ಸಾಧಕರ ಅಕಾಲಿಕ ನಿಧನ ತುಂಬಲಾರದ ನಷ್ಟ : ಧರ್ಮದರ್ಶಿ ರಮೇಶ್‌ ಪೂಜಾರಿ


Team Udayavani, Nov 21, 2020, 8:37 PM IST

ಸಾಧಕರ ಅಕಾಲಿಕ ನಿಧನ ತುಂಬಲಾರದ ನಷ್ಟ : ಧರ್ಮದರ್ಶಿ ರಮೇಶ್‌ ಪೂಜಾರಿ

ಮುಂಬಯಿ, ನ. 20: ಕಲಾಕ್ಷೇತ್ರದ ಅನರ್ಘ್ಯ

ರತ್ನ ಬೈಲೂರು ಬಾಲಚಂದ್ರ ರಾವ್‌ ಅವರು ಜಾತೀಯತೆ ಮೀರಿ ನಿಂತ ವ್ಯಕ್ತಿ. ಎಲ್ಲರೊಂದಿಗೆ ಅನ್ಯೋನ್ಯದಿಂದ ಬಾಳಿದ ಅವರು ಕಲಾಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ನಾಡು-ನುಡಿ, ಸಂಸ್ಕೃತಿ, ಸಂಸ್ಕಾರಗಳ ಪುನರುತ್ಥಾನಕ್ಕೆ ಸದಾ ಶ್ರಮಿಸುತ್ತಿದ್ದ ಅವರ ಅಕಾಲಿನ ನಿಧನ ಮುಂಬಯಿ ತುಳು-ಕನ್ನಡಿಗರಿಗೆ ಬಹುದೊಡ್ಡ ನಷ್ಟವಾಗಿದೆ. ಜಯ ಸಿ. ಸುವರ್ಣರು ಬಿಲ್ಲವ ಸಮುದಾಯದ ನಾಯಕರಾಗಿದ್ದರೂ ಎಲ್ಲ ಸಮುದಾಯ ಗಳ ಬಾಂಧವರೊಂದಿಗೆ ಉತ್ತಮ ಬಾಂಧವ್ಯ

ಉಳಿಸಿಕೊಂಡವರು. ಭಾರತ್‌ ಬ್ಯಾಂಕ್‌ನ ಪ್ರಗತಿಯ ಹರಿಕಾರ, ಬಿಲ್ಲವರ ಸಂಘಟನೆ ಗಾಗಿ ಅಲ್ಲಲ್ಲಿ ಸ್ಥಳೀಯ ಕಚೇರಿಗಳನ್ನು ಸ್ಥಾಪಿಸಿ, ಸಮಾಜ ಬಾಂಧವರಿಗೆ ಸ್ಥಾನಮಾನ ಕಲ್ಪಿಸಿ, ಸ್ವಾಭಿಮಾನಿಗಳಾಗಿ ಬಾಳಲು ಕಲಿಸಿ ದವರು ಜಯ ಸುವರ್ಣರು ಎಂದು ನೆರೂಲ್‌ ಶ್ರೀ ಶನಿಮಂದಿರದ ಅಧ್ಯಕ್ಷ, ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ ತಿಳಿಸಿದರು.

ಇತ್ತೀಚೆಗೆ ನಿಧನ ಹೊಂದಿದ ಕನ್ನಡ ಕಲಾಕೇಂದ್ರ ಮುಂಬಯಿ ಅಧ್ಯಕ್ಷ ಬೈಲೂರು ಬಾಲಚಂದ್ರ ರಾವ್‌ ಮತ್ತು ಬಿಲ್ಲವ ಸಮಾಜ ರತ್ನ ಜಯ ಸಿ. ಸುವರ್ಣ ಅವರಿಗೆ ನೆರೂಲ್‌ ಶ್ರೀ ಶನಿಮಂದಿರದಲ್ಲಿ  ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿ, ಇಬ್ಬರು ಸಾಧಕರ ಅಕಾಲಿಕ ನಿಧನ ತುಳು- ಕನ್ನಡಿಗರನ್ನು ವಿಚಲಿತಗೊಳಿಸಿದೆ ಎಂದರು.

ನೆರೂಲ್‌ ಶ್ರೀ ಶನೀಶ್ವರ ಮಂದಿರದ ಉಪಾಧ್ಯಕ್ಷ ಗೋಪಾಲ್‌ ವೈ. ಶೆಟ್ಟಿ  ಮಾತನಾಡಿ, ಕಲಾಕ್ಷೇತ್ರದ ಸಾಧಕರಾದ ಬಾಲಚಂದ್ರ ರಾವ್‌ ಅವರು ನಾಡು- ನುಡಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದರು. ಜಯ ಸುವರ್ಣರು ಬಿಲ್ಲವ ಸಮಾಜೋದ್ಧಾರಕರಾಗಿದ್ದು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ರಂಗದಲ್ಲಿ ಅವರ ಸೇವೆ ಅಪಾರ ಎಂದು ನುಡಿನಮನ ಸಲ್ಲಿಸಿದರು.

ಶ್ರೀ ಅಯ್ಯಪ್ಪ ಚಾರಿಟೆಬಲ್‌ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಅನಿಲ್‌ ಕೆ. ಹೆಗ್ಡೆ ಮಾತನಾಡಿ, ಬಾಲಚಂದ್ರ ರಾವ್‌ ಅವರು ನೌಕಾಪಡೆಯಲ್ಲಿ ಉದ್ಯೋಗ ದಲ್ಲಿದ್ದು ದೇಶಸೇವೆ ಮಾಡಿದವರು. ಸಂಘಟನೆಯಲ್ಲೂ ಮುಂಚೂಣಿಯ ಲ್ಲಿದ್ದರು. ಜಯ ಸುವರ್ಣರು ಏಕತೆಯನ್ನು ಎತ್ತಿ ಹಿಡಿದ ಧೀಮಂತ ನಾಯಕರಾಗಿದ್ದಾರೆ. ವಿರೋಧಾಭಾಸವಿಲ್ಲದ ಸೌಮ್ಯ ಸ್ವಭಾವದ ಸಮಾಜ ಸೇವಕ ಅವರಾಗಿದ್ದರು ಎಂದರು.

ನೆರೂಲ್‌ ಶ್ರೀ ಶನೀಶ್ವರ ಮಂದಿರ ವಿಶ್ವಸ್ಥ ಪ್ರಭಾಕರ ಹೆಗ್ಡೆ ಅವರು ಬೈಲೂರು ಬಾಲ ಚಂದ್ರ ರಾವ್‌ ಅವರ ಕಾರ್ಯವೈಖರಿಯನ್ನು ಸ್ಮರಿಸಿ, ಕನ್ನಡಕ್ಕಾಗಿ ಅವರ ಸೇವೆ ಅಭಿನಂದನೀಯ. ತಾನು ತೊಡುತ್ತಿದ್ದ ಬಿಳಿ ಬಟ್ಟೆಯಂತೆ ಜಯ ಸುವರ್ಣರ ಮನಸ್ಸು ಕೂಡ ಶುಭ್ರವಾಗಿತ್ತು. ಭವನ ನಿರ್ಮಾಣದ ವೇಳೆ ಅವರ ಮಾರ್ಗದರ್ಶನವನ್ನು ಮರೆಯುವಂತಿಲ್ಲ ಎಂದರು.

ರಂಗಭೂಮಿ ಫೈನ್‌ ಆರ್ಟ್ಸ್ ಅಧ್ಯಕ್ಷ ತಾರಾನಾಥ್‌ ಶೆಟ್ಟಿ ಮಾತನಾಡಿ, ಬೈಲೂರು ಬಾಲಚಂದ್ರ ರಾವ್‌ ಅವರಲ್ಲಿ  ವೇಗದ ಯೋಚನಾ ಲಹರಿಯಿತ್ತು. ಬಡವರ ಬಗ್ಗೆ ಕಾಳಜಿ ಇದ್ದ ಜಯಣ್ಣನವರು ಹೆಸರಿಗೆ ತಕ್ಕಂತೆ ಜಯವನ್ನೇ ಸಾಧಿಸಿದವರು ಎಂದು ಹೇಳಿದರು.

ಬಿಜೆಪಿ ಕನ್ನಡ ಘಟಕದ ನವಿಮುಂಬಯಿ ಅಧ್ಯಕ್ಷ ಹರೀಶ್‌ ಪೂಜಾರಿ ಮಾತನಾಡಿ, ಬಿ. ಬಿ. ರಾವ್‌ ಅವರ ಕಲಾಸೇವೆ, ಸಮಾಜ ಸೇವೆಯಿಂದ ಸಮಾಜ ಅವರನ್ನು ಗುರುತಿಸುವಂತಾಗಿದೆ. ಜಯಣ್ಣನವರು ತಮ್ಮ ಸಮಾಜ ಸೇವೆಯಿಂದಾಗಿ ಸದಾ ಜನಮಾನಸದಲ್ಲಿ ನೆಲೆಸಿದವರು ಎಂದರು. ಭಾರತ್‌ ಬ್ಯಾಂಕ್‌ನ ಮಹಾಪ್ರಬಂಧಕ ರಮೇಶ್‌ ಪೂಜಾರಿ ಮಾತನಾಡಿ, ಇಬ್ಬರು ಮಹಾನ್‌ ವ್ಯಕ್ತಿಗಳು ನಮ್ಮನ್ನು ಅಗಲಿ ದ್ದಾರೆ. ಕಲಾಕ್ಷೇತ್ರದಲ್ಲಿ ಛಾಪು ಮೂಡಿಸಿದ ವ್ಯಕ್ತಿ ಬಿ. ಬಿ. ರಾವ್‌ ಅವರಾದರೆ, ಭಾರತ್‌ ಬ್ಯಾಂಕ್‌ನ ಶತ ಶಾಖೆಗಳ ಸರದಾರ ಜಯಣ್ಣನವರಾಗಿದ್ದಾರೆ  ಎಂದು ಹೇಳಿದರು.

ಸಾಮಾಜಿಕ ಮತ್ತು ಕಲಾಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿ ಸದಾ ನಗುಮುಖದ ಬಾಲಚಂದ್ರ ರಾವ್‌ ಅವರದ್ದಾದರೆ, ಮನುಕುಲದ ಶಿರೋಮಣಿ ಜಯಣ್ಣ ಎಂದು ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಅವರು ನುಡಿನಮನ ಸಲ್ಲಿಸಿದರು. ಬಿ. ಬಿ. ರಾವ್‌ ಅವರು ಅಪ್ಪಟ ಕಲಾರಾಧಕರಾದರೆ, ಜಯಣ್ಣ ಅವರು ಯುಗ ಪ್ರವರ್ತಕರು ಎಂದು ಸಮಾಜ ಸೇವಕ ಸತೀಶ್‌ ಎರ್ಮಾಳ್‌ ತಿಳಿಸಿದರು.

ತಾರಾ ಬಂಗೇರ, ವೀಣಾ ವಿ. ಪೂಜಾರಿ ಅವರು ನುಡಿನಮನ ಸಲ್ಲಿಸಿದರು. ಶನಿ ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿ ವಿ. ಕೆ. ಸುವರ್ಣ ಅವರು ಪ್ರಸ್ತಾವಿಸಿದರು. ಬಿ. ಬಿ. ರಾವ್‌ ಮತ್ತು ಜಯ ಸಿ. ಸುವರ್ಣರ ಭಾವಚಿತ್ರಕ್ಕೆ ಪುಷ್ಪನಮನಗೈದು, ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸ್ಥಳೀಯ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ತುಳು, ಕನ್ನಡಿಗರು ಉಪಸ್ಥಿತರಿದ್ದರು.

ಬಾಲಚಂದ್ರ ರಾವ್‌ ಅವರು ಸ್ನೇಹಜೀವಿಯಾಗಿದ್ದರು. ಶನಿಮಂದಿರದ ಕಾರ್ಯಕಾರಿ ಸಮಿತಿಯನ್ನು  ನವಿಮುಂಬಯಿಯ ಕನ್ನಡ ಸಂಘದಲ್ಲಿ ಸೇರಿಸಿಕೊಂಡ ಶ್ರೇಯಸ್ಸು ಬಾಲಚಂದ್ರ ರಾವ್‌ ಅವರಿಗೆ ಸಲ್ಲುತ್ತದೆ. ಜಯ ಸಿ. ಸುವರ್ಣರ ಸಮಾಜ ಸೇವೆ ಅಪಾರವಾಗಿದೆ. ಸಮಾಜದ ಉನ್ನತಿಗಾಗಿ ಅವಿರತ ಶ್ರಮಿಸಿ ಭಾರತ್‌ ಬ್ಯಾಂಕ್‌ನ ಮುಖಾಂತರ ಇತರ ಸಮಾಜದವರ ಯಶಸ್ಸಿಗೆ ಕಾರಣಿಭೂತರಾಗಿದ್ದಾರೆ. ಮುಂಬಯಿಯಲ್ಲಿ ಹೆಚ್ಚಿನ ಹೊಟೇಲಿಗರಿಗೆ ಜಯ ಸುವರ್ಣರ ಋಣವಿದೆ. ಎಲ್ಲರೊಂದಿಗೆ ಒಂದಾಗಿ ಬದುಕು ಕಟ್ಟಿದ ಅವರ ಬದುಕು ಇತರರಿಗೆ ಮಾದರಿಯಾಗಿದೆ. ಸಂತೋಷ್‌ ಡಿ. ಶೆಟ್ಟಿ, ಕಾರ್ಯಾಧ್ಯಕ್ಷರು, ನೆರೂಲ್‌ ಶ್ರೀ ಶನೀಶ್ವರ ಮಂದಿರ

ಸುಮಾರು 18 ವರ್ಷಗಳಿಂದ ಬಾಲಚಂದ್ರ ರಾವ್‌ ಅವರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದೇನೆ. ಅವರೋರ್ವ ಸ್ನೇಹಜೀವಿಯಾಗಿದ್ದು, ಕಲಾ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಪಾರವಾಗಿದೆ. ಮುಂಬಯಿಯ ಹಿರಿಯ ಸಂಸ್ಥೆ ಬಿಎಸ್‌ಕೆಬಿ ಅಸೋಸಿಯೇಶನ್‌ ಸಂಚಾಲಕತ್ವದ ನೆರೂಲ್‌ನ ಆಶ್ರಯ ತಾಣದಲ್ಲಿ ಹಿರಿಯ ನಾಗರಿಕರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟು ಇಂದು ಸಂಸ್ಥೆಯ ಕಾರ್ಯಕಾರಿ ಸಮಿತಿ ಮತ್ತು ಸದಸ್ಯರೆಲ್ಲರೂ ನನ್ನನ್ನು ಅದರ ಸದಸ್ಯರಂತೆ ಗೌರವಿಸುವಂತೆ ಮಾಡಿದವರು ಬಿ. ಬಿ. ರಾವ್‌. ಜಯ ಸಿ. ಸುವರ್ಣರು ಎಲ್ಲ ಸಮುದಾಯದವರಿಂದಲೂ ಗೌರವಿಸಲ್ಪಡುವ ವ್ಯಕ್ತಿ. ಈ ಇಬ್ಬರು ಚೇತನಗಳ ಆದರ್ಶ ನಮಗೆ ದಾರಿದೀಪವಾಗಬೇಕು. ವಿ. ಕೆ. ಸುವರ್ಣ,  ಗೌರವ ಪ್ರಧಾನ ಕಾರ್ಯದರ್ಶಿ, ನೆರೂಲ್‌ ಶ್ರೀ ಶನೀಶ್ವರ ಮಂದಿರ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.