ಕಲ್ವಾ ಪಶ್ಚಿಮದ ಪಂಡಿತ ಜಿ.ಜಿ. ಜೋಶಿ ನಿವಾಸದಲ್ಲಿ ಸಾಹಿತ್ಯ ಸ್ಪಂದನ
Team Udayavani, May 2, 2018, 11:40 AM IST
ಥಾಣೆ: ಮುಂಬಯಿ ಬರಹಗಾರರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮುಂಬಯಿ ಯಲ್ಲಿ ಕನ್ನಡತನದ ಅಸ್ಮಿತೆಯನ್ನು ಉಳಿಸಿಕೊಂಡು ಬರುವುದರಲ್ಲಿ ಮುಂಬಯಿಗಾರ ಪಾಲು ಹಿರಿದಾ ದುದು. ಮುಂಬಯಿ ಲೇಖಕರು ಜನಪರವಾದ ವಿಚಾರಧಾರೆಗಳನ್ನು ತಮ್ಮ ಕೃತಿಗಳ ಮೂಲಕ ಬಿಂಬಿಸಿದ್ದಾರೆ. ಬಹುಭಾಷೆಯ ಬಹು ಸಂಸ್ಕೃತಿಯ ನಗರ ಮುಂಬಯಿ. ಈ ಮಹಾನಗರವು ಬರಹಗಾರರಿಗೆ ಅಸಂಖ್ಯೆಯ ಪ್ರಮಾಣದಲ್ಲಿ ಸಾಹಿತ್ಯ ರಚನೆಗೆ ವಸ್ತುಗಳನ್ನು ಒದಗಿಸುತ್ತದೆ. ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳು ಮುಂಬಯಿಯಲ್ಲಿ ಒಂದಲ್ಲ ಒಂದು ಕಾರಣದಿಂದ ಯುವ ಬರಹಗಾರರಿಗೆ ವೇದಿಕೆಯನ್ನು ನೀಡುತ್ತದೆ. ಡಾ| ಜಿ.ಡಿ. ಜೋಶಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬಯಿ ಸಂಸ್ಥೆಯು ಮನೆಮನೆಯಲ್ಲಿ ಸಾಹಿತ್ಯ ಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಂಡು ಮುಂಯಿಯಲ್ಲಿ ಕನ್ನಡದ ಪರಿಮಳವನ್ನು ಪಸರಿಸುವ ಕೆಲಸ ಸ್ತುತ್ಯರ್ಹ ಎಂದು ಹಿರಿಯ ಲೇಖಕ ಬಿ.ಎಚ್. ಕಟ್ಟಿ ತಿಳಿಸಿದರು.
ಡಾ| ಜಿ.ಡಿ. ಜೋಶಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬಯಿ ವತಿಯಿಂದ ಮನೆಮನೆಯಲ್ಲಿ ಆಯೋಜಿಸಲ್ಪಡುವ ಸಾಹಿತ್ಯ ಸ್ಪಂದನ ಕಾರ್ಯಕ್ರಮವು ಎ.29ರಂದು ಸಂಜೆ ಥಾಣೆಯ ಕಲ್ವಾ ಪಶ್ಚಿಮದಲ್ಲಿನ ಕಾಮಧೇನು ಕೋ.ಆಪರೇಟಿವ್ ಸೊಸೈಟಿಯ ಪಂಡಿತ ಜಿ.ಜಿ. ಜೋಶಿ ನಿವಾಸದಲ್ಲಿ ಜರಗಿತು.
ಕಟ್ಟಿ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪಂಡಿತ ಜಿ.ಜಿ. ಜೋಶಿ ದಂಪತಿ, ಮಲ್ಲಿನಾಥ ಜಲದೆ, ಎಚ್.ಆರ್. ಚಲವಾದಿ, ರಮೇಶ ಕೆ. ಪುತ್ರನ್, ಸಾ.ದಯಾ, ಡಾ| ಜಿ.ಪಿ. ಕುಸುಮಾ, ಮಲ್ಲಿಕಾರ್ಜುನ ಬಡಿಗೇರ್, ದುರ್ಗಪ್ಪ ಯು. ಕೋಟಿಯವರ್ ಮತ್ತಿತರ ಸಾಹಿತ್ಯ ಅಭಿಮಾನಿಗಳು ಪಾಲ್ಗೊಂಡು ಕಥೆ, ಕವನ, ಲೇಖನ, ಪ್ರಬಂಧಗಳನ್ನು ವಾಚಿಸಿ ಅನಂತರ ಕನ್ನಡ ಸಾಹಿತ್ಯದ ಬಗ್ಗೆ ಚರ್ಚಿಸಿ ಜಿ.ಜಿ. ಜೋಶಿ ದಂಪತಿಯನ್ನು ಸತ್ಕರಿಸಿದರು.
ಡಾ| ಕರುಣಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.
ಚಿತ್ರ, ವರದಿ: ರೊನಿಡಾ ಮುಂಬಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.