ಕಾತ್ರಜ್: ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಮಕರ ಸಂಕ್ರಾಂತಿ ಆಚರಣೆ
Team Udayavani, Jan 16, 2022, 11:18 AM IST
ಪುಣೆ: ಇಲ್ಲಿನ ಕಾತ್ರಜ್ ಸಚ್ಚಾಯಿ ಮಾತಾ ನಗರದ ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಆಚರಣೆ ಜ. 14ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಿತು.
ಪ್ರತಿ ವರ್ಷ ಜನವರಿ 14ರಿಂದ ಉತ್ತಾರಾಯಣ ಪ್ರಾರಂಭವಾಗುತ್ತದೆ. ಮಕರ ಸಂಕ್ರಮಣದ ಈ ಶುಭ ದಿನದಂದು ಶಬರಿ ಮಲೆ ಅಯ್ಯಪ್ಪ ಸನ್ನಿದಾನದಲ್ಲಿ ಜ್ಯೋತಿ ದರ್ಶನದ ಮೂಲಕ ಅಯ್ಯಪ್ಪ ಸ್ವಾಮೀ ಭಕ್ತರಿಗೆ ಕಾಣಿಸಿ ಕೊಳ್ಳುತ್ತಾನೆ ಎಂಬ ಪ್ರತೀತಿ ಇದೆ. ಈ ಶುಭ ದಿನದಂದು ಪುಣೆ ಕಾತ್ರಜ್ ಅಯ್ಯಪ್ಪ ದೇವಸ್ಥಾನದ ಪ್ರದಾನ ಅರ್ಚಕ ವೇದಮೂರ್ತಿ ಹರೀಶ ಭಟ್ ರವರ ನೇತ್ರತ್ವದಲ್ಲಿ ಕ್ಷೇತ್ರದ ಆರಾಧ್ಯ ದೇವರಾದ ಶ್ರೀ ಅಯ್ಯಪ್ಪ ಸ್ವಾಮೀಗೆ ಹಾಗೂ ಪರಿವಾರ ದೇವರುಗಳಿಗೆ ವಿಶೇಷ ಪೂಜೆ, ಮಹಾಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತ ವೃಂದದವರಿಂದ ಭಜನ ಕಾರ್ಯಕ್ರಮ ನೆರವೇರಿತು.
ಅರಶಿನ ಕುಂಕುಮ ಕಾರ್ಯಕ್ರಮ :
ಮಹಾಪೂಜೆಯ ಬಳಿಕ ಮಹಿಳೆಯರಿಂದ ಮಕರ ಸಂಕ್ರಮ ಣದ ಪರ್ವ ಕಾಲದಲ್ಲಿ ಪ್ರತಿ ವರ್ಷ ನಡೆಸಿ ಕೊಂಡು ಬಂದಿರುವ ಅರಶಿನ ಕುಂಕುಮ ಕಾರ್ಯಕ್ರಮ ನೆರವೇರಿತು. ಅನಂತರ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಜರಗಿತು. ಅನ್ನಸಂತರ್ಪನೆಯು ಪ್ರಶಾಂತ್ ಆಳ್ವರ ಪ್ರಾಯೋಜಕತ್ವದಲ್ಲಿ ನಡೆಯಿತು.
ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕಾತ್ರಜ್ ಇದರ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ವಿಶ್ವಸ್ಥ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಶ್ರೀ ಆಯ್ಯಪ ಸ್ವಾಮಿ ಸೇವಾ ಸಂಘದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಹಕಾರದೊಂದಿಗೆ ಕಾರ್ಯಕ್ರಮ ಜರಗಿತು.
ಈ ಸಂದರ್ಭದಲ್ಲಿ ಪುಣೆಯ ತುಳು -ಕನ್ನಡಿಗರು ಮತ್ತು ಅಯ್ಯಪ್ಪ ಸಾಮಿ ಭಕ್ತರು ಭಾಗವಹಿಸಿ ಗಂಧ ಪ್ರಸಾದ ಸ್ವೀಕರಿಸಿ ಹರಿಹರ ಪುತ್ರ ಶ್ರೀ ಅಯ್ಯಪ್ಪ ಸ್ವಾಮಿ ಕೃಪೆಗೆ ಪಾತ್ರರಾದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.