ರಷ್ಯಾದ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನಕ್ಕೆ ಆಯ್ಕೆ


Team Udayavani, Jul 5, 2018, 2:54 PM IST

1-aa.jpg

ಮುಂಬಯಿ: ಗ್ಲೋಬಲ್‌ ಫೌಂಡೇಶನ್‌ ಅಚೀವರ್‌ (ಜಿಎಫ್‌ಎ) ಸಂಸ್ಥೆಯು ರಷ್ಯಾ ಟಸ್ಬೇಂಟ್‌ನ ಕುಶ್‌ಬೆಗಿ ಸ್ಟ್ರೀಟ್‌ನ ಅಮರ್‌ ಸಭಾಂಗಣದಲ್ಲಿ ಜು. 7 ರಂದು ಆಯೋಜಿಸಿರುವ ಜಾಗತಿಕ ಅರ್ಥಶಾಸ್ತ್ರದ ಬೆಳವಣಿಗೆ ಮತ್ತು ಸಾಮಾಜಿಕ ಅಭಿವೃದ್ಧಿ ವಿಚಾರಿತ ಮಹಾ ಸಮ್ಮೇಳನಕ್ಕೆ ಮುಂಬಯಿಯ ಮೂವರು ತುಳು-ಕನ್ನಡಿಗರು ಆಯ್ಕೆಯಾಗಿದ್ದಾರೆ.  ಸಮ್ಮೇಳನದಲ್ಲಿ ಸಮಾಜ ಸೇವಕ, ಕನ್ನಡ ಸಂಘ ಸಾಂತಾಕ್ರೂಜ್‌ ಅಧ್ಯಕ್ಷ ಎಲ್‌. ವಿ. ಅಮೀನ್‌, ವಾಸ್ತುತಜ್ಞ ಪಂಡಿತ್‌ ನವೀನ್‌ಚಂದ್ರ ಆರ್‌. ಸನಿಲ್‌ ಮತ್ತು ತೀಯಾ ಸಮಾಜ ಮುಂಬಯಿ  ಅಧ್ಯಕ್ಷ ಚಂದ್ರಶೇಖರ ಆರ್‌. ಬೆಳ್ಚಡ ಸಮ್ಮೇಳನಕ್ಕೆ ಆಯ್ಕೆಗೊಂಡಿದ್ದಾರೆ. ತಮ್ಮ ವಿಶೇಷ ಸಾಧನೆಗಳನ್ನು ಗುರುತಿಸಿ ಏಯಾ ಪೆಸಿಫಿಕ್‌ ಅಚೀವರ್ ಅವಾರ್ಡ್‌ನ್ನು ಗಣ್ಯರ ಸಮ್ಮುಖದಲ್ಲಿ ಪ್ರದಾನಿಸಿಗೌರವಿಸಲಾಗುವುದು.

ಎಲ್‌. ವಿ. ಅಮೀನ್‌ 
ಕನ್ನಡ ಸಂಘ ಸಾಂತಾಕ್ರೂಜ್‌ ಇದರ ಅಧ್ಯಕ್ಷರಾಗಿ, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಮಾಜಿ ಅಧ್ಯಕ್ಷರಾಗಿ, ಭಾರತ್‌ ಬ್ಯಾಂಕಿನ ಮಾಜಿ ನಿರ್ದೇಶಕರಾಗಿ, ಮುಂಬಯಿ ಪ್ರದೇಶ ಬಿಜೆಪಿ ಪಕ್ಷದ ಧುರೀಣರಾಗಿ, ಬಜ್ಪೆ ದೊಡ್ಡಿಕಟ್ಟೆ  ಶ್ರೀ ಸ್ವಯಂ ಭೂಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ,  ಆಡಳಿತ ಮಂಡಳಿ ಅಧ್ಯಕ್ಷರಾಗಿ, ಸಮಾಜ ಸೇವಕ, ಧಾರ್ಮಿಕ ಮುಂದಾಳುವಾಗಿ, ಅಂಬಿಕಾ ಮೌಲ್ಡ್‌ ಟೆಕ್‌ ಪ್ರೈವೇಟ್‌ ಲಿಮಿಟೆಡ್‌ (ಎಸ್ಸೆಲ್‌) ಸಂಸ್ಥೆಯ ಆಡಳಿತ ನಿರ್ದೇಶಕರಾಗಿ ಓರ್ವ ಯಶಸ್ವಿ ಉದ್ಯಮಿಯಾಗಿ ಎಲ್‌. ವಿ. ಅಮೀನ್‌ ಅವರು ನಗರದಲ್ಲಿ ಗುರುತಿಸಿಕೊಂಡಿದ್ದಾರೆ.

ಕಳೆದ ಎರಡೂವರೆ ದಶಕಗಳ ಕಾಲದಿಂದ ರಾಜಕರಣದಲ್ಲಿ ತೊಡಗಿಸಿಕೊಂಡಿರುವ ಇವರು, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ರಂಗದಲ್ಲಿ ಮಾಡಿದ ಸಾಧನೆ ಅಪಾರವಾಗಿದೆ. ಅವರ ಸಿದ್ಧಿ-ಸಾಧನೆಗಳಿಗೆ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ  ಸಂಸ್ಥೆಯು ಇವರ ಅನನ್ಯ ಸಮಾಜ ಮತ್ತು ರಾಜಕೀಯ ಕ್ಷೇತ್ರದ ಸೇವೆಗಾಗಿ ಸಮ್ಮಾನಿಸಿತ್ತು.  ಸಾಹಿತ್ಯ ಬಳಗ ಮುಂಬಯಿ, ಕರ್ನಾಟಕ ಮತ್ತು ತುಳು ಸಾಹಿತ್ಯ ಅಕಾಡೆಮಿ ಇನ್ನಿತರ ನೂರಾರು ಸಂಘಟನೆಗಳು ಸಮ್ಮಾನಿಸಿ ಗೌರವಿಸಿವೆ. “ಸಮಾಜ ರತ್ನ’ ಬಿರುದನ್ನು ಪಡೆದಿರುವ ಅವರು,  ಅಖೀಲ ಭಾರತ ಕನ್ನಡ ವಚನ ಸಾಹಿತ್ಯ ಸಮ್ಮೇಳನದಲ್ಲಿ ಭಾರತ “ಜ್ಯೋತಿ ಪುರಸ್ಕಾರ’ ನೀಡಿ ಸಮ್ಮಾನಿಸಿದೆ. ಕರ್ನಾಟಕ ಸಂಘ ಮುಂಬಯಿ  ಹಾಗೂ ರಂಗ ಸಮಾಜ ಸಂಸ್ಕೃತಿ  ಬೆಂಗಳೂರು ಅಯೋಜಿಸಿದ ಅಖೀಲ ಭಾರತ ಕನ್ನಡ ವಚನ ಸಾಹಿತ್ಯ ಸಮ್ಮೇಳನದಲ್ಲಿ “ಸುವರ್ಣ ಕನ್ನಡಿಗ’ ಪುರಸ್ಕಾರ, ಕನ್ನಡ ಸಂಘ ಸಾಂತಾಕ್ರೂಜ್‌ ಸುವರ್ಣ ಮಹೋತ್ಸವ ಸಮಾರಂಭದಲ್ಲಿ “ಸಮಾಜ ಭೂಷಣ’ ಪುರಸ್ಕಾರ ಇನ್ನಿತರ ಪ್ರಶಸ್ತಿ, ಬಿರುದು, ಪುರಸ್ಕಾರಗಳು ಲಭಿಸಿವೆ. ಕಲ್ವಾ ಫ್ರೆಂಡ್ಸ್‌ ವತಿಯಿಂದ “ಯಶಸ್ವಿ ಸಂಧಾನಕಾರ’ ಪ್ರಶಸ್ತಿ ನೀಡಿ ಗೌರವಿಸಿದೆ.

ಪಂಡಿತ್‌  ನ‌ವೀನ್‌ಚಂದ್ರ ಆರ್‌. ಸನಿಲ್‌ 
ಸ್ವಾತಂತ್ರÂ ಹೋರಾಟಗಾರ ಹಾಗೂ ಹೆಸರಾಂತ ಸಮಾಜ ಸೇವಕ ಮತ್ತು ಮುಂಬಯಿ ಶಿಕ್ಷಣ ಕ್ಷೇತ್ರದ ದಿಗ್ಗಜ ಉಡುಪಿ ಜಿಲ್ಲೆಯ ಬಡ ಎರ್ಮಾಳು ಗರಡಿ ಮನೆತನದ ದಿ| ರಾಮ ಬಿ. ಸನಿಲ್‌ ಮತ್ತು ಬಜ್ಪೆ ದೊಡ್ಡಿಕಟ್ಟೆ ಮನೆತನದ ಗುಲಾಬಿ ರಾಮ ಸನಿಲ್‌ ದಂಪತಿಯ ಪುತ್ರರಾಗಿರುವ ಇವರು, ಸ್ಥಾಪತ್ಯವೇದ ವಾಸ್ತು ಪಾರಂಗತ ಪಂಡಿತರೆಂದೇ ಪ್ರಸಿದ್ಧರು. ಸನಿಲ್‌ ಅವರು ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳಾದ್ಯಂತ ಸೇರಿದಂತೆ ಹತ್ತಾರು ಪ್ರಸಿದ್ಧ ದೇವಸ್ಥಾನಗಳ ವಾಸ್ತು ಸಲಹಾಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಮಸ್ಕತ್‌, ಒಮಾನ್‌, ಕುವೇಟ್‌   ಹಾಗೂ ಕತಾರ್‌ ರಾಷ್ಟ್ರಗಳಿಗೂ ಭೇಟಿಗೈದು ವಾಸ್ತು ಸಂಶೋಧನೆ ಮತ್ತು ಪರ್ಯಾಲೋಚನಾ ಅಧ್ಯಯನ ನಡೆಸಿದ್ದಾರೆ.  ವಾಸ್ತು ವಿದ್ಯಾಪಂಡಿತ್‌ ಮತ್ತು ವಾಸ್ತು ವಿಶಾರದ ಎಂಬ ಎರಡು ಪದವಿಗಳನ್ನು ಪಡೆದಿದ್ದಾರೆ. ಸುಮಾರು 46ಕ್ಕೂ ಅಧಿಕ ದೇವಸ್ಥಾನಗಳ ನಿರ್ಮಾಣಕ್ಕೆ ವಾಸ್ತುವಿನ ಸಲಹೆ ಸೂಚನೆಗಳನ್ನು ನೀಡಿ ಆ ಕ್ಷೇತ್ರಗಳ ಪ್ರಸಿದ್ಧಿಗೆ ಕಾರಣೀಭೂತರಾದ ಶ್ರೇಯಸ್ಸು ಇವರಿಗಿದೆ.

ಅವರ ಸಿದ್ಧಿ-ಸಾಧನೆಗಳಿಗೆ ಸಮಾಜ ರತ್ನ, ಜ್ಞಾನ ಸರಸ್ವತಿ, ಕರ್ನಾಟಕ ಚೇತನ, ಡಾ| ಬಿ. ಆರ್‌. ಅಂಬೇಡ್ಕರ್‌ ಪ್ರಶಸ್ತಿ, ಸಿದ್ಧಾರ್ಥ ಪ್ರಶಸ್ತಿ, ಕರ್ನಾಟಕ ಜ್ಯೋತಿ ಮುಂತಾದ ರಾಜ್ಯ ಪ್ರಶಸ್ತಿಗಳು ತಮ್ಮ ಶ್ರೇಯಸ್ಸಿನ ಮಡಿಲನ್ನು ಸೇರಿದೆ. ಅಲ್ಲದೆ ಸ್ವಾಮಿ ವಿವೇಕಾನಂದ ರಾಷ್ಟ್ರ ಪ್ರಶಸ್ತಿ ಮತ್ತು ಅಬುಧಾಬಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ವಿಶ್ವಮಾನ್ಯರು ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಹಿರಿಮೆ ಇವರದ್ದು. ವಾಸ್ತು ವಿಜ್ಞಾನ ಅಧ್ಯಯನಕ್ಕಾಗಿ ವಾಸ್ತುಮಾರ್ತಾಂಡ ಬಿರುದಿನೊಂದಿಗೆ  “ವಾಸ್ತು ವಿದ್ಯಾ ಪಂಡಿತ್‌’ ಮತ್ತು “ವಾಸ್ತು ವಿಷಾರದ’ ವಿದ್ಯೆಯನ್ನು ಕರಗತ ಮಾಡಿ ಕೊಂಡಿದ್ದಾರೆ.  ಪ್ರತಿಷ್ಠಿತ “ಸೌರಭ ಪ್ರಶಸ್ತಿ’ ಭಾಜನರಾದ ಇವರು “ವಾಸ್ತು ಮಾರ್ತಾಂಡ’ ಪಂಡಿತರಾಗಿಯೇ ಪ್ರಸಿದ್ಧರು.

ಚಂದ್ರಶೇಖರ ಆರ್‌. ಬೆಳ್ಚಡ 
ಮೂಲತಃ ಕಟೀಲಿನ  ರಾಮ ತಿಮ್ಮಪ್ಪ ಮತ್ತು ಸೀತು ರಾಮ ದಂಪತಿಯ ಪುತ್ರರಾಗಿರುವ ಇವರು, ಕಟೀಲ್‌ನಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದು, ಮುಂಬಯಿಗೆ ಆಗಮಿಸಿ  ವಾಣಿಜ್ಯ ಪದವಿಯನ್ನು ಪಡೆದರು. ರಿಫ್ರಾÂಕ್ಚರ್‌ ಮೆಟೀರಿಯಲ್‌  ಕಂಪೆನಿಯಲ್ಲಿ ಕೆಲಸ ಆರಂಭಿಸಿದ ಇವರು, ಮುಂದೆ ಉನ್ನತ ಶಿಕ್ಷಣ ಪೂರೈಸಿ,  ಉಪನಗರ ಥಾಣೆಯಲ್ಲಿ ತನ್ನದೇ ಆದ ಸ್ವಂತದ ಪಿ. ಪಿ. ರೆಫÅಕ್ಟೊರೀಸ್‌ ಕಾರ್ಪೊರೇಶನ್‌ ಸಂಸ್ಥೆಯನ್ನು ರೂಪಿಸಿಕೊಂಡರು.

ಸಮಾಜ ಸೇವೆಯಲ್ಲೂ ವಿಶೇಷ ಆಸಕ್ತಿಯನ್ನು ಹೊಂದಿರುವ ಇವರು, ರೋಟರಿ ಕ್ಲಬ್‌ ಆಫ್‌ ಮುಂಬಯಿ ಇದರ ಮುಲುಂಡ್‌ ಪೂರ್ವ ವಲಯದ ಅಧ್ಯಕ್ಷರಾಗಿ  ಜಿಲ್ಲಾ ಮಟ್ಟದಲ್ಲಿ ರೋಟರಿ ಇಂಟರ್‌ನ್ಯಾಷನಲ್‌ ಗೋಲ್‌ ಪೂರ್ಣಗೊಳಿಸುವ ಮೂಲಕ ತನ್ನ ಸೇವೆಯನ್ನು ಸಮಾಜ ಮುಖೀಯನ್ನಾಗಿಸಿಕೊಂಡರು. ಪ್ರಸ್ತುತ  ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ  ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಗ್ರ ಸಮೂದಾಯಗಳ ಜನತೆಯಲ್ಲಿ ಆತ್ಮೀಯರಾಗಿ, ಯುವ ನಾಯಕರಾಗಿ ಅತ್ಯುತ್ತಮ ಸಂಘಟನಾ ಚತುರರು ಎಂದೇ ಗುರುತಿಸಲ್ಪಟ್ಟ ಇವರು ತನ್ನ ಸ್ವ ಸಮುದಾಯವಾದ ತೀಯಾ ಸಮಾಜ ಮುಂಬಯಿ ಇದರ ಅಧ್ಯಕ್ಷರಾಗಿ ಮೂರನೇ ಅವಧಿಗೆ ಸರ್ವಾನುಮತದಿಂದ ಆಯ್ಕೆಯಾದ ಧುರೀಣರಾಗಿದ್ದಾರೆ. ತೀಯಾ ಸಮಾಜ ಮುಂಬಯಿ ಇದರ ಮುಖವಾಣಿ “ತೀಯಾ ಜ್ಯೋತಿ’ ಮಾಸಿಕಕ್ಕೆ ಹೊಸದಾಗಿ “ತೀಯಾ ಬೆಳಕು’ ಎಂದು ನಾಮಕರಣ ಮಾಡಿ ಮೌಲ್ಯಯುತ ಬರವಣಿಗೆ ಮೂಲಕ ಸಮಾಜದ ಜನತೆಗೆ ಒದಗಿಸುವಲ್ಲಿ ದಿಟ್ಟ ಹೆಜ್ಜೆಯನ್ನಿರಿಸಿದರು. ಅವರ ಸಿದ್ಧಿ-ಸಾಧನೆಗಳಿಗೆ ಸಮ್ಮಾನ, ಪುರಸ್ಕಾರಗಳು ಲಭಿಸಿವೆ.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಂಡನ್: ಶ್ರೀ ರಾಘವೇಂದ್ರ ತೀರ್ಥರ ಹೊಸ ಆವರಣಕ್ಕೆ ಸಂಗೀತ ನೃತ್ಯ ಸೇವೆ

ಲಂಡನ್: ಶ್ರೀ ರಾಘವೇಂದ್ರ ತೀರ್ಥರ ಹೊಸ ಆವರಣಕ್ಕೆ ಸಂಗೀತ ನೃತ್ಯ ಸೇವೆ

Desi Swara: ವಾರಾಣಸಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಮನೆ

Desi Swara: ವಾರಾಣಸಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಮನೆ

Desi Swara: ತಪ್ಪು ಮಾಡದವ್ರು ಯಾರವ್ರೆ, ತಪ್ಪೇ ಮಾಡದವ್ರು ಎಲ್ಲವ್ರೇ ?

Desi Swara: ತಪ್ಪು ಮಾಡದವ್ರು ಯಾರವ್ರೆ, ತಪ್ಪೇ ಮಾಡದವ್ರು ಎಲ್ಲವ್ರೇ ?

Desi Swara: ಪ್ರಸಿದ್ಧ ದುಬೈ ಗಡಿನಾಡ ಉತ್ಸವ ಸಂಭ್ರಮ

Desi Swara: ಪ್ರಸಿದ್ಧ ದುಬೈ ಗಡಿನಾಡ ಉತ್ಸವ ಸಂಭ್ರಮ

Desi Swara: ನ್ಯೂಯಾರ್ಕ್‌-“ಮಿಸ್‌ ಇಂಡಿಯಾ’ ಕಿರೀಟ ಗೆದ್ದ ಮೊದಲ ಕನ್ನಡತಿ ಜೀವಿಕಾ

Desi Swara: ನ್ಯೂಯಾರ್ಕ್‌-“ಮಿಸ್‌ ಇಂಡಿಯಾ’ ಕಿರೀಟ ಗೆದ್ದ ಮೊದಲ ಕನ್ನಡತಿ ಜೀವಿಕಾ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.