ಸೊಲ್ಲಾಪುರ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಗೋಷ್ಠಿ
Team Udayavani, Jul 13, 2017, 2:57 PM IST
ಸೊಲ್ಲಾಪುರ: ಅನುವಾದಕನೊಬ್ಬ ನದಿಯ ಸೇತುವೆಯಂತೆ. ತಾನು ಅನುವಾದಿಸಿರುವ ಕೃತಿಯಿಂದ ಎರಡು ಬೇರೆ ಬೇರೆ ಭಾಷೆಯ ಓದುಗರಿಗೆ ವಿಷಯ ತಲುಪಿಸುವ ಕಾರ್ಯ ಮಾಡುತ್ತಾನೆ. ಒಂದು ದಡದಿಂದ ಇನ್ನೊಂದು ದಡ ಸೇರುತ್ತಿದ್ದಾಗ ಸೇತುವೆ ಕೆಳಗಿದ್ದ ಕಂಭ ಯಾರ ಕಣ್ಣಿಗೂ ಕಾಣುವುದಿಲ್ಲ. ಹಾಗೇ ಒಬ್ಬ ಅನುವಾದಕನು ಕೂಡ ಆ ಕಂಭದಂತೆ ಯಾರ ಕಣ್ಣಿಗೂ ಕಾಣದೆ ಮರೆಯಾಗಿರುತ್ತಾನೆ. ಒಟ್ಟಾರೆ ಅನುವಾದಕನು ನದಿಯ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಾನೆ ಎಂದು ಪತ್ರಕರ್ತ ಚನ್ನವೀರ ಭದ್ರೇಶ್ವರಮಠ ಅಭಿಪ್ರಾಯ ವ್ಯಕ್ತಪಡಿಸಿದರು.
ಜು. 9ರಂದು ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ವತಿಯಿಂದ ಇಲ್ಲಿಯ ಹುತಾತ್ಮ ಸ್ಮೃತಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಮಹಾರಾಷ್ಟ್ರ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ-ಮರಾಠಿ ಭಾಷೆಗಳ ಅನುವಾದ ಕುರಿತು ಅವರು ಮಾತನಾಡಿ, ಅನುವಾದಕನಿಗೆ ಎರಡು ಭಾಷೆಗಳ ಮೇಲೆ ಪರಿಪೂರ್ಣತೆ ಇರಬೇಕು. ಅನುವಾದಕನಿಗೆ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಿಸುವಾಗ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಎರಡು ಭಾಷೆಯ ಶಬ್ದಗಳ ಅರ್ಥವನ್ನು ಓದುಗರಿಗೆ ತಿಳಿಯುವಂತೆ ಅನುವಾದಿಸಬೇಕು. ಅಲ್ಲದೆ ತಾನು ಅನುವಾದಿಸಿದ ಕೃತಿ ಓದುಗನಿಗೆ ಮಾತೃ ಭಾಷೆಯಂತೆ ಕಾಣಬೇಕು. ಅನುವಾದಕನು ತನ್ನ ಬರವಣಿಗೆಯ ಮೂಲಕ ಓದುಗರ ಮನ ಮುಟ್ಟುತ್ತಾನೆ. ಕನ್ನಡ ಮತ್ತು ಮರಾಠಿ ಇವೆರಡು ಭಾಷೆಗಳು ನಮಗೆ ತಾಯಿ ಮತ್ತು ಚಿಕ್ಕಮ್ಮ ಇದ್ದಂತೆ. ಹಾಗೇ ಕನ್ನಡ ಮತ್ತು ಮರಾಠಿ ಭಾಷೆಗಳು ನಮಗೆ ರಕ್ತ ಸಂಬಂಧದ ಸಹೋದರರಂತೆ ಕಾಣಬೇಕು. ಎರಡು ಭಾಷೆಗಳ ಅನುವಾದದಿಂದ ತಮ್ಮ ತಮ್ಮ ಭಾಷೆಯ ಸಾಹಿತ್ಯ ಶ್ರೀಮಂತಗೊಳ್ಳುತ್ತದೆ ಎಂದು ಹೇಳಿದರು.
ಜಾನಪದ ಸಾಹಿತ್ಯದ ಹಿರಿಯ ಸಾಹಿತಿ ಡಾ| ವೀರಣ್ಣ ದಂಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಕ್ಕಲ್‌ಕೋಟೆಯ ಪೂಜ್ಯ ಕ್ಕರೇವಣಸಿದ್ದ ಶ್ರೀಗಳ ಸಾನ್ನಿಧ್ಯದಲ್ಲಿ ಕನ್ನಡ-ಮರಾಠಿ ಸಾಹಿತ್ಯ ಬಾಂಧವ್ಯ ಕುರಿತು ಹಂಪಿ ವಿವಿಯ ಡಾ| ವಿಟuಲರಾವ್ ಕಾಯಕ್ವಾಡ್, ಕನ್ನಡ-ಮರಾಠಿ ಭಾಷೆಗಳ ಸಂಸ್ಕೃತಿಕ ಕುರಿತು ವಿಜಯಪುರದ ಡಾ| ವಿ. ಎಸ್. ಮಾಳಿ ಅವರು ಉಪನ್ಯಾಸ ನೀಡಿದರು. ಸರ್ವಾಧ್ಯಕ್ಷ ಡಾ| ಬಿ. ಬಿ. ಪೂಜಾರಿ, ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಬಸವರಾಜ ಮಸೂತಿ ವೇದಿಕೆಯಲ್ಲಿದ್ದರು. ಸುನೀವ್ ಸಾವಳಿ ಕಾರ್ಯಕ್ರಮ ನಿರೂಪಿಸಿದರು. ಸಿದ್ಧರಾಮ ವಾಘ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.