ಚಿತ್ತ ಶುದ್ಧಿಯಿಂದ ಅರಿಷಡ್ವರ್ಗಗಳನ್ನು ಗೆಲ್ಲಲು ಸಾಧ್ಯ
Team Udayavani, Feb 25, 2020, 6:58 PM IST
ಮುಂಬಯಿ, ಫೆ. 24: ದೇವಾಲಯಗಳು ಮಾನವನ ವ್ಯಕ್ತಿತ್ವ ವಿಕಾಸನಕ್ಕೆ ಪೂರಕವಾಗಿದ್ದು, ಸಂಸ್ಕೃತಿ, ಸಂಸ್ಕಾರಗಳನ್ನು ಬೋಧಿಸುವ ಗುರುಮಠವಾಗಿ ಬೆಳಗಬೇಕು. ಆರಾಧನೆಗಳು ಸುಪ್ತ ಮನಸ್ಸನ್ನು ಜಾಗೃತಗೊಳಿಸುತ್ತದೆ. ಚಿತ್ತ ಶುದ್ಧಿಯಿಂದ ಮಾತ್ರ ಅರಿಷಡ್ವರ್ಗಗಳನ್ನು ಗೆಲ್ಲಲು ಸಾಧ್ಯ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಾತಿಂಜ ಜನಾರ್ಧನ್ ಭಟ್ ನುಡಿದರು.
ಫೆ. 21ರಂದು ಮೀರಾರೋಡ್ ಪೂರ್ವದ ಮೀರಾಗಾಂವ್ ಮೀರಾ ಕೋ. ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್, ರಾಷ್ಟ್ರೀಯ ಹೆದ್ದಾರಿ ಸಮೀಪದ ಹೊಟೇಲ್ ಅಮರ್ ಪ್ಯಾಲೇಸ್ ಹಿಂದಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿದ ಶಿವರಾತ್ರಿ ಮಹೋತ್ಸವ, ಭಜನೆ, ಸಾಂಸ್ಕೃತಿಕ ಮತ್ತು ಸಮ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ದಿನವಿಡೀಯ ಭಜನೆ ಸಂಕುಚಿತ ಭಾವನೆಯನ್ನು ದೂರಗೊಳಿಸಿ ಸಮಾನತೆಯ ವಾತಾವರಣ ಸೃಷ್ಠಿಸಿದೆ. ಗತ ಕಾಲದ ಪ್ರತಿ ಮನೆಗಳ ಸಂಜೆಯ ಭಜನೆ ಕ್ಷುಲಕ ಮನಃ ಸ್ತಾಪವನ್ನು ದೂರಗೊಳಿಸುವ ಮೂಲ ಮಂತ್ರವಾಗಿತ್ತು. ಅದನ್ನು ಪುನರ್ ಚೇತನದ ಮೂಲಕ ಅನುಷ್ಠಾನಗೊಳಿಸಿದರೆ ಉತ್ತಮ ಬಾಂಧವ್ಯ ವೃದ್ದಿಸಲು ಸಾಧ್ಯ ಎಂದು ಹೇಳಿದ ಅವರು ಭಕ್ತರಿಗೆ ಪ್ರಸಾದ ನೀಡಿ ಹರಸಿ ಮಹಾ ಶಿವರಾತ್ರಿಯ ಶುಭಾಶಯ ಕೋರಿದರು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಸಾಂತಿಂಜ ಮಾಧವ ಭಟ್ ಅವರ ಪೌರೋಹಿತ್ಯದಲ್ಲಿ ರುದ್ರಾಭಿಷೇಕ, ಕ್ಷೀರಾಭಿಷೇಕ ಮತ್ತು ಮಧ್ಯಾಹ್ನ ಮಹಾಪೂಜೆ ನಡೆಯಿತು. ದಿನ ಪೂರ್ತಿ ನಡೆದ ಭಜನಾ ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನ ಮಂಡಳಿ ಮೀರಾಗಾಂವ್, ಬಿಲ್ಲವರ ಅಸೋಸಿಯೇಶನ್ ಮೀರಾರೋಡ್, ಬಂಟ್ಸ್ ಫೋರಮ್ ಮೀರಾರೋಡ್, ಶ್ರೀ ವಿಠಲ ಭಜನ ಮಂಡಳಿ ಮೀರಾರೋಡ್, ಶ್ರೀ ಹನುಮಾನ್ ಚಿತ್ತ ಶುದ್ಧಿ ಯಿಂದ ಅರಿಷಡ್ವರ್ಗಗಳನ್ನು ಗೆಲ್ಲಲು ಸಾಧ್ಯ ಭಜನ ಮಂಡಳಿ ಭಾಯಂದರ್, ಶ್ರೀ ಹನುಮಾನ್ ಭಜನ ಮಂಡಳಿ ದಹಿಸರ್, ಬಂಟ್ಸ್ ಸಂಘ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿ, ಶ್ರೀ ಲಕ್ಷ್ಮೀನಾರಾಯಣ ಭಜನ ಸಮಿತಿ ಮೀರಾರೋಡ್, ಅಹಲ್ಯಾ ನಿಮ್ರಾಜ್ ಶಿಷ್ಯರ ಭಜನ ತಂಡಗಳು ಪಾಲ್ಗೊಂಡಿದ್ದವು.
ರಾತ್ರಿ ಮಹಾ ರಂಗಪೂಜೆ, ಪರಿವಾರ ದೇವರ ವಿಶೇಷ ಪೂಜೆಯ ಬಳಿಕ ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ದೇವಾಲದ ಆಡಳಿತ ಮೊಕ್ತೇಸರ ಶಿಮಂತೂರು ಮಜಲಗುತ್ತು ಬಾಬಾ ರಂಜನ್ ಶೆಟ್ಟಿ, ಸ್ಥಾಪಕ ಕೃಷ್ಣ ಶೆಟ್ಟಿ, ಕಾರ್ಯದರ್ಶಿ ಪ್ರಮೋದ್ ವಿ. ಮಾತ್ರೆ, ಕೋಶಾಧಿಕಾರಿ ವೇಂಕಟೇಶ್ ಪಾಟೀಲ್ ಟ್ರಸ್ಟಿಗಳಾದ ಸುಂದರ ಶೆಟ್ಟಿಗಾರ್, ವೆಂಕಟೇಶ ಪಾಟೀಲ್, ಅನಿಲ್ ಶೆಟ್ಟಿ, ಪ್ರಸನ್ನ ಶೆಟ್ಟಿ ಕುರ್ಕಾಲ್, ಪ್ರಸನ್ನ ಶೆಟ್ಟಿ ಬೋಳ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಭಜನೆಯ ಗುರು ಶ್ರೀಧರ ಶೆಟ್ಟಿ ಮೀರಾರೋಡ್, ತಬಲಾ ವಾದಕ ಶ್ರೀಕಾಂತ್, ಭರತ ನಾಟ್ಯ ಪ್ರದರ್ಶಿಸಿದ ಖುಷಿ ಹರೀಶ್ ಶೆಟ್ಟಿ, ಮತ್ತು ಖುಷಿ ಅಜಿತ್ ಶೆಟ್ಟಿ, ವಿಶ್ವ ಡ್ಯಾನ್ಸ್ ಅಕಾಡೆಮಿಯ ಸಚಿನ್ ಜಾಧವ್, ಕಾರ್ಯಕ್ರಮ ನಿರೂಪಕ, ಚಲನಚಿತ್ರ, ರಂಗ ನಟ ಜಿ. ಕೆ. ಕೆಂಚನಕೆರೆ ಮತ್ತು ಲೇಖಕ ಅರುಣ್ ಕುಮಾರ್ ಶೆಟ್ಟಿ ಎರ್ಮಾಳ್ ಅವರನ್ನು ಗಣ್ಯರು ಗೌರವಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯ ಮತ್ತು ಪ್ರಾದೇಶಿಕ ನೃತ್ಯ ಪ್ರದರ್ಶನಗೊಂಡಿತು. ಶ್ರೀ ಮಹಾಲಿಂಗೇಶ್ವರ ಟ್ರಸ್ಟ್ ಸದಸ್ಯರು ಮತ್ತು ಮೀರಾ ಸೊಸೈಟಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಭಕ್ತಾಭಿಮಾನಿಗಳು, ತುಳು ಕನ್ನಡಿಗರು, ವಿವಿಧ ಕ್ಷೇತ್ರಗಳ ಗಣ್ಯರು, ವಿವಿಧ ಜಾತೀಯ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಉದ್ಯಮಿಗಳು ಉಪಸ್ಥಿತರಿದ್ದರು.
ಚಿತ್ರ-ವರದಿ: ರಮೇಶ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Kharge: ಬೆಂಗಳೂರಿಗೆ ಬಂದು ನನ್ನ ಜತೆ ಚರ್ಚೆಗೆ ನಿಲ್ಲಿ: ಪ್ರಧಾನಿ ಮೋದಿಗೆ ಖರ್ಗೆ ಸವಾಲು
IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್ ಹರಾಜು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.