ಮೀರಾರೋಡ್ ಪೂ. ಶನೀಶ್ವರ ಮಂದಿರದಲ್ಲಿ ಸಾಧಕರಿಗೆ ಸಮ್ಮಾನ
Team Udayavani, Mar 3, 2017, 4:19 PM IST
ಮುಂಬಯಿ: ಮೀರಾರೋಡ್ ಪೂರ್ವದ ಮೀರಾಧಾಮ್ ಸೊಸೈಟಿಯ ಸಮೀಪದಲ್ಲಿರುವ ನ್ಯೂ ಪ್ಲೆಸೆಂಟ್ ಪಾರ್ಕ್‌ನಲ್ಲಿರುವ ಶ್ರೀ ಶನೀಶ್ವರ ಸೇವಾ ಚಾರಿಟೇಬಲ್ ಟ್ರಸ್ಟ್‌ನ ಶ್ರೀ ಶನೀಶ್ವರ ಮಂದಿರದ 13 ನೇ ವಾರ್ಷಿಕ ಶ್ರೀ ಶನಿಮಹಾಪೂಜೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಫೆ. 26 ರಂದು ಜರಗಿತು.
ಇದೇ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕಟೀಲು ದುರ್ಗಾಪರಮೇಶ್ವರಿಯ ಪಲ್ಲಕ್ಕಿ ಅಲಂಕಾರವನ್ನು ಮಾಡಿ ನಿಸ್ವಾರ್ಥ ಸೇವೆಗೈದ ಮೀರಾರೋಡ್‌ನ ಪುರುಷೋತ್ತಮ ಮಂಚಿ, ಗಿರೀಶ್ ಕರ್ಕೇರ ಮತ್ತು ಸದಾನಂದ ಅವರನ್ನು ಮಂದಿರದ ವತಿಯಿಂದ ಮಹಾಪ್ರಸಾದವನ್ನಿತ್ತು ಗೌರವಿಸಲಾಯಿತು. ಮಂದಿರದ ಹಿರಿಯ ಸದಸ್ಯರುಗಳಾದ ನಾರಾಯಣ ಶೆಟ್ಟಿ, ಇಂದಿರಾ ಶೆಟ್ಟಿ ಅವರನ್ನು ಮಂದಿರದ ವತಿಯಿಂದ ಶಾಲು ಹೊದೆಸಿ, ಕಾಣಿಕೆಯನ್ನಿತ್ತು ಗೌರವಿಸಿ ಸಮ್ಮಾನಿಸಲಾಯಿತು.
ಧಾರ್ಮಿಕ ಕಾರ್ಯಕ್ರಮಗಳು ಬೊರಿವಲಿ ಶ್ರೀ ಕ್ಷೇತ್ರ ಸಾವರಾ³ಡಾದ ಶ್ರೀ ಶನಿಮಂದಿರದ ಪ್ರಧಾನ ಅರ್ಚಕ ಪೆರ್ಡೂರು ವಿಷ್ಣುಮೂರ್ತಿ ಅಡಿಗರ ಸಾರಥ್ಯದಲ್ಲಿ ನಡೆಯಿತು. ಗ್ರಂಥ ವಾಚಕ ಅಚ್ಚುತ ಕೋಟ್ಯಾನ್, ಗೋಪಾಲ್ ದೇವಾಡಿಗ, ಉಷಾ ಶೆಟ್ಟಿಗಾರ್, ಅರ್ಥದಾರಿಗಳಾದ ನಾರಾಯಣ ಶೆಟ್ಟಿ, ಪುರಂದರ ಶ್ರೀಯಾನ್, ಮಂದಿರದ ಗೌರವಾಧ್ಯಕ್ಷ ವಿನೋದ್ ವಾಘಾಸಿಯಾ, ಅಧ್ಯಕ್ಷೆ ವಿದ್ಯಾ ಕರ್ಕೇರ, ಉಪಾಧ್ಯಕ್ಷರಾದ ಗೋಪಾಲ್ ದೇವಾಡಿಗ, ಸಂಪತ್ ಶೆಟ್ಟಿ, ಕಾರ್ಯದರ್ಶಿ ಗುಣಕಾಂತ್ ಶೆಟ್ಟಿ ಕರ್ಜೆ, ಜತೆ ಕಾರ್ಯದರ್ಶಿಗಳಾದ ಲೀಲಾ ಪೂಜಾರಿ, ಜಯಕರ ಶೆಟ್ಟಿ, ಕೋಶಾಧಿಕಾರಿ ಪುರಂದರ ಶ್ರೀಯಾನ್, ಜತೆ ಕೋಶಾಧಿಕಾರಿಗಳಾದ ಅಚ್ಚುತ ಕೋಟ್ಯಾನ್, ಸುಜಾತಾ ಶೆಟ್ಟಿ ಹಾಗೂ ಸರ್ವ ಕಾರ್ಯಕಾರಿ ಸಮಿತಿಯ ಸದಸ್ಯರು, ಪೂಜಾ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.
ವಿವಿಧ ಸಂಘಟನೆಗಳ ಪದಾಧಿಕಾರಿಗಳು, ದಾನಿಗಳು, ಸ್ಥಳೀಯ ರಾಜಕೀಯ ಧುರೀಣರು, ಸಮಾಜ ಸೇವಕರು, ತುಳು-ಕನ್ನಡಿಗ, ಅನ್ಯಭಾಷಿಗ ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯದರ್ಶಿ ಗುಣಕಾಂತ ಶೆಟ್ಟಿ ಕರ್ಜೆ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾ ಕರ್ಕೇರ, ಪುರಂದರ ಶ್ರೀಯಾನ್ ಅವರು ಅತಿಥಿಗಳನ್ನು ಪ್ರಸಾದವನ್ನಿತ್ತು ಗೌರವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.