ಸೇವೆ ಎಂಬುದು ಹೃದಯದಿಂದ ಬರಬೇಕು: ಭಗತ್ ಸಿಂಗ್ ಕೋಶ್ಯಾರಿ
ಬಂಟರ ಸಂಘ, ಬಿಲ್ಲವರ ಅಸೋಸಿಯೇಶನ್‌ಗೆ ರಾಜ್ಯಪಾಲರಿಂದ ಅಭಿನಂದನೆ
Team Udayavani, Jan 9, 2021, 6:54 PM IST
ಮುಂಬೈ: ಕೋವಿಡ್ ಲಾಕ್‌ಡೌನ್ ಸಂಕಷ್ಟದ ಸಂದರ್ಭದಲ್ಲಿ ಹಗಲಿರುಳು ಜನಸೇವೆಗೈದು ಎಲ್ಲರ ಪ್ರಶಂಸೆಗೆ ಪಾತ್ರವಾದ ನಗರದ ಪ್ರತಿಷ್ಠಿತ ಬಂಟರ ಸಂಘ ಮುಂಬಯಿ ಮತ್ತು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಘಟನೆಗಳನ್ನು, ಕನ್ನಡಿಗ ವೈದ್ಯರು, ಸಮಾಜ ಸೇವಕರು ಹಾಗೂ ಕೋವಿಡ್ ಯೋಧರನ್ನು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ರಾಜಭವನದಲ್ಲಿ ಜ. 7ರಂದು ಸಮ್ಮಾನಿಸಿ ಗೌರವಿಸಿದರು.
ಸಮಾರಂಭವನ್ನು ಪೊಯಿಸರ್ ಜಿಮ್ಖಾನಾ ಮತ್ತು ಪವನ್ ಧಾಮ್ ಹಾಗೂ ಇತರ ಸಂಸ್ಥೆಗಳು ಆಯೋಜಿಸಿದ್ದವು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್. ಪೂಜಾರಿ, ಬಂಟರ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಸುಧಾಕರ ಎಸ್. ಹೆಗ್ಡೆ, ಡಾ| ಅನೂಪ್ ಹೆಗ್ಡೆ, ಪೊಯಿಸಾರ್ ಜಿಮಾನದ ಕರುಣಾಕರ ಶೆಟ್ಟಿ, ಬಿ. ಎಂ. ಶೆಟ್ಟಿ, ಬಂಟರ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಡಾ| ಪಿ. ವಿ. ಶೆಟ್ಟಿ, ವಿಶ್ವನಾಥ ಶೆಟ್ಟಿ, ಆರ್. ಸಿ. ಶೆಟ್ಟಿ, ಸಿಎ ಶಂಕರ್ ಶೆಟ್ಟಿ, ಪಿ. ಸಿ. ಶೆಟ್ಟಿ, ಪರಾಗ್ ಉಲ್ಲಾಳ್, ಬಿಲ್ಲವರ ಅಸೋಸಿಯೇಶನ್ ಮಾಜಿ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್ ಮೊದಲಾದವರನ್ನು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಜನಸೇವಾ ಸದ್ಭಾವನ ಪುರಸ್ಕಾರವನ್ನಿತ್ತು ಗೌರವಿಸಿ ಅಭಿನಂದಿಸಿದರು.
ಸಂಕಷ್ಟದಲ್ಲಿದ್ದವರಿಗೆ ಸಹಕರಿಸುವುದು ಮಾನವೀಯತೆ: ಗೋಪಾಲ್ ಶೆಟ್ಟಿ ಸರ್ವೋತ್ಕೃಷ್ಟ ಸಂಸದ ಮಾನ್ಯತೆ ಪಡೆದ ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ. ಶೆಟ್ಟಿ ಅವರು ಜನಪ್ರತಿನಿಧಿತ್ವದ ಸೇವೆಯಲ್ಲಿ ಸಹಕಾರವಿತ್ತ ಈ ಸಂಘ-ಸಂಸ್ಥೆಗಳ ಮುಂದಾಳುಗಳಿಗೆ ಕೃತಜ್ಞತೆ ಸಲ್ಲಿಸಿ, ಬಂಟರ ಸಂಘ ಮತ್ತು ಬಿಲ್ಲವರ ಅಸೋಸಿಯೇಶನ್ ಕೊರೊನಾಸಂಕಷ್ಟದ ಸಂದರ್ಭದಲ್ಲಿ ಸಮಾಜ ಬಾಂಧವರು ಸಹಿತ ಇನ್ನಿತರ ಭಾಷಿಕರಿಗೆ ಹಗಲಿರುಳು ಸಹಾಯಹಸ್ತ ಚಾಚಿರುವುದು ಸಾಮಾನ್ಯ ವಿಷಯವಲ್ಲ. ಎರಡೂ ಸಂಸ್ಥೆಗಳ ಪ್ರಾದೇಶಿಕ ಸಮಿತಿಗಳು ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿವೆ. ಸಂಕಷ್ಟದಲ್ಲಿದ್ದವರಿಗೆ ಸಹಕರಿಸುವುದು ಮಾನವೀಯ ಗುಣ.
ರಾಜ್ಯದ ಅಭಿವೃದ್ಧಿಗೆ ಮುಂಬಯಿ ಕನ್ನಡಿಗರ ಕೊಡುಗೆ ಅಪಾರವಾಗಿದೆ ಎಂದರು. ಸಮಾರಂಭದಲ್ಲಿ ಶಾಸಕ ಪರಾಗ್ ಶಾ, ಭಾರತ್ ವಿಕಾಸ್ ಸಂಸ್ಥೆಯ ಅಧ್ಯಕ್ಷ ಡಾ| ಯೋಗೇಶ್ ದುಬೆ, ಪೊಯಿಸರ್ ಜಿಮಾನದ ಕರುಣಾಕರ ಶೆಟ್ಟಿ, ಹರ್ಷದ್ ಮೆಹ¤ ಮತ್ತು ಬಂಟರ ಸಂಘ ಮುಂಬಯಿ ಮತ್ತು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮುಖಂಡರು ಉಪಸ್ಥಿತರಿದ್ದರು. \ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಮಾತನಾಡಿ, ಕೋವಿಡ್ ಸಾಂಕ್ರಾಮಿಕ ಅವಧಿಯಲ್ಲಿ ವೈದ್ಯರು ಮತ್ತು ಸಾಮಾಜಿಕ ಕಾರ್ಯಕರ್ತರು ನಿಸ್ವಾರ್ಥವಾಗಿ ಸಂಕಷ್ಟ ದಲ್ಲಿದ್ದವರ ಸೇವೆ ಮಾಡಿರುವುದು ಅಭಿನಂದನೀಯ.
ಇದನ್ನೂ ಓದಿ:ಬಂಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್: ಪ್ರಶಸ್ತಿ ಜಯಿಸಿದ ಥಾಣೆ ಬಂಟ್ಸ್ ತಂಡ
ವೈದ್ಯರು, ದಾದಿಯರು, ಪೊಲೀಸ್ ಸಿಬಂದಿ ಸಹಿತ ಕೊರೊನಾ ವಾರಿಯರ್ಸ್ ಸಮರ್ಪಿತ ಕಾರ್ಯದಿಂದಾಗಿ ದೇಶವು ಕೋವಿಡ್ ಪ್ರಕರಣಗಳನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ. ಅರೆವೈದ್ಯಕೀಯ ಸಿಬಂದಿ, ಲೋಕೋಪಕಾರಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ಕಾರ್ಯವೈಖರಿ ಅಭಿನಂದನೀಯ. ಒಂದು ಸಮಾಜವು ತ್ಯಾಗದ ಬಲ ಮತ್ತು ಸಮರ್ಪಿತ ಸೇವೆಯ ಮೇಲೆ ನಿಂತಿದೆ ಎಂದು ತಿಳಿಸಿದ ರಾಜ್ಯಪಾಲರು, ಸಮಾಜಕ್ಕೆ ನೀಡಿದ ಕೊಡುಗೆಗಳಿಗಾಗಿ ಮುಂಬಯಿ ಬಂಟರ ಸಂಘ ಮತ್ತು ಬಿಲ್ಲವರ ಅಸೋಸಿಯೇಶನ್ ಸಂಸ್ಥೆಗಳನ್ನು ಅಭಿನಂದಿಸಿದರು.
ಸೇವೆ ಎಂಬುವುದು ಹೃದಯದಿಂದ ಬರಬೇಕು. ಆಗ ಮಾತ್ರ ನಮಗೆ ಆ ಸೇವೆಯಿಂದ ಸಂತೃಪ್ತಿ ಸಿಗಲು ಸಾಧ್ಯ. ಕೋವಿಡ್ ಪೀಡಿತ ರೋಗಿಗಳಿಗೆ ರೋಗಿಗಳಿಗೆ ಮತ್ತು ನಿರ್ಗತಿಕರಿಗೆ ಸಲ್ಲಿಸಿದ ಸೇವೆಯು ದೇವರ ಸೇವೆಗಿಂತ ದೊಡ್ಡ ಕಾರ್ಯವಾಗಿದೆ. ಈ ಸೇವೆಗಾಗಿ ಕೊರೊನಾ ಯೋಧರು ಅಭಿನಂದರ್ನಾಹರು.
ಹಲವಾರು ಸಂಘ ಟನೆಗಳ ಕಾರ್ಯಕರ್ತರು ಜನತಾ ಸೇವೆಯೇ ಜನಾರ್ದನ ಸೇವೆ ಎಂಬ ಮಹಾನ್ ಮನೋಭಾವದಿಂದ ಕೆಲಸ ಮಾಡಿದ್ದರಿಂದ ಸಂಕಷ್ಟಕ್ಕೀಡಾದವರ ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಯಿತು. ಹೊರನಾಡ ಕನ್ನಡಿಗರು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಕ್ರೀಡೆ, ವೈದ್ಯಕೀಯ ಇನ್ನಿತರ ಕ್ಷೇತ್ರಗಳಲ್ಲಿ ಮಾಡುತ್ತಿರುವ ಸೇವೆ ಅಭಿನಂದನೀಯ. ರಾಜ್ಯದ ಅಭಿವೃದ್ಧಿಯಲ್ಲಿ ಕನ್ನಡಿಗರ ಪಾಲು ಅಪಾರವಾಗಿದೆ ಎಂದು ತಿಳಿಸಿದ ರಾಜ್ಯಪಾಲರು, ಸಮಸ್ತ ಕನ್ನಡಿಗರಿಗೆ ಶುಭ ಹಾರೈಸಿದರು. ಸಮಾರಂಭದಲ್ಲಿ ಪವಾನ್‌ಧಾಮ್ ವತಿಯಿಂದ ಡಾ| ಹಸ್ಮುಖ್ ಠಕ್ರಾಲ…, ಡಾ| ಬಿಪಿನ್ ದೋಶಿ, ಡಾ| ನಿಗಮ್ ವೋರಾ, ಡಾ| ಸೌರಭ್ ಸಂಗೋರ್, ಡಾ| ಅಜಿತ್ ವೈಂಗಂಕರ್, ಡಾ| ಪೃತೇಶ್ ಪಂಜಾಬಿ, ಡಾ| ಅಲೋಕ್ ಸಿಂಘಿ, ಡಾ| ದಿನೇಶ್ ಮೋದಿ, ನೀರವ್ ದೋಶಿ ಅವರನ್ನು ರಾಜ್ಯಪಾಲರು ಗೌರವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.