ಸಿರಿನಾಡ ವೆಲ್ಫೇರ್ ಅಸೋಸಿಯೇಶನ್: ಉಚಿತ ವೈದ್ಯಕೀಯ ಶಿಬಿರ
Team Udayavani, Feb 10, 2019, 5:17 PM IST
ಡೊಂಬಿವಲಿ: ಸಿರಿನಾಡ ವೆಲ್ಫೆàರ್ ಅಸೋಸಿಯೇಶನ್ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳೊಂದಿಗೆ ಜನರ ಆರೋಗ್ಯದತ್ತ ಗಮನ ಹರಿಸಿ ಪ್ರಧಾನ ಸಮಿತಿಯ ಸಹಕಾರ ದೊಂದಿಗೆ ಯುವ ವಿಭಾಗವು ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಿರುವುದು ಅಭಿನಂದನೀಯ.
ಇಂದಿನ ಈ ವೈದ್ಯ ಕೀಯ ಶಿಬಿರದಲ್ಲಿ ನನ್ನ ಒಡ ನಾಟದಲ್ಲಿರುವ ವೈದ್ಯರು ರವಿ ವಾರದ ರಜೆಯನ್ನು ಲೆಕ್ಕಿಸದೆ ಸೇವಾ ಮನಮನೋಭಾವದಿಂದ ಶಿಬಿರದಲ್ಲಿ ಪಾಲ್ಗೊಂಡಿದ್ದು, ಎಲ್ಲಾ ವೈದ್ಯರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ. ಜನರನ್ನು ಕಾಡುವ ಸಿಹಿ ಮೂತ್ರ ಕಾಯಿಲೆಯಲ್ಲದೆ ಇನ್ನಿತರ ಖಾಯಿಲೆಯಿಂದ ಬಳಲುತ್ತಿರುವವರು ಇಂದು ಉಪಸ್ಥಿತರಿರುವ ವೈದ್ಯರ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆಯನ್ನು ಪಡೆಯಲು ಮುಂದಾದರೆ ಅವರಿಗೆ ಸಹಕರಿಸಲು ನಾವು ಸಿದ್ಧರಿದ್ದೇವೆ. ಸಿರಿನಾಡ ವೆಲ್ಫೆàರ್ ಅಸೋಸಿಯೇಶನ್‌ನಲ್ಲಿ ಉತ್ಸಾಹಿ ತರುಣ-ತರುಣಿಯರ ದಂಡೆ ಇರು ವುದರಿಂದ ಇಂತಹ ಶಿಬಿರಗಳನ್ನು ಆಯೋಜಿಸಲು ಸಮಸ್ಯೆಗಳು ಎದುರಾಗದು. ದಿನನಿತ್ಯದ ಜಂಜಾಟದ ಮಧ್ಯೆ ಆರೋಗ್ಯ ಭಾಗ್ಯದೆಡೆಗೆ ಹೆಚ್ಚಿನ ನಿಗಾ ವಹಿಸುವುದು ಪ್ರತಿ ಯೊಬ್ಬರ ಕರ್ತವ್ಯವಾಗಬೇಕು. ಎಂದು ಡೊಂಬಿವಲಿ ಸಿಟಿ ಆಸ್ಪತ್ರೆಯ ಪ್ರಸಿದ್ಧ ಮೂಳೆತಜ್ಞ ಡಾ| ವಿ. ಎಂ. ಶೆಟ್ಟಿ ಅವರು ನುಡಿದರು.
ಫೆ. 3ರಂದು ಡೊಂಬಿವಲಿ ಸಿರಿನಾಡ ವೆಲ್ಫೆàರ್ ಅಸೋಸಿಯೇಶನ್ ಯುವ ವಿಭಾಗದ ವತಿಯಿಂದ ಸಂಸ್ಥೆಯ ಕಚೇರಿ ಯಲ್ಲಿ ನಡೆದ ಉಚಿತ ವೈದ್ಯಕೀಯ ಶಿಬಿರಕ್ಕೆ ಚಾಲನೆ ನೀಡಿ ಮಾತ ನಾಡಿದ ಅವರು, ಸಿರಿನಾಡ ವೆಲ್ಫೆàರ್ ಅಸೋಸಿಯೇಶನ್‌ನ ಸಮಾಜ ಪರ ಕಾರ್ಯಗಳನ್ನು ಕಂಡಾಗ ಸಂತೋಷವಾಗುತ್ತಿದೆ. ಸಂಸ್ಥೆಯ ಇಂತಹ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಸದಾಯಿರಲಿ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ಸಂಘ ಡೊಂಬಿವಲಿ ಇದರ ಕಾರ್ಯಾಧ್ಯಕ್ಷ ಸುಕುಮಾರ್ ಎನ್. ಶೆಟ್ಟಿ ಇವರು ಮಾತನಾಡಿ, ಯುವಕರು ಸಮಾಜದ ಮುಖ್ಯವಾಹಿನಿಯಲ್ಲಿ ಸಕ್ರಿಯವಾಗಬೇಕು. ಸಿರಿನಾಡ ವೆಲ್ಫೆàರ್ ಅಸೋಸಿಯೇಶನ್‌ನ ಯುವ ವಿಭಾಗವು ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆ ಅಪಾರವಾಗಿದೆ. ಜನರ ಆರೋಗ್ಯದ ಕಡೆಗೆ ಗಮನ ಹರಿಸಿ ಪ್ರಧಾನ ಸಮಿತಿಯ ಸಹಕಾರ ದೊಂದಿಗೆ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಿ ಕಾರ್ಯ ಪ್ರವೃತ್ತರಾಗಿರುವ ಕಾರ್ಯವೈಖರಿ ಅಭಿ ನಂದನೀಯವಾಗಿದೆ. ಇಂಥ ಜನಪರ ಕಾರ್ಯಗಳನ್ನು ಪ್ರತಿ ವರ್ಷ ನಡೆಯುತ್ತಿರಬೇಕು ಎಂದರು.
ಪ್ರಾರಂಭದಲ್ಲಿ ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ವೈದ್ಯಕೀಯ ಶಿಬಿರಕ್ಕೆ ಚಾಲನೆ ನೀಡಿದರು. ವಸಂತ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಯುವ ವಿಭಾಗದ ಜತೆ ಕಾರ್ಯದರ್ಶಿ ಅರ್ಚನಾ ಜೆ. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಸಂಘದ ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು. ಸಂಘದ ಅಧ್ಯಕ್ಷ ಆರ್. ಕೆ. ಸುವರ್ಣ, ಡಾ| ಪ್ರಸಾದ್ ಗಾಂಗುರ್ಡೆ, ಡಾ| ನೀರನ್ ಪಗಾರೆ, ಡಾ| ಪ್ರಶಾಂತ್ ದೇಶ್‌ಪಾಂಡೆ, ಡಾ| ಅಜಿತ್ ಕೋಜ್, ಕರ್ನಾಟಕ ಸಂಘ ಡೊಂಬಿವಲಿ ಲಲಿತ ಕಲಾ ವಿಭಾಗದ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ, ಸಮಾಜ ಸೇವಕ ವೇಣುಗೋಪಾಲ್ ರೈ, ಸಂಘದ ಉಪಾಧ್ಯಕ್ಷ ಅಜೆಕಾರು ಜಯ ಶೆಟ್ಟಿ, ಕೋಶಾಧಿಕಾರಿ ಸದಾಶಿವ ಸಾಲ್ಯಾನ್, ಕಾರ್ಯದರ್ಶಿ ದಾಮೋದರ ಸುವರ್ಣ, ಸಲಹೆ ಗಾರರಾದ ರಮೇಶ್ ಕುಕ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉದಯಾ ಜೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ವಿನೋದ್ ಕರ್ಕೇರ ಉಪಸ್ಥಿತರಿದ್ದರು. ಶಿಬಿರದಲ್ಲಿ ಡಾ| ವಿ. ಎಂ. ಶೆಟ್ಟಿ, ಡಾ| ಪ್ರಸಾದ್ ಗಾಂಗುರ್ಡೆ, ಡಾ| ನೀರನ್ ಪಗಾರೆ, ಡಾ| ಪ್ರಶಾಂತ್ ದೇಶ್‌ಪಾಂಡೆ, ಡಾ| ಅಜಿತ್ ಕೋಟ್, ಡಾ| ವೈಶಾಲಿ ಪಗಾರೆ, ಡಾ| ರಾಹುಲ್ ಜಲ್ಗಾಂವ್ಕರ್, ಡಾ| ಲಾಡ್ ಶಿಬಿರವನ್ನು ಯಶಸ್ವಿಗೊಳಿಸಿದರು. ಶಿಬಿರವನ್ನು ಯಶಸ್ವಿಗೊಳಿಸಲು ಯುವ ವಿಭಾಗದ ಪದಾಧಿಕಾರಿಗಳು ಶ್ರಮಿಸಿದರು. ಶಿಬಿರದಲ್ಲಿ ತುಳು-ಕನ್ನಡಿಗರಲ್ಲದೆ ಸ್ಥಾನೀಯ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಯುವ ವಿಭಾಗದ ಉಪಾಧ್ಯಕ್ಷ ಗುರುರಾಜ ಸುವರ್ಣ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
ಇಂದು ಕಾಶ್ಮೀರದ ಜೆಡ್-ಮೋರ್ ಸುರಂಗ ಲೋಕಾರ್ಪಣೆ; ಪ್ರಧಾನಿ ಮೋದಿಯಿಂದ ಚಾಲನೆ
Kamala Harris ಸೇರಿ ಸೆಲೆಬ್ರಿಟಿಗಳ ಅಂಗಳಕ್ಕೆ ತಲುಪಿದ ಬೆಂಕಿ; ಸಾವಿನ ಸಂಖ್ಯೆ 18ಕ್ಕೇರಿಕೆ
Wankhede Stadium-50: ಗಾವಸ್ಕರ್, ವಿನೋದ್ ಕಾಂಬ್ಳಿಗೆ ಸಮ್ಮಾನ
Ramanagara: ಡ್ರೋನ್ ಮೂಲಕ ಕೃಷಿಭೂಮಿ ಮರು ಸರ್ವೇ ಯಶಸ್ವಿ: ದೇಶದಲ್ಲೇ ಮೊದಲು
Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.