ದಾನಿಗಳ ಸಹಕಾರದಿಂದ ಸಂಸ್ಥೆ ಮುನ್ನಡೆಯುತ್ತಿದೆ: ಆರ್‌. ಕೆ. ಸುವರ್ಣ


Team Udayavani, Feb 16, 2022, 11:51 AM IST

Untitled-1

ಡೊಂಬಿವಲಿ: ಸಂಸ್ಥೆಯ ಪದಾಧಿಕಾರಿ ಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸಂಘದ ಸದಸ್ಯರ ಅವಿರತ ಶ್ರಮದಿಂದ ಹಾಗೂ ಕೊಡುಗೈ ದಾನಿಗಳ ಸಹಕಾರದಿಂದ ಸಂಸ್ಥೆಯನ್ನು ಮುನ್ನಡೆಸಲು ಸಾಧ್ಯವಾಗುತ್ತಿದೆ. ನಮ್ಮ ಸಮಾಜಪರ ಕಾರ್ಯಕ್ರಮಗಳು ಹೀಗೆಯೇ ಮುಂದುವರಿಯಲಿದ್ದು, ತುಳು – ಕನ್ನಡಿಗರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದು ಸಿರಿ ನಾಡ ವೆಲ್ಫೇರ್‌ ಅಸೋಸಿಯೇಶನ್‌ ಡೊಂಬಿವಲಿ ಅಧ್ಯಕ್ಷ ಆರ್‌. ಕೆ. ಸುವರ್ಣತಿಳಿಸಿದರು.

ಡೊಂಬಿವಲಿ ಪಶ್ಚಿಮದ ಠಾಕೂರ್‌ ಸಭಾಗೃಹದಲ್ಲಿ  ಫೆ. 13ರಂದು ನಡೆದ ಸಿರಿನಾಡ ವೆಲ್ಫೇರ್‌ ಅಸೋಸಿಯೇಶನ್‌ ಡೊಂಬಿವಲಿ ಇದರ 20ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವೆಲ್ಲರು ಒಗ್ಗಟ್ಟಿನಿಂದ ಸಂಸ್ಥೆಯನ್ನುಮುನ್ನಡೆಸಿ ಸಂಘಟನಾತ್ಮಕವಾಗಿ ಬೆಳೆಸೋಣ ಎಂದು ಕರೆ ನೀಡಿದರು.

ಅತಿಥಿಯಾಗಿದ್ದ ಬಂಟರ ಸಂಘ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಸತೀಶ್‌ ಎನ್‌. ಶೆಟ್ಟಿ  ಮಾತನಾಡಿ, ಸಂಘದ ಪದಾಧಿಕಾರಿಗಳು ಸದೃಢವಾಗಿದ್ದರೆ ಸಂಘವನ್ನು ಮುನ್ನಡೆಸಲು ಸಹಕಾರಿಯಾಗುತ್ತದೆ. ಈ ಸಂಸ್ಥೆ  ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಗಳನ್ನು ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಸಂಸ್ಥೆಯಿಂದ ಇನ್ನಷ್ಟು ಸಮಾಜಪರ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.

ಗೌರವ ಅತಿಥಿಯಾಗಿದ್ದ ಮುಲುಂಡ್‌ ಬಂ ಟ್ಸ್‌ನ ಅಧ್ಯಕ್ಷ ವಸಂತ್‌ ಎನ್‌. ಶೆಟ್ಟಿ  ಪಲಿಮಾರು ಮಾತನಾಡಿ, ಕಳೆದ 20 ವರ್ಷಗಳಿಂದ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಆರ್‌. ಕೆ. ಸುವರ್ಣರು ಅಭಿನಂದನಾರ್ಹರು. ಮಿನಿ ತುಳುನಾಡೆಂದೇ ಪ್ರಸಿದ್ಧಿ ಪಡೆದ ಡೊಂಬಿವಲಿ ನಗರದಲ್ಲಿ  ಹಲವು ಸಂಘ-ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ನಾಡ ಬಾಂಧವರು ಒಗ್ಗಟ್ಟಿನಿಂದ ಮುಂದುವರಿಯಲು ಸಹಕಾರಿಯಾಗಿದೆ. ಸಂಸ್ಥೆಯ ಪದಾಧಿಕಾರಿಗಳು ಪರಿಸರದಲ್ಲಿ  ಯಾರಾದರೂ ನಿಧನ ಹೊಂದಿದರೆ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಸಂತೈಸಿ ಸಹಕರಿಸುತ್ತಿರುವುದು ಹೆಮ್ಮೆಯ ವಿಷವಾಗಿದೆ. ಇಂತಹ ಮಾನವೀಯ ಸೇವೆಗಳು ನಿರಂತರವಾಗಿ ನಡೆಯುತ್ತಿರಲಿ ಎಂದರು.

ಅತಿಥಿಗಳು ದೀಪಪ್ರಜ್ವಲಿಸಿ ಸಮಾರಂಭವನ್ನು  ಉದ್ಘಾಟಿಸಿದರು. ದಿವ್ಯಾ ಶೆಟ್ಟಿ, ಶೋಭಾ ಪೂಜಾರಿ, ಜಯಶೀಲ ಶೆಟ್ಟಿ ಪ್ರಾರ್ಥನೆಗೈದರು. ಉಪಾಧ್ಯಕ್ಷ ಅಜೆಕಾರು ಜಯ ಶೆಟ್ಟಿ  ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿ ಸಂಘದ ಸಾಧನೆಗಳನ್ನು ವಿವರಿಸಿದರು. ಕಾರ್ಯದರ್ಶಿ ವಿಟಲ ಅಮೀನ್‌ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ದಾನಿಗಳನ್ನು, ವಿವಿಧ ಸಂಘಟನೆಗಳ ಪ್ರತಿನಿಧಿಗಳನ್ನು ಹಾಗೂ ಕಲಾವಿದರನ್ನು, ಹೆಚ್ಚಿನ ದೇಣಿಗೆ ಸಂಗ್ರಹಿಸಿದ ಸಂಘದ ಸದಸ್ಯರನ್ನು ಗೌರವಿಸಲಾಯಿತು.

ವಸಂತ ಸುವರ್ಣ, ಪ್ರಫುಲ್ಲಾ ಶೆಟ್ಟಿ, ಸುಮಂಗಳಾ ಸುವರ್ಣ ಅತಿಥಿಗಳನ್ನು ಪರಿಚಯಿಸಿದರು. ಕೆ. ಕೆ. ಸಾಲ್ಯಾನ್‌ ಗೌರವ ಸ್ವೀಕರಿಸಿದವರ ಹೆಸರು ವಾಚಿಸಿದರು. ಅಭಿನಯ ಮಂಟಪದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ ಮತ್ತು ಸ್ಥಳೀಯ ನಗರ ಸೇವಕಿ ಸಂಗೀತಾ ಮುಖೇಶ್‌ ಪಾಟೀಲ್‌, ಸಮಾಜ ಸೇವಕ ಕೃಷ್ಣ ಪಾಟೀಲ್‌ ಅವರನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸದಸ್ಯರಿಂದ ನೃತ್ಯ ವೈವಿಧ್ಯ ಹಾಗೂ ಅಭಿನಯ ಮಂಟಪ ಮುಂಬಯಿ ಕಲಾವಿದರಿಂದ, ರಾಜೇಶ್‌ ಆಚಾರ್ಯ ಪರ್ಕಳ ರಚಿಸಿದ “ಏರ್‌ ತಾಂಕುವೇರ್‌’ ನಾಟಕ ಪ್ರದರ್ಶನಗೊಂಡಿತು.

ಮುಖ್ಯ ಅತಿಥಿ ರತ್ನಾಕರ ಶೆಟ್ಟಿ  ಮುಂಡ್ಕೂರು, ಗೌರವ ಅತಿಥಿಗಳಾಗಿ ಕುಶಲ್‌ ಭಂಡಾರಿ, ದಿವಾಕರ ಶೆಟ್ಟಿ ಇಂದ್ರಾಳಿ, ರಾಜೀವ ಭಂಡಾರಿ, ಅಜೆಕಾರು ಜಯ ಶೆಟ್ಟಿ, ವಸಂತ ಸುವರ್ಣ, ವಿಟ್ಠಲ್‌ ಅಮೀನ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉದಯಾ ಜೆ. ಶೆಟ್ಟಿ, ಸಂಸ್ಥೆಯ ಪದಾಧಿಕಾರಿಗಳಾದ ಕೆ. ಕೆ. ಸಾಲ್ಯಾನ್‌, ವಿನೋದ್‌ ಕರ್ಕೇರ ಉಪಸ್ಥಿತರಿದ್ದರು.

ವಿನೋದ್‌ ಕರ್ಕೇರ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ವಸಂತ ಸುವರ್ಣ ಅವರು ಸಭಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಏಕತೆ ಸಾರುತ್ತಿರುವ ಸಂಸ್ಥೆ :

ಮಹಿಳೆಯರೇ ತುಂಬಿರುವ ಈ ಸಭಾಗೃಹದಲ್ಲಿ ಅರಸಿನ ಕುಂಕುಮ ಕಾರ್ಯಕ್ರಮದಂತೆ ಭಾಸವಾಗುತ್ತಿದೆ. ಇಷ್ಟೊಂದು ಸಂಖ್ಯೆಯಲ್ಲಿ ಮಹಿಳೆಯರ ಉಪಸ್ಥಿತಿ ಪ್ರಶಂಸನೀಯ. ಯುವಕರು ಸಮಾಜ ಸೇವೆಯಲ್ಲಿ ತೊಡಗಬೇಕು. ಸಂಘ-ಸಂಸ್ಥೆಗಳು ನೀಡುವ ವೇದಿಕೆಯನ್ನು ಸದುಪಯೋಗಪಡಿಸಿದರೆ ನಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶ ಸಿಕ್ಕಂತಾಗುತ್ತದೆ. ಜಾತಿ, ಮತ ಭೇದವಿಲ್ಲದೆ ವಿವಿಧತೆಯಲ್ಲಿ ಏಕತೆ ಸಾರುತ್ತಿರುವ ಏಕೈಕ ಸಂಸ್ಥೆ ಎನ್ನಲು ಅಭಿಮಾನವಾಗುತ್ತಿದೆ. ಮಾತೃಭೂಮಿ ಕ್ರೆಡಿಟ್‌ ಸೊಸೈಟಿಯ ಸೌಲಭ್ಯಗಳನ್ನು ಎಲ್ಲರು ಪಡೆದುಕೊಳ್ಳಬೇಕು. -ರತ್ನಾಕರ ಶೆಟ್ಟಿ  ಮುಂಡ್ಕೂರು ಕಾರ್ಯಾಧ್ಯಕ್ಷರು, ಮಾತೃಭೂಮಿ ಕೋ-ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ

ಸಂಕಷ್ಟಗಳಿಗೆ ಸ್ಪಂದನೆ :

ನಾವು ಸಮಾಜದಲ್ಲಿ ಸೂಜಿಯಾಗಿ ಬದುಕಬೇಕೇ ಹೊರತು ಕತ್ತರಿಯಾಗಬಾರದು. ಕತ್ತರಿ ತುಂಡು ಮಾಡಿದರೆ, ಸೂಜಿ ಜೋಡಿಸುತ್ತದೆ. ಹಾಗೆಯೇ ಸಿರಿನಾಡ ವೆಲ್ಫೇರ್‌ ಅಸೋಸಿಯೇಶನ್‌ ಒಗ್ಗಟ್ಟಿನಿಂದ ಬದುಕು ಕಟ್ಟಿಸುತ್ತಿದೆ. ಜಾತಿ, ಮತ ಎಂಬ ಎಲ್ಲೆಯನ್ನು ಮೀರಿ ಸಂಘಟಿತರಾಗಿ ಜನರ ಸಂಕಷ್ಟಗಳಿಗೆ ಸ್ಪಂದಿಸುವುದು ನಿಜವಾದ ಮಾನವೀಯತೆ. ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳನ್ನು ಉಳಿಸಿ-ಬೆಳೆಸಿ ನಮ್ಮ ದೇಶ, ಧರ್ಮವನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮಹಿಳಾ ವಿಭಾಗದ ಹುಮ್ಮಸ್ಸಿನ ಕಾರ್ಯಕ್ರಮಗಳನ್ನು ಕಂಡಾಗ ಸಂತೋಷವಾಗುತ್ತಿದೆ. ಸಂಸ್ಥೆ ಇನ್ನಷ್ಟು ಸಮಾಜ ಸೇವೆಗಳ ಮೂಲಕ ಬೆಳೆಯಲಿ.-ಕುಶಲ್‌ ಭಂಡಾರಿ, ಮಾಜಿ ಅಧ್ಯಕ್ಷರು, ಥಾಣೆ ಬಂಟ್ಸ್‌ ಅಸೋಸಿಯೇಶನ್‌

ಸಂಘಟಿತರಾಗಿ ಮುನ್ನಡೆಸೋಣ : ಜನ್ಮಭೂಮಿ ತೊರೆದು ಕರ್ಮಭೂಮಿಗೆ ಆಗಮಿಸಿ ಉದರ ಪೋಷಣೆಯೊಂದಿಗೆ ಸಿಕ್ಕಿದ ವಿರಾಮ ಕಾಲದಲ್ಲಿ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಸ್ಥಾಪನೆಗೊಂಡ ಸಿರಿನಾಡ ವೆಲ್ಫೇರ್‌ ಅಸೋಸಿಯೇಶನ್‌ ಇಂದು 20ನೇ ಸಂಭ್ರಮದಲ್ಲಿರುವುದು ಹೆಮ್ಮೆಯ ವಿಷಯ. ಕೊರೊನಾ ಸಂದರ್ಭ ಆರ್ಥಿಕವಾಗಿ ಹಿಂದುಳಿದ ಜನರಿಗೆ ಆಹಾರದ ಕಿಟ್‌ ವಿತರಿಸಿ ಜನಮೆಚ್ಚುಗೆ ಪಡೆದ ಈ ಸಂಸ್ಥೆಯ ಸೇವೆಗಳು ಮಾದರಿ. ನಾವು ಸಂಘ ಜೀವಿಯಾಗಿ ಬದುಕಬೇಕು. ನಾವು ಗಳಿಸಿದ ಸ್ವಲ್ಪ ಭಾಗವನ್ನು ಸಮಾಜಕ್ಕಾಗಿ ವಿನಿಯೋಗಿಸಿದರೆ ದೇವರ ಸೇವೆ ಮಾಡಿದಂತಾಗುತ್ತದೆ. ಜಾತಿ,ಮತ ಭೇದವನ್ನು ಮರೆತು ಸಂಘಟಿತರಾಗಿ ಸಂಸ್ಥೆಯನ್ನು ಮುನ್ನಡೆಸೋಣ.-ಇಂದ್ರಾಳಿ ದಿವಾಕರ ಶೆಟ್ಟಿ , ಸಲಹೆಗಾರರು, ಸಿರಿನಾಡ ವೆಲ್ಫೇಅಸೋಸಿಯೇಶನ್‌ ಡೊಂಬಿವಲಿ

ಟಾಪ್ ನ್ಯೂಸ್

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.