ಸಾಮಾಜಿಕ ಒಗ್ಗಟ್ಟೇ ನಮ್ಮ ಮೂಲಮಂತ್ರ: ಸಂತೋಷ್ ಶೆಟ್ಟಿ ಪುಣೆ
Team Udayavani, Nov 19, 2019, 5:40 PM IST
ಪುಣೆ, ನ. 18: ಇಂದು ನಮ್ಮ ಸಂಘದ 39ನೇ ವಾರ್ಷಿಕ ಮಹಾಸಭೆಯಲ್ಲಿ ನಾವೆಲ್ಲರೂ ಸೇರಿಕೊಂಡು ಸಂಘದ ಅಭ್ಯುದಯದ ಬಗ್ಗೆ ಚಿಂತಿಸಬೇಕಾಗಿದೆ. ಇಂದಿನ ಸಭೆ ವಿಶೇಷವಾಗಿ ವೈಚಾರಿಕತೆಯ ಮಂಥನದ ಸಭೆಯಾಗಿದೆ. ನಾವು ಹಿಂದೆ ಯಾವ ರೀತಿಯಲ್ಲಿದ್ದೆವು ಇಂದು ನಾವು ಹೇಗಿದ್ದೇವೆ ಹಾಗೂ ಮುಂದಿನ ದಿನಗಳಲ್ಲಿ ಹೇಗಿರಬೇಕಾಗಿದೆ, ನಾವು ನಡೆದ ಹಾದಿಯ ಬಗ್ಗೆ ಸ್ಪಷ್ಟ ಕಲ್ಪನೆ ನಮಗಿರಬೇಕಾಗಿದೆ. ಯಾವ ರೀತಿ ನಮ್ಮ ದೇಗುಲವೆಂಬ ಭವ್ಯ ಭವನ ನಿರ್ಮಾಣಗೊಂಡಿದೆ ಹಾಗೂ ಮುಂದಿನ ದಿನಗಳಲ್ಲಿ ನಾವು ಎದುರಿಸುವ ಸವಾಲುಗಳ ಬಗ್ಗೆಯೂ ನಮಗೆ ಚಿಂತಿಸಬೇಕಾಗಿದೆ.
ಹೃದಯ ವೈಶಾಲ್ಯದ ಸಮಾಜದ ಬಗ್ಗೆ ಅತೀವ ಭಾವೈಕ್ಯತೆ ಹೊಂದಿರುವ ಮಹಾದಾನಿಗಳ ಸಹಕಾರದಿಂದ ಈ ಭವ್ಯ ನಿರ್ಮಾಣಗೊಂಡಿದೆ. ಅದನ್ನು ನಾವು ಮರೆಯುವಂತಿಲ್ಲ. ಮುಂದಿನ ದಿನಗಳಲ್ಲಿ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳನ್ನು ಬೆಳೆಸಿಕೊಳ್ಳದೆ ಸಂಘವನ್ನು ಇನ್ನಷ್ಟು ಬಲಿಷ್ಠವಾಗಿಸಲು, ಸಮಾಜವನ್ನು ಒಗ್ಗಟ್ಟಾಗಿಸಲು ನಾವು ಶ್ರಮಿಸುವ ಅಗತ್ಯತೆಯಿದೆ. ಸಾಮಾಜಿಕ ಏಕತೆಯೇ ನಮ್ಮೆಲ್ಲರ ಮೂಲಮಂತ್ರವಾಗಿದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಅಭಿಪ್ರಾಯಪಟ್ಟರು.
ಅವರು ನ. 17ರಂದು ಪುಣೆ ಬಂಟರ ಭವನದ ಸಭಾಂಗಣದಲ್ಲಿ ನಡೆದ ಪುಣೆ ಬಂಟರ ಸಂಘದ 39ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಪುಣೆ ಬಂಟರ ಸಂಘ ಪ್ರತಿಷ್ಠಿತ ಸಂಘವೆಂಬ ನೆಲೆಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವುದು ನಮಗೆಲ್ಲರಿಗೂ ಅಭಿಮಾನದ ವಿಷಯವಾಗಿದೆ. ಈ ನಿಟ್ಟಿನಲ್ಲಿ ಸಂಘವನ್ನು ಬೆಳೆಸುವಲ್ಲಿ ನಮ್ಮ ಹಿರಿಯರೂ ಸೇರಿದಂತೆ ನಾವೆಲ್ಲರೂ ಅಪಾರವಾಗಿ ಶ್ರಮಿಸಿದ್ದೇವೆ. ನಮ್ಮ ಸಂಘ ಭವಿಷ್ಯದಲ್ಲಿ ಸಮಾಜದ ಹಿತವನ್ನು ಬಯಸಿ ಮುನ್ನಡೆಯುವಲ್ಲಿ ಹಲವಾರು ರೂಪು-ರೇಷೆಗಳನ್ನು ಸಿದ್ಧಪಡಿಸಿದ್ದು ಅದರಲ್ಲೊಂದು ಪ್ರಮುಖವಾಗಿ ಬಂಟ ಸೇವಾ ಗ್ರಾಮ ನಿರ್ಮಿಸುವುದಾಗಿದೆ. ಈ ಯೋಜನೆಗೆ ಸುಮಾರು 10 ಎಕರೆ ಸ್ಥಳಾವಕಾಶದ ಆವಶ್ಯಕತೆಯಿದ್ದು ಸಮಾಜದ ಮಹಾದಾನಿಗಳ ಸಹಕಾರದೊಂದಿಗೆ ಈ ಕಾರ್ಯವನ್ನು ಕೈಗೆತ್ತಿಕೊಳ್ಳುವ ಚಿಂತನೆ ನಡೆಯುತ್ತಿದೆ. ನಾವೆಲ್ಲರೂ ನಿಸ್ವಾರ್ಥಭಾವದಿಂದ ಸಂಘದಹಿತದೃಷ್ಟಿಯನ್ನು ಬಯಸಿ ಸಾಮಾಜಿಕ ಬದ್ಧತೆಯನ್ನು ರೂಢಿಸಿಕೊಂಡು ಸಮಾಜವನ್ನು ಸದೃಢವಾಗಿಸುವಲ್ಲಿ ತೊಡಗಿಸಿಕೊಳ್ಳೋಣ. ನಿಮ್ಮೆಲ್ಲರ ಸಹಕಾರ ಸಂಘದೊಂದಿಗೆ ನಿರಂತರವಾಗಿರಲಿ ಎಂದು ನುಡಿದರು.
ಸಂಘದ ಗೌರವಾಧ್ಯಕ್ಷ ಓಣಿಮಜಲು ಜಗನ್ನಾಥ ಶೆಟ್ಟಿಯವರು ಮಾತನಾಡಿ, ನಾವೆಲ್ಲರೂ ನಮ್ಮ ಸಮಾಜದ ಮೇಲೆ ಪ್ರೀತಿಯನ್ನು ಬೆಳೆಸಿಕೊಂಡು ಏಕತೆಯೊಂದಿಗೆ ಸಂಘದ ಪ್ರತಿಯೊಂದು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕಾಗಿದೆ. ಬಂಟ ಸಮಾಜದ ಉದ್ಧಾರದ ಕಲ್ಪನೆಯನ್ನಿಟ್ಟುಕೊಂಡು ನಮ್ಮ ಸಂಘವನ್ನು ಇನ್ನಷ್ಟು ಪ್ರಗತಿ ಪಥದಲ್ಲಿ ಕೊಂಡೊಯ್ದು ಆದರ್ಶ ಸಂಘವಾಗಿಸುವಲ್ಲಿ ಶ್ರಮಿಸೋಣ ಎಂದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸತೀಶ್ ಶೆಟ್ಟಿ, ಮೋಹನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಕೋಶಾಧಿಕಾರಿ ವೈ. ಚಂದ್ರಹಾಸ ಶೆಟ್ಟಿ, ಜತೆ ಕೋಶಾಧಿಕಾರಿ ಶ್ರೀನಿವಾಸ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್. ಶೆಟ್ಟಿ, ಯುವ ವಿಭಾಗದ ಯಶ್‌ರಾಜ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಉದಯ್ ಶೆಟ್ಟಿ, ಉತ್ತರ ಪ್ರಾದೇಶಿಕ ಕಾರ್ಯಾಧ್ಯಕ್ಷ ಗಣೇಶ್ ಪೂಂಜಾ, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ರವಿ ಕೆ. ಶೆಟ್ಟಿ ಅವರು ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಜಗನ್ನಾಥ ಶೆಟ್ಟಿಯವರು ದೀಪ ಬೆಳಗಿಸಿ ಮಹಾಸಭೆಗೆ ಚಾಲನೆಯಿತ್ತರು. ಕಳೆದ ವರ್ಷಾವಧಿಯಲ್ಲಿ ಅಗಲಿದ ಸಮಾಜ ಬಾಂಧವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ವಾರ್ಷಿಕ ವರದಿಯನ್ನು ಮಂಡಿಸಿದರು.
ಕೋಶಾಧಿಕಾರಿ ವೈ. ಚಂದ್ರಹಾಸ ಶೆಟ್ಟಿ ವಾರ್ಷಿಕ ಲೆಕ್ಕಪತ್ರವನ್ನು ಸಭೆಯ ಮುಂದಿಟ್ಟು ಅನುಮೋದನೆ ಪಡೆದುಕೊಂಡರು. ಲೆಕ್ಕಪರಿಶೋಧಕರಾದ ಸಿಎ ದಯಾನಂದ್ ಶೆಟ್ಟಿಯವರನ್ನು ಮುಂದಿನ ವಾರ್ಷಿಕ ಅವಧಿಗೆ ಲೆಕ್ಕಪರಿಶೋಧಕರನ್ನಾಗಿ ಸರ್ವಾನುಮತದಿಂದ ಮರು ನೇಮಕಗೊಳಿಸಲಾಯಿತು.
ಈ ಸಂದರ್ಭ ಸಂಘದ ತ್ತೈಮಾಸಿಕ ಪತ್ರಿಕೆ ಕಲ್ಪವೃಕ್ಷದ 3ನೇ ಸಂಚಿಕೆಯನ್ನು ಬಿಡುಗಡೆ ಗೊಳಿಸಲಾಯಿತು. ಸಭೆಯಲ್ಲಿ ವಿಕ್ರಮ್ ಎಸ್. ಶೆಟ್ಟಿ ತಮ್ಮ ಸಲಹೆಗಳನ್ನು ಸಭೆಯ ಮುಂದಿಟ್ಟರು. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ರಾಷ್ಟ್ರಗೀತೆಯೊಂದಿಗೆ ಸಭೆ ಮುಕ್ತಾಯಗೊಂಡಿತು. ಸಂತೋಷ್ ಶೆಟ್ಟಿಯವರು ಸ್ವಾಗತಿಸಿ, ಅಜಿತ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.