ಸಾಯಿ ಕ್ರಿಕೆಟರ್ಸ್ ಕ್ರಿಕೆಟ್:ಮಸಕಾ ಸೀಫುಡ್‌ಗೆ ಪ್ರಶಸ್ತಿ
Team Udayavani, Feb 11, 2018, 11:58 AM IST
ಪುಣೆ: ಸಾಯಿ ಕ್ರಿಕೆಟರ್ಸ್ ಪುಣೆ ಇದರ ಮೂರನೇ ವಾರ್ಷಿಕ ಸಾಯಿ ಟ್ರೋಪಿ ಕ್ರಿಕೆಟ್ ಪಂದ್ಯಾಟವು ಫೆ. 7ರಂದು ಬೆಳಗ್ಗೆಯಿಂದ ಪುಣೆಯ ಪಾಷಣ್‌ನ ಎನ್‌ಸಿಎಲ್ ಗ್ರೌಂಡ್‌ನಲ್ಲಿ ಜರಗಿತು.
ಪಂದ್ಯಾಟವನ್ನು ಐಪಿಎಲ್ ಆಟಗಾರ ಸಂದೀಪ್ ಭಂಡಾರಿ ಮುಂಬಯಿ ಅವರು ತೆಂಗಿನಕಾಯಿ ಒಡೆದು ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಾಯಿ ಕ್ರಿಕೆಟರ್ಸ್ ಇದರ ಪ್ರಮುಖ ಪ್ರಾಯೋಜಕ ವಸಂತ್ ಶೆಟ್ಟಿ ಹಿರಿಯಡ್ಕ ಮತ್ತು ಪದಾಧಿಕಾರಿಗಳು ಹಾಗೂ ಎಲ್ಲ ತಂಡದ ಆಟಗಾರರು ಉಪಸ್ಥಿತರಿದ್ದರು. ಪುಣೆಯಲ್ಲಿ ನೆಲೆಸಿರುವ ತುಳು ಕನ್ನಡಿರಿಗಾಗಿ ಆಯೋಜಿಸಲಾಗಿದ್ದ ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯಾಟದಲ್ಲಿ ಮಸಕಾ ಸೀ ಫುಡ್ ಎ, ಕಿನಾರ ಫ್ರೆಂಡ್ಸ್, ಶಬರಿ, ಕಿಂಗ್ಸ್ ಸ್ಟಾರ್, ಜಂಕ್ಸನ್ ಸೂಪರ್ ಸ್ಟಾರ್, ಯೂತ್ ಬಂಟ್ಸ್, ಅರವಿಂದ್ ರಾಕ್ಸ್, ಸಾಯಿದೀಪ್, ಗಣರಾಜ್, ನಮ್ಮ ಇಲೇವನ್, ಮಸಕಾ ಬಿ ತಂಡಗಳು ಭಾಗವಹಿಸಿದ್ದವು.
ಐಪಿಎಲ್ ಮಾದರಿಯಲ್ಲಿ ನಡೆದ ಈ ಕ್ರಿಕೆಟ್ ಪಂದ್ಯಾಟದಲ್ಲಿ ಫೈನಲ್ ಪಂದ್ಯದಲ್ಲಿ ಮಸಕಾ ಸೀ ಫುಡ್ ಎ ತಂಡವು ಶಬರಿ ತಂಡವನ್ನು ಸೋಲಿಸಿ ಸಾಯಿ ಟ್ರೋಪಿ ಮತ್ತು ನಗದು 13,333 ರೂ. ಗಳನ್ನು ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನಿ ಶಬರಿ ತಂಡವು ಟ್ರೋಪಿ ಮತ್ತು ನಗದು 8,888 ರೂ. ಗಳನ್ನು ಪಡೆದರೆ, ತೃತೀಯ ಸ್ಥಾನಿಯಾದ ಕಿನಾರ ಫ್ರೆಂಡ್ಸ್ ತಂಡಕ್ಕೆ ಟ್ರೋಪಿ ನೀಡಿ ಗೌರವಿಸಲಾಯಿತು. ವಿಶ್ವನಾಥ್ ನಾಥ್ ಶೆಟ್ಟಿ ಹಿರಿಯಡ್ಕ ಮತ್ತು ಪ್ರಶಾಂತ್ ಶೆಟ್ಟಿ ಬಸ್ತಿ ವಿನ್ನರ್ಸ್ ತಂಡಕ್ಕೆ ಟ್ರೋಪಿ ನಗದನ್ನು ನೀಡಿದರು.
ಶಿವರಾಂ ಶೆಟ್ಟಿ ಹಿರಿಯಡ್ಕ ಅವರು ರನ್ನರ್ಸ್ ತಂಡಕ್ಕೆ ಟ್ರೋಪಿ ಮತ್ತು ನಗದನ್ನು ನೀಡಿದರು. ಉತ್ತಮ ಎಸೆತಗಾರರಾಗಿ ಮಸಕಾ ತಂಡದ ರವಿ, ಉತ್ತಮ ಹೊಡೆತಗಾರನಾಗಿ ಮಸಕಾ ತಂಡದ ಸಂದೀಪ್, ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿಯನ್ನು ಕಿನಾರ ಫ್ರೆಂಡ್ಸ್ ತಂಡದ ನವಾಜ್ ಅವರು ಪಡೆದರು. ಅಲ್ಲದೆ ಪ್ರತಿ ಪಂದ್ಯದ ಉತ್ತಮ ಆಟಗಾರರಿಗೆ ಪ್ರಶಸ್ತಿ ನೀಡಲಾಯಿತು.
ಸಾಯಿ ಕ್ರಿಕೆಟರ್ಸ್ ವತಿಯಿಂದ ಪ್ರತಿ ವರ್ಷವೂ ಆಯ್ದ ಕ್ರಿಕೆಟಿಗರನ್ನು ಸಮ್ಮಾನಿಸಲಾಗುತ್ತಿದ್ದು, 2017 -2018 ನೆ ಸಾಲಿನ ಉತ್ತಮ ಎಸೆತಗಾರ, ಉತ್ತಮ ದಾಂಡಿಗ, ಉತ್ತಮ ತಂಡ ಪ್ರೋತ್ಸಾಹಕ, ಹಿರಿಯ ಆಟಗಾರ, ಉತ್ತಮ ಅಲ್ ರೌಂಡರ್ ಆಟಗಾರ, ವರ್ಷದ ಕ್ರಿಕೆಟಿಗ ಮತ್ತು ಮಾಷ್ಟರ್ ಬ್ಲಾಸ್ಟರ್ ಆಟಗಾರರಾದ ಕ್ರಮವಾಗಿ ಶಿವರಾಜ್, ವೆಂಕಟ್, ಸಂತೋಷ್ ವರಂಗ, ಸುಧಾಕರ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಸಂದೀಪ್ ಶೆಟ್ಟಿ, ಸಂಪತ್ ಶೆಟ್ಟಿ ಅವರನ್ನು ಸಾಯಿ ಸದಸ್ಯರು ಸಮ್ಮಾನಿಸಿದರು. ಪ್ರಶಾಂತ್ ಶೆಟ್ಟಿ ಪಕ್ಕಿಬೇಟ್ಟು, ಸಂತೋಷ್ ಪೂಜಾರಿ ಮತ್ತು ಕುಮಾರ್ ಶೆಟ್ಟಿ ಅವರು ಹಿಂದಿ, ಕನ್ನಡ, ತುಳುವಿನಲ್ಲಿ ವೀಕ್ಷಕ ವಿವರಣೆಯನ್ನು ನೀಡಿದರು.
ಪುಣೆ ರೆಸ್ಟೋರೆಂಟ್ ಅÂಂಡ್ ಹೊಟೇಲಿಯರ್ಸ್ ಅಸೋಸಿಯೇಶನ್ ಹಾಗೂ ಪುಣೆ ಬಿಲ್ಲವ ಸಂಘದ ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ, ಪಿಂಪ್ರಿ-ಚಿಂಚಾÌಡ್ ತುಳು ಕೂಟದ ಅಧ್ಯಕ್ಷ ಶ್ಯಾಮ್ ಸುವರ್ಣ, ಉದ್ಯಮಿ ಶಿವರಾಮ ಶೆಟ್ಟಿ ಹಿರಿಯಡ್ಕ, ವಿಶ್ವನಾಥ್ ಶೆಟ್ಟಿ ಬಸ್ತಿ ಮತ್ತು ಪುಣೆಯ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗಣ್ಯರಿಗೆ ಸಾಯಿ ಕ್ರಿಕೆಟರ್ಸ್‌ನ ವಸಂತ್ ಶೆಟ್ಟಿ ಮತ್ತು ಪದಾಧಿಕಾರಿಗಳು ಪುಷ್ಪಗುಚ್ಚವನ್ನಿತ್ತು ಅಭಿನಂದಿಸಿದರು.
ಸಾಯಿ ಕ್ರಿಕೆಟರ್ಸ್ ಫ್ರೆಂಡ್‌ನ ಪ್ರಮುಖರಾದ ಸುದೀಪ್ ಪೂಜಾರಿ, ಸಂದೀಪ್ ಶೆಟ್ಟಿ, ಹರೀಶ್ ಪೂಜಾರಿ, ರಾಮ್ ಪ್ರಸಾದ್ ಶೆಟ್ಟಿ, ಜನಾರ್ಧನ್, ಪ್ರವೀಣ್, ಪ್ರಶಾಂತ್ ಪಿ. ಸಂಪತ್, ಪ್ರಶಾಂತ್ ಬಸ್ತಿ, ರಘು, ಹರೀಶ್, ಕಿರಣ್, ವಸಂತ್ ಶೆಟ್ಟಿ, ಸುಕೇಶ್, ಪ್ರಮೋದ್, ಹರೀಶ್ ರೈ, ಸಂತೋಷ್ ವಾರಂಗ, ಸಂದೇಶ್ ಶೆಟ್ಟಿ, ರೋಹನ್ ಶೆಟ್ಟಿ, ಅರವಿಂದ್ ಶೆಟ್ಟಿ, ವಿನಯ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ನಾಗೇಶ್ ಶೆಟ್ಟಿ, ಕುಮಾರ್ ಪ್ರದೀಪ್ ಪೂಜಾರಿ ವಾಘೋಲಿ, ಸಂತೋಷ್ ಪೂಜಾರಿ, ಶಿವರಾಜ್ ಶೆಟ್ಟಿ, ಮಹೇಂದ್ರ, ಪವನ್, ಸುಶಾಂತ್ ಶೆಟ್ಟಿ, ಸಂದೀಪ್ ರಾಹುಲ, ಚೇತನ್, ಅರ್ಶದ್, ಅಕ್ಷತ್, ಪ್ರವೀಣ್ ಅಬ್ಟಾಸ್ ಪ್ರೀತಂ, ಶೋಬಿತ್ ಮೊದಲಾದವರು ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.