ಯೋಜಿತ ರೀತಿಯಲ್ಲಿ ಸಾರಿಗೆ ಪುನರಾರಂಭಿಸಿ
Team Udayavani, Sep 30, 2020, 7:32 PM IST
ಮುಂಬಯಿ, ಸೆ. 29: ಕೋವಿಡ್ ಹಿನ್ನೆಲೆ ಆರ್ಥಿಕವಾಗಿ ತೀವ್ರವಾಗಿ ತತ್ತರಿಸಿರುವ ಎಲ್ಲ ವರ್ಗದ ಜನರು ತಮ್ಮ ಜೀವನೋಪಾಯ ವನ್ನು ಗಳಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಉಪನಗರ ಲೋಕಲ್ ರೈಲು ಸೇರಿದಂತೆ ಎಲ್ಲ ಸಾರ್ವಜನಿಕ ಸಾರಿಗೆ ಸೌಲಭ್ಯಗಳನ್ನು ಯೋಜಿತ ರೀತಿಯಲ್ಲಿ ಪುನರಾರಂಭಿಸಿ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ರಾಜ್ಯ ಸರಕಾರಕ್ಕೆ ತಿಳಿಸಿದೆ.
ಕೆಳ ಹಂತದ ನ್ಯಾಯಾಲಯಗಳಿಗೆ ಹಾಜರಾಗಲು ವಕೀಲರಿಗೆ ಅನುಮತಿಯನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ವೇಳೆ ನ್ಯಾಯಾಲಯವು ಈ ಸಲಹೆ ನೀಡಿದೆ. ರಾಜ್ಯ ಸರಕಾರ ವಕೀಲರನ್ನು ಅಗತ್ಯ ಸೇವಾ ಪೂರೈಕೆದಾರರೆಂದು ಪರಿಗಣಿಸಬೇಕು ಮತ್ತು ಕೆಳ ನ್ಯಾಯಾಲಯಗಳಿಗೆ ಹಾಜರಾಗಲು ಉಪನಗರ ರೈಲುಗಳಲ್ಲಿ ಪ್ರಯಾಣಿಸಲು ಅವರಿಗೆ ಅನುಮತಿಯನ್ನು ನೀಡಬೇಕು ಎಂದು ಹಿರಿಯ ವಕೀಲ ಡಾ| ಮಿಲಿಂದ್ ಸಾಠೆ ಅವರು ಮಹಾರಾಷ್ಟ್ರ ಮತ್ತು ಗೋವಾದ ಬಾರ್ ಕೌನ್ಸಿಲ್ ಸಲ್ಲಿಸಿದ ಪಿಐಎಲ್ ಕುರಿತ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ.ಎಸ್.
ಕುಲಕರ್ಣಿ ನೇತೃತ್ವದ ನ್ಯಾಯಪೀಠಕ್ಕೆ ಮನವಿ ಮಾಡಿದರು. ಆದಾಗ್ಯೂ ಸರಕಾರ ಪರ ವಕೀಲೆ ಪೂರ್ಣಿಮಾ ಕಾಂತರಿಯಾ ಅವರು ಈ ಮನವಿಯನ್ನು ವಿರೋಧಿಸಿದ್ದು, ಪ್ರಯಾಣದ ನಿರ್ಬಂಧಗಳ ಹೊರತಾಗಿಯೂ ಪೀಕ್ ಅವಧಿಯಲ್ಲಿ ಉಪನಗರ ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುವುದರಿಂದ ಕೋವಿಡ್ ಪರಿಸ್ಥತಿ ಇನ್ನಷ್ಟು ಕೆಟ್ಟದಾಗುತ್ತದೆ ಎಂದು ವಾದಿಸಿದ್ದಾರೆ.
ಪೀಕ್ ಅವಧಿಯಲ್ಲಿ ರೈಲುಗಳು ತುಂಬಿರುವುದರಿಂದ ಕೆಳ ನ್ಯಾಯಾಲಯಗಳು ಮಧ್ಯಾಹ್ನ 2 ಗಂಟೆಯಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಬಹುದಾಗಿದೆ ಎಂದು ನ್ಯಾಯಪೀಠವು ಸಲಹೆಯನ್ನು ನೀಡಿದೆ. ಈ ಕ್ರಮವು ವಕೀಲರಿಗೆ ಮಧ್ಯಾಹ್ನ ರೈಲುಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಲಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ನಾವು ಪರಿಸ್ಥಿತಿಯನ್ನು ನಿವಾರಿಸುವ ಮಾರ್ಗಗಳ ಬಗ್ಗೆ ಯೋಚಿಸಬೇಕು. ಓಣಂ ಆಚರಣೆಯ ಅನಂತರ ಕೋವಿಡ್ ಪ್ರಕರಣಗಳಲ್ಲಿ ಶೇ. 126ರಷ್ಟು ಏರಿಕೆಯನ್ನು ಕಂಡಿರುವ ಕೇರಳದಲ್ಲಿ ಏನಾಗಿದೆ ಎಂಬುದರ ಬಗ್ಗೆ ನಾವು ಎಚ್ಚರ ವಹಿಸಬೇಕಾಗಿದೆ ಎಂದೂ ಸಿಜೆ ದತ್ತಾ ತಿಳಿಸಿದ್ದಾರೆ.
ವಕೀಲರನ್ನು ಮಾತ್ರ ಅನುಮತಿಸುವುದು ನಮ್ಮ ಕಡೆಯಿಂದ ಪಕ್ಷಪಾತ ಮಾಡಿದಂತಾಗಲಿದೆ. ನಾವು ಕೇವಲ ವಕೀಲರ ಬಗ್ಗೆ ಯೋಚಿಸಲು ಸಾಧ್ಯವಿಲ್ಲ, ಇತರ ಕ್ಷೇತ್ರಗಳ ಜನರ ಬಗ್ಗೆಯೂ ಯೋಚಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ. ಅ. 5 ರೊಳಗೆ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುವ ಉದ್ದೇಶದಿಂದ ಈ ಸಲಹೆಗಳ ಒಂದು ಪ್ರತಿಯನ್ನು ಮಹಾರಾಷ್ಟ್ರ ಸರಕಾರದೊಂದಿಗೆ ಹಂಚಿಕೊಳ್ಳುವಂತೆ ನ್ಯಾಯಾಲಯವು ಅರ್ಜಿದಾರರ ಪರ ವಕೀಲರನ್ನು ಕೇಳಿದೆ. ಸಂಬಂ ತ ಅರ್ಜಿಗಳ ಬಗ್ಗೆ ಅ. 6ರಂದು ನಡೆಯಲಿರುವ ಮುಂದಿನ ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ
ತಮ್ಮ ನಿರ್ಧಾರವನ್ನು ತಿಳಿಸುವಂತೆ ರಾಜ್ಯ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.