ಸಾಂತಾಕ್ರೂಜ್‌ ಬಿಲ್ಲವ ಭವನ:163ನೇ ನಾರಾಯಣ ಗುರು ಜಯಂತಿ


Team Udayavani, Sep 7, 2017, 2:24 PM IST

06-Mum06a.jpg

ಮುಂಬಯಿ: ಜಪಯಜ್ಞಗಳಲ್ಲಿ ಪಾಪನಾಶಕ ಶಕ್ತಿ ಅಡಗಿದ್ದು, ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಪುಣ್ಯ ಕಟ್ಟಿಕೊಳ್ಳಲು ಸಾಧ್ಯ. ಪ್ರತೀ ಧರ್ಮದಲ್ಲೂ ನಾರಾಯಣ ಗುರುಗಳ ಸೆಳೆತವಿದೆ. ಆದ್ದರಿಂದಲೇ ಸಜ್ಜನರು ತಿಳಿದ ಏಕೈಕ ಶಕ್ತಿಎಂದರೆ ಅವರೇ ಬ್ರಹ್ಮಶ್ರೀ ನಾರಾಯಣ ಗುರುಗಳು. ನಿರಂತರ  “ಓಂ ನಮೋ ನಾರಾಯಣಾಯ ನಮಃ ಶಿವಾಯ’ ಜಪಯಜ್ಞದಿಂದ ಈ ಗುರುಗಳೇ ಸಂತೃಪ್ತರಾಗಿರುವರು ಎಂದು ಕೋಟಿ ಸರ್ಪ ಮಹಾಕ್ಷೇತ್ರ ಬೆಂಗಳೂರು ಇದರ ಸಂಸ್ಥಾಪಕ, ಜ್ಯೋತಿಷ್ಯ ವಿದ್ವಾನ್‌ ಡಾ| ಭಗವಾನ್‌ ವಿಷ್ಣುದತ್ತ ಸ್ವರೂಪ ಪ್ರಭೂಜಿ  ತಿಳಿಸಿದರು.

ಸೆ. 6 ರಂದು ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಬಿಲ್ಲವರ ಅಸೋಸಿ ಯೇಶನ್‌ ಮುಂಬಯಿ ವತಿಯಿಂದ  ನಡೆದ  ಬ್ರಹ್ಮಶ್ರೀ ನಾರಾಯಣ ಗುರುಗಳ‌ 163ನೇ ಜಯಂತ್ಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಲ್ಲವನ್ನು ಸವಿದಾಗ ಹೇಗೆ ಅದರ ನೈಜರುಚಿ ಅನುಭವ ಆಗುವುದೋ ಅದರಂತೆ ನಾರಾಯಣ ಗುರುಗಳ ಜೀವನ ತಿಳಿದಾಗಲೇ ಮಾನಸಿಕವಾಗಿ ಮಂತ್ರದೀಕ್ಷೆ ನೀಡಿದ ಮಹಾನುಭವಿ ಗುರುಗಳ ಶಕ್ತಿಯ ಅರಿವು ಆಗುವುದು. ಇಂತಹ ಪರಮ ಗುರುವನ್ನು ಬಲವಾಗಿ ಅಪ್ಪಿಕೊಂಡಾಗ ನಮ್ಮ ಅಭಯ ತನ್ನಿಂತಾನೇ ಆಗುವುದು. ಸ್ವತ್ಛಂದ ಬದುಕಿನ ಬ್ರಹ್ಮಶ್ರೀಗಳೇ ನಿಜವಾದ ಬ್ರಾಹ್ಮಣರಾಗಿದ್ದರು. ಆದ್ದರಿಂದಲೇ ಗುರುಗಳ ಅರ್ಚನೆಯಿಂದ ಭಕ್ತರ ರಕ್ಷಣೆಯಾಗುವುದು. ಇಂತಹ ನಾರಾಯಣ ನಾಮದ ಸ್ಮರಣೆಯ ಸಾರಾಮೃತ ಎಲ್ಲರ ನಾಲಗೆಯಲ್ಲಿ ಉಚ್ಚಾರ ಆಗುವಂತಾಗಲಿ ಎಂದರು.

ಭವನದ ನಾರಾಯಣ ಗುರು ಸಭಾಗೃಹದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಸೋಸಿಯೇಶನ್‌ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅವರು, ರಾಜ್ಯ ಸರಕಾರವೇ ಬ್ರಹ್ಮಶ್ರೀ ನಾರಾಯಣ ಗುರುಗಳ ಹುಟ್ಟುಹಬ್ಬವನ್ನು ಸರಕಾರಿ ಹಬ್ಬವನ್ನಾಗಿಸಿ ಆಚರಿಸುತ್ತಿರುವುದು ಅಭಿನಂದನೀಯ. ಇದರಿಂದಲೇ  ಗುರುಗಳ ಸಂದೇಶ, ಬದುಕಿನ ಶೈಲಿ ಏನಿರಬಹುದು ಎಂದು ತಿಳಿಯಬಹುದು.  ಅವರ ಜೀವನ ಮೌಲ್ಯದ ಜ್ಞಾನರ್ಜನೆ, ಮೌಲ್ಯ ತಿಳಿದು ಬಾಳಿದಾಗಲೇ ನಮ್ಮ ಜೀವನವೂ ಸಫಲಾಗುವುದು. ನಮ್ಮ ಸಂಸ್ಥೆಯ ಶಕ್ತಿಗಳಾದ ಸ್ವರ್ಗಸ್ಥ  ವೈ. ನಾಗೇಶ್‌, ಆರ್‌. ಕೆ. ಪಾಲನ್‌, ವಿ. ಆರ್‌. ಕೋಟ್ಯಾನ್‌ ಮತ್ತಿತರರ ಪರಿಶ್ರಮದಿಂದ ಈ ಸಂಸ್ಥೆ ಇಷ್ಟೊಂದು ಮಟ್ಟಕ್ಕೆ ಬೆಳೆಸಲು ಸಾಧ್ಯವಾಗಿದೆ.  ಮೊಗವೀರರು, ಬಂಟರು, ಬಿಲ್ಲವರು ಇಂದಿಗೂ ಸಾಮರಸ್ಯದ ಪ್ರತೀಕರಾಗಿ ಸೌಹಾರ್ದತೆಯಿಂದ ಬಾಳುತ್ತಿದ್ದು ಭವಿಷ್ಯತ್ತಿನ್ನುದ್ದಕ್ಕೂ ಇಂತಹ ಮನೋಭಾವನೆ ಮೈಗೂಡಿಸಿ ಮುನ್ನಡೆಯೋಣ. ಯುವ ಪೀಳಿಗೆಯಲ್ಲಿ ಸಂಸ್ಕೃತಿ, ಸಂಸ್ಕಾರವನ್ನು ತಿಳಿಪಡಿಸಿ ಸಮುದಾಯ ವನ್ನು ಮುನ್ನಡೆಸೋಣ  ಎಂದು ನುಡಿದರು.

ಭಾರತ್‌ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಮಾತನಾಡಿ, ಸ್ವಕ್ಷೇತ್ರದಲ್ಲಿ ಗರ್ಭಗುಡಿ ಸ್ಥಾಪಿಸಿ ನದಿಯಿಂದ ಲಿಂಗವನ್ನು ತಂದು ಪ್ರತಿಷ್ಠಾಪಿಸಿದ ಗುರುಗಳ ಗುಣಗಾನ ಬಣ್ಣಿಸಲಸಾಧ್ಯ. ಇಂತಹ ಗುರುವರ್ಯರು ಬಿಲ್ಲವರಾಗಿ ಹುಟ್ಟಿರುವುದು ಸಮಗ್ರ ಬಿಲ್ಲವರ ಹೆಮ್ಮೆಯಾಗಬೇಕು. ಆದ್ದರಿಂದ ಭಿನ್ನಾಭಿಪ್ರಾಯ ಮುಕ್ತ ಸಮುದಾಯ, ಸಂಸ್ಥೆಯನ್ನು ಕಟ್ಟಿ ವ್ಯವಸ್ಥೆಗೆ ಸರಿಯಾಗಿ ಮುನ್ನಡೆಯೋಣ. ಅಖಂಡ ಸಮಾಜಕ್ಕಾಗಿ ಶ್ರಮಿಸುತ್ತಾ ಸಮಾಜವನ್ನು ಸಮೃದ್ಧಿಗೊಳಿಸೋಣ ಎಂದರು.

ಕೋಟಿ ಮಹಾಕ್ಷೇತ್ರದ ವಿದ್ವಾನ್‌ ಜಿ. ವಿ. ವೇಣುಗೋಪಾಲ್‌ ಹಾಡುಗಾರಿಕೆಯೊಂದಿಗೆ ನಾರಾಯಣಾಮೃತವನ್ನು ಹಾಡಿದರು. ಮಂಗಳವಾರ ಪ್ರಾತಃಕಾಲದಿಂದ ಪ್ರಭಾಕರ ಸಸಿಹಿತ್ಲು ಮತ್ತು ಸಂಗಡಿಗರಿಂದ  ಸತತ 24 ತಾಸುಗಳಲ್ಲಿ ನಡೆಸಿದ “ಓಂ ನಮೋ ನಾರಾಯಣಾಯ ನಮಃ ಶಿವಾಯಃ’ ಜಪಯಜ್ಞ ಪೂರ್ವಾಹ್ನ ಸಮಾಪ್ತಿಗೊಳಿಸಿದ ಬಳಿಕ ಧನಂಜಯ್‌ ಶಾಂತಿ ಉಳ್ಳೂರು ಪ್ರಧಾನ ಪೂಜೆ ನೆರವೇರಿಸಿ ಮಹಾರತಿಗೈದು  ಪ್ರಾರ್ಥನೆಗೈದರು. ಶೇಖರ್‌ ಶಾಂತಿ ಉಳ್ಳೂರು, ಗಣೇಶ್‌ ಪೂಜಾರಿ, ಸುಭಾಶ್‌ ಮಾಬಿಯಾನ್‌, ರವೀಂದ್ರ ಶಾಂತಿ ಪೂಜೆಗೈದು ನೆರೆದ ನೆರವೇರಿಸಿ ಭಕ್ತಬಂಧುಗಳಿಗೆ ತೀರ್ಥ ಪ್ರಸಾದವನ್ನಿತ್ತು ಹರಸಿದರು. ಗಂಗಾಧರ ಸುವರ್ಣ ಭಾಗವತಿಕೆಯಲ್ಲಿ ಗುರುವನ್ನು ಸ್ತುತಿಸಿದರು. ಶೇಖರ್‌ ಸಸಿಹಿತ್ಲು ಜಯಜಯ ನಾರಾಯಣ ಭಕ್ತಿಸ್ತುತಿಗೈದರು.

ಅಸೋಸಿಯೇಶನ್‌ನ ಉಪಾಧ್ಯಕ್ಷರಾದ ಭಾಸ್ಕರ ವಿ. ಬಂಗೇರ, ಶಂಕರ ಡಿ. ಪೂಜಾರಿ, ಡಾ| ಯು. ಧನಂಜಯ ಕುಮಾರ್‌, ಪುರುಷೋತ್ತಮ ಎಸ್‌. ಕೋಟ್ಯಾನ್‌, ಮಹೇಂದ್ರ ಸೂರು ಕರ್ಕೇರ, ಗೌರವ ಪ್ರಧಾನ  ಕೋಶಾಧಿಕಾರಿ ಮಹೇಶ್‌ ಸಿ. ಕಾರ್ಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಜಪಯಜ್ಞ ನೆರವೇರಿಸಿದ ಪ್ರಭಾಕರ ಸಸಿಹಿತ್ಲು, ಭಾರತ್‌ ಬ್ಯಾಂಕ್‌ನ ಆಡಳಿತ ನಿರ್ದೇಶಕ ಸಿ. ಆರ್‌. ಮೂಲ್ಕಿ ರಾಜಶೇಖರ್‌ ಕೆ. ಎಂ. ಬೆಂಗಳೂರು, ಪುರೋಹಿತರಾಗಿ ದೀಕ್ಷೆ ಸ್ವೀಕರಿಸಿದ ರವೀಂದ್ರ ಎ. ಅಮೀನ್‌,  ಸಮಾಜ ಸೇವಕ ಸದಾಶಿವ ಎ. ಕರ್ಕೇರ ನಲಸೋಪರ ಮತ್ತಿತರರನ್ನು ಅಧ್ಯಕ್ಷರು ಪುಷ್ಪಗುಚ್ಚವನ್ನಿತ್ತು ಗೌರವಿಸಿದರು.

ಪೂರ್ವಾಧ್ಯಕ್ಷ ಎಲ್‌. ವಿ. ಅಮೀನ್‌, ಲೀಲಾವತಿ ಜಯ ಸುವರ್ಣ, ಶಶಿ ನಿತ್ಯಾನಂದ್‌ ಕೋಟ್ಯಾನ್‌, ಯಶೋಧಾ ಎನ್‌. ಟಿ. ಪೂಜಾರಿ, ಪ್ರಭಾ ಎನ್‌. ಪಿ. ಸುವರ್ಣ, ಪೂಜಾ ಪುರುಷೋತ್ತಮ್‌, ಭವನದ ಪ್ರಬಂಧಕ ಭಾಸ್ಕರ್‌ ಟಿ. ಪೂಜಾರಿ, ಯುವಾಭ್ಯುದಯ ಉಪ ಸಮಿತಿಯ ಮುಖ್ಯಸ್ಥ ನಿಲೇಶ್‌ ಪೂಜಾರಿ ಪಲಿಮಾರ್‌, ಸೇವಾ ದಳಪತಿ ಗಣೇಶ್‌ ಕೆ. ಪೂಜಾರಿ, ಭಾರತ್‌ ಬ್ಯಾಂಕ್‌ನ ನಿರ್ದೇಶಕರು, ಉನ್ನತಾಧಿಕಾರಿಗಳು ಸೇರಿದಂತೆ ಅಸೋಸಿಯೇಶನ್‌ನ ಸ್ಥಳೀಯ ಮತ್ತು ಸಮನ್ವಯ ಸಮಿತಿಗಳ ಮುಖ್ಯಸ್ಥರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಸಾಮಾಜಿಕ ಹಾಗೂ ಧಾರ್ಮಿಕ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್‌ದಾಸ್‌ ಜಿ. ಪೂಜಾರಿ ಸ್ವಾಗತಿಸಿದರು. ಅಸೋಸಿಯೇಶನ್‌ನ ಕಾರ್ಯಕಾರಿ ಸಮಿತಿಯ ಸದಸ್ಯ ಹರೀಶ್‌ ಜಿ. ಪೂಜಾರಿ ಕೊಕ್ಕರ್ಣೆ ಮತ್ತು ಜೊತೆ ಕಾರ್ಯದರ್ಶಿ ಹರೀಶ್‌ ಜಿ. ಸಾಲಿಯಾನ್‌ ಅತಿಥಿಗಳನ್ನು ಪರಿಚಯಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್‌ ಪ್ರಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಧಾರ್ಮಿಕ ಸಮಿತಿಯ ಗೌರವ ಕಾರ್ಯದರ್ಶಿ ರವೀಂದ್ರ ಎ. ಅಮೀನ್‌ ವಂದಿಸಿದರು.       

ಮಹಾರಾಷ್ಟ್ರದಲ್ಲಿನ ಬಿಲ್ಲವರ ಮುಖ್ಯಾ ಲಯದಲ್ಲಿ ನಾರಾಯಣ ಗುರುಗಳ‌ 163ನೇ ಜಯಂತ್ಯೋತ್ಸವ ಸ್ತುತ್ಯರ್ಹ ಸಂಭ್ರಮವಾಗಿದೆ. ಸಮುದಾಯದ ಸಂಸ್ಥೆಗಳ ವಿಲೀಣೀಕರಣದೊಂದಿಗೆ ಒಗ್ಗೂಡುವಿಕೆಯಿಂದ ಸಂಭ್ರಮಿಸುತ್ತಿರುವುದು ಅಭಿನಂದನೀಯ. ಇದರಿಂದ ಜಯ ಸುವರ್ಣರ ಗೌರವ ಹೆಚ್ಚಿಸಿದೆ. ಗುರುಗಳಿಗಿಂತ ಬಂಧು ಬೇರೊಂದಿಲ್ಲ. ಶ್ರದ್ಧೆಯಿಂದ ನಾವೂ ಸ್ವಗುರುಗಳಾಗಲು ಸಾಧ್ಯ 
– ಸದಾನಂದ ಕೋಟ್ಯಾನ್‌ (ಕಾರ್ಯಾಧ್ಯಕ್ಷರು: ಮೊಗವೀರ ಬ್ಯಾಂಕ್‌).
ಕಳೆದ ವರ್ಷ ಸಂಸ್ಥೆಯ ವ್ಯಕ್ತಿಯಾಗಿದ್ದು, ನಾರಾಯಣ ಗುರುಗಳ‌ ಜಯಂತಿ ಇದೇ ವೇದಿಕೆಯಲ್ಲಿ ಆಚರಿಸಿದ್ದೆ.  ಈ ಬಾರಿ ಸಂಸ್ಥೆಯ ಸ್ವ ಸಮುದಾಯದ ಶಕ್ತಿಯಾಗಿ ಇದೇ ವೇದಿಕೆಯಲ್ಲಿ ಗುರುಗಳನ್ನು ಆರಾಧಿಸುತ್ತಿರುವುದು ಮನಸ್ಸಿಗೆ ಶಾಂತಿಯೂ ಸಮುದಾಯಕ್ಕೆ ಸಮೃದ್ದಿœಯೂ ತಂದೊದಗಿಸಿದೆ. ಈ ಮೂಲಕ ಸಮಾಜವು ಬಲಯುತವಾಗಲಿ 
–  ಎನ್‌. ಟಿ. ಪೂಜಾರಿ (ಕಾರ್ಯಾಧ್ಯಕ್ಷರು : ಬಿಲ್ಲವ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ).

ಗುರು ಜಯಂತಿಯಂತಹ ಆಚರಣೆಯಿಂದ  ಸಮುದಾಯದಲ್ಲಿ ಒಗ್ಗಟ್ಟಿನ ಶಕ್ತಿ ರೂಪಿಸ‌ುವಂತಾಗಬೇಕು. ಇಂತಹ ಕಾರ್ಯಕ್ರಮಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ನಾವು ತೊಡಗಬೇಕು 
– ಚಂದ್ರಶೇಖರ್‌ ಪೂಜಾರಿ (ನಿರ್ದೇಶಕರು : ಭಾರತ್‌ ಬ್ಯಾಂಕ್‌).

ಆಗಿನ ಕಾಲಘಟ್ಟದಲ್ಲಿ ನಾರಾಯಣ ಗುರುಗಳು ಅಸ್ಪೃಶ್ಯತೆಮುಕ್ತ ಸಮಾಜಕ್ಕಾಗಿ ಶ್ರಮಿಸಿ ಸಾಮಾಜಿಕ ಸುಧಾರಣೆಯ ಹರಿಕಾರರಾಗಿದ್ದರು. ಎಲ್ಲರಿಗೂ ಶಿಕ್ಷಣ, ಸಮಾನತೆ ದೊರೆತು ಧರ್ಮ ಸುಧಾರಣೆಗಾಗಿ ಪ್ರಯತ್ನಿಸಿದ್ದರು. ಇಂತಹ ಪರಮ ಗುರುಗಳ ಪೌರತ್ವಶಾಹಿ ತಿಳಿಯುವ ಪ್ರಯತ್ನವಾಗಲಿ 
– ಚಂದ್ರಶೇಖರ ಪಾಲೆತ್ತಾಡಿ (ಅಧ್ಯಕ್ಷರು : ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ).        

 ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

9-ckm

Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

8

Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.