ಡಾ| ಸಂಧ್ಯಾ ಎಸ್. ಪೈ ಸಹಿತ ಐವರಿಗೆ ಮಾಸ್ತಿ ಪ್ರಶಸ್ತಿ ಪ್ರದಾನ
Team Udayavani, Mar 28, 2021, 11:40 AM IST
ಬೆಂಗಳೂರು: ಮಾಸ್ತಿ ವೆಂಟಕೇಶ್ ಅಯ್ಯಂಗಾರ್ ಟ್ರಸ್ಟ್‌ನ 2020ನೇ ಸಾಲಿನ ಮಾಸ್ತಿ ಪ್ರಶಸ್ತಿಯನ್ನು “ತರಂಗ’ ವಾರಪತ್ರಿಕೆಯ ವ್ಯವ ಸ್ಥಾಪಕ ಸಂಪಾದಕರಾದ ಡಾ| ಸಂಧ್ಯಾ ಎಸ್. ಪೈ, ಸಾಹಿತಿಗಳಾದ ಸುಬ್ರಾಯ ಚೊಕ್ಕಾಡಿ, ಎಸ್. ಆರ್. ವಿಜಯಶಂಕರ್, ಕೇಶವ ರೆಡ್ಡಿ ಹಂದ್ರಾಳ ಮತ್ತು ಎಸ್. ರಘುನಾಥ್ ಅವರಿಗೆ ಪ್ರದಾನಿಸಲಾಯಿತು.
ನಗರದ ಭಾರತೀಯ ವಿದ್ಯಾ ಭವನದ ಸಭಾಂಗಣದಲ್ಲಿ ಶನಿವಾರ ಜರಗಿದ ಸಮಾರಂಭದಲ್ಲಿ ಜನಪದ ವಿದ್ವಾಂಸ ಹಾಗೂ ವಿಶ್ರಾಂತ ಕುಲಪತಿ ಡಾ| ಬಿ. ಎ. ವಿವೇಕ್ ರೈ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಗೆ ಆಯ್ಕೆಯಾಗಿದ್ದ ಪ್ರೊ| ಪುರುಷೋತ್ತಮ ಬಿಳಿಮಲೆ ಅವರು ಅನಾರೋಗ್ಯದ
ಕಾರಣದಿಂದ ಗೈರಾಗಿದ್ದರು.
ಸಾಹಿತ್ಯದಲ್ಲಿ ನೈತಿಕತೆಯ ಸ್ಪಷ್ಟತೆ
ವಿಶ್ರಾಂತ ಕುಲಪತಿ ಡಾ| ಬಿ. ಎ.ವಿವೇಕ್ ರೈ ಮಾತನಾಡಿ, ಪುರಾಣ, ಇತಿಹಾಸ ಹಾಗೂ ವರ್ತಮಾನವನ್ನು ಒಂದುಗೂಡಿಸಿ, ಪೂರ್ವ ಹಾಗೂ ಪಶ್ಚಿಮದ ಇತಿಹಾಸವನ್ನು ಮುಖಾ
ಮುಖೀ ಮಾಡಿ ಸಣ್ಣಕತೆ, ಕಾದಂಬರಿ, ಸಾಹಿತ್ಯಗಳನ್ನು ಬರೆದಿರುವ ಮಾಸ್ತಿಯವರು ಇಂದಿಗೂ ಪ್ರಸ್ತುತರಾಗಿದ್ದಾರೆ. ಕಾಲ, ದೇಶ ಮತ್ತು ಪರಿಸರದ ಮೂರು ಪರಿ ಮಾಣವನ್ನು ಒಟ್ಟಿಗೆ ತಂದಿದ್ದರು. ಮೌಲ್ಯ ವ್ಯವಸ್ಥೆಯ ಚಿಂತನೆ, ನ್ಯಾಯದ ಪರಿಕಲ್ಪನೆ, ಹೆಣ್ಣು-ಗಂಡಿನ ಸಂಬಂಧದ ಸಂಕೀರ್ಣತೆ, ನೈತಿಕತೆಯ ಸೂಕ್ಷ್ಮ ಅವಲೋಕನವನ್ನು ಮಾಸ್ತಿಯವರು ಬರವಣಿಗೆಯಲ್ಲಿ ಮಾಡಿದ್ದರು ಎಂದರು.
ಐಪಿಸಿ ಸೆಕ್ಷನ್ ಮೂಲಕವೇ ತಪ್ಪಿತಸ್ಥ ಹೌದು ಅಥವಾ ಅಲ್ಲ ಎನ್ನುವ ಬಹಳ ಸಂಕುಚಿತವಾದ ವ್ಯವಸ್ಥೆ ನಮ್ಮಲ್ಲಿದೆ. ನೈತಿಕ ನೆಲೆಗಟ್ಟಿನಲ್ಲಿ ನ್ಯಾಯ
ದಾನ ಮಾಡುವ ಚಿಂತನೆಯನ್ನು ಕಳೆದುಕೊಂಡಿದ್ದೇವೆ. ನ್ಯಾಯಾ ಧೀಶರು, ನ್ಯಾಯವಾದಿ ಗಳು ಮಾಸ್ತಿಯವರ ಕಥೆಗಳು ಓದಬೇಕು. ನ್ಯಾಯದಾನಕ್ಕೆ ಇವು ಪೂರಕವಾಗಿವೆ ಎಂದು ಪ್ರೊ| ರೈ ಹೇಳಿದರು.
ಮಾಸ್ತಿ ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥ್, ಶಿಕ್ಷಣ ತಜ್ಞ ಡಾ| ಗುರುರಾಜ ಕರಜಗಿ ಉಪಸ್ಥಿತರಿದ್ದರು.
ಸಂಸ್ಕೃತಿ, ಸಂಸ್ಕಾರ ತಿಳಿಸುವ ಸಾಹಿತ್ಯ ಅಗತ್ಯ: ಡಾ| ಸಂಧ್ಯಾ ಪೈ
ಮಕ್ಕಳಿಗೆ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ತಿಳಿಸುವ ಯಾವ ಸಾಹಿತ್ಯವೂ ಬರದಿರುವುದು ದೊಡ್ಡ ಕೊರತೆಯಾಗಿದೆ. ಮಕ್ಕಳ ಕಥೆಗಳು ಬರುತ್ತಿವೆ. ಆದರೆ, ಅವುಗಳಲ್ಲಿ ಮಕ್ಕಳು ಅರ್ಥ ಮಾಡಿಕೊಳ್ಳುವುದು ಹಾಗೂ ಕಂಡುಕೊಳ್ಳುವಂತಹದ್ದು ಬಹಳ ಕಡಿಮೆ. ಮಕ್ಕಳಿಗೆ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ತಿಳಿಸುವ ಸಾಹಿತ್ಯಕ್ಕೆ ಪ್ರಸ್ತುತ ಉತ್ತಮ ಬೇಡಿಕೆಯೂ ಇದೆ ಎಂದು ಡಾ| ಸಂಧ್ಯಾ ಎಸ್. ಪೈ ಹೇಳಿದರು. ಹಿಂದೆ ಇದ್ದದ್ದು, ಮುಂದೆ ಇರುವಂಥದ್ದನ್ನು ಇಂದಿನ ಮಕ್ಕಳಿಗೆ ನನ್ನ ಭಾಷೆಯಲ್ಲಿ ಬರೆಯುತ್ತಿದ್ದೇನೆ. ದೈವಾನುಗ್ರಹದಿಂದಾಗಿ 27 ವರ್ಷಗಳ ಹಿಂದೆ “ತರಂಗ’ ವಾರಪತ್ರಿಕೆಯ ಸಾಹಿತ್ಯವನ್ನು ವಹಿಸಿಕೊಂಡು, ಬರೆಯುವುದನ್ನು ಆರಂಭಿಸಿದ್ದೆ. ಈವರೆಗೂ ಅದು ಮುಂದುವರಿದಿದ್ದು, ಓದುಗರು ಒಪ್ಪಿಕೊಂಡರು ಎಂದ ಅವರು, ಇಂಥ ಪ್ರಶಸ್ತಿಗಳು ಯುವ ಬರಹಗಾರರಿಗೆ, ಸಾಹಿತಿಗಳಿಗೆ ಪ್ರೋತ್ಸಾಹ ಮತ್ತು ಹೊಸ ವೇದಿಕೆ ಮಾಡಿಕೊಡುತ್ತವೆ. ಜೀವಮಾನದಲ್ಲಿ ಕೆಲವರಿಗಷ್ಟೇ ಸಿಗುವ ಈ ಗೌರವ ನನ್ನ ಪಾಲಿಗೆ ಸಂದಿರುವ ದೊಡ್ಡ ಪ್ರಶಂಸೆಯಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.