ಡೊಂಬಿವಲಿ ಬಸವೇಶ್ವರ ಶರಣ ಮಂಡಲದಿಂದ ಶರಣ ಸಂಸ್ಕೃತಿ ಉತ್ಸವ-2018
Team Udayavani, Oct 26, 2018, 11:33 AM IST
ಡೊಂಬಿವಲಿ: ಸಮಸ್ತ ಮಾನವ ಕುಲಕ್ಕೆ ಸಮಾನತೆಯ ಸಂದೇಶ ನೀಡಿದ ವಿಶ್ವಗುರು ಬಸವಣ್ಣನವರ ಅನುಯಾಯಿಗಳಾದ ನಾವು, ಶರಣರು ನಡೆದಂತೆ ಬದುಕ ಬೇಕು ಎಂದು ಬಸವ ತತ್ವ ಅಭ್ಯಾಸಕಿ ಡಾ| ಉಮಾ ಅಕ್ಕಿ ಹೇಳಿದರು.
ಅ. 20, 21ರಂದು ಡೊಂಬಿವಲಿ ಪೂರ್ವದ ಗಣೇಶ ಮಂದಿರದ ವಿನಾಯಕ ಸಭಾಗೃಹದಲ್ಲಿ ಬಸವೇಶ್ವರ ಶರಣ ಮಂಡಲ ಡೊಂಬಿವಲಿ ವತಿಯಿಂದ ನಡೆದ ಶರಣ ಸಂಸ್ಕೃತಿ ಉತ್ಸವ-2018ರಲ್ಲಿ ವಚನ ಸಾಹಿತ್ಯಕ್ಕೆ ಶಿವಶರಣರ ಕೊಡುಗೆ ಹಾಗೂ ಬಸವೇಶ್ವರ ಕಾರ್ಯ ಮತ್ತು ಸಾಧನೆ ಕುರಿತು ಅವರು ಉಪನ್ಯಾಸ ನೀಡಿದರು.
ಅರಿವೇ ದೇವರಾಗಿದ್ದು, ಬಸವಣ್ಣ ನವರ ತತ್ವಗಳ ಅನುಷ್ಠಾನವೇ ಪೂಜೆ ಯಾಗಿದೆ. 12ನೇ ಶತಮಾನದ ಶರಣೆ ಅಕ್ಕ ಮಹಾದೇವಿ ವೈಚಾರಿಕತೆಯ ಸಂದೇಶ ನೀಡಿದ್ದು, ಈಕೆಗೆ ಯಾರೂ ಸಾಟಿಯಿಲ್ಲ ಎಂದರು.
ಉಪನ್ಯಾಸಕಿ ಡಾ| ದಾಕ್ಷಾಯಣಿ ಯಡಹಳ್ಳಿ ಮಾತನಾಡಿ, ಹೆಣ್ಣು ಸಮಾಜದ ಕಣ್ಣು. ಗಂಡ ಹೆಂಡತಿ ಪರಸ್ಪರ ಅರ್ಥೈಸಿಕೊಂಡು ಜೀವನ ಸಾಗಿಸಬೇಕು. ಎಲ್ಲರನ್ನೂ ಸಮಾ ನರಾಗಿ ಕಾಣುವುದೇ ಶರಣ ಸಂಸ್ಕೃತಿ. ಈ ಸಂಸ್ಕೃತಿ ಅಳವಡಿಸಿಕೊಂಡು ಸಾರ್ಥಕವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಳದ ಉಪಾಧ್ಯಕ್ಷೆ ಜಯಶ್ರೀ ತೊಡಕರ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬಸವತತ್ವ ಚಿಂತಕಿ ಸುರೇಖಾ ಕೊರೆ ಅವರು ಉಪಸ್ಥಿತರಿದ್ದರು. ಶ್ರೀ ಶಾಂತವೀರ ಗುರು ಮುರುಘಾ ರಾಜೇಂದ್ರ ಮಹಾಸ್ವಾಮೀಜಿ ಖಾಸಾ ಮಠ ಯಾದಗಿರಿ ಅವರಿಂದ ಸಾಂಕೇತಿಕವಾಗಿ ಉದ್ಘಾಟನೆಗೊಂಡ ಎರಡು ದಿನಗಳ ಉತ್ಸವದಲ್ಲಿ ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪ್ರೀತಿ ಹಿರೇಮಠ ಅವರಿಂದ ಭಕ್ತಿಗೀತೆಗಳ ಗಾಯನ ನಡೆಯಿತು. ಅಕ್ಕಮಹಾದೇವಿ
ಹಿರೆಮಠ, ಉಷಾ ಪಾಟೀಲ್, ಶಶಿಕಲಾ ಸಣ್ಣಪೂಜಿ, ಚಂದ್ರಕಲಾ ತೇಲಿ, ಜ್ಯೋತಿ ಹೊಸಕೋಟಿ, ದೀಕ್ಷಾ ಕೂಂಡಗೂಳಿ ಮೊದಲಾದವರು ವಚನ ಹಾಗೂ ಭಕ್ತಿ ಗೀತೆಗಳನ್ನು ಹಾಡಿದರು. ಲಲಿತಾ ಪ್ರಭು ಅಂಗಡಿ ಕಾರ್ಯಕ್ರಮ ನಿರ್ವಹಿಸಿದರು.
ಮಂಡಳದ ಅಧ್ಯಕ್ಷ ಶಿವಶಂಕರ ಕೂಂಡಗೂಳಿ ಸ್ವಾಗತಿಸಿದರು. ಪ್ರೊ| ಸಿರಹಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಎಸ್. ಎನ್. ಸೋಮಾ, ಮಹಾಲಿಂಗ ಹೊಸಕೋಟಿ, ಮಲ್ಲಿಕಾರ್ಜುನ ಗವಿಮಠ, ಜಿ. ಟಿ. ಮಠಪತಿ, ನ್ಯಾಯವಾದಿ ಗೌಡಪ್ಪ ಪಾಟೀಲ, ಉಷಾ ಪಾಟೀಲ್, ರಾಜಶ್ರೀ ಚಿನಮೊಳಿ, ಎಂ. ಬಿ. ಬಿರಾದರ ಮೊದಲಾದವರು ಸಹಕರಿಸಿದರು.
ಚಿತ್ರ-ವರದಿ : ಗುರುರಾಜ ಪೋತನಿಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.