ಕೊಡುಕೊಳ್ಳುವಿಕೆಯಿಂದ ಮರಾಠಿ-ಕನ್ನಡ ಬಾಂಧವ್ಯ ವೃದ್ಧಿ: ಡಾ| ಭೈರಪ್ಪ


Team Udayavani, Jan 25, 2020, 6:28 PM IST

mumbai-tdy-1

ಪುಣೆ, ಜ. 24: ಪುಣೆಯಲ್ಲಿರುವ ಸಾಹಿತ್ಯ ಪ್ರೇಮಿಗಳು ಪ್ರೀತಿಯಿಂದ ನೀಡಿದ ಸಮ್ಮಾನಕ್ಕೆ ನಾನು ಚಿರಋಣಿಯಾಗಿದ್ದೇನೆ. ಪುಣೆಯು ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿಯಾಗಿದ್ದು ಮಹಾರಾಷ್ಟ್ರದ ಓದುಗರು, ಸಾಹಿತ್ಯ ಪ್ರೇಮಿಗಳು ಅನ್ಯ ಭಾಷಿಕರಿಗಿಂತ ಹೆಚ್ಚು ಪ್ರೀತಿಯನ್ನು ನೀಡಿದ್ದಾರೆ. ಮರಾಠಿ ಭಾಷಿಕರು ಸಾಹಿತ್ಯವನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿಕೊಂಡು ವಿಮರ್ಶಾತ್ಮಕವಾದ ಪ್ರಶ್ನೆಯನ್ನು ಕೇಳುತ್ತಾರೆ.

ನನ್ನ ಹಲವಾರು ಪುಸ್ತಕಗಳು ವಿವಿಧ ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಎಲ್ಲಾ ಭಾಷಿಕ ಓದುಗ ಅಭಿಮಾನಿಗಳಿದ್ದರೂ ಮರಾಠಿ ಭಾಷಿಕರ ಅಭಿ ಮಾನಕ್ಕೆ, ಸಾಹಿತ್ಯಾಸಕ್ತಿಗೆ ಮೆಚ್ಚಬೇಕಾಗಿದೆ. ಆದುದರಿಂದ ಕನ್ನಡದ ಉತ್ತಮ ಸಾಹಿತ್ಯಗಳನ್ನು ಮರಾಠಿಗೆ ಹಾಗೂ ಮರಾಠಿಯ ಸಾಹಿತ್ಯಗಳನ್ನು ಕನ್ನಡಕ್ಕೆ ಭಾಷಾತರಿಸುವ ಹೆಚ್ಚೆಚ್ಚು ಕೆಲಸಗಳು ಇಲ್ಲಿ ನಡೆಯಬೇಕಾಗಿದೆ. ಇದರಿಂದ ಮರಾಠಿ ಕನ್ನಡಿಗರ ಬಾಂಧವ್ಯ ವೃದ್ಧಿಯಾಗಲಿದೆ ಎಂದರು.

ಅವರು ಜ. 19 ರಂದು ಕನ್ನಡ ಸಂಘದ ಶಕುಂತಳಾ ಜಗನ್ನಾಥ ಶೆಟ್ಟಿ ಸಭಾಭವನ, ಗಣೇಶ್‌ ನಗರ, ಪುಣೆ ಕನ್ನಡ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ಆಯೋಜನೆಯಲ್ಲಿ ಪುಣೆ ಕನ್ನಡ ಸಂಘದ ಸಮ್ಮಾನ ಸ್ವೀಕರಿಸಿ ಮಾತನಾಡಿ, ಮರಾಠಿ ಭಾಷಿಕರು ಸಾಹಿತ್ಯ ಹಾಗೂ ಸಂಗೀತ ಪ್ರೇಮಿಗಳಾಗಿದ್ದಾರೆ. ಆದುದರಿಂದ ಪುಣೆ ನಗರವು ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡುತ್ತಿದೆ. ಸಂಗೀತ ಮತ್ತು ಸಾಹಿತ್ಯ ಒಂದಕ್ಕೊಂದು ಪೂರಕವಾಗಿದ್ದು ನನ್ನ ಸಾಹಿತ್ಯ ರಚನೆಗೂ ಸಂಗೀತ ಪ್ರೇರಣೆ ನೀಡುತ್ತದೆ. ಐತಿಹಾಸಿಕವಾಗಿಯೂ ಮಹಾರಾಷ್ಟ್ರ ಮಹತ್ವದ ಸ್ಥಾನದಲ್ಲಿದ್ದು ಭಾರತೀಯ ಸಂಸ್ಕೃತಿ ಬೇರೆಲ್ಲ ಕಡೆ ನಶಿಸುತ್ತಿರುವವಾಗ ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಮಹಾರಾಜರು ಸೈನ್ಯವನ್ನು ಕಟ್ಟಿ ಶತ್ರುಗಳನ್ನು ಸೆದೆಬಡಿದು ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಮಹತ್ತರ ಕೊಡುಗೆ ನೀಡಿದ್ದಾರೆ.

ಮುಖ್ಯವಾಗಿ ದಕ್ಷಿಣದ ಭಾಗಗಳಿಗೆ ಇದೊಂದು ದೊಡ್ಡ ಪ್ರೇರಣೆ ನೀಡುವಂತಾಯಿತು. ಮಹಾರಾಷ್ಟ್ರದ ರಾಜಕೀಯದಲ್ಲೂ ಇದು ಪರಿಣಾಮ ಬೀರಿದೆ. ಮಹಾರಾಷ್ಟ್ರದ ಫಲೋಸ್ಕರ ನಂತಹ ಸಂಗೀತ ದಿಗ್ಗಜರು ಸಂಗೀತ ಕ್ಷೇತ್ರಕ್ಕೆ ಶ್ರೇಷ್ಠವಾದ ಕೊಡುಗೆಯನ್ನು ನೀಡಿರುತ್ತಾರೆ. ಅಲ್ಲದೆ ಹಲವಾರು ಶ್ರೇಷ್ಠ ವಿದ್ವಾಂಸರನ್ನೂ, ದೇಶಭಕ್ತರನ್ನೂ ಹೊಂದಿದ ನಾಡು ಮಹಾರಾಷ್ಟ್ರವಾಗಿದ್ದು ಇಲ್ಲಿನ ಸಾಂಸ್ಕೃತಿಕ ಭವ್ಯತೆ ಹಾಗೂ ಪರಂಪರೆಗಳನ್ನು ಗೌರವಿಸಬೇಕಾಗಿದೆ ಎಂದರು.

ಮರಾಠಿ ನಾಟಕಕಾರ ಹಾಗೂ ನಟ ಆಗಾಶೆ ಉಪಸ್ಥಿತರಿದ್ದು ಮಾತನಾಡಿ, ಮಹಾರಾಷ್ಟ್ರ ಹಾಗೂ ಕನ್ನಡಿಗರೊಂದಿಗೆ ಅವಿನಾಭಾವ ಸಂಬಂಧ ವನ್ನು ಹೊಂದಿದೆ. ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಒಂದಕ್ಕೊಂದು ಸಾಮ್ಯತೆಯನ್ನು ಹೊಂದಿದೆ. ಕನ್ನಡ ಸುಂದರವಾದ ಭಾಷೆ ಯಾಗಿದೆ ಇಲ್ಲಿನ ಸಾಹಿತ್ಯವೂ ವಿಶೇಷತೆಯಿಂದಕೂಡಿದೆ. ಗಿರೀಶ್‌ ಕಾರ್ನಾಡ್‌ ಹಾಗೂ ಶಿವರಾಮ ಕಾರಂತರ ಒಡನಾಟದಿಂದ ಕನ್ನಡ ಸಂಸ್ಕೃತಿಯ ಪರಿಚಯ ನನಗಾಯಿತು. ರಾಜಕಾರಣಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ವಿರೋಧಾಭಾಸ ಹೊಂದಿದ್ದರೂ ನಾವು ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರದ ಮೂಲಕ ನಮ್ಮ ಸಂಬಂಧವನ್ನು ಬಲಪಡಿಸಬೇಕಾಗಿದೆ. ಮುಂದಿನ ಜನ್ಮವೊಂದಿದ್ದರೆ ಕರ್ನಾಟಕದಲ್ಲಿ ಹುಟ್ಟಬೇಕೆಂಬ ಅದಮ್ಯ ಇಚ್ಚೆಯಾಗಿದೆ ಎಂದರು.

ಪುಣೆ ಕನ್ನಡ ಸಂಘದ ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್‌ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಸ್‌. ಎಲ್‌. ಭೈರಪ್ಪನವರು ಕನ್ನಡ ಸಾಹಿತ್ಯ ಲೋಕದ ಮಿನುಗುತ್ತಿರುವ ನಕ್ಷತ್ರದಂತಿರುವ ಶ್ರೇಷ್ಠ ಸಾಹಿತಿಯಾಗಿದದಾರೆ. ಅವರ ಕಾದಂಬರಿಗಳು ಮುತ್ತು ರತ್ನಗಳಂತೆ ಅನಘ್ರವಾದ ಮೌಲ್ಯವನ್ನು ಹೊಂದಿದೆ. ಸಾಹಿತ್ಯಾಭಿಮಾನಿಗಳ ಪ್ರೀತಿಯೇ ಅವರಿಗೆ ಜ್ಞಾನಪೀಠ ಪ್ರಶಸ್ತಿಗಿಂತಲೂ ಮಿಗಿಲಾದ ಪ್ರಶಸ್ತಿಯಾಗಿದೆ. ಅವರಲ್ಲಿರುವ ಶಿಸ್ತು, ಸಹನೆ, ಸ್ಥಿತಪ್ರಜ್ಞೆ ಅವರಿಂದ ನಾವು ಕಲಿಯಬೇಕಾಗಿದೆ. ತನ್ನ ಅಮೋಘವಾದಂತಹ ಸಾಹಿತ್ಯದ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ಭೈರಪ್ಪನವರು ನಮ್ಮೊಂದಿಗಿರುವುದು ನಮ್ಮ ಅದೃಷ್ಟವಾಗಿದೆ ಎಂದರು.

ವೇದಿಕೆಯಲ್ಲಿ ಪುಣೆ ಕನ್ನಡ ಸಂಘದ ಉಪಾಧ್ಯಕ್ಷರಾದ ನಾರಾಯಣ ಹೆಗಡೆ, ಕಾರ್ಯದರ್ಶಿ ಮಾಲತಿ ಕಲ್ಮಾಡಿ, ವಿಶ್ವಸ್ಥರಾದ ಡಾ| ಬಾಲಾಜಿತ್‌ ಶೆಟ್ಟಿ, ಅಶ್ವಿ‌ನ್‌ ಶಾಸ್ತ್ರಿ, ಸುಧಾಕರ್‌ ರಾವ್‌, ಜನಸಂಪರ್ಕಾಧಿಕಾರಿ ರಾಮದಾಸ್‌ ಆಚಾರ್ಯ ಕಲಾಗಂಗೋತ್ರಿಯ ನಿರ್ದೇಶಕ ವಿ. ಜಯರಾಮ್‌, ಸಾಹಿತಿ ಉಮಾ ಕುಲಕರ್ಣಿ ಉಪಸ್ಥಿತರಿದ್ದರು. ಎಸ್‌. ಎಲ್‌. ಭೈರಪ್ಪನವರನ್ನು ಶಾಲು ಹೊದೆಸಿ, ಹಾರ ತೊಡಿಸಿ, ಫಲಪುಷ್ಪವನ್ನಿತ್ತು ಸಮ್ಮಾನಿಸಲಾಯಿತು. ಅತಿಥಿಗಳನ್ನು ಹೂವಿನ ಗಿಡಗಳನ್ನು ನೀಡಿ ಸತ್ಕರಿಸಲಾಯಿತು. ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ಪ್ರಾಂಶುಪಾಲೆ ಜ್ಯೋತಿ ಕಡಕೊಳ್‌ ಕಾರ್ಯಕ್ರಮ ನಿರೂಪಿಸಿದರು.

ಕನ್ನಡ ಮಾಧ್ಯಮ ಹೈಸ್ಕೂಲ್‌ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ರಾಮದಾಸ್‌ ಆಚಾರ್ಯ ಕನ್ನಡ ಸಂಸ್ಕೃತಿ ಸಚಿವರಾದ ಸಿ. ಟಿ. ರವಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಪಾತ್ರವನ್ನು ವಾಚಿಸಿದರು. ಕಾರ್ಯಕ್ರಮದ ನಂತರ ಡಾ| ಎಸ್‌. ಎಲ್‌. ಭೈರಪ್ಪನವರ ಕಾದಂಬರಿ ಮಂದ್ರ ಆಧಾರಿತ ಕಲಾತರಂಗ ಬೆಂಗಳೂರು ಕಲಾವಿದರು ಅಭಿನಯಿಸಿದ ಕನ್ನಡ ಸಂಗೀತ ನಾಟಕ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಕನ್ನಡಿಗರು, ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

 

 –ಚಿತ್ರ-ವರದಿ: ಕಿರಣ್‌ ಬಿ. ರೈ ಕರ್ನೂರು

ಟಾಪ್ ನ್ಯೂಸ್

Railway-Minister-MP-DK

Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Railway-Minister-MP-DK

Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.