ಮುಂಬಯಿ ರಾಜಾಪುರ ಸಾರಸ್ವತ ಸಂಘದಿಂದ ಸಾರಸ್ವತ ಉತ್ಸವ-2019


Team Udayavani, Feb 14, 2019, 3:45 PM IST

1302mum03a.jpg

ಮುಂಬಯಿ: ಸಾಮಾಜಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈಯುವ ಮೂಲಕ ವಿಶ್ವಮಟ್ಟದಲ್ಲಿ ಹೆಸರು ಗಳಿಸಿದ ಸರ್‌ ಎಂ. ವಿಶ್ವೇಶ್ವರಯ್ಯ, ಪಿ. ಟಿ. ಉಷಾ, ಡಾ| ಅಬ್ದುಲ್‌ ಕಲಾಂ ಅವರಂತಹ ವ್ಯಕ್ತಿತ್ವ ಮೂಡಿಬರುವ ನಿಟ್ಟಿನಲ್ಲಿ ನಮ್ಮ ಸಮಾಜದ ವಿದ್ಯಾರ್ಥಿಗಳಲ್ಲಿ ವಿಶೇಷ ಪ್ರಯತ್ನಗಳು ನಡೆಯಬೇಕು. ಸಮಾಜದ ಯುವಕರು ಜಾಗತಿಕ ಮಟ್ಟದಲ್ಲಿ ದಾಖಲೆ ನಿರ್ಮಿಸಬೇಕು. ನಮ್ಮಲ್ಲೂ ಒಬ್ಬರಿಗೆ ಭಾರತ ರತ್ನ ಲಭಿಸುವಂತಾಗಬೇಕು ಎಂದು ಪುತ್ತೂರಿನ ಕ್ಯಾಂಪ್ಕೊ ಲಿಮಿಟೆಡ್‌ ಸಂಸ್ಥೆಯ ಅಧ್ಯಕ್ಷ ಎಸ್‌. ಆರ್‌. ಸತೀಶ್‌ಚಂದ್ರ ಅವರು ಅಭಿಪ್ರಾಯಿಸಿದರು.

ಜ. 26ರಂದು ದಹಿಸರ್‌ ಕಾಶೀ ಮಠದ ಸಭಾಂಗಣದಲ್ಲಿ ನಡೆದ ಮುಂಬಯಿ ರಾಜಾಪುರ ಸಾರಸ್ವತ ಸಂಘ ಆಯೋಜಿಸಿದ ಸಾರಸ್ವತ ಉತ್ಸವ-2019 ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತಡಿ, ತನ್ನ ಅಧ್ಯಕ್ಷತೆಯಲ್ಲಿರುವ ಪುತ್ತೂರಿನ  ಸರಸ್ವತಿ ಸಹಕಾರಿ ಸಂಸ್ಥೆಯು ಸಹಕಾರಿ ಕ್ಷೇತ್ರದಲ್ಲಿನ ಅಧ್ಯಯನದಲ್ಲಿ ಕರ್ನಾಟಕ ರಾಜ್ಯದಲ್ಲಿಯೇ ಮಾದರಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಸಂಸ್ಥೆಯ ಬೆಳವಣಿಗೆಯ ಹಂತದಲ್ಲಿನ ತನ್ನ ಅನುಭವವನ್ನು ಹಂಚಿಕೊಂಡರು.

ಆಮಂತ್ರಿತ ಅತಿಥಿಗಳಾಗಿ ಪಾಲ್ಗೊಂಡ ಕರ್ನಾಟಕ ಸರಕಾರ ರೆವೆನ್ಯೂ ಇಲಾಖೆಯ ಡೆಪ್ಯುಟಿ ಸೆಕ್ರೆಟರಿ ಎಳ್ಳಾರೆ ಸದಾಶಿವ ಪ್ರಭು ಮಾತನಾಡಿ, ನನ್ನ ವೃತ್ತಿರಂಗದಲ್ಲಿನ ಏರ್‌ಫೋರ್ಸ್‌ ಪೊಲೀಸ್‌ ಮತ್ತು ರೆವೆನ್ಯೂ ಇಲಾಖೆಗಳಲ್ಲಿ ದುಡಿಯುವಾಗ ದೇಶದ ಇತರ ಭಾಗಗಳಲ್ಲಿನ ಜನರು ದಕ್ಷಿಣ ಕನ್ನಡದವರ ಬಗ್ಗೆ ಗೌರವ ವ್ಯಕ್ತಪಡಿಸಿದ್ದನ್ನು ತಿಳಿಸಿದರು. ಅಧ್ಯಾತ್ಮ ಚಿಂತನೆಯತ್ತ ಒಯ್ಯುವ ಈ ಭಜನೆಯು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಮಕ್ಕಳು ಕೂಡಾ ಕಲಿತುಕೊಳ್ಳುವ ಆವಶ್ಯಕತೆಯಿದೆ ಎಂದರು.

ಇನ್ನೋರ್ವ ಅತಿಥಿ ಗೋರೆಗಾಂವ್‌ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷೆ ಶಕುಂತಳಾ ಆರ್‌. ಪ್ರಭು ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಎಲ್ಲಾ ಸಂಸ್ಥೆಗಳಲ್ಲಿ ಮಹಿಳೆಯರ ಪಾಲು ಪ್ರಶಂಸನೀಯವಾಗಿರುವುದು ಅಭಿಮಾನದ ವಿಷಯವಾಗಿದೆ ಎಂದರು.

ಮುಂಬಯಿ ದಹಿಸರ್‌ ಕಾಶೀಮಠ ಹಾಗೂ ವಿಟuಲ ರಖುಮಾಯಿ ಮಂದಿರದ ಉಮೇಶ್‌ ಕಾಮತ್‌ ಅವರು ಮಾತನಾಡಿ, ಸಂಸ್ಥೆಯ ಚಟುವಟಿಕೆಗಳನ್ನು ಕಂಡು ಸಂ ತೋಷವಾಯಿತು. ಸಕಾರಾತ್ಮಕ ಧ್ಯೇಯ ಗಳನ್ನು ತಮ್ಮದಾಗಿಸಿಕೊಂಡ ಯುವಕರು, ಮಹಿಳೆಯರು, ಮಕ್ಕಳು ಹಿರಿಯರಿಂದ ಬಳುವಳಿಯಾಗಿ ಬಂದ ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿರುವುದು ಅಭಿಮಾನದ ಸಂಕೇತವಾಗಿದೆ ಎಂದು ನುಡಿದು ಶುಭಹಾರೈಸಿದರು.

ಆಮಂತ್ರಿತ ಅತಿಥಿ ಒಟಿಸ್‌ ಎಲಿವೇಟರ್ ಸಂಸ್ಥೆಯ ಭರತ್‌ ಎಸ್‌. ನಾಯಕ್‌ ಅವರು ಮಾತನಾಡಿ, ವೃತ್ತಿರಂಗದಲ್ಲಿ ನಾವು ಅನುಭವಿಸುವ ಸೋಲುಗಳಿಂದಲೂ ಬದುಕಿನ ಪಾಠ ಕಲಿಯುತ್ತೇವೆ. ಯುವಕರಿಗೆ ಇಂದು ವಿವಿಧ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿದ್ದು, ಅದನ್ನು ಸಮರ್ಥವಾಗಿ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳನ್ನು ಸಂಸ್ಥೆಯ ವತಿಯಿಂದ ಅಧ್ಯಕ್ಷ ಪ್ರಭಾಕರ ಡಿ. ಬೋರ್ಕರ್‌ ಗೌರವಿಸಿದರು. ಸಾಂಸ್ಕೃತಿಕ ಕಾರ್ಯಕ್ರ ಮವಾಗಿ ಬೆಳಗ್ಗೆ 9.30ರಿಂದ ಭಕ್ತಿಗೀತೆ, ಭಜನೆ, ದೇಶದ ಸಂಸ್ಕೃತಿಯನ್ನು ಸಾರುವ ನೃತ್ಯ ವೈವಿಧ್ಯ, ಯುವ ವಿಭಾಗದಿಂದ ಜಾಯ್‌ ಆಫ್‌ ಗಿವಿಂಗ್‌ ಕಾರ್ಯಕ್ರಮ ನಡೆಯಿತು. 75 ವರ್ಷ ಮೇಲ್ಪಟ್ಟ ಸಮಾಜದ ಹಿರಿಯರನ್ನು ಗೌರವಿಸಲಾಯಿತು.

ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷ ಪ್ರಭಾಕರ ಜಿ. ಬೋರ್ಕರ್‌, ಕಾರ್ಯದರ್ಶಿ ಪೂಜಾ ಜೆ. ಕಾಮತ್‌, ಕೋಶಾಧಿಕಾರಿ ನಿತ್ಯಾನಂದ ಪ್ರಭು, ಮಹಿಳಾ ವಿಭಾಗದ ಅಧ್ಯಕ್ಷೆ ಸುಮಾ ವಿ. ನಾಯಕ್‌, ಕಾರ್ಯದರ್ಶಿ ಸುಲತಾ ಆರ್‌. ನಾಯಕ್‌, ಕೋಶಾಧಿಕಾರಿ ಸುನಿತಾ ಎಸ್‌. ಕಾಮತ್‌, ಯುವ ವಿಭಾಗದ ಅಧ್ಯಕ್ಷೆ ಮಾಧವಿ ನಾಯಕ್‌, ಕಾರ್ಯದರ್ಶಿ ವಿರಾಜ್‌ ನಾಯಕ್‌, ಕೋಶಾಧಿಕಾರಿ ಮಹೇಶ್‌ ಪ್ರಭು ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಹಿಳಾ ವಿಭಾಗ, ಯುವ ವಿಭಾಗದ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪಾಲ^ರ್‌, ಥಾಣೆ, ಮುಂಬಯಿಯ ವಿವಿಧೆಡೆಗಳಿಂದ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಚಿತ್ರ-ವರದಿ : 

ಪಿ. ಆರ್‌. ರವಿಶಂಕರ್‌ ಡಹಾಣೂರೋಡ್‌

ಟಾಪ್ ನ್ಯೂಸ್

BSY–1

ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್‌ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ

Sunil-kumar

Naxal Surrender: ನಕ್ಸಲ್‌ ಶರಣಾಗತಿ ಪೂರ್ವಯೋಜಿತ ಸ್ಟೇಜ್‌ ಶೋ ಅಲ್ಲವೇ?

Debt

Finance Debt: ಫೈನಾನ್ಸ್‌ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!

CT-Ravi

Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ

Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ

Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ

vidhana-Soudha

Cast Census: ಲಿಂಗಾಯತ, ಒಕ್ಕಲಿಗ ಜಂಟಿ ಸಮರ?

1-bajaj

L&T CEO ಹೇಳಿಕೆಗೆ ತಿರುಗೇಟು;ಮೊದಲು ಬಾಸ್‌ ವಾರಕ್ಕೆ 90 ಗಂಟೆ ದುಡಿಯಲಿ: ಬಜಾಜ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

BSY–1

ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್‌ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ

Sunil-kumar

Naxal Surrender: ನಕ್ಸಲ್‌ ಶರಣಾಗತಿ ಪೂರ್ವಯೋಜಿತ ಸ್ಟೇಜ್‌ ಶೋ ಅಲ್ಲವೇ?

Debt

Finance Debt: ಫೈನಾನ್ಸ್‌ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!

CT-Ravi

Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ

Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ

Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.