ಸಸಿಹಿತ್ಲು ಭಗವತೀ ತೀಯಾ ಸಂಘ: 62ನೇ ವಾರ್ಷಿಕ ಮಹಾಪೂಜೆ
Team Udayavani, May 2, 2017, 5:08 PM IST
ಮುಂಬಯಿ: ಶ್ರೀ ಸಸಿಹಿತ್ಲು ಭಗವತೀ ತೀಯಾ ಸಂಘ ಮುಂಬಯಿ ಇದರ ವತಿಯಿಂದ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ದಲ್ಲಿ ವರ್ಷಂಪ್ರತಿ ಜರಗುತ್ತಿರುವ ನಡಾವಳಿ ಮಹೋತ್ಸವದ ಅಂಗವಾಗಿ 62ನೇ ವಾರ್ಷಿಕ ಮಹಾಪೂಜೆಯು ಎ. 29ರಂದು ಭಾಂಡೂಪ್ ಪಶ್ಚಿಮದ ಸಾಂಗ್ರಿಲಾ ಬಿಸ್ಕೆಟ್ ಕಂಪನಿಯ ಎದುರುಗಡೆಯಿರುವ ಎಲ್. ಬಿ. ಎಸ್.ಮಾರ್ಗದ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ವಿಜೃಂಭಣೆಯಿಂದ ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ಪೂರ್ವಾಹ್ನ 10 ರಿಂದ ಗಣಹೋಮ, ಸಂಜೆ 4.30ರಿಂದ ಕಲಶ ಪ್ರತಿಷ್ಠೆ, ಅಲಂಕಾರ ಪೂಜೆ, ಸಂಜೆ 5 ರಿಂದ ಅರಸಿನ ಕುಂಕುಮ, ಆನಂತರ ಶ್ರೀ ಕೃಷ್ಣ ಪ್ರಸಾದಿತ ಸ್ವಾಮಿ ನಿತ್ಯಾನಂದ ಭಜನ ಮಂಡಳಿ ಭಾಂಡೂಪ್ ಇವರಿಂದ ಭಜನ ಕಾರ್ಯಕ್ರಮ ನಡೆಯಿತು. ಸಂಜೆ 7ರಿಂದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅನಂತರ ಧಾರ್ಮಿಕ ಪೂಜಾ ಕಾರ್ಯಕ್ರಮವಾಗಿ ಬಲಿ ಉತ್ಸವ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಕೊನೆಯಲ್ಲಿ ಅನ್ನಸಂತರ್ಪಣೆ ನಡೆಯಿತು. ನೂರಾರು ಭಕ್ತಾದಿಗಳು, ಸಮಾಜ ಬಾಂಧವರು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು. ಭಕ್ತಾದಿಗಳು ಹೂವಿನ ಪೂಜೆಯನ್ನು ನೀಡಿ ಸಹಕರಿಸಿದರು.
ಸಂಸ್ಥೆಯ ಗೌರವಾಧ್ಯಕ್ಷ ಲಾಜರ್ ಟಿ. ಎಂ. ಕೋಟ್ಯಾನ್, ಅಧ್ಯಕ್ಷ ಚಂದ್ರಹಾಸ ಕೆ. ಪಾಲನ್, ಗೌರವ ಕಾರ್ಯದರ್ಶಿ ಸುಧಾಕರ್ ಟಿ. ಬೆಳ್ಚಡ, ಉಪಾಧ್ಯಕ್ಷ ಆನಂದ ಜೆ. ಬಂಗೇರ, ಉಪಾಧ್ಯಕ್ಷ ಪ್ರವೀಣ್ ಕೆ., ಜತೆ ಕಾರ್ಯದರ್ಶಿ ಜಯ ಎಂ. ಕೋಟ್ಯಾನ್, ಗೌರವ ಕೋಶಾಧಿಕಾರಿ ರಮೇಶ್ ಬಿ. ಸಾಲ್ಯಾನ್, ಜತೆ ಕೋಶಾಧಿಕಾರಿ ಮೃತ್ಯುಂಜಯ ಎಂ. ಬೆಳ್ಚಡ, ಪೂಜಾ ಸಮಿತಿಯ ಅಧ್ಯಕ್ಷ ವಸಂತ ಬಿ. ಕರ್ಕೇರ, ಪ್ರಧಾನ ಅರ್ಚಕ ಸದಾಶಿವ ಡಿ. ಕುಂದರ್ ಹಾಗೂ ಸದಸ್ಯ ಬಾಂಧವರ ನೇತೃತ್ವದಲ್ಲಿ ಈ ಧಾರ್ಮಿಕ ಪೂಜಾ ಕೈಂಕರ್ಯಗಳು ಜರಗಿತು.
ಅತಿಥಿಗಳಾಗಿ ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ವಿದ್ಯಾನಿಧಿ ಸಮಿತಿಯ ಕಾರ್ಯಾಧ್ಯಕ್ಷ ಪ್ರವೀಣ್ ಕೆ., ಹಿರಿಯ ನಿಷ್ಠಾ
ವಂತ ಕಾರ್ಯಕರ್ತ ಜಯ ಎಂ. ಕೋಟ್ಯಾನ್ ದಂಪತಿ ಮೊದಲಾದವರು ಉಪಸ್ಥಿತ
ರಿದ್ದರು. ಲಾಜರ್ ಟಿ. ಎಂ. ಕೋಟ್ಯಾನ್ ಅವರು ಅತಿಥಿಗಳನ್ನು ಗೌರವಿಸಿದರು. ಸಂಸ್ಥೆಯ ಸಕ್ರಿಯ ಸದಸ್ಯ, ಯಕ್ಷಗಾನ ಕಲಾವಿದ ರಾಜ ತುಂಬೆ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ರಮೇಶ್ ಬಿ. ಸಾಲ್ಯಾನ್ ವಂದಿಸಿದರು.
ಪ್ರಧಾನ ಅರ್ಚಕ ಸದಾಶಿವ ಡಿ. ಕುಂದರ್ ಹಾಗೂ ಪುರೋಹಿತ ವರ್ಗದವರ ಕೂಡುವಿಕೆಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರಗಿತು. ಪ್ರಧಾನ ಅರ್ಚಕ ಸದಾಶಿವ ಡಿ. ಕುಂದರ್ ಅವರ ಮುಂದಾಳತ್ವದಲ್ಲಿ ಬಳಿ ಉತ್ಸವ ನೆರವೇರಿತು. ದಿನೇಶ್ ಕೋಟ್ಯಾನ್ ಮತ್ತು ಬಳಗದವರು ವಾದ್ಯದಲ್ಲಿ, ಕೆ. ಕೆ. ದೇವಾಡಿಗ ಮತ್ತು ಬಳಗದವರು ಚೆಂಡೆ-ಮದ್ದಳೆಯಲ್ಲಿ ಸಹಕರಿಸಿದರು. ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು, ಭಕ್ತಾದಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Manada Kadalu: ಭಟ್ರು ಬರೆದ ಅನರ್ಥ ಹಾಡು: ಮನದ ಕಡಲಿನಲ್ಲಿ ತುರ್ರಾ…
Mangaluru: ಕುಡುಪು, ಮಂಗಳಜ್ಯೋತಿ ಬಳಿ ಅಂಡರ್‌ಪಾಸ್
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.