊಂದೆಡೆ ಮಕ್ಕಳನ್ನು ಸಮಗ್ರ ವ್ಯಕ್ತಿಗಳನ್ನಾಗಿ ಮಾಡಲು ಮಕ್ಕಳಿಗೆ ಸಾಮಾಜಿಕ ಮತ್ತು ನೈತಿಕ ಶಿಕ್ಷಣವನ್ನು ಒದಗಿಸ ಬೇಕಾಗುತ್ತದೆ. ನನ್ನ ಪ್ರೀತಿಯ ಶಿಕ್ಷಕರೇ ಇವತ್ತು ನಿಮ್ಮ ದಿನ. ಶಿಕ್ಷಕರು ಎಂಬ ವಿಶೇಷವಾದ ಕರೆ ಯನ್ನು ಶಾಶ್ವತಗೊಳಿಸಿ, ನಿಮ್ಮ ಮಕ್ಕಳ ಕಾಳಜಿ ವಹಿಸಲು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಿ. ಏಕೆಂದರೆ ನೀವು ಎಷ್ಟು ಕಾಳಜಿ ವಹಿಸುತ್ತೀರಿ ಎಂಬುದನ್ನು ತಿಳಿದುಕೊಳ್ಳುವವರೆಗೂ ನೀವು ಎಷ್ಟು ತಿಳಿದಿರುತ್ತೀರಿ ಎಂಬುದನ್ನು ವಿದ್ಯಾರ್ಥಿ ಗಳು ಲೆಕ್ಕಿಸುವುದಿಲ್ಲ.
ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ. ದೇವರು ನಿಮ್ಮ ಮುಖದಲ್ಲಿ ಬೆಳಕನ್ನು ತುಂಬಲಿ ಮತ್ತು ನಿಮ್ಮನ್ನು ಕರುಣಿಸಲಿ ಎಂದು ನುಡಿದು ನಾಡಿನ ಸಮಗ್ರ ಶಿಕ್ಷಕರಿಗೆ ಮೇಡಂ ಗ್ರೇಸ್ ಪಿಂಟೋ ಶುಭ ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.