“ಧರ್ಮದಂತೆ ಕರ್ಮವೂ ಇದ್ದರೆ ಮಾತ್ರ ಜೀವನದಲ್ಲಿ ಆನಂದ’
Team Udayavani, Feb 13, 2021, 9:05 PM IST
ನವಿಮುಂಬಯಿ: ಮನುಷ್ಯರು ಯಾವುದೇ ಧರ್ಮ ದವರಾದರೂ ಅವರ ಕರ್ತವ್ಯ, ಅವರ ಸಮಾಜಮುಖೀ ಕೆಲಸಗಳು ಅವರ ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ತರುವುದೇ ಹೊರತು, ಗಾಡಿ, ಬಂಗಲೆ, ಐಶ್ವರ್ಯ ಯಾವುದೂ ಅಲ್ಲ. ಮನುಷ್ಯನು ಪಾಪ ಮಾಡಿದರೂ ಅಂತರಂಗದ ಶುದ್ಧೀಕರಣ ಮಾಡದೆ ಗಂಗಾನದಿಯಲ್ಲಿ ಎಷ್ಟು ಮುಳುಗಿ ದರೂ ಮುಕ್ತಿ ಪ್ರಾಪ್ತಿಯಾಗದು ಎಂದು ನವಿ ಮುಂಬಯಿಯ ಮಾಜಿ ಉಸ್ತುವಾರಿ ಸಚಿವ, ಬಿಜೆಪಿ ಮುಖಂಡ ಗಣೇಶ್ ನಾಯ್ಕ್ ತಿಳಿಸಿದರು.
ಸೆಲ್ಯೂಟ್ ತಿರಂಗಾ ರಾಷ್ಟ್ರೀಯ ಸಂಸ್ಥೆಯ ಮಹಾರಾಷ್ಟ್ರ ಪ್ರದೇಶವು ಗಣರಾಜ್ಯೋತ್ಸವ ಅಂಗವಾಗಿ ನವಿಮುಂಬಯಿ ಕನ್ನಡ ಸಂಘ ವಾಶಿ ಇದರ ಎಂ. ಬಿ. ಕುಕ್ಯಾನ್ ಸಭಾಗೃಹದಲ್ಲಿ ಆಯೋಜಿಸಿದ್ದ ಯೋಧರ ಗೌರವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸೆಲ್ಯೂಟ್ ತಿರಂಗಾ ಸಂಸ್ಥೆಯು ದೇಶಕ್ಕೆ ಸೇವೆಗೈದ ನಿವೃತ್ತ ಭೂದಳ, ವಾಯುದಳ ಮತ್ತು ನೌಕಾದಳ ಜವಾನರನ್ನು ಗುರುತಿಸಿ ಸಮ್ಮಾನಿಸುವ ಕಾರ್ಯ ತನ್ನ ಕಾರ್ಯಕ್ಷೇತ್ರದಲ್ಲಿ, ರಾಜೇಶ್ ರಾಯ್ ಅವರ ನೇತೃತ್ವದಲ್ಲಿ ನಡೆಯುತ್ತಿರುವುದು ಬಹಳ ಶ್ಲಾಘನೀಯ. ತಮ್ಮಿಂದಾದಷ್ಟು ಪರೋಪಕಾರ, ದೇಶ ಸೇವೆ ಮಾಡುವುದೇ ಸರ್ವೋತ್ಕೃಷ್ಟ ಧರ್ಮವಾಗಿದೆ ಎಂದರು.
ಈ ಕಾರ್ಯಕ್ರಮವನ್ನು ಸಂಸ್ಥೆಯ ಮಹಾರಾಷ್ಟ್ರ ಅಧ್ಯಕ್ಷ ರಾಜೇಶ್ ರಾಯ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಸಂಸ್ಥೆಯ ಕರ್ನಾಟಕ, ತಮಿಳುನಾಡು, ಕೇರಳ ಘಟನೆಗಳು ಸಹಕಾರ ನೀಡಿದವು. ಈ ಸಂದರ್ಭದಲ್ಲಿ ನಿವೃತ್ತ ಕರ್ನಲ್ ಆರ್. ವಿ. ರಮಣ್, ನಿವೃತ್ತ ಸೇನಾನಿ ಗೋವಿಂದ್ ಮೋಹಿತೆ ಮತ್ತು ನಿವೃತ್ತ ಮಹಿಳಾ ಪೊಲೀಸ್ ಅಧಿಕಾರಿ ರಾಜಶ್ರೀ ಗೋರೆ ಅವರನ್ನು ಗಣೇಶ್ ನಾಯ್ಕ್ ಅವರ ಹಸ್ತದಿಂದ ವಿಶೇಷವಾಗಿ ಗೌರವಿಸಲಾಯಿತು. ಸೆಲ್ಯೂಟ್ ತಿರಂಗದ ಪದಾಧಿ ಕಾರಿಗಳನ್ನೂ ಗೌರವಿಸಲಾಯಿತು. ಪ್ರಾರಂಭದಲ್ಲಿ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಕರ್ನಾಟಕ ಘಟಕದ ಮಹಿಳಾ ಸದಸ್ಯೆಯರ ಭಕ್ತಿಗಾಯನ ನಡೆಯಿತು.
ಈ ಸಂದರ್ಭದಲ್ಲಿ ಮಾಹಾರಾಷ್ಟ್ರ ಮಹಿಳಾ ವಿಭಾಗದ ಉಪಾಧ್ಯಕ್ಷೆ ಅಂಬಿಕಾ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ದೇವಾಡಿಗ, ಸವಿತಾ ಪೂಜಾರಿ, ಜತೆ ಕಾರ್ಯದರ್ಶಿ ಉಷಾ ಪೂಜಾರಿ, ನವಿ ಮುಂಬಯಿ ಮಹಿಳಾಧ್ಯಕ್ಷೆ ಪ್ರಭಾವತಿ ದೇವಾಡಿಗ, ಕಾರ್ಯದರ್ಶಿ ಹರಿಣಾ ಅಮೀನ್, ಜತೆ ಕಾರ್ಯದರ್ಶಿ ಶೈಲಜಾ ಶೆಟ್ಟಿ, ಆಶಾ ದೇವಾಡಿಗ, ಮುಂಬಯಿ ಸಮಿತಿಯ ಉಪಾಧ್ಯಕ್ಷೆ ಉಮಾ ದೇವಾಡಿಗ ಮೊದಲಾದವರು ವೀರ ಗೀತೆಗಳನ್ನು ಪ್ರಸ್ತುತ ಪಡಿಸಿದರು.
ಮಹಾರಾಷ್ಟ್ರ ಕರ್ನಾಟಕ ಘಟಕದ ಪ್ರದೇಶಾಧ್ಯಕ್ಷ ಹಾಗೂ ಸಯೋಜಕ ಹರೀಶ್ ಪೂಜಾರಿ ಅವರ ಮುತುವರ್ಜಿಯಲ್ಲಿ ಕಾರ್ಯಕ್ರಮ ನಡೆಸಲಾಯಿತು. ಸಂಸ್ಥೆಯ ಕರ್ನಾಟಕ ಘಟಕದ, ಮುಂಬಯಿ, ನವಿ ಮುಂಬಯಿ, ಥಾಣೆ, ಮೀರಾ-ಭಾಯಂದರ್ ವಿಭಾಗಗಳು ಆಯೋಜಿಸುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಮೀರಾರೋಡ್ ಮಹಾರಾಷ್ಟ್ರ ಸಮಿತಿಯ ಉಪಾಧ್ಯಕ್ಷ ಜಯಕರ ಡಿ. ಪೂಜಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತಾ ಕೋಟ್ಯಾನ್, ಕರ್ನಾಟಕ ಘಟಕದ ದಹಿಸರ್-ವಿರಾರ್ ವಿಭಾಗದ ಮಹಿಳಾ ಸಮಿತಿಯ ಅಧ್ಯಕ್ಷೆ ಆಶಾ ಶೆಟ್ಟಿ, ಕಾರ್ಯದರ್ಶಿ ಲೀಲಾ ಗಣೇಶ್ ಕಾರ್ಕಳ, ಮುಂಬಯಿ ಮಹಿಳಾ ವಿಭಾಗದ ಉಪಾಧ್ಯಕ್ಷೆ ಉಮಾ ದೇವಾಡಿಗ ಅವರ ನೇತೃತ್ವದಲ್ಲಿ ನಿವೃತ್ತ ಸೇನೆಯ ಜವಾನರನ್ನು ಅವರ ಮನೆಯಲ್ಲಿ ಸತ್ಕರಿಸಿದ ಕಾರ್ಯಕ್ರಮದ ಬಗ್ಗೆಯೂ ಅವರು ತಿಳಿಸಿದರು.
ನವಿಮುಂಬಯಿಯ ಖಾರ್ಘ ರ್‌ನಲ್ಲಿ ತಿರಂಗಾ ಯಾತ್ರಾ, ತಲೋಜಾ ಮಿಲಿಟರಿ ಕ್ಯಾಂಪ್‌ನಲ್ಲಿ ವಿವಿಧ ಕಾರ್ಯಕ್ರಮಗಳು ಅಲ್ಲದೆ ನವಿ ಮುಂಬಯಿಯ ಉಲ್ವೆಯಲ್ಲಿಯೂ ಕಾರ್ಯಕ್ರಮಗಳನ್ನು ಆಯೋಜಿಸಲಾ ಗಿತ್ತು. ಕಾರ್ಯಕ್ರಮದಲ್ಲಿ ಸೆಲ್ಯೂಟ್ ತಿರಂಗ ಮಹಾರಾಷ್ಟ್ರದ ಸಂಚಾಲಕರಾದ ವಿಕ್ರಂ ಪರಾಜುಲಿ, ಉಪ ಸಂಚಾಲಕ ಆನಂದ ಸನ್ಹೋತ್ರ, ಬಿಜೆಪಿ ಐಟಿ ಸೆಲ್ ಮಹಾರಾಷ್ಟ್ರ ಇದರ ಸಂಯೋಜಕ ಸತೀಶ್ ನಿಕಂ, ಸಲ್ಯೂಟ್ ತಿರಂಗಾದ ರಾಷ್ಟೀಯ ಸಂಯೋಜಕ ಬಂದನಾ ತ್ರಿಪಾಠಿ, ನೀತಿ ಶರ್ಮ ಮೊದಲಾದವರು ಉಪಸ್ಥಿತರಿದ್ದರು.
ಕರ್ನಾಟಕ ಘಟಕದ ಮಹಾರಾಷ್ಟ್ರ ಘಟಕದ ಪ್ರದಾನ ಕಾರ್ಯದರ್ಶಿ ಪ್ರಭಾಕರ ದೇವಾಡಿಗ, ಜತೆ ಕಾರ್ಯದರ್ಶಿ ದಿರೇಶ್ ಬಂಗೇರ, ನವಿಮುಂಬಯಿ ಸಮಿತಿಯ ಉಪಾಧ್ಯಕ್ಷ ರಾಜರಾಮ ಆಚಾರ್ಯ, ಜನಾರ್ದನ ದೇವಾಡಿಗ, ಥಾಣೆ ಸಮಿತಿಯ ಅಧ್ಯಕ್ಷ ಸುಕುಮಾರ ಶೆಟ್ಟಿ, ನವಿಮುಂಬಯಿ ಸಮಿತಿಯ ಜತೆ ಕಾರ್ಯದರ್ಶಿ ಜಗದೀಶ್ ರೈ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಡ್ವೋಕೇಟ್ ಪ್ರಭಾಕರ ದೇವಾಡಿಗ ಅವರು ಕರ್ನಾಟಕ ಘಟಕ ನಡೆಸುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಕಾರ್ಯಕ್ರಮಗಳ ಆಯೋಜಕರಿಗೆ ವಂದಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವಿವಿಧ ಪದಾಧಿಕಾರಿಗಳಿಗೆ ನಿಯುಕ್ತಿ ಪತ್ರಗಳನ್ನು ಹರೀಶ್ ಪೂಜಾರಿ ಯವರ ಉಪಸ್ಥಿತಿಯಲ್ಲಿ ಅತಿಥಿಗಳ ಹಸ್ತದಿಂದ ವಿತರಿಸಲಾಯಿತು. ಪ್ರಭಾ ಕರ ದೇವಾಡಿಗರು ಪದಾಧಿಕಾರಿಗಳ ಹೆಸರು ವಾಚಿಸಿದರು. ಶ್ಯಾಮ ಎನ್. ಶೆಟ್ಟಿ, ವಿ. ಕೆ. ಸುವರ್ಣ, ಜಯಂತಿ ಆರ್. ಮೊಲಿ ಶುಭ ಹಾರೈಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.