ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ: ನಾಗರ ಪಂಚಮಿ ಆಚರಣೆ
Team Udayavani, Aug 20, 2021, 2:27 PM IST
ಪುಣೆ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯ ದಿನವಾದ ಆ. 13ರಂದು ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರಾಂಗಣದಲ್ಲಿರುವ ನಾಗದೇವರ ಗುಡಿಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಹರೀಶ್ ಭಟ್ ಮತ್ತು ತಂಡದವರ ಪೌರೋಹಿತ್ಯದಲ್ಲಿ ಬೆಳಗ್ಗೆ 7.30ರಿಂದ ನಾಗ ದೇವರಿಗೆ ಪಂಚಾ ಮೃತ, ಸಿಯಾಳ ಅಭಿಷೇಕ, ತನು ತಂಬಿಲ, ಆಶ್ಲೇಷಾ ಬಲಿ ಪೂಜೆ, ಜರಗಿತು. ಸರಕಾರದ ಕೋವಿಡ್ ನಿಯಮಾನುಸಾರ ನಾಗರ ಪಂಚಮಿಯನ್ನು ಆಚರಿಸಲಾಯಿತು.
ಇದನ್ನೂ ಓದಿ:OPPO A15 ಈಗ ಮತ್ತಷ್ಟು ಅಗ್ಗ : ಜಿಯೋ ಬಳಕೆದಾರರಿಗೆ ಸಿಗುತ್ತಿದೆ ಬಾರಿ ರಿಯಾಯಿತಿ..!
ಭಕ್ತರ ಕೋರಿಕೆಯಂತೆ ಆನ್‌ಲೈನ್ ಮೂಲಕ ಹೆಸರು ನೊಂದಾಯಿಸಿ ದವರ ಹೆಸರಿನಲ್ಲಿ ನಾಗ ತನು ತಂಬಿಲ ಸೇವೆ, ಆಶ್ಲೇಷಾ ಪೂಜೆ
ಮಾಡಿಸಿ ಅವರ ವಿಳಾಸಕ್ಕೆ ಗಂಧ ಪ್ರಸಾದವನ್ನು ತಲುಪಿಸುವ ವ್ಯವಸ್ಥೆ ಯನ್ನು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘವು ಕೈಗೊಂಡಿತ್ತು.
ನಾಗ ದೇವರಿಗೆ ಮಹಾಮಂಗಳಾರತಿ ಬಳಿಕ ದೇವಸ್ಥಾನದ ಪ್ರಧಾನ ದೇವರು ಸಹಿತ ಪರಿವಾರ ದೇವರಿಗೆ ಮಹಾ ಪೂಜೆ, ಮಂಗಳಾರತಿ ನಡೆಯಿತು. ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಿಶ್ವಸ್ಥ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸದಸ್ಯರ ಸಹಕಾರದೊಂದಿಗೆ ಧಾರ್ಮಿಕ ಕಾರ್ಯಕ್ರಮ ನೆರವೇರಿತು.
ವರದಿ: ಹರೀಶ್ ಮೂಡಬಿದ್ರೆ ಪುಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.