ಸಮಾಜ ಪ್ರೇಮಿ, ಹಿರಿಯ ಕನ್ನಡಿಗ ಎಂ. ಡಿ. ಶೆಟ್ಟಿ ಅವರ 90ರ ಹೆಜ್ಜೆಗಳು
Team Udayavani, Jun 14, 2018, 5:02 PM IST
ಕರ್ನಾಟಕದ ಮೂಳೂರುನಿಂದ ಓರ್ವ ಬಾಲಕ ತನ್ನ ಜನ್ಮ ಭೂಮಿಯನ್ನು ತೊರೆದು “ಉದರನಿಮಿತ್ತಂ’ ಎಂಬಂತೆ ಮಹಾರಾಷ್ಟ್ರದ ಕರ್ಮಭೂಮಿ ಮುಂಬಯಿ ಮಹಾನಗರಿಗೆ ಕಾಲಿಡುತ್ತಾನೆ. ಎಳೆಯ ಪ್ರಾಯದ ಹಲವಾರು ಕನಸು ಆಕಾಂಕ್ಷೆಯೊಂದಿಗೆ ಮುಂಬಯಿಯಲ್ಲಿ ನೆಲೆಯೂರಿ ಅಲ್ಲಿ ರಾತ್ರಿ ಶಾಲೆಯಲ್ಲಿ ಹತ್ತನೇ ತರಗ ತಿಯವರೆಗೆ ತನ್ನ ವಿದ್ಯಾಭ್ಯಾಸ ಪೂರೈಸಿರುತ್ತಾನೆ. ಮರಾಠಿ ಭೂಮಿಯಲ್ಲಿ 15 ವರ್ಷದ ಓರ್ವ ನೀಲಿ ಕಣ್ಣಿನ ಹುಡುಗ, ಸಮಾಜಮುಖೀಯಾಗಿ ಆಕರ್ಷಣೆಗೊಂಡು ಬಂಟರ ಯುವಕ ಸಂಘದ ಸದಸ್ಯನಾಗಿ ಸೇರ್ಪಡೆಗೊಳ್ಳುತ್ತಾರೆ. ಸಮಾಜೋದ್ಧಾರಕ್ಕಾಗಿ ತನ್ನನ್ನು ತಾನು ತೊಡಗಿಸಿಕೊಂಡು ಹಂತ-ಹಂತವಾಗಿ ಬಂಟರ ಸಂಘವು ನಡೆಸುತ್ತಿರುವ ರಾತ್ರಿ ಶಾಲೆಗಳ ಉಸ್ತುವಾರಿ ಹೊಣೆ ಹೊತ್ತುಕೊಳ್ಳುತ್ತಾರೆ.
ತಾನೇನು ಪದವೀಧರನಾಗದಿದ್ದರೂ, ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಮೂಲಮಂತ್ರ ಎಂಬ ದೂರದೃಷ್ಟಿತ್ವ ವುಳ್ಳ ಚಿಂತಕರಾದರು. ಇದಕ್ಕೆ ಪೂರಕವಾಗಿ ಸಂಘಟನಾ ಶಕ್ತಿಯಿಂದ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವೆಂಬ ಕಟುಸತ್ಯವನ್ನು ಅರಿತು, ಈ ಮೂಲಕ ಮಹಾನಗರದ ಸಮಾನ ಮನಸ್ಕ ಬಂಟರೊಡನೆ ಸಂಘಟಿತ ರಾಗಿ ಮುಂಬಯಿಯಲ್ಲಿ ಹಲವಾರು ವರ್ಷಗಳ ಕಾಲ ಹಗಲಿರುಳು ಒಗ್ಗೂಡಿ ಕನಸಿನ ಬಂಟರ ಭವನ ನಿರ್ಮಿಸಿದರು. ಈ ಸಾಂಘಿಕ ಮಹಾನ್ ಕಾರ್ಯದಲ್ಲಿ ಎಲೆಮರೆಯ ಕಾಯಿಯಂತೆ ತನ್ನನ್ನು ತಾನು ಸಮರ್ಪಿಸಿಕೊಂಡರು.
ಬಂಟರ ಸಂಘದ ಕಾರ್ಯಕಾರಿ ಸದಸ್ಯನಾಗಿ ಎರಡು ಬಾರಿ ಅಧ್ಯಕ್ಷನಾಗಿ ಬೆಳ್ಳಿಹಬ್ಬ ಮತ್ತು ಸುವರ್ಣ ಮಹೋತ್ಸವದ ಅಧ್ಯಕ್ಷರಾಗಿ, ಉನ್ನತ ಶಿಕ್ಷಣ ಸಮಿತಿಯ ಕಾರ್ಯಧ್ಯಕ್ಷರಾಗಿ ತಾನು ಹುಟ್ಟಿದ ಸಮಾಜಕ್ಕೆ ಮಾತ್ರವಲ್ಲದೆ, ಮುಂಬಯಿ ಮಹಾನಗರದಲ್ಲಿ ನೆಲೆಸಿರುವ ತುಳು ಕನ್ನಡಿಗರೂ ಇಂದಿಗೂ ಈ ಶಿಕ್ಷಣ ಸಂಸ್ಥೆಗಳ ಪ್ರಯೋಜನ ಪಡೆಯುತ್ತಿದ್ದಾರೆ ಎನ್ನುವುದು ಬಂಟ ಸಮಾಜಕ್ಕೆ ಸಂದ ಗೌರವ ಎಂದು ಪ್ರತಿ ಬಂಟರ ಅನಿಸಿಕೆ.
ಅಂದಿನ ಬಂಟರ ಸಂಘದ ಕಾರ್ಯಕಾರಿ ಸಮಿತಿಯು ವೈದ್ಯರು, ಎಂಜಿನಿಯರ್, ಕೈಗಾರಿಕೋದ್ಯಮಿಗಳು, ನ್ಯಾಯವಾದಿಗಳು, ಲೆಕ್ಕ ಪರಿಶೋಧಕರು, ಶಿಕ್ಷಣ ತಜ್ಞರು, ಹೊಟೇಲ್ ಉದ್ಯಮಿಗಳು, ವಾಗ್ಮಿಗಳು, ಸಮಾಜ ಪ್ರೇಮಿಗಳು ಹಾಗೂ ಸಮಾಜ ಪರ ಚಿಂತಕರ ಒಂದು ಚಾವ ಡಿಯಾಗಿತ್ತು. ಬಂಟ ರ ಭವನವೇ ಒಂದು ಮಂದಿರವಾಗಿತ್ತು, ಎಂ. ಡಿ. ಶೆಟ್ಟಿ ಅಧ್ಯಕ್ಷತೆ ಅವ ಧಿಯಲ್ಲಿ 2 ಐತಿಹಾಸಿಕ ಪರಿವರ್ತನೆಗಳಾದವು. ಅಂದಿನ ದಿನಗಳಲ್ಲಿ ಬಂಟ ಸಮಾಜದ ಬಾಂಧವರನ್ನು ಸಂಪರ್ಕಿಸಲು ಬಲು ಕಷ್ಟಕ ರವಾಗುತ್ತಿತ್ತು, ದೂರವಾಣಿ ಸಂಪರ್ಕವಾಗಲೀ ಖಾ ಸಗಿ ವಾಹನಗಳ ಅನು ಕೂಲತೆಗಳಾಗಲೀ ಬಹಳ ಕಡಿಮೆ ಜನರಲ್ಲಿತ್ತು. ಅಲ್ಲದೆ ಇಂದಿನ ದಿನದಲ್ಲಿರುವಂತೆ ಸುದ್ದಿ ಮಾಧ್ಯಮವಾಗಲೀ ಇಲ್ಲ ವೇ ಇಲ್ಲ. ಮಹಾ ನಗರದಲ್ಲಿ ಕನ್ನಡ ದಿನಪತ್ರಿಕೆಗಳು ಪ್ರಕಟ ವಾಗುತ್ತಿರಲಿಲ್ಲ. ಸಂಘ ಟನೆಗೆ ಪತ್ರಿಕೆ ಒಂದರ ಅಗತ್ಯವೆಂದು ಮನಗಂಡ ಬಂಟರ ಸಂಘವು “ಬಂಟರವಾಣಿ’ ಎಂಬ ಮುಖವಾಣಿ ಇರುವ ಪತ್ರಿಕೆ ಪ್ರಕಟಿಸಿತ್ತು. ಈ ಮೂಲಕ ಜನಸಂವಹನಕ್ಕಾಗಿ ಪತ್ರಿಕಾರಂಗವನ್ನು ಪ್ರವೇಶಿಸಿರುವುದು ವಿಶೇಷತೆಯಾಗಿದೆ.
ಮಾತೃ ಪ್ರಧಾನ ಮೂಲ (ಅಳಿಯಕಟ್ಟು) ಬಂಟರದ್ದು ಆದರೂ ಅಂದು ಪುರುಷ ಪ್ರಧಾನ ಸಮಾಜವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಸಮಾಜದ ಬೆಳವಣಿಗೆಯ ದೃಷ್ಟಿಯಿಂದ ಮಹಿಳೆಯರಿಂದ ಮಹಿಳಾ ಸಂಘವನ್ನು ಸ್ಥಾಪಿಸಿದರು. ಸಂಘವು ಡಾ| ಸುನೀತಾ ಎಂ. ಶೆಟ್ಟಿ ಮುಖಾಂತರ ಮಹಿಳೆಯರಿಂದಲೆ ಸಂಗ್ರಹಿಸಿದ ಹಣದಿಂದ ಆರ್ಥಿಕ ಬಡತನದಲ್ಲಿರುವ ವಿದ್ಯಾರ್ಥಿಗಳ ಶಾಲೆಗಳಿಗೆ ಭೇಟಿಕೊಟ್ಟು ಶಿಕ್ಷಣಕ್ಕಾಗಿ ಆರ್ಥಿಕ ರೂಪದಲ್ಲಿ ಪ್ರೋತ್ಸಾಹಿಸಿದರು. ಇಂದಿಗೂ ಮಹಿಳಾ ಸಂಘವು ಈ ಕಾರ್ಯಕ್ರಮ ಮುಂದುವರಿಸಿಕೊಂಡು ಬರುತ್ತಿರುವುದು ಅವಿಸ್ಮರಣೀಯ. ಒಟ್ಟಿನಲ್ಲಿ ಎಂ. ಡಿ. ಶೆಟ್ಟಿ ಅವರು ಸಂಸ್ಥೆಯಲ್ಲಿ ನಿರಂತರವಾಗಿ ಎಪ್ಪತ್ತಾರು ವರ್ಷಗಳ ಕಾಲ ತನ್ನನ್ನು ತಾನು ಸಮರ್ಪಿಸಿಕೊಂಡ ವ್ಯಕ್ತಿ ಬೇರೆ ಯಾರೂ ಇಲ್ಲವೆಂದರೆ ತಪ್ಪಾಗಲಾರದು.
ಬಂಟರ ಸಂಘ ಮುಂಬಯಿ ನಡೆಸಲ್ಪಡುತ್ತಿರುವ ವಿದ್ಯಾಸಂಸ್ಥೆಗಳಲ್ಲಿ ನೂರಾರು ಬಂಟ ಬಡ ವಿದ್ಯಾರ್ಥಿಗಳು ಉಚಿತ ಶಿಕ್ಷಣದ ಅವಕಾಶ ಪಡೆಯುತ್ತಿದ್ದಾರೆ. ಸಂಘವು ಶಿಕ್ಷಣ ಸಂಸ್ಥೆಗಳ ಮೂಲಕ ಕೋಟ್ಯಂತರ ರೂ. ಆದಾಯ ಗಳಿಸಿದರೂ ಬಂಟರ ಸಂಘವು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ನೆರವು ಹಾಗೂ ಆರ್ಥಿಕ ಬಡತನದ ಜನರಿಗೆ ಆರೋಗ್ಯಕ್ಕಾಗಿ ಆರ್ಥಿಕ ನೆರವು ನೀಡುತ್ತಿದೆ. ಈ ಆರ್ಥಿಕ ಸಹಾಯ ದೊರೆಯಲು ಒಂದು ಭದ್ರಬುನಾದಿಯ ಯೋಜನೆ ಸ್ಥಾಪಿಸುವಲ್ಲಿ ಇವರು ಸಮಾಜದ ಹಲವಾರು ಜನರಲ್ಲಿ ಸದಾ ಮಂಚೂಣಿಯಲ್ಲಿರುವ ನಾಯಕ ಎಂ. ಡಿ. ಶೆಟ್ಟಿಯವರು.
ಬಂಟರ ಸಂಘದ ಮೂಲಕ ಸಮಾಜಕ್ಕೆ ಸಮರ್ಪಣಾ ಭಾವದಿಂದ ತೊಡಗಿಸಿದಲ್ಲದೆ ಬೇರೆ ಯಾವುದೇ ಆಮೀಷಕ್ಕೆ ಒಳಗಾಗದ ವ್ಯಕ್ತಿ ಇವರು. ಅವರ ಜೀವನದ ಕುರಿತು ಹೇಳುವುದಾದರೆ ಅವರೇನು ಆಗರ್ಭ ಶ್ರೀಮಂತರಾಗಿರಲಿಲ್ಲ. ಸಾಮಾನ್ಯ ಗೃಹಸ್ಥನಾಗಿ ಪತ್ನಿ ಮಗ ಸೊಸೆ ಮತ್ತು ಎರಡು ಮುದ್ದು ಮೊಮ್ಮಕ್ಕಳೊಂದಿಗೆ ತುಂಬು ಸಂಸಾರದೊಂದಿರಲು, ವಿಧಿನಿಯಮವೋ ಇಲ್ಲವೋ ಅವರ ವೈಯಕ್ತಿಕ ಸೋಲೋ ಎಂಬಂತೆ ಮೊದಲು ಪತ್ನಿ ಮತ್ತು ಇದ್ದ ಓರ್ವ ಮಗನನ್ನು ಕಳಕೊಂಡರು. ಈ ಎರಡೂ ಬರಸಿಡಿಲಿನ ಆಘಾತ ಅವರ ಜೀವನದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಆದರೂ ಎದೆಗುಂದದೆ ಶೆಟ್ಟರು ತನ್ನ ಮೊಮ್ಮಕ್ಕಳಿಗೆ ಹಾಗೂ ಮಗಳಂತಿರುವ ಸೊಸೆಗೆ ಆಸರೆಯಾಗಿ ನಿಂತು ಜವಾಬ್ದಾರಿಯುತ ಗೃಹಸ್ಥನಂತೆ ಎದೆಯೊಡ್ಡಿದ ಆದರ್ಶ ಸೇನಾನಿ ಎಂದರೆ ತಪ್ಪಾಗಲಾರದು. ತನ್ನ ವೈಯಕ್ತಿಕ ಬದುಕಿನಲ್ಲಿ ಬಂದ ಕಂಟಕವನ್ನು ವಿಷಕಂಠನಾಗಿ ಎದುರಿಸಿದ ದಿಟ್ಟ ವ್ಯಕ್ತಿ.
ಮನುಷ್ಯ ತನ್ನ ಬದುಕಿಗೆ ಹೊಸ ಅರ್ಥವನ್ನು ಕೊಡುವ ನಿಟ್ಟಿನಲ್ಲಿ ಸಮಾಜ ಮುಖೀಯಾಗಿ ತಾನು ಬದುಕಬೇಕು. ಆ ಬದುಕು ಎನೂ ಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥವಾಗಿರಬೇಕು ಎಂಬ ಮೌಲ್ಯಧರಿತವಾದ ಅವರ ಚಿಂತನೆಗಳು ಇಂದಿನ ಜನಾಂಗಕ್ಕೆ, ಸಂಘಗಳಿಗೆ ಮಾದರಿ ಇಲ್ಲವೇ ಪ್ರೇರಣೆಯೆಂದರೆ ಖಂಡಿತಾ ಅತಿಶಯೋಕ್ತಿಯ ಮಾತಾಗದು. ಅವರಂತಹ ವ್ಯಕ್ತಿಗೆ ದೇವರು ನೂರು ಕಾಲ ಬದುಕಲು ಆರೋಗ್ಯಪೂರ್ಣ ಜೀವನವನ್ನು ದಯಪಾಲಿಸಲಿ ಈ ಮೂಲಕ ವಯೋವೃದ್ಧ, ಜ್ಞಾನ ವೃದ್ಧ, ಬುದ್ಧಿಜೀವಿಯ ಬದುಕಿನ ಪ್ರಯೋಜನ ಸಮಸ್ತ ಸಮಾಜಕ್ಕೆ ದೊರೆಯಲಿ ಎಂಬುವುದು ನಮ್ಮ ಆಶಯ.
ತನ್ನ ಸಮಾಜಮುಖೀ ನಡೆಯಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ, ಮೌಲ್ಯಧಾರಿತ ನಡೆಯಿಂದಾಗಿ ಹಲ ವಾರು ಅಡ್ಡಿ ಆತಂಕಗಳಿದ್ದರೂ ಅದನ್ನು ಅಷ್ಟೆ ನಿಷ್ಠುರವಾಗಿ ಎದುರಿಸಿದ ವ್ಯಕ್ತಿ. ತರುಣರಲ್ಲಿ ತರುಣರಾಗಿ, ಗೃಹಸ್ಥರಲ್ಲಿ ಗೃಹಸ್ಥನಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕಾರಣಿಗಳ ಉನ್ನತ ಮಟ್ಟದ ಅಧಿಕಾರಿಗಳು, ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳೊಡನೆ ಅತೀ ಮಧುರ ಒಡನಾಟ ಸಂಬಂಧವನ್ನು ಹೊಂದಿರುವ ವ್ಯಕ್ತಿ. ಒಂದು ಹಂತದಲ್ಲಿ ಬಂಟ ಸಮಾಜದಲ್ಲಿ ಬಂಟರ ಸಂಘ ವಿಭಜನೆಗೊಂಡು ವಿಘಟನೆಗೊಂಡರೂ ಅದನ್ನು ಅಷ್ಟೇ ಚಾಕಚಕ್ಯತೆಯಿಂದ ಒಂದುಗೂಡಿಸಿದ ಅಪರೂಪದ ವ್ಯಕ್ತಿ, ಬಂಟ ನ್ಯಾಯ ಮಂಡಳಿಯ ಸ್ಥಾಪನೆಯ ಮೂಲಕ ಮನ ಭೇದವಿಲ್ಲವೆಂದು ಸಮಾಜಕ್ಕೆ ತೋರಿಸಿಕೊಟ್ಟ ಮುತ್ಸದ್ಧಿ. ಎಂ. ಡಿ. ಶೆಟ್ಟಿ.
ಉದಯ ಶೆಟ್ಟಿ ಶಿಮಂತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.