ಶಿವಾಯ ಫೌಂಡೇಷನ್ ಮುಂಬಯಿ: ವೈದ್ಯಕೀಯ ನೆರವು ವಿತರಣೆ
Team Udayavani, Mar 7, 2019, 2:10 PM IST
ಮುಂಬಯಿ: ಬಡ ಕುಟುಂಬಗಳಿಗೆ ನೆರವಾಗುವುದರ ಮೂಲಕ ಅಶಕ್ತರ ಪಾಲಿಗೆ ಆಶಾಕಿರಣವಾಗಿ ಗೋಚರಿಸುತ್ತಿರುವ ಮುಂಬಯಿ ಮಹಾನಗರದ ಪ್ರತಿಷ್ಠಿತ ಸೇವಾ ಸಂಸ್ಥೆ ಶಿವಾಯ ಫೌಂಡೇಶನ್ ತನ್ನ 24 ಮತ್ತು 25ನೇ ಸೇವಾ ಯೋಜನೆಯ ಭಾಗವಾಗಿ ಎರಡು ಕುಟುಂಬಗಳಿಗೆ ವೈದ್ಯಕೀಯ ಶುಶ್ರೂಷೆಗಾಗಿ ಆರ್ಥಿಕ ಸಹಾಯ ಮಾಡುವ ಮೂಲಕ ಅಲ್ಪ ಪ್ರಮಾಣದಲ್ಲಿ ನೆರವಾಯಿತು.
ಉಡುಪಿ ಜಿÇÉೆಯ ಹೆಜಮಾಡಿ ಗ್ರಾಮದ ಮಟ್ಟುವಿನಲ್ಲಿ ಮೂರು ಬುದ್ಧಿಮಾಂದ್ಯ ಮಕ್ಕಳೊಂದಿಗೆ ವಾಸವಾಗಿರುವ ಜಯಂತಿ ಸುವರ್ಣರ ಕುಟುಂಬಕ್ಕೆ ಮಾನವೀಯತೆಯ ನೆಲೆಯಲ್ಲಿ ರೂ. 25,000 ಮೊತ್ತದ ಚೆಕ್ ವಿತರಿಸಲಾಯಿತು. ಅಲ್ಲದೆ ಪುಣೆಯಲ್ಲಿ ಪಾನ್ ಅಂಗಡಿ ಇಟ್ಟು ಜೀವನ ಸಾಗಿಸುತ್ತಿದ್ದ ಐತಪ್ಪ ಶೆಟ್ಟಿಯವರ ಎರಡು ವರ್ಷದ ಮಗಳು ಕು| ಆದ್ವಿಮಾಳ ಮೆದುಳು ರೋಗದ ಚಿಕಿತ್ಸೆಗಾಗಿ ರೂ. 25,000 ಮೊತ್ತದ ಚೆಕ್ಕನ್ನು ವಿತರಿಸಲಾಯಿತು.
ತಾವು ದುಡಿದ ಒಂದು ಅಂಶವನ್ನು ಸಾಮಾಜಿಕ ಚಟುವಟಿಕೆಗಳಿಗೆ ವಿನಿಯೋಗಿಸಿ ಮಾನವೀಯತೆ ಮೆರೆಯುತ್ತಾ ಬಡವರ ಪಾಲಿನ ಕಣ್ಣೀರೊರೆಸುತ್ತಾ ನಿರಂತರ ಸೇವಾ ಚಟುವಟಿಕೆಗಳಲ್ಲಿ ಶಿವಾಯ ಫೌಂಡೇಶನ್ ಎಂಬ ಈ ಸಂಸ್ಥೆಯ ಸಮಾನ ಮನಸ್ಕ ಯುವಕ ಯುವತಿಯರು ತಮ್ಮನ್ನು ತೊಡಗಿಸಿಕೊಂಡಿ¨ªಾರೆ.
ನಿರಂತರವಾಗಿ ಶಿವಾಯ ಫೌಂಡೇಶನ್ ಅಶಕ್ತ ಕುಟುಂಬಗಳನ್ನು ಗುರುತಿಸಿ ನೀಡುತ್ತಿರುವ ವೈದ್ಯ ಕೀಯ ಮತ್ತು ಶೈಕ್ಷಣಿಕ ಸೇವಾ ಚಟುವಟಿಕೆಗಳ ಭಾಗವಾಗಲು ಅಥವಾ ತಮ್ಮ ತಮ್ಮ ವ್ಯಾಪಾರ ಸ್ಥಳಗಳಲ್ಲಿ ಶಿವಾಯ ಫೌಂಡೇಶನಿನ ಡೊನೇಷನ್ ಬಾಕ್ಸ್‌ಗಳನ್ನು ಅಳವಡಿಸಲು ಹೆಚ್ಚಿನ ಮಾಹಿತಿಗಾಗಿ 9702833310, 9152775530 ಈ ನಂಬರ್‌ಗಳನ್ನು ಸಂಪರ್ಕಿಸಬಹುದು. ಶೈಕ್ಷಣಿಕವಾಗಿ ಮತ್ತು ವೈದ್ಯಕೀಯವಾಗಿ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜಮುಖೀ ಯೋಜನೆಗಳನ್ನು ಶಿವಾಯ ಫೌಂಡೇಶನ್ ಹಮ್ಮಿಕೊಳ್ಳಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.