ನೂತನ ಅನುಭವ ನೀಡಿದ ಶ್ರೀ ಶನಿಪೂಜಾ ಸಹಿತ ತಾಳಮದ್ದಳೆ


Team Udayavani, Jul 19, 2017, 3:53 PM IST

17-Mum03.jpg

ಕಳೆದ ಶತಮಾನದ ಆರಂಭದಿಂದ ಮುಂಬಯಿ ಮಹಾನಗರದಲ್ಲಿ ವಿಶೇಷವಾಗಿ ಫೋರ್ಟ್‌ ವಿಭಾಗದಲ್ಲಿ ಶನಿಮಹಾಪೂಜೆಯು ಜರಗುತ್ತಿತ್ತು. ಬಯಲು ಸೀಮೆಯ ಕವಿ ಚಿನ್ಮಯ ದಾಸರು ರಚಿಸಿದ ಯಕ್ಷಗಾನ ಶನಿಮಹಾತೆ¾ಯೆ ಇದಕ್ಕೆ ಆಧಾರ ಗ್ರಂಥವಾಗಿದೆ. ಅದರಲ್ಲಿ ವಿವರಿಸಿದ ಪೂಜಾ ವಿಧಾನವೇ ಶನಿಪೂಜೆಗೆ ಆಧಾರ. ವೈದಿಕರು ವಿರಚಿಸುವ ನವಗ್ರಹ ಶಾಂತಿ, ಶನಿಶಾಂತಿಗಳಿಗೆ ಮತ್ತು ಈ ಶನಿಪೂಜಾ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಶನಿದೇವರ ಫೋಟೊ ಇಟ್ಟು ಸರಳ ವಿಧಾನದಿಂದ ಪೂಜಾ ವಿಧಿಗಳನ್ನು ಮಾಡಿ ಅನಂತರ ಗ್ರಂಥ ದಲ್ಲಿನ ಹಾಡುಗಳನ್ನು ಒಬ್ಬರು ಹಾಡುವುದು, ಇನ್ನೊಬ್ಬರು ಅದರ ಅರ್ಥ ಹೇಳುವುದು. ಅದು ಪ್ರವಚನ ರೂಪದಲ್ಲಿ ತುಳು ಭಾಷೆಯಲ್ಲಿಯೇ ಅರ್ಥ ವಿವರಣೆ ನೀಡಿ, ಕೊನೆಗೆ ಮಂಗಳವಾಗಿ ಪ್ರಸಾದ ವಿತರಣೆಯಲ್ಲಿ ಕಾರ್ಯಕ್ರಮ ಮುಗಿಯುತ್ತಿತ್ತು. ಇದು ಇಡೀ ರಾತ್ರಿಯ ಕಾರ್ಯಕ್ರಮವಾಗಿತ್ತು.

ಆದರೆ ಪ್ರಸ್ತುತ ಕಾಲ ಬದಲಾಗಿದೆ. ಚಿನ್ಮಯ ದಾಸರ ಕೃತಿಯ ಎರಡು ಪುಟ ಓದಿ ಅನಂತರ ಯಕ್ಷಗಾನ ತಾಳಮದ್ದಳೆ ಕ್ರಮದಲ್ಲಿ ಜರಗಲು ಪ್ರಾರಂಭವಾಯಿತು. ಮೊದಲು ಹಿಮ್ಮೇಳ ಅನಂತರ ಯಕ್ಷಗಾನದ ಅರ್ಥಧಾರಿ ಕಲಾವಿದರು ಶನಿ ಪೂಜೆಯಲ್ಲಿ ಭಾಗವಹಿಸಲು ಪ್ರಾರಂಭವಾದದ್ದು ಈಗ ಇತಿಹಾಸ. 

ತಾಳಮದ್ದಳೆಗೆ ಸೀತಾ ನದಿ ಗಣಪಯ್ಯ ಶೆಟ್ಟಿ ವಿರಚಿತ ಪ್ರಸಂಗ  ಉಪಯೋಗಿಸಲ್ಪಡು ತ್ತಿತ್ತು. ಈ ಪ್ರಸಂಗ ಚಿನ್ಮಯ ದಾಸರ ಕೃತಿಯ ಆಧಾರದಿಂದಲೇ ರಚನೆಗೊಂಡಿದ್ದರೂ ಯಕ್ಷಗಾನ ಬಯಲಾಟಕ್ಕೆ ಅನುಕೂಲವಾಗುವಂತೆ ಇದರ ರಚನೆಯಾಗಿರುತ್ತದೆ.

ಆದರೆ ಶನಿಪೂಜಾ ಮಂಡಳಿ ಪಕ್ಷಿಕೆರೆ ತಂಡದ ಕಲಾವಿದರು ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಆಯೋಜನೆಯಲ್ಲಿ ಜೂ. 24 ರಿಂದ ಜು. 1 ರ ವರೆಗೆ ನಗರ ಹಾಗೂ ಉಪನಗರಗಳಲ್ಲಿ ಆರು ಶನಿಪೂಜಾ ಸಹಿತ ತಾಳಮದ್ದಳೆಯನ್ನು ಆಯೋಜಿಸಿ ಮುಂಬಯಿ ಕಲಾಭಿಮಾನಿಗಳಿಗೆ ವಿನೂತನ ಅನುಭನವವನ್ನು ನೀಡಿತ್ತು. ಪಕ್ಷಿಕೆರೆ ಶನಿಪೂಜೆಯ ಬಗ್ಗೆ ಹೇಳುವುದಾದರೆ ಅವರ ಪೂಜಾ ವಿಧಿ ವಿಧಾನಗಳು ಶ್ರೀ ಸತ್ಯನಾರಾಯಣ ಕಥಾ ಪೂಜೆಯನ್ನು ಹೋಲುತ್ತಿದ್ದರೆ, ಪ್ರಸಂಗದಲ್ಲಿ ನಂದಿ ಶೆಟ್ಟಿ, ರಾಮಗಾಣಿಗರಿಗೆ ಹೆಚ್ಚಿನ ಅವಕಾಶದಿಂದ ಹಾಸ್ಯವೇ ಪ್ರಧಾನವಾಯಿತು.

ವಿಕ್ರಮಾದಿತ್ಯ,  ಚಂದ್ರಸೇನನ ನಿರೂಪಣೆ, ಸರಪಾಡಿ ಅಶೋಕ್‌ ಶೆಟ್ಟಿ ಅವರ ಶನಿಯ ಪಾತ್ರವೂ ಉತ್ತಮವಾಗಿತ್ತು. ಕುದುರೆ ವ್ಯಾಪಾರಿಯಾಗಿ ಬಂದ ಶನಿದೇವನ ಪಾತ್ರ ಸಭಿಕರನ್ನು ನಡೆಗಡಲಲ್ಲಿ ತೇಲಿಸುವುದರಲ್ಲಿ ಯಶಸ್ವಿಯಾದರೂ ಶನಿದೇವರು ಕುದುರೆ ವ್ಯಾಪಾರಿ ಯಾಗಿ ಬಂದಿರುವುದು ವಿನಃ ಅನ್ಯ ಧರ್ಮ ಪ್ರಶಂಸೆಗೆ ಅಲ್ಲ ಎಂಬು ದಾಗಿ ರಾಜಾಜ್ಞೆಯಾದ ಕೂಡಲೆ  ಎಳನೀರು ಮತ್ತು ಫಲವಸ್ತುಗಳ ಅರ್ಪಣೆ, ಸಭೆಗೆ ಬಾಳೆ ಹಣ್ಣು ವಿತರಣೆ ಹಾಗೆಯೇ ಕೂಷ್ಮಾಂಡ ಫಲದಾನ ಎಂದಾಕ್ಷಣ ವೀಳ್ಯದೆಲೆಯಲ್ಲಿ ಹಸಿ ಅಡಿಕೆ ಮತ್ತು ನೂರು ರೂ. ದಕ್ಷಿಣೆ ಸಮೇತ ಎಲ್ಲ ಕಲಾವಿದರಿಗೆ ದಾನ ಮಾಡಿದ ದೃಶ್ಯ, ದೀಪಕರಾಗ ಹಾಡಿದಾಗ ನೂರಾರು ಹಣತೆಯಲ್ಲಿ ದೀಪಪ್ರಜ್ವಲಿಸುವ ದೃಶ್ಯ ಇವೆಲ್ಲವೂ ಮುಂಬಯಿ ಶನಿಭಕ್ತರಿಗೆ ವಿಶೇಷ ಅನುಭವವನ್ನು ನೀಡಿತು.

ಆದರೆ ಇದೆಲ್ಲ ಅಗತ್ಯವೆನಿಸು ವುದಿಲ್ಲ. ಹಾಗಾಗಿ ಇದು ಅನು ಕರಣೀಯವೂ ಅಲ್ಲ ಎಂದು ನನ್ನ ಅಭಿಪ್ರಾಯ. ಡೊಂಬಿವಲಿಯಲ್ಲಿ ನಡೆದ ಶನಿಪೂಜಾ ಸಹಿತ ತಾಳ ಮದ್ದಳೆಯಲ್ಲಿ ಭಾಗವತೆ ಅಮೃತಾ ಅಡಿಗ ಅವರು ಅತ್ಯುತ್ತಮವಾಗಿ ಭಾಗವತಿಕೆ ಮಾಡಿದರು. ಅದ ರಲ್ಲೂ ಚಿನ್ಮಯ ದಾಸರ ಕೃತಿಯ ಪದ್ಯವನ್ನೇ ಅವರು ಹಾಡಿ ಮುಗಿಸಿದ್ದು ವಿಶೇಷತೆಯಾಗಿತ್ತು. ಯಕ್ಷಗಾನದ ಎಲ್ಲ ಪ್ರಭೇದಗಳಿಗೆ ಮುಂಬಯಿಯಲ್ಲಿ ಸ್ವಾಗತವಿದೆ. ಇನ್ನು ಮುಂದಿನ ದಿನಗಳಲ್ಲಿ ಮೂರು ತಾಳಮದ್ದಳೆ ತಂಡಗಳು, ಮೂರು ಯಕ್ಷಗಾನ ಮೇಳಗಳು, ಜತೆಗೆ ಬಡಗುತಿಟ್ಟಿನ ಎರಡು ಮೇಳಗಳ ಕಾರ್ಯಕ್ರಮಗಳು ಮುಂಬಯಿ ಮತ್ತು ಉಪನಗರಗಳಲ್ಲಿ ಜರಗಲಿದ್ದು, ಎಲ್ಲಾ ಪ್ರದರ್ಶನಗಳಿಗೂ ಇಲ್ಲಿನ ಕಲಾಭಿಮಾನಿಗಳ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂಬು  ದು ನನ್ನ ಆಶಯ.

ಕೊಲ್ಯಾರು ರಾಜು ಶೆಟ್ಟಿ.

ಟಾಪ್ ನ್ಯೂಸ್

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

9-bng

Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ

8-bng

Bengaluru: ಕದ್ದ ಮೊಬೈಲ್‌ ಕೊರಿಯರ್‌ ಮೂಲಕ ಕೇರಳಕ್ಕೆ ರವಾನೆ!

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.