ರಾಯನ್ ಶಿಕ್ಷಣ ಸಂಸ್ಥೆಯಿಂದ ವಾರ್ಷಿಕ ಮಿನಿಥಾನ್
Team Udayavani, Dec 13, 2017, 4:05 PM IST
ನವಿಮುಂಬಯಿ: ರಾಯನ್ ಇಂಟರ್ ನ್ಯಾಷನಲ್ ಮತ್ತು ಸೈಂಟ್ ಕ್ಸೇವಿಯರ್ ಶೈಕ್ಷಣಿಕ ಸಂಸ್ಥೆಗಳ ಜಂಟಿ ಆಯೋಜನೆಯಲ್ಲಿ ವಾರ್ಷಿಕ ಮಿನಿಥಾನ್ -2017 ಓಟವು ಡಿ. 10 ರಂದು ಆದ್ದೂರಿಯಾಗಿ ನಡೆಯಿತು.
ನವಿಮುಂಬಯಿ ನಗರ ಪಾಲಿಕೆಯ ಮೇಯರ್ ಜಯವಂತ ಸುತಾರ್, ನವಿ ಮುಂಬಯಿ ಪೋಲಿಸ್ ಉಪಾಯುಕ್ತ ಕಿರಣ್ ಪಾಟೀಲ್, ಸ್ಥಾನೀಯ ನಗರ ಸೇವಕ ರವೀಂದ್ರ ಇಥಾಪೆ ಮತ್ತು ಇತರ ಗಣ್ಯರು ಸೇರಿ ಬಲೂನ್ ಹಾಗೂ ರಾಯನ್ ಶಿಕ್ಷಣ ಸಂಸ್ಥೆಯ ಧ್ವಜವನ್ನು ಹಾರಿಸಿ ಮಿನಿಥಾನ್ ಓಟಕ್ಕೆ ಚಾಲನೆ ನೀಡಿದರು.
ಮಿನಿಥಾನ್ ಓಟದಲ್ಲಿ ರಾಯನ್ ವಿದ್ಯಾ ಸಂಸ್ಥೆಯ ಮುಂಬಯಿ, ಥಾಣೆ, ನವಿ ಮುಂಬಯಿ ಮತ್ತು ರಾಯಘಡದಿಂದ 17 ಶಾಲೆಯ 9617 ಮಕ್ಕಳು ಪಾಲ್ಗೊಂಡಿದ್ದರು. ಈ ಓಟವನ್ನು 12 ರ ವಯೋಮಿತಿ, 14 ರ ವಯೋಮಿತಿ, 16 ರ ವಯೋಮಿತಿ ಹಾಗೂ 18 ರ ವಯೋಮಿತಿ ವಿಭಾಗದಲ್ಲಿ ನಡೆಸಲಾಯಿತು. ಶಾಲೆಯ ಆಡಳಿತ ವರ್ಗ, ಶಿಕ್ಷಕ ವೃಂದ, ಮತ್ತು ದೈಹಿಕ ಶಿಕ್ಷಕ ವೃಂದದವರು ಶ್ರಮವಹಿಸಿ ಮಿನಿಥಾನ್ ಯಶಸ್ವಿಯಾಗಲು ಸಹಕರಿಸಿದರು. ನೆರೂಲ್ ನವಿಮುಂಬಯಿಯಲ್ಲಿ ಸರಪಣಿ ರಚಿಸಿ ಓಟದ ವ್ಯವಸ್ಥೆಯ ಸೌಂದರ್ಯವನ್ನು ಹೆಚ್ಚಿಸಲಾಗಿತ್ತು.
ರಾಯನ್ ವಿದ್ಯಾ ಸಂಸ್ಥೆ ದೇಶ-ವಿದೇಶಗಳಲ್ಲಿ ವಿದ್ಯಾ ಸಂಸ್ಥೆ ನಡೆಸುತ್ತಿದ್ದು 1998 ರಿಂದ ಏÇÉಾ ರಾಜ್ಯಗಳಲ್ಲಿ ಮಿನಿಥಾನ್ ಓಟ ನಡೆಸುತ್ತಾ ಬಂದಿದೆ. ವಿದ್ಯೆಯೊಂದಿಗೆ ಅಟೋಟ ಸ್ಪರ್ಧೆಗಳ ಮೂಲಕ ನಮ್ಮ ಮಕ್ಕಳನ್ನು ಸದೃಢರನ್ನಾಗಿ ಮಾಡುವುದೆ ನಮ್ಮ ಮೂಲ ಉದ್ದೇಶವಾಗಿದೆ ಎಂದು ಶಾಲ ನಿರ್ದೇಶಕ, ರಾಯನ್ ಪಿಂಟೋ, ಎ. ಎಫ್. ಮತ್ತು ನಿರ್ದೇಶಕಿ ಇದೇ ಸಂದರ್ಭದಲ್ಲಿ ನುಡಿದರು. ಶಿಸ್ತು ಮತ್ತು ಶ್ರಮ ನಮ್ಮ ಮೂಲ ಉದೇಶ ಎಂದು ನ್ಪೋರ್ಟ್ಸ್ ಸಮನ್ವಯಕ ಸುನಿಲ್ ಪೂಜಾರಿ ಅವರು ಅಭಿಪ್ರಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.