ಸಾಂತಾಕ್ರೂಜ್ ಪ್ರಭಾತ್ ಕಾಲನಿ ಗಣೇಶೋತ್ಸವ ಮಂಡಲ:ಶಾಲಾ ಪರಿಕರ ವಿತರಣೆ
Team Udayavani, Jun 27, 2018, 4:07 PM IST
ಮುಂಬಯಿ: ಸಾಂತಾಕ್ರೂಜ್ ಪೂರ್ವ ಗಾಂಧಿ ಚೌಕ್‌ನಲ್ಲಿರುವ ಪ್ರಭಾತ್ ಕಾಲನಿ ಗಣೇಶೋತ್ಸವ ಮಂಡಲದ ವತಿಯಿಂದ ಪರಿಸರದ ಮಕ್ಕಳಿಗೆ ವಾರ್ಷಿಕ ಶಾಲಾ ಪರಿಕರಗಳ ವಿತರಣೆ ಕಾರ್ಯಕ್ರಮವು ಜೂ. 24 ರಂದು ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲನಿಯ ಶ್ರೀ ಪೇಜಾವರ ಮಠದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪರಿಸರದ ನೂರಾರು ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳನ್ನು ಗಣ್ಯರ ಉಪಸ್ಥಿತಿಯಲ್ಲಿ ವಿತರಿಸಲಾಯಿತು. ಪ್ರಭಾತ್ ಕಾಲನಿ ಗಣೇಶೋತ್ಸವ ಮಂಡಲದ ಅಧ್ಯಕ್ಷ ಶೇಖರ ಸಾಲ್ಯಾನ್, ಗೌರವ ಕೋಶಾಧಿಕಾರಿ ಶಶಿಕಾಂತ್ ನಿಗುಡ್ಕರ್, ಉಪಾಧ್ಯಕ್ಷರುಗಳಾದ ದೀಪಕ್ ಕರ್ಣೇಕರ್ ಮತ್ತು ಪಾರಸ್ ಕಪಾಸಿ, ಜತೆ ಕಾರ್ಯದರ್ಶಿಗಳಾದ ಮಿಲಿಂದ್ ಮಹಾಮುನ್ಕರ್ ಮತ್ತು ಸಂದಿಪ್ ನಿಗುಡ್ಕರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ತುಳು-ಕನ್ನಡಿಗ ಮಕ್ಕಳು ಸೇರಿದಂತೆ ಅನ್ಯಭಾಷಿಗ ಮಕ್ಕಳಿಗೆ ಉಚಿತ ಶಾಲಾ ಪರಿಕರಗಳನ್ನು ವಿತರಿಸಿ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಡಳದ ಅಧ್ಯಕ್ಷ ಶೇಖರ ಸಾಲ್ಯಾನ್ ಅವರು ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೆಡೆಗೆ ಹೆಚ್ಚಿನ ಗಮನ ಹರಿಸಿ ಭವಿಷ್ಯದಲ್ಲಿ ಆದರ್ಶ ಪ್ರಜೆಗಳಾಗಿ ಬಾಳಬೇಕು. ಮಕ್ಕಳು ಎಳವೆಯಿಂದ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಭವಿಷ್ಯದಲ್ಲಿ ಇತರ ಮಕ್ಕಳಿಗೆ ಶೈಕ್ಷಣಿಕವಾಗಿ ಸಹಕರಿಸಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮಕ್ಕಳು ಹಿಂದೇಟು ಹಾಕಬಾರದು ಎಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ ಪ್ರಭಾತ್ ಕಾಲನಿ ಗಣೇಶೋತ್ಸವ ಮಂಡಲದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸ್ಥಳೀಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಶ್ರೀ ಪೇಜಾವರ ಮಠದ ಸಿಬಂದಿಗಳು, ಮಕ್ಕಳು, ಸಮಾಜ ಸೇವಕರು, ಸ್ಥಳೀಯ ದಾನಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.