ಸಮುದ್ರ ಸೇತುವೆ ಯೋಜನೆ ಎಂಎಸ್‌ಆರ್‌ಡಿಸಿ ಟೆಂಡರ್‌ಗೆ ಯಾವುದೇ ಪ್ರತಿಕ್ರಿಯೆ ಇಲ್ಲ
Team Udayavani, Jul 6, 2021, 9:26 AM IST
ಮುಂಬಯಿ: ವರ್ಸೋವಾ ವಿರಾರ್ ಸಮುದ್ರ ಸೇತುವೆ ಯೋಜನೆಯನ್ನು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಎಂಎಸ್‌ಆರ್‌ಡಿಸಿ) ಕೈಗೆತ್ತಿಕೊಂಡಿದೆ.
ಯೋಜನೆಗಾಗಿ ವಿವರವಾದ ಡಿಪಿಆರ್‌ನ್ನು ಸಿದ್ಧಪಡಿಸಲು ಸಲಹೆಗಾರರನ್ನು ನೇಮಿಸಲು ಮುಂದಾಗಿದ್ದು, ಟೆಂಡರ್ ಅನ್ನು ಆಹ್ವಾನಿಸಲಾಗಿದೆ. ಆದರೆ ಟೆಂಡರ್‌ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾದ್ದರಿಂದ ಎಂಎಸ್‌ಆರ್‌ಡಿಸಿ ಟೆಂಡರ್ ಅನ್ನು ಒಂದು ತಿಂಗಳ ಕಾಲ ವಿಸ್ತರಿಸಬೇಕಾದ ಪರಿಸ್ಥಿತಿ ಇದೆ. ಯೋಜನೆ ಸ್ಥಗಿತಗೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಮುಂಬಯಿ ನಗರ ಮತ್ತು ಪಶ್ಚಿಮ ಉಪನಗರಗಳಲ್ಲಿನ ಸಂಚಾರ ದಟ್ಟಣೆಯನ್ನು ನಿವಾರಿಸುವುದರ ಜತೆಗೆ ದೂರವನ್ನು ಕಡಿಮೆ ಮಾಡಲು ಸಾಗರ ಸೇತು ಯೋಜನೆಯನ್ನು ಕೈಗೊಳ್ಳಲಾಗಿದೆ. ಅದರಂತೆ ವರ್ಲಿ-ಬಾಂದ್ರಾ ಸಮುದ್ರ ಸೇತುವೆಯನ್ನು ಪೂರ್ಣಗೊಳಿಸಿ ಸೇವೆಗೆ ಒದಗಿಸಲಾಗಿದೆ. ಬಾಂದ್ರಾ- ವರ್ಸೋವಾ ಸಮುದ್ರ ಸೇತುವೆ ನಿರ್ಮಾಣ ಹಂತದಲ್ಲಿದೆ. ಅದೇ ಸಮಯದಲ್ಲಿ ವರ್ಲಿಯಿಂದ ನೇರವಾಗಿ ವಿರಾರ್ ತಲುಪಲು 42.75 ಕಿ.ಮೀ. ಉದ್ದದ ವರ್ಸೊವಾದಿಂದ ವಿರಾರ್ ಸಮುದ್ರ ಸೇತುವೆಯನ್ನು ನಿರ್ಮಿಸಲು ಎಂಎಸ್‌ಆರ್‌ಡಿಸಿ ನಿರ್ಧರಿಸಿದೆ. 13,000 ಕೋಟಿ ರೂ. ಗಳ ಎಂಟು ಪಥಗಳ ಸಮುದ್ರ ಸೇತುವೆ ಇದಾಗಿದ್ದು, ಈ ಯೋಜನೆಗೆ ಫೆಬ್ರವರಿ 2020ರಲ್ಲಿ ಹಸುರು ನಿಶಾನೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.