ಝಾನ್ಸಿ ರಾಣಿ ಉದ್ಯಾನ ಉಳಿಸಿ ಸಂಕಲ್ಪ ಯಾತ್ರೆ

Team Udayavani, Jun 10, 2018, 4:06 PM IST

0906mum06.jpg

ಮುಂಬಯಿ: ತುಳು- ಕನ್ನಡಿಗ, ಬಿಜೆಪಿ ಸಂಸದ ಗೋಪಾಲ್‌ ಶೆಟ್ಟಿ ಅವರ ನೇತೃತ್ವದಲ್ಲಿ ಝಾನ್ಸಿ  ರಾಣಿ ಉದ್ಯಾವನ ಉಳಿಸಿ ಸಂಕಲ್ಪ ಯಾತ್ರೆಯು ಜೂ. 9 ರಂದು ಬೆಳಗ್ಗೆ 7.30 ರಿಂದ ಬೊರಿವಲಿ ಪಶ್ಚಿಮದ ಪೊಯಿಸಾರ್‌ ಜಿಮ್ಖಾನದಲ್ಲಿ ಪ್ರಾರಂಭಗೊಂಡಿತು.

ಬೃಹತ್‌ ಪ್ರತಿಭಟನ ಯಾತ್ರೆ ಯು ಪೊಯಿಸಾರ್‌ ಜಿಮಾVನದ ನೇತಾಜಿ ಸುಭಾಶ್ಚಂದ್ರ ಬೋಸ್‌ ಕ್ರೀಡಾಂಗಣದಿಂದ ಆರಂಭ ಗೊಂಡು ಸಾವಿರಾರು ಕಾರ್ಯಕರ್ತರ ಉಪಸ್ಥಿತಿಯಲ್ಲಿ ವೀರ ಸಾವರ್ಕರ್‌ ಉದ್ಯಾನವನ ಮೂಲಕ ಝಾನ್ಸಿ  ರಾಣಿ ಜಾಗರ್ಸ್‌ ಪಾರ್ಕ್‌ಗೆ ಸಾಗಿತು. ಝಾನ್ಸಿ  ರಾಣಿ ಉದ್ಯಾನವನ್ನು ಮುಚ್ಚುವ ನ್ಯಾಯಾಲಯದ ಆದೇಶದ ವಿರುದ್ಧ ಈ ಸಂಕಲ್ಪ ಯಾತ್ರೆಯನ್ನು ಆಯೋಜಿಸ ಲಾಗಿದ್ದು, ಸಹಸ್ರ ಸಂಖ್ಯೆಯಲ್ಲಿ ಸಾರ್ವಜನಿಕರು, ತುಳು-ಕನ್ನಡಿಗರು  ಪಾಲ್ಗೊಂಡಿದ್ದರು.  

ಉದ್ಯಾನ ಉಳಿಸಿ ಉದ್ಘೋಷ 
ಸ್ಥಳೀಯ ಸಮಾಜ ಸೇವಕ ಹಾಗೂ ಬಂಟರ ಸಂಘ ಮುಂಬಯಿ ಉನ್ನತ ಶಿಕ್ಷಣ ಸಂಸ್ಥೆಯ ನೂತನ ಯೋಜನೆಯ ಉಪ ಕಾರ್ಯಾಧ್ಯಕ್ಷ ಎರ್ಮಾಳ್‌ ಹರೀಶ್‌ ಶೆಟ್ಟಿಯವರ ಹಾಗೂ ಇತರ ರಾಜಕೀಯ ಧುರೀಣರ ಸಹಕಾರದೊಂದಿಗೆ ನಮ್ಮ ನಡೆ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಉದ್ಯಾನವನವನ್ನು ಉಳಿಸುವ ಕಡೆ ಎಂಬ ಧ್ಯೇಯ ಘೋಷಣೆ ಯೊಂದಿಗೆ ಸಂಕಲ್ಪ ಯಾತ್ರೆಯು ನಡೆಯಿತು.

ಕಬಳಿಸುವ ವ್ಯವಸ್ಥಿತ ಕಾರ್ಯ
ಇದೇ ಸಂದರ್ಭದಲ್ಲಿ ಮಾತನಾ ಡಿದ ಸಂಸದ ಗೋಪಾಲ್‌ ಶೆಟ್ಟಿ ಅವರು, ಕೆಲವೊಂದು ಬುದ್ಧಿ ಜೀವಿ ಗಳೆನಿಸಿಕೊಂಡ ದುಷ್ಟಶಕ್ತಿಗಳು ಸಮಾಜ ಸುಧಾರಣೆಯ ಹೆಸರಿನಲ್ಲಿ ಜನತೆಯನ್ನು ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನು ತಪ್ಪುದಾರಿಗೆಳೆಯುವ ಸಂಚು ನಡೆಸುತ್ತಿರುವುದು ವಿಷಾದನೀಯ. ಇಂತಹ ಒಂದು ಸಮಾಜಘಾತುಕ ಶಕ್ತಿ  ಬೊರಿವಲಿ ಪಶ್ಚಿಮದಲ್ಲಿರುವ ಭಾರತದ ಧೀಮಂತ ಮಹಿಳೆ ಝಾನ್ಸಿ ರಾಣಿ ಲಕ್ಷ್ಮೀ ಬಾಯಿಯ ಹೆಸರಿನಲ್ಲಿ ನಿರ್ಮಿಸಲಾದ ಸುಂದರವಾದ ಉದ್ಯಾನವನ್ನು ಕೆಡವಲು ಮುಂದಾಗಿದೆ. ಅದಕ್ಕೆ ತಕ್ಕಂತೆ ನ್ಯಾಯಾಲಯದ ಆದೇಶ ಬಂದಿದೆ. ಈ ಪ್ರದೇಶದ ಅಭಿವೃದ್ಧಿಯನ್ನು ಸಹಿಸದ ಅವಕಾಶ ವಂಚಿತ ಇಲ್ಲಿನ ಸ್ವಾರ್ಥಿ ಬಿಲ್ಡರ್‌ಗಳು ಹಾಗೂ ಕೆಲ ವೊಂದು ಸಮಾಜಘಾತುಕ ಶಕ್ತಿಗಳು ಈ ಪ್ರದೇಶವನ್ನು ಕಬಳಿಸಲು ವ್ಯವಸ್ಥಿತವಾದ ಕಾರ್ಯ ತಂತ್ರಗಳನ್ನು ರೂಪಿಸುತ್ತಲೇ ಬಂದಿದ್ದಾರೆ. ಇವರುಗಳ ಕುತಂತ್ರಕ್ಕೆ ಪ್ರಸ್ತುತ ಬಂದಿರುವ ನ್ಯಾಯಾಲಯದ ಆದೇಶವಂತೂ ಇನ್ನಷ್ಟು ಕುಮ್ಮಕ್ಕನ್ನು ನೀಡಿದಂತಾಗಿದೆ. ನಾವು ಅಪ್ಪಟ ದೇಶಪ್ರೇಮಿಗಳಾಗಿದ್ದು, ದೇಶದ ಸಂವಿಧಾನವನ್ನು ಗೌರವಿಸುತ್ತೇವೆ. ನ್ಯಾಯಾಂಗ ವ್ಯವಸ್ಥೆಗೆ ಸಂಪೂರ್ಣ ತಲೆಬಾಗುತ್ತೇವೆ. ಆದರೆ ಈ ಉದ್ಯಾನವನ ಹಾಗೂ ಕ್ರೀಡೆಗಾಗಿ ಮೀಸಲಾಗಿರುವ ಜಮೀನಿನ ರಕ್ಷಣೆಗಾಗಿ ನಾವು ಸದಾ ಶಾಂತಿಯುತ ಹೋರಾಟವನ್ನು ಮಾಡುತ್ತಿರುತ್ತೇವೆ. ಇಂದಿನ ಸಂಕಲ್ಪ ಯಾತ್ರೆಗೆ ಉತ್ತಮವಾದ ಜನ ಬೆಂಬಲ ಸಿಕ್ಕಿದೆ. ನಮ್ಮ ಈ ಹೋರಾಟಕ್ಕೆ ಮತ್ತಷ್ಟು ಬಲಬಂದಂತಾಗಿದ್ದು, ಉದ್ಯಾವನದ ರಕ್ಷಣೆಗಾಗಿ ಮುಂದಿನ ದಿನಗಳಲ್ಲಿ ಯಾತ್ರೆಯು ಮತ್ತಷ್ಟು  ಶಕ್ತಿಯುತವಾಗಿ ಹೊರಹೊಮ್ಮಲಿದೆ ಎಂದು ನುಡಿದರು.

ಸಂಕಲ್ಪ ಯಾತ್ರೆಯಲ್ಲಿ ಸ್ಥಳೀಯ ಶಾಸಕಿ ಮನೀಷ ಚೌದ್ರಿ, ಸ್ಥಳೀಯ ಶಾಸಕ ಯೋಗೇಶ್‌ ಸಾಗರ್‌, ಎಂಎಲ್‌ಸಿ ಪ್ರವೀಣ್‌ ಧರೇಕರ್‌, ಮುಂಬಯಿ ಬಿಜೆಪಿ ಪ್ರಮುಖರಾದ ನ್ಯಾಯವಾದಿ ಜೆ. ಪಿ. ಮಿಶ್ರಾ, ಬಿಜೆಪಿ ಮುಂಬಯಿ ಅಧ್ಯಕ್ಷ ವಿನೋದ್‌ ಶೇಲಾರ್‌ ಹಾಗೂ ಬಿಜೆಪಿಯ ವಿವಿಧ ವಿಭಾಗಗಳ ಪದಾಧಿಕಾರಿಗಳು, ರಾಜಕೀಯ ಧುರೀಣರು  ಉಪಸ್ಥಿತರಿದ್ದರು.

ತುಳು-ಕನ್ನಡಿಗ ಧುರೀಣರಾದ ಬಂಟರ ಸಂಘ ಮುಂಬಯಿ ಉನ್ನತ ಶಿಕ್ಷಣ ಸಮಿತಿಯ ನೂತನ ಯೋಜನೆಯ ಕಾರ್ಯಾಧ್ಯಕ್ಷ ಮುಂಡಪ್ಪ ಪಯ್ಯಡೆ, ಬಂಟರ ಸಂಘ ಜೋಗೇಶ್ವರಿ – ದಹಿಸರ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ,  ಆಹಾರ್‌ನ ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ, ಮೀರಾರೋಡ್‌ ಬಿಜೆಪಿ ನಾಯಕ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ಉದಯ ಶೆಟ್ಟಿ ಮೀರಾರೋಡ್‌ ಹಾಗೂ ವಿವಿಧ ತುಳು-ಕನ್ನಡ, ಜಾತೀಯ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ತುಳು-ಕನ್ನಡಿಗರು, ವಿವಿಧ ಭಾಷಿಗರು, ಕಾರ್ಯಕರ್ತರು ಉಪಸ್ಥಿತರಿದ್ದರು.

ತುಳು-ಕನ್ನಡಿಗರಿಗೂ ಉಪಯೋಗ
ಉತ್ತರ ಮುಂಬಯಿ ಸಂಸದ ಗೋಪಾಲ್‌  ಶೆಟ್ಟಿ ಅವರು ಈಗಾಗಲೇ 20 ಉದ್ಯಾನವನಗಳನ್ನು ನಿರ್ಮಿಸಿದ್ದಾರೆ. ಇವುಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಗಾರ್ಡನ್‌, ಪೊಯಿಸಾರ್‌ ಜಿಮ್‌ಖಾನ, ವೀರ ಸಾವರ್ಕರ್‌ ಉದ್ಯಾನವನ ಇನ್ನಿತರ ಉದ್ಯಾನಗಳು ಸೇರಿಕೊಂಡಿವೆ. ವಿಶೇಷವೆಂದರೆ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಉದ್ಯಾನವನ್ನು ತಲಾಬ್‌ ಆಗಿ ಪರಿವರ್ತಿಸಬೇಕು. ಅದು ಗಾರ್ಡನ್‌ ಆಗಿರುವುದು ಸರಿಯಲ್ಲ ಎಂಬುದರ ವಿರುದ್ಧ ಸಂಸದ ಗೋಪಾಲ್‌ ಶೆಟ್ಟಿ ಅವರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಜಾನ್ಸಿ ರಾಣಿ ಲಕ್ಷ್ಮೀ ಬಾಯಿ ಉದ್ಯಾನವನದಿಂದ ಜನತೆಗೆ ಸಾಕಷ್ಟು ಉಪಯೋಗಗಳಾಗುತ್ತಿದ್ದು, ಇಲ್ಲಿ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರೂ ಇದರ ಉಪಯೋಗ ಪಡೆಯುತ್ತಿದ್ದಾರೆ. 

ಟಾಪ್ ನ್ಯೂಸ್

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Railway-Minister-MP-DK

Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.