ಸಂಘದ ಅಭಿವೃದ್ಧಿಗೆ ಪ್ರಾದೇಶಿಕ ಸಮಿತಿಗಳ ಕೊಡುಗೆ ಅಪಾರ: ಸಂತೋಷ್ ಶೆಟ್ಟಿ
Team Udayavani, Dec 21, 2021, 11:27 AM IST
ಪುಣೆ: ಪುಣೆ ಬಂಟರ ಸಂಘದ ಸಹಕಾರದೊಂದಿಗೆ ಸಂಘದ ದಕ್ಷಿಣ-ಪೂರ್ವ ಪ್ರಾದೇಶಿಕ ಸಮಿತಿಯ ಆಯೋಜನೆಯಲ್ಲಿ ಡಿ. 16ರಂದು ಬಾಣೇರ್‌ನ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದ ಲತಾ ಸುಧೀರ್ ಶೆಟ್ಟಿ ವೇದಿಕೆಯಲ್ಲಿ ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರ ದಕ್ಷ ನಿರ್ದೇಶನದಲ್ಲಿ ಕಲಾಸಂಗಮ ಮಂಗಳೂರು ಕಲಾವಿದರಿಂದ ತುಳು ನಾಟಕ “ಶಿವಧೂತೆ ಗುಳಿಗೆ’ ಅದ್ದೂರಿಯಾಗಿ ಪ್ರದರ್ಶನಗೊಂಡಿತು.
ನಾಟಕದ ಮಧ್ಯಾಂತರದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕುಲ್ ಬೆಟ್ಟು, ಕೊರೊನಾ ಲಾಕ್‌ಡೌನ್ ಬಳಿಕ ಪುಣೆಯಲ್ಲಿ ನಾಟಕ, ಯಕ್ಷಗಾನದಂತಹ ಕಾರ್ಯಕ್ರಮಗಳು ನಡೆದಿರಲಿಲ್ಲ. ಇಂದು ನಮ್ಮ ಸಭಾಭವನದಲ್ಲಿ “ಶಿವಧೂತೆ ಗುಳಿಗೆ’ ನಾಟಕ ಪ್ರದರ್ಶನ ನಡೆದಿರುವುದು ನಮ್ಮ ಯೋಗವೇ ಸರಿ. ತುಳು ರಂಗಭೂಮಿಯನ್ನು ಶ್ರೀಮಂತಗೊಳಿಸಿದ ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರ ದಕ್ಷ ನಿರ್ದೇಶನದಲ್ಲಿ ಈ ನಾಟಕ ಅಭೂತಪೂರ್ವ ಯಶಸ್ಸನ್ನು ಕಂಡಿರುವುದಲ್ಲದೆ ಅವರ ಪೂರ್ಣ ತಂಡದ ಶ್ರಮ ಇಲ್ಲಿ ಎದ್ದು ಕಾಣುತ್ತದೆ. ಕೊಡಿಯಾಲ್‌ಬೈಲ್ ತುಳು ರಂಗಭೂಮಿಯಲ್ಲಿ ಆವಿಷ್ಕಾರ ಮಾಡಿ ಹೊಸತನದ ಸ್ಪರ್ಶ ನೀಡಿ ಕಲಾಭಿಮಾನಿಗಳ ಹೃದಯವನ್ನು ಗೆದ್ದವರು ಎಂದು ತಿಳಿಸಿದರು.
ಉದ್ಯಮ ಕ್ಷೇತ್ರದ ಯಶಸ್ಸಿನೊಂದಿಗೆ ಕಲಾಸೇವೆ ಹಾಗೂ ಸಮಾಜ ಸೇವೆಯನ್ನು ಮಾಡಿಕೊಂಡು ಬಂದಿರುವ ಪ್ರವೀಣ್ ಶೆಟ್ಟಿ ಪುತ್ತೂರು ಅವರಿಗೆ ದಕ್ಷಿಣ ಪೂರ್ವ ಪ್ರಾದೇಶಿಕ ಸಮಿತಿ ವತಿಯಿಂದ ಸಮ್ಮಾನ ಹಮ್ಮಿಕೊಂಡಿರುವುದು ಅಭಿನಂದನೀಯ. ಪುಣೆ ಬಂಟರ ಸಂಘಕ್ಕೊಂದು ದೊಡ್ಡ ಶಕ್ತಿ ಪ್ರವೀಣ್ ಶೆಟ್ಟಿಯವರು. ಇಂದಿನ ನಾಟಕ ಪ್ರದರ್ಶನದ ಆಯೋಜನೆ ಮಾಡಿರುವಂತಹ ನಮ್ಮ ಸಂಘದ ದಕ್ಷಿಣ ಪೂರ್ವ ಪ್ರಾದೇಶಿಕ ಸಮಿತಿಗೆ ಕೃತಜ್ಞತೆಗಳು. ಸಂಘದ ಯಾವುದೇ ಕಾರ್ಯಕ್ರಮವಿರಲಿ ಅದನ್ನು ಅಚ್ಚುಕಟ್ಟಾಗಿ ನೆರವೇರಿಸುವಲ್ಲಿ ಉತ್ತರ ಹಾಗೂ ದಕ್ಷಿಣ ಪ್ರಾದೇಶಿಕ ಸಮಿತಿಗಳ ಸಹಕಾರ ಮಹತ್ತರವಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ನಮ್ಮ ಭವನದ ಮಹಾದಾನಿ ಮೆಕಾಯ್ ಕಂಪೆನಿಯ ಸಿಎಂಡಿ ಕೆ. ಎಂ. ಶೆಟ್ಟಿ ಭಾಗವಹಿಸಿರುವುದು ಸಂತಸ ತಂದಿದೆ. ನಮ್ಮ ಸಂಘದ ಕಲ್ಪವೃಕ್ಷ ಯೋಜನೆಯ ಅಂತರ್ಗತ ಶೈಕ್ಷಣಿಕ ಯೋಜನೆಗಳಿಗೆ ಪೂರ್ಣ ಸಹಕಾರ ನೀಡಿರುವುದಾಗಿ ಭರವಸೆ ನೀಡಿರುವುದು ನಮಗೆ ದೊಡ್ಡ ಶಕ್ತಿ ತುಂಬಿದೆ. ನಮ್ಮ ಸಂಘದ ಎಲ್ಲ ಕಾರ್ಯಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿರುವ ಅವರಿಗೆ ಕೃತಜ್ಞರಾಗಿದ್ದೇವೆ ಎಂದರು.
ಸಮಾರಂಭದಲ್ಲಿ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಅಧ್ಯಕ್ಷ, ಪುಣೆ ಬಂಟರ ಸಂಘದ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ, ಉಡುಪಿ – ಪುತ್ತೂರು ಬಂಟರ ಸಂಘದ ಗೌರವಾಧ್ಯಕ್ಷ, ಸಮಾಜ ಸೇವಕ ಪ್ರವೀಣ್ ಶೆಟ್ಟಿ ಪುತ್ತೂರು ಹಾಗೂ ಆಶಾ ಪಿ. ಶೆಟ್ಟಿ ದಂಪತಿಯನ್ನು ಬಂಟರ ಸಂಘದ ದಕ್ಷಿಣ – ಪೂರ್ವ ಪ್ರಾದೇಶಿಕ ಸಮಿತಿ ವತಿಯಿಂದ ಶಾಲು ಹೊದೆಸಿ, ಪೇಟ ತೊಡಿಸಿ, ಸ್ಮರಣಿಕೆ, ಸಮ್ಮಾನ ಪತ್ರ ನೀಡಿ ಗೌರವಿಸಲಾಯಿತು.
ಕಲಾ ಸಂಗಮದ ಮುಂಬಯಿ ಸಂಚಾಲಕ ಪ್ರಕಾಶ್ ಶೆಟ್ಟಿ ಸುರತ್ಕಲ್, ಪ್ರೇಮ್ ಶೆಟ್ಟಿ, ಮನೋಹರ್ ನಂದಳಿಕೆ ಹಾಗೂ ಸುನಿಲ್ ಅಮೀನ್ ಅವರನ್ನು ಗೌರವಿಸಲಾಯಿತು. ನಾಟಕಕ್ಕೆ ಸಹಕಾರ ನೀಡಿದ ಸತೀಶ್ ಶೆಟ್ಟಿ, ಅಜಿತ್ ಹೆಗ್ಡೆ, ಎರ್ಮಾಳ್ ಚಂದ್ರಹಾಸ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ, ಸಂಧ್ಯಾ ವಿ. ಶೆಟ್ಟಿ, ಮಾಧವ ಶೆಟ್ಟಿ, ದಿನೇಶ್ ಶೆಟ್ಟಿ ಕಳತ್ತೂರು, ಗಣೇಶ್ ಪೂಂಜಾ ಅವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು. ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ರವಿ ಕೆ. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಶೇಖರ್ ಸಿ. ಶೆಟ್ಟಿ, ಸುಭಾಷ್ ಎ. ಶೆಟ್ಟಿ, ಕಾರ್ಯದರ್ಶಿ ಸುಧಾಕರ ಸಿ. ಶೆಟ್ಟಿ, ಕೋಶಾಧಿಕಾರಿ ಪುಷ್ಪರಾಜ್ ಎನ್. ಶೆಟ್ಟಿ, ಪದಾಧಿಕಾರಿಗಳಾದ ವಸಂತ್ ಎಸ್. ಶೆಟ್ಟಿ, ಸುಧಾಕರ್ ಟಿ. ಶೆಟ್ಟಿ, ದಾಮೋದರ್ ಜಿ. ಶೆಟ್ಟಿ, ಅರುಣ್ ಎಂ. ಶೆಟ್ಟಿ, ಸಂಜೀವ ಆರ್. ಶೆಟ್ಟಿ, ಸಚ್ಚಿದಾನಂದ ಎಸ್. ಶೆಟ್ಟಿ, ಸುರೇಶ್ ವಿ. ಶೆಟ್ಟಿ, ದಿವಾಕರ್ ಎನ್. ಶೆಟ್ಟಿ, ಜಯ ಎಸ್. ಶೆಟ್ಟಿ, ಪ್ರಕಾಶ್ ಎಂ. ಶೆಟ್ಟಿ, ವಿವೇಕ್ ಕೆ. ಶೆಟ್ಟಿ, ರಮೇಶ್ ಎಸ್. ಶೆಟ್ಟಿ, ಸಂಪತ್ ಪಿ. ಶೆಟ್ಟಿ, ರಾಜೇಶ್ ಎಲ್. ಶೆಟ್ಟಿ, ರತ್ನಾಕರ್ ಆರ್. ಶೆಟ್ಟಿ, ಜಗದೀಶ್ ಬಿ. ಶೆಟ್ಟಿ ಅವರನ್ನು ಸಂಘದ ವತಿಯಿಂದ ಸಂತೋಷ್ ಶೆಟ್ಟಿ ಅವರು ಸ್ಮರಣಿಕೆ ನೀಡಿ ಗೌರವಿಸಿದರು.
ಕಾಯಕ್ರಮದ ಮೊದಲು ಇತ್ತೀಚಿಗೆ ಹೆಲಿಕಾಪ್ಟರ್ ದುರಂತದಲ್ಲಿ ನಿಧನ ಹೊಂದಿದ ರಕ್ಷಣಾ ಪಡೆಗಳ ಮುಖ್ಯಸ್ಥ ಜ| ಬಿಪಿನ್ ರಾವತ್ ದಂಪತಿ ಹಾಗೂ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಭವನದ ಮಹಾದಾನಿ ಮೆಕಾಯ್ ಕಂಪೆನಿಯ ಸಿಎಂಡಿ ಕೆ. ಎಂ. ಶೆಟ್ಟಿ, ಕಲಾಸಂಗಮದ ರೂವಾರಿ ವಿಜಯಕುಮಾರ್ ಕೊಡಿಯಾಲ್ ಬೈಲ್, ಬಂಟರ ಸಂಘ ಪುಣೆ ಉಪಾಧ್ಯಕ್ಷ ಸತೀಶ್ ಶೆಟ್ಟಿ, ಗೌರವ ಕೋಶಾಧಿಕಾರಿ ಎರ್ಮಾಳ್ ಚಂದ್ರಹಾಸ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್. ಶೆಟ್ಟಿ, ಬಂಟರ ಸಂಘ ದಕ್ಷಿಣ -ಪೂರ್ವ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವಿ ಕೆ. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಶೇಖರ್ ಸಿ. ಶೆಟ್ಟಿ, ಸುಭಾಷ್ ಎ. ಶೆಟ್ಟಿ, ಕಾರ್ಯದರ್ಶಿ ಸುಧಾಕರ ಸಿ. ಶೆಟ್ಟಿ, ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಸುಧಾಕರ ಸಿ. ಶೆಟ್ಟಿ ಸ್ವಾಗತಿಸಿದರು. ಪುಷ್ಪರಾಜ್ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ಪತ್ರಕರ್ತ ಕಿರಣ್ ಬಿ. ರೈ ಕರ್ನೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಪಾಲ್ಗೊಂಡಿದ್ದರು.
ನನ್ನ ಜನ್ಮಭೂಮಿ ಪುಣೆಯಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿ ರಂಗಭೂಮಿ, ಸಿನಿಮಾ ರಂಗಗಳಲ್ಲಿ ತೊಡಗಿಕೊಂಡಿದ್ದೇನೆ. ಎರಡು ಮರಾಠಿ ನಾಟಕಗಳನ್ನು ತುಳುವಿಗೆ ಭಾಷಾಂತರಿಸಿದ್ದೇನೆ. ಮರಾಠಿ ಸಿನೆಮಾವೊಂದು ತೆರೆ ಕಾಣಲು ಸಿದ್ಧವಾಗಿದೆ. ಶಿವದೂತೆ ಗುಳಿಗೆ ನಾಟಕ ಇಂದು 234ನೇ ಪ್ರದರ್ಶನ ಕಾಣುತ್ತಿದ್ದು, ನಾಟಕ ಕ್ಷೇತ್ರದಲ್ಲಿ ಹೊಸ ಇತಿಹಾಸ ರಚಿಸುವತ್ತ ದಾಪುಗಾಲಿಡುತ್ತಿದೆ. ಪ್ರದರ್ಶನಕ್ಕೆ ಅವಕಾಶ ನೀಡಿದ ಪುಣೆ ಬಂಟರ ಸಂಘದ ಅಧ್ಯಕ್ಷರಿಗೆ, ಪದಾಧಿಕಾರಿಗಳಿಗೆ ಹಾಗೂ ದಕ್ಷಿಣ ಪ್ರಾದೇಶಿಕ ಸಮಿತಿಗೆ ಕೃತಜ್ಞತೆಗಳು.–ವಿಜಯಕುಮಾರ್ ಕೊಡಿಯಾಲ್‌ಬೈಲ್, ಕಲಾಸಂಗಮದ ರೂವಾರಿ
ನನ್ನ ಮೇಲೆ ಪ್ರೀತಿಯಿಟ್ಟು ಗೌರವಿಸಿದ ದಕ್ಷಿಣ ಪೂರ್ವ ಪ್ರಾದೇಶಿಕ ಸಮಿತಿಯ ಎಲ್ಲ ಪದಾಧಿಕಾರಿಗಳಿಗೆ ನಾನು ಚಿರಋಣಿ. ನಾವು ಜೀವನದಲ್ಲಿ ಸತ್ಯ, ಧರ್ಮ, ನ್ಯಾಯ, ಪ್ರಾಮಾಣಿಕತೆಯಿಂದ ನಡೆದುಕೊಂಡರೆ ಬದುಕು ಸಾರ್ಥಕವಾಗುತ್ತದೆ. ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರ ನಾಟಕಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಿದ್ದು, ಇದೀಗ ಪ್ರದರ್ಶನಗೊಳ್ಳುತ್ತಿರುವ ಶಿವಧೂತೆ ಗುಳಿಗೆ ನಾಟಕ ದೈವಗಳ ಮೇಲಿನ ನಂಬಿಕೆಗಳನ್ನು ಮತ್ತಷ್ಟು ಬಲಪಡಿಸುವ ಸಂದೇಶ ನೀಡುತ್ತದೆ. ಅವರು ಭವಿಷ್ಯದಲ್ಲಿ ಇನ್ನಷ್ಟು ಕಲಾಸೇವೆ ಮಾಡುವಂತಾಗಲಿ.–ಪ್ರವೀಣ್ ಶೆಟ್ಟಿ ಪುತ್ತೂರು, ಸಮ್ಮಾನಿತರು
ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಸಂತಸವಾಗಿದೆ. ಸಂತೋಷ್ ಶೆಟ್ಟಿಯವರು ಸಂಘದ ಪದಾಧಿಕಾರಿಗಳೆಲ್ಲರ ಸಹಕಾರದೊಂದಿಗೆ ಪುಣೆ ಬಂಟರ ಸಂಘದ ಯಶಸ್ಸಿಗೆ ಅಪಾರವಾಗಿ ಶ್ರಮಿಸಿ¨ªಾರೆ. ಅವರು ಸಮಾಜದ ಆಸ್ತಿಯಾಗಿದ್ದಾರೆ. ಅವರ ಸಮಾಜಹಿತದ ಕಾರ್ಯಕ್ಕೆ ನನ್ನ ಸಹಾಯ, ಸಹಕಾರ ಸದಾ ಇದೆ.–ಕೆ. ಎಂ. ಶೆಟ್ಟಿ, ಮಹಾದಾನಿ, ಸಮಾಜ ಸೇವಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.