ಸಾಧಕರು, ಕೃತಿಗಳಿಗೆ ಎಂದೂ ಸಾವಿಲ್ಲ: ಕಡಂದಲೆ ಸುರೇಶ್‌ ಭಂಡಾರಿ


Team Udayavani, Mar 27, 2021, 11:38 AM IST

ಸಾಧಕರು, ಕೃತಿಗಳಿಗೆ ಎಂದೂ ಸಾವಿಲ್ಲ: ಕಡಂದಲೆ ಸುರೇಶ್‌ ಭಂಡಾರಿ

ಮುಂಬಯಿ: ಹಲವಾರು ದಾಖಲೆಗಳೊಂದಿಗೆ ಉನ್ನತ ಮಟ್ಟದಲ್ಲಿರುವ ಹೊರನಾಡ ಹಿರಿಯ ಸಂಸ್ಥೆ ಮೊಗವೀರ ವ್ಯವಸ್ಥಾಪಕ ಮಂಡಳಿ ಇಂದಿಗೂ ಗುರಿಕಾರ ವ್ಯವಸ್ಥೆಯನ್ನು ಹೊಂದಿರುವ ಸಮಾಜವಾಗಿದೆ. ಇವರು ಸಾಧಕರೂ ಸಾಹಸಿಗರೂ ಮತ್ತು ವೀರರೂ ಹೌದು. ಮೊಗವೀರರದ್ದು ಸಶಕ್ತ ವ್ಯವಸ್ಥೆವುಳ್ಳ ಪ್ರತಿಷ್ಠಿತ ಸಮಾಜವಾಗಿದೆ. ಇಂದು ಓದಲು ಪುಸ್ತಕಗಳೇ ಬೇಡವಾದ ಕಾಲದಲ್ಲಿ ಎಲ್ಲರೊಂದಿಗೆ ಬೆರೆಯುತ್ತಾ ನಮಗೆ ನಿದರ್ಶನರಾಗಿರುವ ಅಶೋಕ್‌ ಸುವರ್ಣರು ರಚಿತ ಮತ್ತು ಅವರ ಜೀವನ ಶೈಲಿಯ ಬರಹಗಳ ಎರಡು ಕೃತಿಗಳು ಬಿಡುಗಡೆ ಆಗಿರುವುದು ಸ್ತುತ್ಯರ್ಹ. ಪುಸ್ತಕಗಳು ಸ್ನೇಹತ್ವಕ್ಕೆ ಮತ್ತು ಶ್ರೇಯಸ್ಸಿಗೆ ಸಮಾನವಾಗಿದೆ. ಹುಟ್ಟಿದ ವ್ಯಕ್ತಿಗೆ ಸಾವಿರಬಹುದು. ಆದರೆ ಬರಹಕ್ಕೆ ಸಾವಿಲ್ಲ ಎಂದು ಭಂಡಾರಿ ಮಹಾ ಮಂಡಲದ ಸ್ಥಾಪಕಾಧ್ಯಕ್ಷ, ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನ ಬಾಕೂìರು ಇದರ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್‌ ಎಸ್‌. ಭಂಡಾರಿ ತಿಳಿಸಿದರು.

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ವತಿಯಿಂದ ಮಾ. 20ರಂದು ಅಂಧೇರಿ ಪಶ್ಚಿಮದ ಮೊಗವೀರ ಭವನದ ಎಂವಿಎಂ ಶಾಲಿನಿ ಜಿ. ಶಂಕರ್‌ ಸೆಂಟರ್‌ನ ಸಭಾಗೃಹದಲ್ಲಿ ಆಯೋಜಿಸಿದ್ದ ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಾಹಿತ್ಯ ಕ್ಷೇತ್ರದಲ್ಲಿ ಅಶೋಕ್‌ ಸುವರ್ಣ ಅವರು ಇನ್ನಷ್ಟು ಸಾಧನೆಗಳನ್ನು ಮಾಡಲಿ ಎಂದು ಹಾರೈಸಿದರು.

ಮೊಗವೀರ ವ್ಯವಸ್ಥಾಪಕ ಮಂಡಳಿಯ ಎಂವಿಎಂ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಗೋಪಾಲ್‌ ಕಲಕೋಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೂಕ್ಷ್ಮ ಸಂಶೋಧಕ ದೃಷ್ಟಿಕೋನ, ಶಿಸ್ತಿನ ವ್ಯಕ್ತಿತ್ವ ಹೊಂದಿರುವ ಅಶೋಕ್‌ ಸುವರ್ಣರು ಮಾದರಿ ಬರಹ ಗಾರರು. ಈ ಎರಡೂ ಕೃತಿಗಳು ಉತ್ತಮವಾಗಿ ಮೂಡಿಬಂದಿವೆ. ಇದು ಸಾಧಕರಿಂದ ಮಾತ್ರ ಸಾಧ್ಯವಾಗುವುದು ಎಂದರು.

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೃಷ್ಣಕುಮಾರ್‌ ಎಲ್‌. ಬಂಗೇರ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಮೊಗವೀರ ಮಂಡಳಿ ಉಪಾಧ್ಯಕ್ಷ, ಮೊಗವೀರ ಮಾಸಿಕದ ಸಂಪಾದಕ, ಅಶೋಕ ಎಸ್‌. ಸುವರ್ಣ ರಚಿತ, ಮೊಗವೀರ ವ್ಯವಸ್ಥಾಪಕ ಮಂಡಳಿ ಪ್ರಕಟಿತ “ಮುಂಬಯಿ ಪರಿಕ್ರಮಣ’ ಕೃತಿಯನ್ನು ಕಡಂದಲೆ ಸುರೇಶ್‌ ಮತ್ತು ಲೇಖಕ, ಕವಿ ಗೋಪಾಲ್‌ ತ್ರಾಸಿ ರಚಿಸಿ ಸಾಹಿತ್ಯ ಬಳಗ ಮುಂಬಯಿ ಪ್ರಕಾಶಿತ “ಸಮರ್ಥ ಪತ್ರಕರ್ತ, ಸಂಪಾದಕ ಅಶೋಕ ಸುವರ್ಣ’ ಕೃತಿಯನ್ನು ರಂಗತಜ್ಞ, ಕನ್ನಡ ಸಾಹಿತ್ಯ ಪರಿಷತ್‌ ಮುಂಬಯಿ ಘಟಕದ ಕಾರ್ಯದರ್ಶಿ ಡಾ| ಭರತ್‌ಕುಮಾರ್‌ ಪೊಲಿಪು ಬಿಡುಗಡೆಗೊಳಿಸಿದರು.

ಮೋಗವೀರ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಸದಾನಂದ ಎ. ಕೋಟ್ಯಾನ್‌, ಸೋಮ ಸಾಯಿ ಸ್ಕಂದ ಆಶ್ರಮ ಮೈಸೂರು ಇದರ ವಿಶ್ವಸ್ಥ ಸದಸ್ಯ ಶ್ರೀನಿವಾಸ ಎನ್‌. ಕಾಂಚಾನ್‌, ಒಡೆಯರಬೆಟ್ಟು ಮೊಗವೀರ ಸಭಾ ಮುಂಬಯಿ ಅಧ್ಯಕ್ಷ ಗೋವಿಂದ ಎನ್‌. ಪುತ್ರನ್‌, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ರೋನ್ಸ್‌ ಬಂಟ್ವಾಳ್‌, ಉದ್ಯಮಿಗಳಾದ ಸುಧೀರ್‌ ಎಸ್‌. ಪುತ್ರನ್‌, ಜಿತೇಂದ್ರಕುಮಾರ್‌ ವಿ. ಕೋಟ್ಯಾನ್‌, ಮದರ್‌ ಇಂಡಿಯಾ ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್‌ ಮೈಂದನ್‌, ಮೊಗವೀರ ಮಂಡಳಿ ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಪ್ರೇಮಲತಾ ಪುತ್ರನ್‌ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು. ಮೊಗವೀರ ವ್ಯವಸ್ಥಾಪಕ ಮಂಡಳಿಯ ವತಿಯಿಂದ ಅಶೋಕ್‌ ಎಸ್‌. ಸುವರ್ಣ ಅವರನ್ನು ಅತಿಥಿ-ಗಣ್ಯರು ಗೌರವಿಸಿದರು.

ಪ್ರಾಮಾಣಿಕತೆ, ಎಲ್ಲೂ ಸ್ವಹಿತಕ್ಕಾಗಿ ಹೋರಾಡದೆ, ಕುರ್ಚಿಗಾಗಿ ಹಾತೊರೆಯದೆ ಇರುವುದು ಅಶೋಕ್‌ ಸುವರ್ಣರ ದೊಡ್ಡ ಗುಣ. ಅವರೋರ್ವ ರೋಲ್‌ಮೋಡೆಲ್‌. ಅವರ ಕೃತಿಯನ್ನು ಬರೆಯುವಲ್ಲಿ ನನಗೆ ಬಹಳ ಸಂತೋಷವಾಗಿದೆ ಎಂದು ಕೃತಿಕರ್ತೃ ಗೋಪಾಲ ತ್ರಾಸಿ ತಿಳಿಸಿದರು.

85ರ ದಶಕದಲ್ಲಿ ಬರೆದಂತಹ ಅಂದಿನ ಲೇಖನಗಳು ಇಂದೂ ಪ್ರಸ್ತುತ ಅನ್ನುವುದು ಕೃತಿಯ ಹೆಗ್ಗಳಿಕೆ. ಬರವಣಿಗೆಯನ್ನು ಶಿಸ್ತು ಮತ್ತು ವಿಷಮಕ್ಕೆ ಒತ್ತು ಕೊಟ್ಟಿರುವುದನ್ನು ಗಮನಿಸಬಹುದು. ಈ ಕೃತಿ ಒಂದು ಗೈಡ್‌ ತರ. ನಮ್ಮ ಜತೆ ಸದಾ ಇರಲಿದೆ ಎಂದು ಪರಿಕ್ರಮಣ ಕೃತಿಯನ್ನು ಪರಿಚಯಿಸಿದ ಕವಿ, ಲೇಖಕಿ ಡಾ| ಜಿ. ಪಿ. ಕುಸುಮಾ ಅಭಿಪ್ರಾಯಿಸಿದರು.

ಮುಂಬಯಿ ಕನ್ನಡಿಗರು ಮರೆಯ ಲಾರದ, ಮರೆಯಬಾರದ ವ್ಯಕ್ತಿತ್ವ ಅಶೋಕ್‌ ಸುವರ್ಣ ಅವರದ್ದು. ಅಶೋಕ್‌ ಅವರು ತಮ್ಮ ಬದುಕನ್ನು ಕಟ್ಟಿಕೊಂಡ ಬಗೆಯನ್ನು ಲೇಖಕರು ಬಹಳ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಅಶೋಕ್‌ ಅವರ ಜೀವನ ಕಥೆಯನ್ನು ಸರಳವಾದ ಭಾಷೆಯಲ್ಲಿ  ಸವಿಸ್ತಾರವಾಗಿ ಕಟ್ಟಿ ಕೊಟ್ಟಿರುವ ಗೋಪಾಲ ತ್ರಾಸಿ ಅವರು ಅಭಿನಂದನಾರ್ಹರು ಎಂದು ಲೇಖಕ, ಸಂಘಟಕ ಜಿ. ಟಿ. ಆಚಾರ್ಯ ತಿಳಿಸಿದರು.

ಈ ದಿನ ನನ್ನ ಬದುಕಿನಲ್ಲಿ ಅವಿಸ್ಮರಣೀಯ ದಿನ. ಕೃತಿ ಬರುವುದಕ್ಕೆ ಸಹಕರಿಸಿದ ಎಲ್ಲರಿಗೂ ವಂದನೆಗಳು ಎಂದು ಅಶೋಕ್‌ ಸುವರ್ಣ ತಿಳಿಸಿದರು. ಎಂವಿಎಂ ವಿದ್ಯಾಲಯದ ಗೌರವ ಪ್ರಧಾನ ಕಾರ್ಯದರ್ಶಿ ಸಂಜೀವ ಕೆ. ಸಾಲ್ಯಾನ್‌ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಂಘಟಕ ಮುಂಡ್ಕೂರು ಸುರೇಂದ್ರ ಸಾಲ್ಯಾನ್‌ ಅತಿಥಿ

ಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿ ದರು. ಮೊಗವೀರ ಮಂಡಳಿಯ ಗೌರವ ಪ್ರಧಾನ ಕಾರ್ಯದರ್ಶಿ ಭಾಸ್ಕರ್‌ ಎಲ್‌. ಸಾಲ್ಯಾನ್‌, ಮೊಗವೀರ ಮಾಸಿಕದ ಸಮಿತಿ ಕಾರ್ಯಾಧ್ಯಕ್ಷ ಲಕ್ಷ್ಮಣ್‌ ಶ್ರೀಯಾನ್‌, ದೇವರಾಜ್‌ ಬಂಗೇರ, ಪ್ರೀತಿ ಹರೀಶ್‌ ಶ್ರೀಯಾನ್‌ಅತಿಥಿ ಗಳಿಗೆ ಪುಷ್ಪಗುತ್ಛಗಳನ್ನಿತ್ತು ಗೌರವಿಸಿದರು. ಮೊಗವೀರ ಮಾಸಿಕದ ವ್ಯವಸ್ಥಾಪಕ ದಯಾನಂದ ಬಂಗೇರ ವಂದಿಸಿದರು.

ವಿವಿಧ ಕ್ಷೇತ್ರಗಳಲ್ಲಿ  ಕ್ರಿಯಾಶೀಲ ರಾಗಿರುವ ಮುಂಬಯಿ ತುಳು, ಕನ್ನಡಿಗರು ಸಾಹಿತ್ಯ ಕ್ಷೇತ್ರದಲ್ಲೂ ವಿಶೇಷ ಸಾಧನೆಗಳನ್ನು ಮಾಡಿದ್ದಾರೆ. ಸಮಾಜದ ಶ್ರೇಯೋನ್ನತಿಗೆ ಇಂತಹ ಲೇಖಕರ ಪಾತ್ರ ಬಹಳ ಮಹತ್ವದ್ದು. ಅಶೋಕ್‌ ಸುವರ್ಣ ಅವರು ಮೊಗವೀರ ವ್ಯವಸ್ಥಾಪಕ ಮಂಡಳಿಯ ಮುಖಾಂತರ ಮಾಡುತ್ತಿರುವ ಸಾಹಿತ್ಯಕ, ಸಮಾಜ ಸೇವೆ ಅಭಿನಂದನೀಯ. ಕೃಷ್ಣಕುಮಾರ್‌ ಎಲ್‌. ಬಂಗೇರ ಅಧ್ಯಕ್ಷರು, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ

ಒಟ್ಟು ಮುಂಬಯಿ ಬದುಕನ್ನು ಕಟ್ಟಿಕೊಡುವಲ್ಲಿ ಹಲವಾರು ಮಂದಿಯ ಕೃತಿಗಳು ನಮ್ಮೆದುರಿಗೆ ಬರುತ್ತವೆ. ಅದರಲ್ಲೂ ಓರ್ವ ವ್ಯಕ್ತಿಯ ಬದುಕನ್ನು ಚಿತ್ರಿಸುವಾಗ ಗೋಪಾಲ್‌ ತ್ರಾಸಿ ಬಹಳ ಜಾಗರೂಕತೆ ವಹಿಸಿದ್ದಾರೆ. ಅಶೋಕ್‌ ಸುವರ್ಣ ಸಾಹಿತಿಯಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ ಸಮಾಜವನ್ನು ಒಂದುಗೂಡಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿದ್ದಾರೆ. ಅವರಂತಹ ಸಾಂಸ್ಕೃತಿಕ ನಾಯಕತ್ವದ ಗುಣವುಳ್ಳವರ ಅಗತ್ಯತೆ ನಮಗಿದೆ. ಡಾ| ಭರತ್‌ ಕುಮಾರ್‌ ಪೊಲಿಪು ರಂಗಕರ್ಮಿ

ಮಹಾರಾಷ್ಟ್ರ ಸರಕಾರದಿಂದ ಅಧಿಕೃತ ಐಡಿ ಕಾರ್ಡ್‌ ಹೊಂದಿರುವ ಮೊದಲ ಕನ್ನಡಿಗ ಪತ್ರಕರ್ತ ಅಶೋಕ್‌ ಸುವರ್ಣರ ಸಾಧನೆ ಅಪಾರ. ಮುಂಬಯಿ ಪತ್ರಿಕೋದ್ಯಮದಲ್ಲಿ ಅವರದ್ದು ಮಾದರಿ ವ್ಯಕ್ತಿತ್ವ. ಇವರ ಸಾಧನೆಗಳು ಮುಂದಿನ ಪೀಳಿಗೆಗೆ ಅಗತ್ಯವಾಗಿ ತಿಳಿಯಬೇಕಾಗಿದೆ. ಯುವ ಪತ್ರಕರ್ತರಿಗೆ ಇವರೋರ್ವ ಆದರ್ಶಪ್ರಾಯರು. ಅವರಿಂದ ಇನ್ನಷ್ಟು ಸಾಹಿತ್ಯಕ, ಸಾಮಾಜಿಕ ಸೇವೆಗಳು ನಡೆಯುತ್ತಿರಲಿ. ರೋನ್ಸ್‌ ಬಂಟ್ವಾಳ್‌, ಅಧ್ಯಕ್ಷರು  ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ

ಟಾಪ್ ನ್ಯೂಸ್

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.