ರಾಯನ್ ಇಂಟರ್‌ನ್ಯಾಶನಲ್ ತಂಡ ರಾಷ್ಟ್ರೀಯ ಚಾಂಪಿಯನ್
Team Udayavani, Nov 21, 2017, 11:57 AM IST
ಮುಂಬಯಿ: ಸೆಂಟ್ರಲ್ ಬೋರ್ಡ್ ಸ್ಕೂಲ್ ಎಜುಕೇಶನ್ ವತಿಯಿಂದ ಆಯೋಜಿಸಲ್ಪಟ್ಟ 17ರ ವಯೋಮಿತಿಯ ಬಾಲಕಿಯರ ವಿಭಾಗದ ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯವು ನ. 16ರಿಂದ ನ.18ರ ವರೆಗೆ ಭೋಪಾಲ್‌ನಲ್ಲಿ ನಡೆಯಿತು. ಪಂದ್ಯದಲ್ಲಿ ರಾಯನ್‌ಇಂಟರ್‌ನ್ಯಾಷನಲ್ ಸಾನ್‌ಪಾಡ ತಂಡದ ಬಾಲಕಿಯರು ಮೋಡರ್ನ್ ಸ್ಕೂಲ್ ಡೆಲ್ಲಿ ತಂಡವನ್ನು 3-1 ಪೆನಾಲ್ಟಿ ಗೋಲುಗಳಿಂದ ಸೋಲಿಸಿ ರಾಷ್ಟ್ರೀಯ ಚಾಂಪಿಯನ್‌ಗಳಾಗಿ ಮೂಡಿ ಬಂದರು.
ಮೊದಲ ಪಂದ್ಯ ನೋಯಿಡಾ ವಿರುದ್ದ ರಾಯನ್ 5-1 ಗೋಲಿನಿಂದ ಗೆಲುವು ಸಾಧಿಸಿತು. ಸೆಮಿ ಪೈನಲ್ ಪಂದ್ಯದಲ್ಲಿ ಎನ್ ಜಿ ಇಂಟರ್‌ನ್ಯಾಶನಲ್ ತಂಡದ ವಿರುದ್ಧ ರಾಯನ್ ತಂಡ 22-0 ಗೋಲುಗಳಿಂದ ಚರಿತ್ರೆ ನಿರ್ಮಿಸಿತು. ಪಂದ್ಯಾಟದಲ್ಲಿ ರಾಯನ್ ಪರ ಭಾಗ್ಯಶ್ರೀ ದಳ್ವಿ 8 ಗೋಲು ದಾಖಲಿಸಿ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದಳು. ಮಹಾರಾಷ್ಟ್ರ, ಗೋವಾ, ಕೇರಳ,ಕರ್ನಾಟಕ, ಚೆನ್ನೈ ವಿಭಾಗದ ವಿರುದ್ಧ ಜಯಿಸಿ ರಾಯನ್ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿತ್ತು.
ನಮ್ಮ ಶಾಲೆಯ ವತಿಯಿಂದ ಕ್ರೀಡೆಗೆ ಉತ್ತಮ ರೀತಿಯ ಸವಲತ್ತು ನೀಡುತ್ತಿದ್ದೇವೆ. ಅಂತೆಯೇ, ಶಾಲೆಯು ಉತ್ತಮ ರೀತಿಯಲ್ಲಿ ಶಿಸ್ತನ್ನು ಪಾಲಿಸುವುದರಿಂದ ರಾಷ್ಟ್ರೀಯ ಮಟ್ಟಕ್ಕೆ ಬಾಲಕರ ಮತ್ತು ಬಾಲಕಿಯರ ತಂಡ ಆಯ್ಕೆಯಾಗಿದೆ ಎನ್ನಲು ಸಂತೋಷವಾಗುತ್ತಿದೆ ಎಂದು ಶಾಲೆಯ ಪ್ರಾಂಶುಪಾಲೆ ಮ್ಯೂರಿಯಲ್ ಫೆರ್ನಾಂಡಿಸ್ ತಿಳಿಸಿದರು.
ತಂಡದ ತರಬೇತುದಾರ ಅಮೆjದ್ ಖಾನ್ ಮತ್ತು ಸಹಾಯಕಿ ಸರಸ್ವತಿ ಅವರ ಶ್ರಮದಿಂದ ನಾವು ರಾಷ್ಟ್ರೀಯ ಚಾಂಪಿಯನ್‌ಗಳಾದೆವು ಎಂದು ತಂಡದ ನಾಯಕಿ ಜಾಹ್ನವಿ ಶೆಟ್ಟಿ ನುಡಿದರು. ಶಾಲ ನಿರ್ದೇಶಕಿ ಗ್ರೇಸ್ ಪಿಂಟೋ ಕೂಡ ಮಕ್ಕಳಿಗೆ ಶುಭ ಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.