ಜವಾಬ್ದಾರಿಯನ್ನು ಶ್ರದ್ಧಾಭಕ್ತಿಯಿಂದ ನಿರ್ವಹಿಸೋಣ: ಐಕಳ ಹರೀಶ್ ಶೆಟ್ಟಿ
Team Udayavani, May 7, 2022, 12:05 PM IST
ಮುಂಬಯಿ: ಮುಂಬಯಿ ಮಹಾನಗರದ ಎಲ್ಲ ತುಳು, ಕನ್ನಡಿಗರು ಗೋಕುಲದ ಶ್ರೀ ಗೋಪಾಲಕೃಷ್ಣ ದೇವರನ್ನು ಭಕ್ತಿಯಿಂದ ನಂಬಿಕೊಂಡು ಬಂದವರು. ಇದೀಗ ಬ್ರಹ್ಮಕಲಶೋತ್ಸವದ ಸುಸಂದರ್ಭ ಹೊರೆಕಾಣಿಕೆ ಮತ್ತು ಉತ್ಸವ ಮೆರವಣಿಗೆಯ ಅಭೂತಪೂರ್ವ ದೃಶ್ಯ ವೀಕ್ಷಿಸುವ ಅವಕಾಶ ನಮ್ಮೆಲ್ಲರಿಗೆ ದೊರೆತಿರುವುದು ಭಾಗ್ಯವೇ ಸರಿ. ಎಲ್ಲರೂ ಅವರವರ ಜವಾಬ್ದಾರಿಗಳನ್ನು ಶ್ರದ್ಧಾಭಕ್ತಿಯಿಂದ ನಿರ್ವಹಿಸುವ ಮೂಲಕ ಸಮಾರಂಭವನ್ನು ಮಹಾರಾಷ್ಟ್ರದ ಜನಮ ನದಲ್ಲಿ ಶಾಶ್ವತವಾಗಿ ಉಳಿಸೋಣ ಎಂದು ಹೊರೆಕಾಣಿಕೆ, ಮೆರವಣಿಗೆ ಸಮಿತಿಯ ಅಧ್ಯಕ್ಷ, ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು.
ಮಹಾನಗರದ ದಕ್ಷಿಣ ಕನ್ನಡ ಬ್ರಾಹ್ಮಣ ಸಮಾಜದ ಹಿರಿಯ ಸಂಸ್ಥೆ ಬಿಎಸ್‌ಕೆಬಿ ಅಸೋಸಿಯೇಶನ್ ಮುಂಬಯಿ ಆಡಳಿತದ ಸಾಯನ್ ಗೋಕುಲ ಶ್ರೀ ಗೋಪಾಲಕೃಷ್ಣ ಮಂದಿರದ ಬ್ರಹ್ಮಕಲಶೋತ್ಸವ ಮೇ 8ರಿಂದ 15ರ ವರೆಗೆ ನಡೆಯಲಿದ್ದು, ದೇವರ ಉತ್ಸವ ಮೆರವಣಿಗೆ ಮತ್ತು ಹೊರೆಕಾಣಿಕೆ ಸಮರ್ಪಣೆ ಮೇ 8ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೇ 4ರಂದು ಕುರ್ಲಾ ಪೂರ್ವದ ಬಂಟರ ಭವನದ ಅನೆಕ್ಸ್ ಸಂಕೀರ್ಣದಲ್ಲಿ ನಡೆದ ಸಮಾಲೋಚನ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಮಾತನಾಡಿ, ಈ ಮಹಾನಗರದಲ್ಲಿ ತುಳು ಕನ್ನಡಿಗರ ಸಾಂಘಿಕ ಶಕ್ತಿಯಾಗಿರುವ ಗೋಕುಲ ಕೃಷ್ಣ ಮಂದಿರದ ಬ್ರಹ್ಮಕಲಶೋತ್ಸವ ಹೊಸ ಇತಿಹಾಸ ನಿರ್ಮಿ ಸುವಂತಾಗಲು ಎಲ್ಲರೂ ಒಗ್ಗಟಾಗುವ ಅಗತ್ಯವಿದೆ. ಹೊರೆಕಾಣಿಕೆಗೆ ನಮ್ಮ ಸಂಘದ ಮತ್ತು ಪ್ರಾದೇಶಿಕ ಸಮಿತಿಗಳ ಸಹಕಾರದಿಂದ 3 ಲಕ್ಷ ರೂ. ನೀಡುತ್ತೇವೆ ಎಂದರು.
ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ಹರೀಶ್ ಜಿ. ಅಮಿನ್ ಮಾತನಾಡಿ, ತುಳು, ಕನ್ನಡಿಗರ ಕೀರ್ತಿ ತರುವ ಸೇವೆ ಗೋಕುಲದಲ್ಲಿ ನಡೆಯಲಿದ್ದು, ಉತ್ಸವ ಮೆರವಣಿಗೆ ತುಳು, ಕನ್ನಡಿಗರ ಒಗ್ಗಟ್ಟಿನ ಶಕ್ತಿಯಾಗಿದೆ. ಬಿಲ್ಲವರ ಅಸೋಸಿಯೇಶನ್‌ನ ವಿವಿಧ ಸ್ಥಳೀಯ ಕಚೇರಿಗಳ ಮೂಲಕ ಅಪಾರ ಸಂಖ್ಯೆಯಲ್ಲಿ ಮೆರವಣಿಗೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗಿಯಾಗುತ್ತೇವೆ. ಐಕಳ ಹರೀಶ್ ಶೆಟ್ಟಿಯವರ ಮುಂದಾಳತ್ವಕ್ಕೆ ನಮ್ಮೆಲ್ಲರ ಬೆಂಬಲವಿದೆ ಎಂದರು.
ಮುಲುಂಡ್ ಬಂಟ್ಸ್‌ನ ಅಧ್ಯಕ್ಷ ವಸಂತ್ ಶೆಟ್ಟಿ ಪಲಿಮಾರು ಮಾತನಾಡಿ, ಭವ್ಯ ಮಂದಿರವನ್ನು ಬಿಎಸ್‌ಕೆಬಿ ಅಸೋಸಿಯೇಶನ್ ನಿರ್ಮಿಸಿದೆ. ಈ ಸಂಸ್ಥೆಯ ಅಪಾರ ಜನ ಮುಲುಂಡ್ ಪರಿಸರದಲ್ಲಿ ಇದ್ದಾರೆ. ಅವರೆಲ್ಲರ ಸಹಕಾರದಿಂದ ಮತ್ತು ಮುಲುಂಡ್ ಬಂಟ್ಸ್ ವತಿಯಿಂದ 2 ಲಕ್ಷ ರೂ. ಹೊರೆಕಾಣಿಕೆಗೆ ನೀಡುತ್ತೇವೆ ಎಂದರು.
ಮೊಗವೀರ ವ್ಯವಸ್ಥಾಪಕ ಮಂಡಳಿಯ ಉಪಾಧ್ಯಕ್ಷ ಅಶೋಕ್ ಸುವರ್ಣ ಮಾತನಾಡಿ, ಉತ್ಸವ ಮೆರವಣಿಗೆ ಐಕಳ ಹರೀಶ್ ಶೆಟ್ಟಿಯವರ ನಾಯಕತ್ವದಲ್ಲಿ ಯಶಸ್ವಿಯಾಗುತ್ತದೆ. ತುಳು, ಕನ್ನಡಿಗರು ಒಗ್ಗಟ್ಟಿನಿಂದ ನಡೆಸುವ ಈ ಹೊರೆಕಾಣಿಕೆ ಸಮರ್ಪಣೆ ಪ್ರಥಮವಾಗಿದೆ. ಈ ದೇವಸ್ಥಾನ ಲೋಕಾರ್ಪಣೆಗೊಂಡ ಬಳಿಕ ತುಳು, ಕನ್ನಡಿಗರ ಕೀರ್ತಿಗೆ ಇನ್ನಷ್ಟು ಹೊಳಪು ಬರಲಿದೆ. ಮೊಗವೀರ ಮಂಡಳಿ ಮೂಲಕ ದೊಡ್ಡ ಮೊತ್ತ ನೀಡುವುದಾಗಿ ತಿಳಿಸಿದರು.
ಅಖೀಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ದೇವಾಡಿಗ ಮಾತನಾಡಿ, ಐಕಳ ಹರೀಶ್ ಶೆಟ್ಟಿ ಅವರಂತಹ ಸಮರ್ಥ ನಾಯಕ ಹೊರೆಕಾಣಿಕೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅವರೊಂದಿಗೆ ನಾವೆಲ್ಲರೂ ಕೈ ಜೋಡಿಸಬೇಕು. ದೇವಾಡಿಗ ಸಂಘದ ಎಲ್ಲ ಸದಸ್ಯರ, ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ದೊಡ್ಡ ಮೊತ್ತವನ್ನು ನೀಡುವುದಾಗಿ ತಿಳಿಸಿದರು.
ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ಮನೋಜ್ ಹೆಗ್ಡೆ ಮಾತನಾಡಿ, ಈಗಾಗಲೇ ನಾವು ನವಿಮುಂಬಯಿಯಲ್ಲಿ ಈ ಬ್ರಹ್ಮಕಲಶೋತ್ಸವ ಬಗ್ಗೆ ಸಭೆ ನಡೆಸಿದ್ದು, ಹೆಗ್ಗಡೆ ಸಮಾಜ ಬಾಂಧವರು ನವಿಮುಂಬಯಿಯಿಂದ ಹೊರಡುವ ದೇವರ ಮೂರ್ತಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸಾಯನ್ ಗೋಕುಲದವರೆಗೆ ಬರಲಿದ್ದಾರೆ. ಈ ಸಂದರ್ಭ ದೇಣಿಗೆ ನೀಡುವುದಾಗಿ ತಿಳಿಸಿದರು.
ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಅಧ್ಯಕ್ಷ ಮಹಾಬಲ ಕುಂದರ್ ಮಾತನಾಡಿ, ಉಚ್ಚಿಲದ ಮಹಾಲಕ್ಷ್ಮೀ ದೇವಸ್ಥಾನದ ಹೊರೆಕಾಣಿಕೆ ಮೆರವಣಿಗೆ ಹೊಸ ದಾಖಲೆ ನಿರ್ಮಿಸಿದೆ. ಅದನ್ನೀಗ ಮತ್ತೂಮ್ಮೆ ಮರುಕಳಿಸುವ ಕೆಲಸ ಆಗಬೇಕಾಗಿದೆ. ನಮ್ಮ ಸಂಘದ ಗೌರವ ಅಧ್ಯಕ್ಷ ಸುರೇಶ್ ಕಾಂಚನ್ ಮಾರ್ಗದರ್ಶನದಂತೆ ನಾವೆಲ್ಲರೂ ಒಗ್ಗಟ್ಟಾಗಿ ಐಕಳ ಹರೀಶ್ ಶೆಟ್ಟಿಯವರ ಸೇವಾ ಕಾರ್ಯಕ್ಕೆ ಕೈಜೋಡಿಸುವುದರೊಂದಿಗೆ ದೇಣಿಗೆ ನೀಡುತ್ತೇನೆ ಎಂದರು.
ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಅಧ್ಯಕ್ಷ ಸದಾನಂದ ಆಚಾರ್ಯ ಮಾತನಾಡಿ, ಡಾ| ಸುರೇಶ್ ರಾವ್ ಸಮಾಜವನ್ನು ಯಾವ ರೀತಿ ಪ್ರೀತಿಸುತ್ತಾರೆ ಎನ್ನುವುದಕ್ಕೆ ಕಟೀಲಿನಲ್ಲಿ ಆಸ್ಪತ್ರೆ ಮತ್ತು ಸಾಯನ್‌ನಲ್ಲಿ ಗೋಕುಲದ ಕೃಷ್ಣ ಮಂದಿರ ನಿರ್ಮಾಣವೇ ಸಾಕ್ಷಿ. ದೇವರ ಮೆರವಣಿಗೆ ಮತ್ತು ಹೊರೆಕಾಣಿಕೆ ಜವಾಬ್ದಾರಿಯನ್ನು ಐಕಳ ಹರೀಶ್ ಶೆಟ್ಟಿ ವಹಿಸಿಕೊಂಡಿದ್ದು, ನಾವೆಲ್ಲ ಸಹಭಾಗಿಗಳಾಗೋಣ. ವಿಶ್ವಕರ್ಮ ಬಂಧುಗಳು ಈ ಸೇವಾ ಕಾರ್ಯದಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂದರು.
ಕುಲಾಲ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ. ಸಾಲ್ಯಾನ್ ಮಾತನಾಡಿ, ಸಂಘದ ಪದಾಧಿಕಾರಿ ಗಳು, ಸ್ಥಳೀಯ ಸಮಿತಿಯ ಪದಾಧಿಕಾ ರಿಗಳು ಈಗಾಗಲೇ ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ. ಗೋಕುಲದ ಕೃಷ್ಣ ಮಂದಿರ ಬ್ರಹ್ಮಕಲಶೋತ್ಸವಕ್ಕೆ ಎಲ್ಲ ರೀತಿಯ ಸಹಕಾರವಿದೆ ಎಂದರು.
ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ ಮಾತನಾಡಿ, ಬಾಲ್ಯದಲ್ಲಿ ಸಾಯನ್ ಕೃಷ್ಣ ಮಂದಿರಕ್ಕೆ ನಿತ್ಯ ಹೋಗುತ್ತಿದ್ದೆ. ಇದೀಗ ಮಂದಿರ ಆಶ್ಚರ್ಯ ವಾಗುವ ರೀತಿಯಲ್ಲಿ ನಿರ್ಮಾಣಗೊಂಡಿದೆ. ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಸಮಾಜ ಬಾಂಧವರು ಕೈ ಜೋಡಿಸಲಿದ್ದಾರೆ. ಐಕಳ ಅವರ ನಾಯಕತ್ವ ಸಮರ್ಥವಾಗಿದೆ ಎಂದರು.
ಜೆರಿಮೆರಿ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಎಸ್. ಎನ್. ಉಡುಪ ಮಾತನಾಡಿ, ಭಕ್ತರೆ ಲ್ಲರೂ ಹೊರೆಕಾಣಿಕೆ ಮತ್ತು ದೇವರ ಮೆರವಣಿ ಗೆಯಲ್ಲಿ ಮಾತ್ರವಲ್ಲದೆ ಬ್ರಹ್ಮಕಲ ಶೋತ್ಸವದ ಪ್ರತೀದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಹೊರೆಕಾಣಿಕೆಗೆ ವೈಯಕ್ತಿಕವಾಗಿ 1 ಲಕ್ಷ ರೂ. ನೀಡುವುದಾಗಿ ಹೇಳಿದರು.
ಬಂಟರ ಸಂಘದ ಜ್ಞಾನ ಮಂದಿರದ ಕಾರ್ಯಾಧ್ಯಕ್ಷ ಕೃಷ್ಣ ಶೆಟ್ಟಿ, ಶ್ರೀ ದತ್ತಾತ್ರೇಯ ದುರ್ಗಾಂಬಾ ದೇವಸ್ಥಾನದ ಧರ್ಮದರ್ಶಿ ದೇವು ಪೂಜಾರಿ, ಥಾಣೆ ಬಂಟ್ಸ್‌ನ ಉಪಾಧ್ಯಕ್ಷ ಸುನಿಲ್ ಶೆಟ್ಟಿ, ಮುಂಬಯಿ ದೇವಾಡಿಗ ಸಂಘದ ಉಪಾಧ್ಯಕ್ಷ ಪ್ರವೀಣ್ ನಾರಾಯಣ ದೇವಾಡಿಗ ಉಪಸ್ಥಿತರಿದ್ದರು.
ಬಂಟರ ಸಂಘ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಆರ್.ಕೆ. ಶೆಟ್ಟಿ, ಕೋಶಾಧಿಕಾರಿ ಹರೀಶ್ ಶೆಟ್ಟಿ, ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಬಂಟರವಾಣಿಯ ಕಾರ್ಯಾಧ್ಯಕ್ಷ ರವೀಂದ್ರನಾಥ್ ಶೆಟ್ಟಿ, ಅಶೋಕ್ ಶೆಟ್ಟಿ ಪೆರ್ಮುದೆ, ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ, ವಸಾಯಿ ಡಹಾಣು ಪ್ರಾದೇಶಿಕ ಸಮಿತಿಯ ಸಂಚಾಲಕ ಜಯಂತ್ ಪಕ್ಕಳ, ಉಪಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಕಣಂಜಾರು, ಮುಲುಂಡ್ ಫ್ರೆಂಡ್ಸ್‌ನ ಅಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ನಾಡಿ, ಬಿಲ್ಲವರ ಅಸೋಸಿಯೇಶನ್ ಕಾರ್ಯದರ್ಶಿ ರಾಜೇಶ್ ಬಂಗೇರ, ಕೋಶಾಧಿಕಾರಿ ಹರೀಶ್
ಸಾಲ್ಯಾನ್ ಮತ್ತು ವಿವಿಧ ಸ್ಥಳೀಯ ಸಮಿ ತಿಗಳ ಪದಾಧಿಕಾರಿಗಳು, ತುಳುಕೂಟ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಸತೀಶ್ ಶೆಟ್ಟಿ ಹಾಗೂ ಮತ್ತಿತರ
ಜಾತೀಯ ಸಂಘಟನೆಗಳು, ದೇವಸ್ಥಾನಗಳ ಪದಾಧಿಕಾರಿಗಳು ಭಶಗವಹಿಸಿದ್ದರು. ವಿಜಯ್ ಶೆಟ್ಟಿ ಮೂಡುಬೆಳ್ಳೆ ಪ್ರಾರ್ಥನೆ ಗೈದರು. ಕಾರ್ಯಕ್ರ ಮವನ್ನು ಕುತ್ತೆತ್ತೂರು ವಿಜಯ್ ಶೆಟ್ಟಿ ನಿರೂಪಿಸಿದರು.
ನಲಸೋಪಾರ ಬಂಟರ ಸಂಘದ ಮೂಲಕ, ತುಳುಕೂಟದ ಮೂಲಕ ಮತ್ತು ಶನಿಮಂದಿರದ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ನನ್ನ ನಾಯಕತ್ವದಲ್ಲಿ ಯಶಸ್ವಿಗೊಂಡಿವೆ. ಇದಕ್ಕೆ ಮಾರ್ಗದರ್ಶಕರಾಗಿ ಐಕಳ ಸಹಕರಿಸಿದ್ದಾರೆ. ಅವರ ಮಾರ್ಗದರ್ಶದಲ್ಲಿ ಗೋಕುಲದ ಬ್ರಹ್ಮಕಲಶೋತ್ಸವದ ಉತ್ಸವ ಮೆರವಣಿಗೆ ಯಶಸ್ವಿಯಾಗಿ ನಡೆಯಲಿದೆ. ಈ ಸಭೆಯಲ್ಲಿ ಎಲ್ಲ ಸಮಾಜಗಳ ಜವಾಬ್ದಾರಿಯುತ ಜನರು ಸೇರಿರುವುದರಿಂದ ಮೆರವಣಿಗೆ ಮತ್ತು ಬ್ರಹ್ಮಕಲಶೋತ್ಸವ ಯಶಸ್ವಿಯಾಗುವುದು. ಈಗಾಗಲೇ ಬ್ರಹ್ಮಕಲಶೋತ್ಸದ ಸಭೆಯನ್ನು ಆಯೋಜಿಸಿದ್ದು, 3 ಲಕ್ಷ ರೂ. ದೇಣಿಗೆ ಸಂಗ್ರಹವಾಗಿದೆ. ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳುವ ಅಗತ್ಯವಿದೆ. ಎಲ್ಲರೂ ಬಿಳಿ ಪಂಚೆ ಮತ್ತು ಬಿಳಿ ಶರ್ಟ್ ಧರಿಸಿ ಭಾಗವಹಿಸಬೇಕು. ಎಲ್ಲ ಸಂಘಸಂಸ್ಥೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸಬೇಕೆಂಬ ಮನವಿ.–ಶಶಿಧರ್ ಕೆ. ಶೆಟ್ಟಿ ,ಸಂಚಾಲಕರು, ದೇವರ ಮೆರವಣಿಗೆ ಮತ್ತು ಹೊರೆ ಕಾಣಿಕೆ
ಭಾರೀ ಸಂಖ್ಯೆಯಲ್ಲಿ ಜಾತೀಯ ಮತ್ತು ತುಳು, ಕನ್ನಡ ಸಂಘಸಂಸ್ಥೆಗಳ ಪದಾಧಿಕಾರಿಗಳು ಸೇರಿರುವುದು ಬ್ರಹ್ಮಕಲಶೋತ್ಸವ ಅಭೂತಪೂರ್ವವಾಗಿ ನಡೆಯುವುದಕ್ಕೆ ಸಾಕ್ಷಿಯಾಗಿದೆ. ದೇವರ ಮೆರವಣಿಗೆ ಮತ್ತು ಹೊರೆಕಾಣಿಕೆ ಮೆರವಣಿಗೆ ಮರಾಠಿ ಮಣ್ಣಿನಲ್ಲಿ ಶಾಶ್ವತವಾಗಿ ಉಳಿಯುವಂತಾಗಲಿ. ಹರೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಮೆರವಣಿಗೆ ಯಶಸ್ವಿಯಾಗಲಿದೆ. ಕಟೀಲಿನ ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಇವರ ನಾಯಕತ್ವ ಕಾರಣವಾಗಿದೆ. ಗೋಕುಲದ ಕೃಷ್ಣ ಎಲ್ಲರ ಇಷ್ಟಾರ್ಥ ನೆರವೇರಿಸುವ ದೇವರು. ಸಹಸ್ರ ಸಂಖ್ಯೆಯಲ್ಲಿ ಭಕ್ತರು ಗೋಕುಲಕ್ಕೆ ಆಗಮಿಸಿ ದೇವರ ದರ್ಶನ ಪಡೆಯಬೇಕು. ಬ್ರಹ್ಮಕಲಶೋತ್ಸವದ ಪ್ರತೀದಿನದ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸಹಕರಿಸಿ.–ಡಾ| ಸುರೇಶ ರಾವ್, ಅಧ್ಯಕ್ಷರು, ಬಿಎಸ್‌ಕೆಬಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.