ಶಿರ್ವ ಹಳೆವಿದ್ಯಾರ್ಥಿ ಸಂಘ : ಮಹಾರಾಷ್ಟ್ರ ಘಟಕ ಮಹಾಸಭೆ
Team Udayavani, Oct 25, 2018, 4:08 PM IST
ಪುಣೆ: ಸೈಂಟ್ ಮೇರಿಸ್ ಕಾಲೇಜ್ ಶಿರ್ವ ಹಳೆ ವಿದ್ಯಾರ್ಥಿ ಸಂಘದ ಮುಂಬಯಿ ಮಹಾರಾಷ್ಟ್ರ ಘಟಕದ ಮೂರನೇ ವಾರ್ಷಿಕ ಮಹಾಸಭೆಯು ಅ. 21 ರಂದು ಅಂಧೇ ರಿಯ ಅರೋ ಪಂಜಾಬ್ ಹೊಟೇಲ್ ಸಭಾಗೃಹದಲ್ಲಿ ಅಧ್ಯಕ್ಷ ಮಹೇಶ್ ಹೆಗ್ಡೆ ಕಟ್ಟಿಂಗೇರಿ ಅಧ್ಯಕ್ಷತೆಯಲ್ಲಿ ಜರಗಿತು.
ಮಹಾರಾಷ್ಟ್ರ ಘಟಕದ ಪ್ರಮುಖ ರಾದ ಯಶೋಧರ ಕೋಟ್ಯಾನ್, ಜಾನ್ ಡಿ’ಸೋಜಾ, ರೇಮಸ್ ಡಿ’ಸೋಜಾ, ವಿನ್ಸೆಂಟ್ ಮೆಂಡೋನ್ಸಾ ಉಪಸ್ಥಿತರಿದ್ದರು. ಮಹೇಶ್ ಹೆಗ್ಡೆ ಸ್ವಾಗತಿಸಿದರು.
ಪ್ರಕಾಶ್ ಶೆಟ್ಟಿ ಅವರು ಈ ಸಂಘದ ಉದ್ದೇಶಗಳನ್ನು ಸಭೆಗೆ ತಿಳಿಸಿದರು. ಸಂಘದ ಪದಾಧಿಕಾರಿ ಜಾನ್ ಡಿ’ಸೊಜಾ ಅವರು, ಸಂಘದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಡಿ. 29ರಂದು ಮಾತೃ ಸಂಸ್ಥೆಯಲ್ಲಿ ಆಯೋಜಿಸಲಾಗಿರುವ ಗುರು ವಂದನೆ ಕಾರ್ಯಕ್ರಮದಲ್ಲಿ ಭಾಗಿಯಾ ಗುವ ಬಗ್ಗೆ ತಿರ್ಮಾನಿಸಲಾಯಿತು, ಸದಸ್ಯರಿಗೆ ಒಂದು ದಿನದ ವಿಹಾರ ಕೂಟ ಏರ್ಪಡಿಸುವ ಬಗ್ಗೆ ಸದಸ್ಯರು ಸಲಹೆಗಳನ್ನು ನೀಡಿದರು.
ಸಂಘದ ಯೋಜನೆಗಳನ್ನು ರೂಪಿಸಲು ಸದಸ್ಯ ರೋಕಿ ಡಿಕುನ್ಹಾ ಮಾರ್ಗಸೂಚಿ ತಿಳಿಸಿದರು.
ಅವಿರೋಧ ಪುನರಾಯ್ಕೆ
ಪ್ರಸಕ್ತ ಅಧ್ಯಕ್ಷ ಮಹೇಶ್ ಹೆಗ್ಡೆ ಅವರನ್ನು ನೂತನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಪುನರಾಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿಗೆ ಉಪಾಧ್ಯಕ್ಷರಾಗಿ ಜಾನ್ ಡಿ’ಸೋಜಾ, ಕಾರ್ಯದರ್ಶಿಯಾಗಿ ಪ್ರಸಿÇÉಾ ಮೆಂಡೋನ್ಸಾ, ಜತೆ ಕಾರ್ಯದರ್ಶಿಯಾಗಿ ಕ್ಲಾರಾ ಮಿನೇಜಸ್, ಕೋಶಾಧಿಕಾರಿಯಾಗಿ ರೇಮಸ್ ಡಿ’ಸೋಜಾ, ಜತೆ ಕೋಶಾ ಧಿಕಾರಿಯಾಗಿ ಸಿಎ ಸಂತೋಷ್ ಶೆಟ್ಟಿ, ಜನ ಸಂಪರ್ಕಾಧಿಕಾರಿಗಳಾಗಿ ಜಾನ್ ಅರ್. ಡಿಕುನ್ಹಾ, ಹ್ಯುಬರ್ಟ್ ಫೆರ್ನಾಂಡಿಸ್, ಕಾನೂನು ಸಲಹೆಗಾರರಾಗಿ ಅರ್‌ಜಿ. ಶೆಟ್ಟಿ, ಸದಸ್ಯರಾಗಿ ಜೂಲಿಯೆಟ್ ಡಿ’ಸೋಜಾ, ಪ್ರಿಯಾ ಶೆಟ್ಟಿ, ಇರೆನ್ ಮಾರ್ಟಿಸ್, ಲೀನಾ ಡೆಸಾ, ಸರ್ವಮಂಗಳಾ ಶೆಟ್ಟಿ, ಜಾನ್ ಫೆರ್ನಾಂಡಿಸ್, ರವಿಂದ್ರ ಅಚಾರ್ಯ, ಪ್ರಸಾದ್ ಹಾಗೂ ಸಲಹೆಗಾರರಾಗಿ ಸದಾನಂದ ಕೋಟ್ಯಾನ್, ವಿನ್ಸೆಂಟ್ ಮೆಂಡೋನ್ಸಾ, ಯಶೋಧರ ಕೋಟ್ಯಾನ್, ಲ್ಯಾನ್ಸಿ ಬಬೋìಜ, ರೋಶನ್ ಆಳ್ವ ಅವರನ್ನು ಆಯ್ಕೆ ಮಾಡಲಾಯಿತು.
ಮಹೇಶ್ ಹೆಗ್ಡೆ ಮಾತನಾಡಿ, ನಮಗೆ ವಿದ್ಯಾದಾನ ಮಾಡಿದ ಸಂಸ್ಥೆಯ ನೆನಪಿನಲ್ಲಿ ನಾವು ಒಂದೇ ಸೂರಿನಡಿಯಲ್ಲಿ ಸೇರಿ ಪರಸ್ಪರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾ, ತೊಂದರೆಯಲ್ಲಿರುವ ಸಹಪಾಠಿ ಗಳಿಗೆ ಸಹಕಾರಿಯಾಗುವಂಥ ಕೆಲಸ ಮಾಡೋಣ. ನಾವೆಲ್ಲರೂ ಒಂದೇ ಎಂಬ ಭಾವನೆ ಯಿಂದ ಸೇವೆಯಲ್ಲಿ ತೊಡಗೋಣ ಎಂದರು.
ಕಾಲೇಜಿನ ಹಳೆ ವಿದ್ಯಾರ್ಥಿಗಳು ಮಹಾರಾಷ್ಟ್ರದ ವಿವಿಧೆಡೆಗಳಲ್ಲಿ ನೆಲೆ ಸಿದ್ದರೆ ನಮ್ಮನ್ನು ಸಂಪರ್ಕಿಸಿ ಈ ಸಂಸ್ಥೆಯ ಜೊತೆ ಸೇರಿಕೊಳ್ಳಬಹುದು ಎಂದು ಅವರು ಹೇಳಿದರು.
ಸಂಘದ ಸದಸ್ಯ ರೋಶನ್ ಆಳ್ವ ವಂದಿಸಿದರು.
ಚಿತ್ರ-ವರದಿ : ಹರೀಶ್ ಮೂಡಬಿದ್ರಿ ಪುಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.