ವಿಕ್ರೋಲಿ ಪ್ರಗತಿ ವಿದ್ಯಾಲಯದ ನವೀಕೃತ ಕೊಠಡಿ ಉದ್ಘಾಟನೆ


Team Udayavani, Dec 9, 2018, 5:42 PM IST

0812mum01a.jpg

ಮುಂಬಯಿ: ಶಿವಾಯ ಫೌಂಡೇ ಶನ್‌ನ ಅತ್ಯಂತ ಕಾಳಜಿಯುತ ಮತ್ತು ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ವಿಕ್ರೋಲಿಯ ಬುದ್ಧಿಮಾಂದ್ಯ ಪ್ರಗತಿ ವಿದ್ಯಾ ಲಯದ ಮಕ್ಕಳಿಗೆ ವ್ಯವಸ್ಥಿತವಾದ ಒಂದು ಶಾಲಾ ಕೊಠಡಿ ನಿರ್ಮಾಣದ ಹಸ್ತಾಂತರ ಮತ್ತು  ಅದರ ಉದ್ಘಾಟನಾ ಸಮಾರಂಭವು ಅಂಗವಿಕಲ ದಿನಾಚರಣೆಯ ಪ್ರಯುಕ್ತ ಡಿ. 7ರಂದು ಪ್ರಗತಿ ವಿದ್ಯಾಲಯದಲ್ಲಿ ನೆರವೇರಿತು.

ಶಾಲಾ ಕೊಠಡಿಯ ಉದ್ಘಾಟನಾ ಸಮಾರಂ ಭದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷ ಶ್ಯಾಮ್‌ ಸುಂದರ್‌ ಶೆಟ್ಟಿ ಅವರು ಮಾತನಾಡಿ, ಭವಿಷ್ಯದಲ್ಲಿ ಶಿವಾಯ ಫೌಂಡೇಶನ್‌ ಮಾಡುವ ಸೇವಾ ಚಟುವಟಿಕೆಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಮಕ್ಕಳ ಸೇವೆ ದೇವರ ಸೇವೆಯಾಗಿದೆ. ನಾವು ದೇವರನ್ನು ಹುಡುಕಿ ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ ಹೋಗುತ್ತೇವೆ. ಆದರೆ ನಿಜವಾದ ದೇವರು ನಾವು ಮಾಡುವ ಇಂತಹ ಸಮಾಜಮುಖೀ ಕೆಲಸಗಳಲ್ಲಿ ಇ¨ªಾನೆ.  ಇದು ನಿಜವಾದ ದೇವರ ಸೇವೆ. ಇಂತಹ ಸಮಾಜದ ಅಶಕ್ತರನ್ನು ಗುರುತಿಸಿ ಅವರಿಗೆ ನೆರವಾಗುವ ನಿಮ್ಮ ಈ ಆದರ್ಶ ಕೆಲಸಗಳು ಮುಂದುವರಿಯುತ್ತಿರಲಿ. ನನ್ನ  ಸಹಕಾರ ಶಿವಾಯ ಫೌಂಡೇಶನ್‌ ಹಾಗೂ ಪ್ರಗತಿ ವಿದ್ಯಾಲಯಕ್ಕೆ ಸದಾ ಇದೆ ಎಂದರು.

ವಿಶೇಷ ಅತಿಥಿಯಾಗಿ ಪಾಲ್ಗೊಂಡ ಬಂಟರ ಸಂಘ ಕುರ್ಲಾ-ಭಾಂಡೂಪ್‌ ಪ್ರಾದೇಶಿಕ ಸಮಿತಿಯ  ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಮ್ಯಾ ಉದಯ್‌ ಶೆಟ್ಟಿ ಅವರು ಮಾತನಾಡಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶಿವಾಯ ಫೌಂಡೇಶನ್‌ ಮಾಡುತ್ತಿರುವ ಇಂತಹ ಸಮಾಜ ಕಟ್ಟುವ ಕಾರ್ಯಗಳು ಮುಂದುವರಿಯುತ್ತಿರಲಿ. ನಿಮ್ಮ ಕೆಲಸ ಕಾರ್ಯಗಳಿಗೆ ನನ್ನ ಸದಾ ಬೆಂಬಲವಿದೆ. 10 ತಿಂಗಳ ಶಿವಾಯ ಫೌಂಡೇಶ ನ್‌ನ ಕಾರ್ಯವೈಖರಿಯು ದಿನ ಪತ್ರಿಕೆಯ ಮೂಲಕ ನನ್ನ ಗಮನ ಸೆಳೆದಿದೆ. ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ದೇವರ ಆಶೀರ್ವಾದವನ್ನು ನಾನು ಬೇಡುತ್ತೇನೆ ಎಂದರು.

ಅತಿಥಿ-ಗಣ್ಯರು ಹಾಗೂ ಶಿವಾಯ ಫೌಂಡೇಶನ್‌ ಅಧ್ಯಕ್ಷ ತಾರಾನಾಥ ರೈ ಪುತ್ತೂರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಕೋರಿದರು. ಪ್ರಗತಿ ವಿದ್ಯಾಲಯದ ಪ್ರಬಂಧಕ ಅರುಣ್‌ ಸಾವಂತ್‌ ಮಾತನಾಡಿ, ನಮಗೆ ಇಂದು ಅತ್ಯಂತ ಖುಷಿಯ ದಿನ. ಶಿವಾಯ ಫೌಂಡೇಶನ್‌ನ ಎÇÉಾ ಪದಾಧಿಕಾರಿಗಳಿಗೆ ನಾನು ಆಭಾರಿಯಾಗಿದ್ದೇನೆ. ನೀವು ಹಸ್ತಾಂತರಿಸಿದ ಶಾಲಾ ಕೊಠಡಿಯಲ್ಲಿ ನಾಳೆಯಿಂದ ಮಕ್ಕಳು ವಿದ್ಯಾಭ್ಯಾಸ ಮಾಡಲಿರುವುದು ನಮಗೆ ಸಂತಸ ತಂದಿದೆ. ಸರಕಾರದಿಂದ ಗ್ರಾÂಂಟ್‌ ಲಭ್ಯವಾಗದ ಕಾರಣ ಶಾಲೆಯು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂದು ಹಾಜರಿರುವ ಅತಿಥಿಗಳು ಹಾಗೂ ಶಿವಾಯ ಫೌಂಡೇಶನ್‌ನ ಸದಸ್ಯರ ಸಹಕಾರವನ್ನು ಇನ್ನು ಮುಂದೆಯೂ ಬಯಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಶಿವಾಯ ಫೌಂಡೇಶನ್‌ ಸದಸ್ಯರಾದ ಮಧುಶೂದನ್‌ ಶೆಟ್ಟಿ, ಹರೀಶ್‌ ಕೋಟ್ಯಾನ್‌, ಜ್ಯೋತಿ ಶೆಟ್ಟಿ, ಪ್ರಶಾಂತ್‌ ಶೆಟ್ಟಿ ಪಲಿಮಾರು, ರಾಜೇಶ್‌ ಶೆಟ್ಟಿ, ವಿನೋದ್‌ ದೇವಾಡಿಗ, ವರ್ಣಿತ್‌ ಶೆಟ್ಟಿ, ದೀಪಾ ಪೂಜಾರಿ, ಶ್ವೇತಾ ಶೆಟ್ಟಿ, ಗಣೇಶ್‌ ಸಾಫಲ್ಯ, ಪ್ರಶಾಂತ್‌ ಪಂಜ, ನವೀನ್‌ ಶೆಟ್ಟಿ, ಕೃಷ್ಣಾನಂದ ಪೈ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು. ಪ್ರಗತಿ ಸಂಸ್ಥೆಯ ಪದಾಧಿಕಾರಿಗಳು, ಮಕ್ಕಳು, ಶಿಕ್ಷಕರು, ಶಿಕ್ಷಕೇತರ ಸಿಬಂದಿಗಳು ಪಾಲ್ಗೊಂಡಿದ್ದರು.

ಶಿವಾಯ ಫೌಂಡೇಶನ್‌ನ ಸ್ಥಾಪನೆಯಾದ ಹತ್ತು ತಿಂಗಳಿನಲ್ಲಿ ಒಟ್ಟು ಹತ್ತೂಂಬತ್ತು ಸೇವಾ ಯೋಜನೆಗಳನ್ನು, ಚಟುವಟಿಕೆಗಳನ್ನು ಮಾಡುವುದರ ಮೂಲಕ ಸಮಾಜದÇÉೊಂದು ಭರವಸೆಯ ಸಂಸ್ಥೆಯಾಗಿ ಬೆಳೆಯುತ್ತಿದೆ. ಯಾವುದೇ ಪ್ರತಿಫಲದ ನಿರೀಕ್ಷೆ ಇಲ್ಲದೆ ತಾವು ದುಡಿದ ಒಂದು ಅಂಶವನ್ನು ಈ ಸಮಾಜಕ್ಕೆ ಅರ್ಪಿಸುವ ಶಿವಾಯ ಫೌಂಡೇಶನಿನ ಎÇÉಾ ಸದಸ್ಯರ ಸೇವಾ ಮನೋಭಾವ ಇಂದಿನ ಯುವಜನತೆಗೊಂದು ಅದರ್ಶವಾಗಿದೆ. ನಮ್ಮ ಸೇವಾಯೋಜನೆಗಳಿಗೆ ಸಹೃದಯ ಪ್ರೋತ್ಸಾಹ, ಸಹಕಾರ ಸದಾಯಿರಲಿ.
-ತಾರಾನಾಥ ರೈ ಪುತ್ತೂರು, ಅಧ್ಯಕ್ಷರು, ಶಿವಾಯ ಫೌಂಡೇಶ‌ನ್‌ 

ನಾವು ಇಲ್ಲಿ ಮಕ್ಕಳನ್ನು ದತ್ತು ಪಡೆದುಕೊಳ್ಳಬೇಕೆಂಬ ಉದ್ದೇಶದಿಂದ ಭೇಟಿ ನೀಡಿ¨ªೆವು. ಆದರೆ ನಾವು ಭೇಟಿ ನೀಡುವಾಗ ಮಳೆಗಾಲವಾದ್ದರಿಂದ ಶಾಲೆಯ ಹಳೆ ಕಟ್ಟಡದಲ್ಲಿ ಎÇÉೆಂದರಲ್ಲಿ ನೀರು ಸೋರುವುದನ್ನು ನೋಡಿ ಒಂದು ಕ್ಲಾಸ್‌ ರೂಮ್‌ ಕಟ್ಟಿಕೊಡುವ ನಿರ್ಧಾರ ಮಾಡಿದೆವು. ನಮ್ಮ ನಿರ್ಧಾರ ಇಂದು ನನಸಾಗಿ ಗಣ್ಯರ ಮುಖಾಂತರ ಉದ್ಘಾಟನೆಗೊಂಡು  ನಾಳೆಯಿಂದ ಈ ದೇವರ ಮಕ್ಕಳು ಈ ಶಾಲಾ ಕೊಠಡಿಯಲ್ಲಿ ವಿದ್ಯಾಭ್ಯಾಸ ಪಡೆಯಲಿ¨ªಾರೆ ಎನ್ನುವುದು ನಮಗೆ ಸಂತಸ ತಂದಿದೆ. ಶಿವಾಯ ಫೌಂಡೇಶನ್‌ನ ಸಹಕಾರ ಇನ್ನು ಮುಂದೆಯೂ ಕೂಡ ಪ್ರಗತಿ ವಿದ್ಯಾಲಯದ ಜತೆ ಸದಾಯಿದೆ.
– ಪ್ರಶಾಂತ್‌ ಶೆಟ್ಟಿ ಪಲಿಮಾರು, ಶಿವಾಯ ಫೌಂಡೇಷನ್‌

ಟಾಪ್ ನ್ಯೂಸ್

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಶರಣಾದ ಆರು ನಕ್ಸಲರು

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

parameshwara

Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

MOsale

Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

Puttur: ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

1-naxal

NIA ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಶರಣಾದ ಆರು ನಕ್ಸಲರು

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

parameshwara

Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.