ಮಲಾಡ್ ಲಕ್ಷ್ಮಣ್ ನಗರದ ಶ್ರೀ ಶನೀಶ್ವರ ಮಂದಿರ: ದೃಢಕಲಶ
Team Udayavani, Feb 21, 2021, 12:27 PM IST
ಮುಂಬಯಿ: ಮಲಾಡ್ ಪೂರ್ವದ ಕುರಾರ್ ವಿಲೇಜ್‌ನ ಲಕ್ಷ್ಮಣ್ ನಗರದಲ್ಲಿರುವ ಮಹತೋಭಾರ ಶ್ರೀ ಶನೀಶ್ವರ ಮಂದಿರದಲ್ಲಿ ದೃಢಕಲಶವು ವಿವಿಧ ಪೂಜೆಗಳೊಂದಿಗೆ ಜರಗಿತು.
ಫೆ. 16ರಂದು ಅಪರಾಹ್ನ 4ರಿಂದ ಸಾಮೂಹಿಕ ಪ್ರಾರ್ಥನೆ, ಗೃಹಪೂಜೆ, ಸ್ವಸ್ತಿಶ್ರೀ ಪುಣ್ಯಾಹ ವಾಚನ, ದೃಢ ಕಲಶಕ್ಕೆ ಮಂಡಲ ರಚನೆ, ವಿವಿಧ ಪೂಜೆಗಳು ನಡೆದವು. ಫೆ. 17ರಂದು ಬೆಳಗ್ಗೆ 6.30ರಿಂದ ಮಹಾಗಣಪತಿ ಹೋಮ, ದುರ್ಗಾಹೋಮ, ರುದ್ರ ಹೋಮ, ಶ್ರೀ ಶನೀಶ್ವರ ಹೋಮ, ಕಲಶ ಪೂಜೆ, ಕಲಶಾಭಿಷೇಕ, ಮಧ್ಯಾಹ್ನ 12ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅಪರಾಹ್ನ 2ರಿಂದ ಶನಿ ಮಹಾಪೂಜೆ, ಶನಿಗ್ರಂಥ ಪಾರಾಯಣ, ರಾತ್ರಿ 7ರಿಂದ ಮಹಾಪೂಜೆ ತಿಲ ದೀಪೋತ್ಸವ ಮತ್ತು ಪ್ರಸಾದ ವಿತರಣೆ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕ ತುಂಗಾ ರಾಘವೇಂದ್ರ ಭಟ್ ಅವರ ಪೌರೋಹಿತ್ಯದಲ್ಲಿ ನಾರಾಯಣ್ ಭಟ್ ಮತ್ತು ವಿಪ್ರ ವೃಂದದವರ ಸಹಕಾರ
ದೊಂದಿಗೆ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ನಡೆದವು. ಪೂಜಾ ಕಾರ್ಯ ದಲ್ಲಿ ದೇವಸ್ಥಾನದ ಪೂಜಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ, ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಕೋಶಾಧಿಕಾರಿ ಹರೀಶ್ ಜೆ. ಸಾಲ್ಯಾನ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೀತಲ್ ಆನಂದ್ ಕೋಟ್ಯಾನ್, ಕಾರ್ಯದರ್ಶಿ ಜಯಂತಿ ಸಾಲ್ಯಾನ್, ಕೋಶಾಧಿಕಾರಿ ರಾಜೇಶ್ವರಿ ಪೂಜಾರಿ ಮತ್ತು ಶ್ರೀ ಶನಿಮಹಾತ್ಮ ಚಾರಿಟೆಬಲ್ ಟ್ರಸ್ಟಿನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಹಿರಿಯ ಸದಸ್ಯರಾದ ಐತು ದೇವಾಡಿಗ, ನಾರಾಯಣ ಶೆಟ್ಟಿ, ಬಾಬು ಚಂದನ್, ಶ್ರೀಧರ್ ಶೆಟ್ಟಿ, ಚಂದ್ರಕುಮಾರ್ ಶೆಟ್ಟಿ, ಪ್ರಭಾಕರ್ ಶೆಟ್ಟಿ, ಶಾಲಿನಿ ಶೆಟ್ಟಿ, ಮಹೇಶ್ ಸಾಲ್ಯಾನ್, ದಯಾನಂದ ಶೆಟ್ಟಿ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.