ನಾಳೆ ಕರ್ಕ ಸಂಕ್ರಮಣ: ದಕ್ಷಿಣಾಯನ ಆರಂಭ
ಸೂರ್ಯ ಮಿಥುನ ರಾಶಿಯಿಂದ ಕರ್ಕ ರಾಶಿಗೆ ಪ್ರವೇಶ ಪಡೆಯುತ್ತಾನೆ.
Team Udayavani, Jul 15, 2021, 8:33 AM IST
ಭಾರತೀಯ ಖಗೋಳಶಾಸ್ತ್ರದಲ್ಲಿ ಹೇಳಿರುವ ರಾಶಿ ಚಕ್ರದ ನಕ್ಷತ್ರಪುಂಜ ಸೂರ್ಯನು ಒಂದು ರಾಶಿಯಿಂದ ಮುಂದಿನ ರಾಶಿಗೆ ವರ್ಗಾವಣೆ ಯಾಗುವುದನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ವರ್ಷದಲ್ಲಿ 12 ಸಂಕ್ರಾಂತಿ ಗಳಿದ್ದು, ಅವುಗಳಲ್ಲಿ ಕೆಲವು ಸಂಕ್ರಾಂತಿಗಳಿಗೆ ವಿಶೇಷತೆಯಿದೆ.
ತೆಲಂಗಾಣ, ಆಂಧ್ರಪ್ರದೇಶ, ತಮಿಳು ನಾಡು, ಕೇರಳ, ಕರ್ನಾಟಕ, ಪಂಜಾಬ್, ಒಡಿಶಾ, ಬಿಹಾರ, ನೇಪಾಳದಲ್ಲಿ ಸಂಕ್ರಾಂತಿಯನ್ನು ತಿಂಗಳ ಆರಂಭವೆಂದು ಗುರುತಿಸಲಾಗುತ್ತದೆ. ಬಂಗಾಳಿ ಹಾಗೂ ಅಸ್ಸಾಮೀಸ್ ಕ್ಯಾಲೆಂಡರ್‌ನಲ್ಲಿ ಸಂಕ್ರಾಂತಿ ಯನ್ನು ಪ್ರತಿ ತಿಂಗಳ ಕೊನೆಯಲ್ಲಿ ಮತ್ತು ಮುಂದಿನ ದಿನವನ್ನು ಹೊಸ ತಿಂಗಳ ಪ್ರಾರಂಭವೆಂದು ಗುರುತಿಸಲಾಗಿದೆ.
ಕ್ಯಾಲೆಂಡರ್ ವರ್ಷದ ಆರಂಭದಲ್ಲಿ ಮಕರ ಸಂಕ್ರಾಂತಿ ಪ್ರಾರಂಭವಾಗುವುದು. ಇಲ್ಲಿಂದ ಆರು ತಿಂಗಳು ಉತ್ತರಾಯಣ ಅವಧಿಯಿದೆ. ಇದು ಸೂರ್ಯನು ಉತ್ತರದ ಪ್ರಯಾಣವನ್ನು ಪ್ರಾರಂಭಿಸುವ ದಿನ ವಾಗಿರುತ್ತದೆ. ಸಾಮಾನ್ಯವಾಗಿ ಸಂಕ್ರಾಂತಿ ಯು ಭಾರತೀಯ ಕ್ಯಾಲೆಂಡರ್ ಪ್ರಕಾರ 14, 15, 16, 17ಕ್ಕೆ ಬರುವುದು.
ಹಿಂದೂ ಸೌರಮಾನ ಕ್ಯಾಲೆಂಡರ್‌ನಲ್ಲಿ ಮೇಷ ಸಂಕ್ರಾಂತಿಯು ಹೊಸ ವರ್ಷದ ಆರಂಭವನ್ನು ಸೂಚಿಸುವ ದಿನವಾಗಿ ರುತ್ತದೆ. ಈ ಸಂದರ್ಭದಲ್ಲಿ ಕೇರಳದಲ್ಲಿ ವಿಶು, ತಮಿಳುನಾಡಿನಲ್ಲಿ ಪುಥಂಡು, ತುಳುನಾಡಿನಲ್ಲಿ ಬಿಸು, ಪಂಜಾಬ್‌ನಲ್ಲಿ ವೈಶಾಖೀ, ಒಡಿಶಾದಲ್ಲಿ ಪನಾ, ಬಿಹಾರದ ಮಿಥಿಲಾದಲ್ಲಿ ಜೂಡ್ ಶೀತಲ್, ಬಂಗಾಳದಲ್ಲಿ ಪೊಹೆಲಾ ಬೋಯಿಶಾಕ್, ಅಸ್ಸಾಮ್‌ನಲ್ಲಿ ಬೋಹಾಗ್ ಬಿಹುವನ್ನು ಆಚರಿಸಲಾಗುತ್ತದೆ.
ಮಾತೃಭೂಮಿಯ ವಾರ್ಷಿಕ ಮುಟ್ಟಿನ ಹಂತವಾಗಿ ಮಿಥುನಾ ಸಂಕ್ರಮಣದ ಆಚರಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ಪೂರ್ವ, ಈಶಾನ್ಯ ಪ್ರಾಂತ್ಯಗಳಲ್ಲಿ ಅಂಬುಬಾಚಿ ಮೇಳ ನಡೆಯುತ್ತದೆ. ಸೌರ ಮಾಸದ ಮೊದಲ ದಿನ ಆಚರಿಸುವ ಧನು ಸಂಕ್ರಾಂತಿಯಂದು ದಕ್ಷಿಣ ಭೂತಾನ್,
ನೇಪಾಳದಲ್ಲಿ ಆಲೂಗಡ್ಡೆ ತಿನ್ನುವ ಮೂಲಕ ಆಚರಿಸಲಾಗುತ್ತದೆ.
ಉತ್ತರಾಯಣ ಅವಧಿಯ ಅಂತ್ಯ ಮತ್ತು ದಕ್ಷಿಣಾಯನದ ಆರಂಭವನ್ನು ಕರ್ಕ ಸಂಕ್ರಾಂತಿ ಸೂಚಿಸಿದರೆ ಸಿಂಹ ಸಂಕ್ರಾಂತಿಗೆ ಜಮ್ಮುವಿನಲ್ಲಿ ಭದ್ರಪದ ಉತ್ಸವವನ್ನು ಆಚರಿಸಲಾಗುತ್ತದೆ. ಇದನ್ನು ಸಿಂಗ್ ಸಂಕ್ರಾಂತ್ ಎಂದೇ ಕರೆಯಲಾಗುತ್ತದೆ. ನಾಳೆಯಿಂದ ದಕ್ಷಿಣಾಯನ ಜು. 16 ಅಂದರೆ ನಾಳೆಯಿಂದ ದಕ್ಷಿಣಾಯಾನದ ಪ್ರಾರಂಭ ವಾಗಲಿದೆ. ಸೂರ್ಯ ಮಿಥುನ ರಾಶಿಯಿಂದ ಕರ್ಕ ರಾಶಿಗೆ ಪ್ರವೇಶ ಪಡೆಯುತ್ತಾನೆ. ಈ ಮೂಲಕ ತನ್ನ ಪಥವನ್ನೂ ಬದಲಿಸುತ್ತಾನೆ.
ಅದ್ದರಿಂದ ನಾಳೆಯಿಂದ ಸೂರ್ಯನು ದಕ್ಷಿಣಾಭಿಮುಖವಾಗಿ ಚಲಿಸಲು ಪ್ರಾರಂಭಿಸುತ್ತಾನೆ. ಹೀಗಾಗಿ ಇನ್ನು ಮುಂದಿನ ಆರು ತಿಂಗಳುಗಳನ್ನು ದಕ್ಷಿಣಾಯಾನ ಎನ್ನಲಾಗುತ್ತದೆ. ಇದು ಮುಂದಿನ ಮಕರ ಸಂಕ್ರಾಂತಿಗೆ ಕೊನೆಗೊಳ್ಳವುದು. ಹಿರಿಯರ ನಂಬಿಕೆಗಳ ಪ್ರಕಾರ ಕರ್ಕ ಸಂಕ್ರಾಂತಿಯ ಬಳಿಕ ಮಳೆಗಾಲದ ಪ್ರಾರಂಭ ಎಂದೇ ಹೇಳಲಾಗುತ್ತದೆ. ಕರ್ಕ ಸಂಕ್ರಾಂತಿ ವೈಷ್ಣವರಿಗೆ ವಿಶೇಷವಾಗಿರುತ್ತದೆ. ಈ ದಿನ ವಿಷ್ಣುವನ್ನು ಆರಾಧಿಸಲಾಗುತ್ತದೆ. ಹೀಗಾಗಿ ವಿಷ್ಣುವಿನ ಆಲಯ ಗಳಲ್ಲಿ ವಿಶೇಷ ಪೂಜೆ, ಆರಾಧನೆ ಗಳು ನಡೆಯುತ್ತವೆ. ಈ ದಿನದಿಂದ ಚಾತುರ್ಮಾಸದ ಪ್ರಾರಂಭವಾಗಲಿದ್ದು, ವ್ಯಾಪಾರಿಗಳಿಗೂ ಅತ್ಯುತ್ತಮ ಎಂದೇ ಪರಿಗಣಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.