ರಾಮರಾಜ ಕ್ಷತ್ರಿಯ ಸೇವಾ ಸಂಘ ಮಹಿಳಾ ವಿಭಾಗದಿಂದ ಶ್ರಾವಣ ಸಂಭ್ರಮ
Team Udayavani, Aug 14, 2018, 5:06 PM IST
ಮುಂಬಯಿ: ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಶ್ರಾವಣ ಸಂಭ್ರಮ ಕಾರ್ಯಕ್ರಮವು ಆ. 12ರಂದು ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಆರೋಗ್ಯ ಸಂಜೀವಿನಿ ಮತ್ತು ಇನ್ನಿತರ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಸಂಘದ ಮಹಿಳಾ ವಿಭಾಗಧ್ಯಕ್ಷೆ ರೀನಾ ಕೇದರ್‌ನಾಥ್ ಬೋಳಾರ್ ಅವರ ಮುಂದಾಳತ್ವದಲ್ಲಿ ನಡೆದ ತ್ರಿವಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜ್‌ಕುಮಾರ್ ಕಾರ್ನಾಡ್ ವಹಿಸಿದ್ದರು. ಸಮಾಜದ ಜೇಷ್ಠ ಮಹಿಳಾ ಧುರೀಣೆ ಧನ್ವಂತರಿ ದಿನಕರ್ ರಾವ್ ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಅತಿಥಿಗಳಾಗಿ ಸುಮನ್ ಮನ್‌ಮೋಹನ್ ರಾಜ್, ಕಲಾವತಿ ಗಣಪತಿ ಸೌಕೂರ್, ಸಂಘದ ಉಪಾಧ್ಯಕ್ಷ ಎನ್. ರವೀಂದ್ರನಾಥ್ ರಾವ್, ಗೌರವ ಪ್ರಧಾನ ಕಾರ್ಯದರ್ಶಿ ಕೇದರ್‌ನಾಥ ಆರ್. ಬೋಳಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ವಿಭಾಗದ ಅಧ್ಯಕ್ಷೆ ರೀನಾ ಕೇದರ್‌ನಾಥ್ ಅವರು ಮಾತನಾಡಿ, ಸದ್ಯ ಮಹಿಳೆಯರಿಗೆ ಸ್ಥಾನಮಾನದ ಅಭಾವವಿದೆ ಎನ್ನುವುದು ತಪ್ಪು ಕಲ್ಪನೆ. ಅವಕಾಶ ತಮ್ಮದಾಗಿಸಲು ಮಹಿಳಾ ಶಕ್ತಿ ಸ್ವಯಂ ಪ್ರೇರಿತರಾಗಿ ಮುಂದಾಗಬೇಕು. ಮಹಿಳೆಯರ ಭಾವನೆ ಮನಸ್ಸುಗಳನ್ನು ಅರ್ಥೈಸುವಲ್ಲಿ ಪುರುಷರು ಸಫಲರಾದಾಗ ಅವಕಾಶಗಳು ತನ್ನಷ್ಟಕ್ಕೆ ಫಲಿಸುವುದು. ಪುರುಷ ಮಹಿಳೆಯ ಸಮಾನತೆಯಿಂದ ಮಾತ್ರ ಇದು ಸಾಧ್ಯವಾಗಲಿದೆ. ಅವಾಗಲೇ ಮಹಿಳೆಯರಲ್ಲಿನ ಅನ್ಯೋನ್ಯತೆ ನಿವಾರಣೆ ಆಗಬಲ್ಲದು ಎಂದರು.
ನಾರಿಯರಲ್ಲಿನ ನಾನು ಎಂಬ ಅಹಂ ಸಂಘರ್ಷಕ್ಕೆ ಕಾರಣವಾಗದೆ ಸಹನೆ, ಸಹಬಾಳ್ವೆ ಪ್ರಧಾನವಾಗಿ ಮೂಡಿದಾಗ ಸಾಂಸಾರಿಕ ಬದುಕು ಹಸನಾಗುತ್ತದೆ. ಆದ್ದರಿಂದ ಸಮಾಧಾನವೇ ಸಮಾನತೆಯ ಬಾಳಿನ ತಂತ್ರವಾಗಿದೆ ಎಂದು ನುಡಿದರು.
ವೀಣಾ ಸಂತೋಷ್ ರಾವ್ ಅವರು, ಶ್ರಾವಣ ಆಚರಣೆ ಬಗ್ಗೆ ಸ್ಥೂಲವಾದ ಮಾಹಿತಿ ನೀಡಿ, ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪ್ರಾಪ್ತಿಗಾಗಿ ಆಷಾಢ ಮಾಸದ ಅಮಾವಾಸ್ಯೆಯ ಸಂಜೆ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುವುದಿದೆ. ಆಷಾಢದ ಶುಕ್ಲ ಪಕ್ಷದ ಪಂಚಮಿಯ ದಿನ ಮಹಿಳೆಯರು ಅಮೃತಲಕ್ಷ್ಮೀ ವ್ರತವನ್ನು ಭಕ್ತಿಯಿಂದ ಆಚರಿಸುತ್ತಾರೆ. ಈ ಎಲ್ಲಾ ಮಹತ್ವಗಳು ಆಷಾಢ ಮಾಸದಲ್ಲಿ ಇರುವುದರಿಂದ ಈ ತಿಂಗಳು ವಿಶೇಷವಾಗಿದೆ ಎಂದರು.
ಕುಲದೇವರು ಶ್ರೀ ರಾಮ ದೇವರನ್ನು ಸ್ತೋತ್ರದೊಂದಿಗೆ ಆರಾಧಿಸಿ ಕಾರ್ಯಕ್ರಮವು ಪ್ರಾರಂಭಗೊಂಡಿತು. ಬಳಿಕ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.
ಮಹಿಳೆಯರಿಂದ ಅರಸಿನ ಕುಂಕುಮ ಕಾರ್ಯಕ್ರಮ, ಕನ್ನಡ ಕಲಿಕೆ ಮತ್ತು ಆಧುನಿಕ ಯುಗದ ದಾಂಪತ್ಯ ಜೀವನದಲ್ಲಿ ಗಂಡನ ಪಾತ್ರ ಮುಖ್ಯವೋ ಹೆಂಡತಿಯ ಪಾತ್ರ ಪ್ರಧಾನವೋ ವಿಚಾರವಾಗಿ ಹರಟೆ ಕಾರ್ಯಕ್ರಮ ಪ್ರಸ್ತುತಗೊಂಡಿತು. ಮಧ್ಯಾಂತರದಲ್ಲಿ ಮಹಿಳಾ ವಿಭಾಗದ ಪದಾಧಿಕಾರಿಗಳು ಯೋಗ ಇನ್‌ಸ್ಟಿಟ್ಯೂಟ್ ತಂಡವು ಜೀವವನ್ನು ಯಾವ ರೀತಿಯಾಗಿ ಸಮತೋಲನದಲ್ಲಿ ಇರಿಸಬೇಕು ವಿಚಾರಿತ ಆರೋಗ್ಯ ಸಂಜೀವಿನಿ ಮಾಹಿತಿ ಕಾರ್ಯಗಾರವನ್ನು ನಡೆಸಿ, ಯೋಗದ ಮುಖೇನ ತಿಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಘದ ಸದಸ್ಯರು, ಮಹಿಳಾ ಸದಸ್ಯೆಯರು, ಮಕ್ಕಳಿಂದ ವಿವಿಧ ವಿನೋದಾವಳಿಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ರಾಮರಾಜ ಕ್ಷತ್ರಿಯ ಸಂಘ ಮುಂಬಯಿ ಮಹಿಳಾ ವಿಭಾಗದ ಗೌರವ ಕೋಶಾಧಿಕಾರಿ ಪ್ರಜ್ಞಾ ಎಸ್. ರಾವ್, ಕಾರ್ಯಕಾರಿ ಸಮಿತಿಯ ಸದಸ್ಯೆಯರುಗಳಾದ ಕವಿತಾ ಆರ್. ರಾವ್, ಕಾಂತಿ ವಿ. ರಾವ್, ಧನಲಕ್ಷ್ಮೀ ಆರ್. ಕಾರ್ನಾಡ್, ಶ್ರೇಯಾ ಎಸ್. ರಾವ್, ಸಾರಿಕಾ ಡಿ. ಶೇರುಗಾರ್, ಅನುಪಮಾ ಎಸ್. ರಾವ್, ನಿಶಾ ಎಸ್. ರಾವ್, ಗಾಯತ್ರಿ ರಾವ್ ಸೇರಿದಂತೆ ಮಾಜಿ, ಹಾಲಿ ಪದಾಧಿಕಾರಿಗಳು, ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು.
ಆರತಿ ಎನ್. ರಾವ್ ವಿವಿಧ ಸ್ಪರ್ಧೆಗಳನ್ನು ನಡೆಸಿಕೊಟ್ಟರು.
ಕೀರ್ತನ ರೂಪೇಶ್ ರಾವ್ ಸ್ವಾಗತಿಸಿದರು. ಮಹಿಳಾ ವಿಭಾಗದ ಸದಸ್ಯೆಯರಿಂದ ಭಜನ ಕಾರ್ಯಕ್ರಮ ನಡೆಯಿತು. ಅಧ್ಯಕ್ಷ ರಾಜ್‌ಕುಮಾರ್ ಕಾರ್ನಾಡ್ ಗಣ್ಯರಿಗೆ ಪುಷ್ಪಗುತ್ಛವನ್ನಿತ್ತು ಸ್ಪರ್ಧಾ ವಿಜೇತರಿಗೆ ಬಹುಮಾನ ಪ್ರದಾನಿಸಿ ಅಭಿನಂದಿಸಿದರು. ಸಪ್ನಾ ಉದಯಕುಮಾರ್ ಬೇಕಲ್ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಗೌರವ ಕಾರ್ಯದರ್ಶಿ ಚಿತ್ರಾ ಎಂ. ರಾವ್ ವಂದಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.