ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಸಮಸ್ಯೆಗಳಿಗೆ ಪರಿಹಾರ: ಸಂತೋಷ್ ಶೆಟ್ಟಿ
Team Udayavani, Dec 22, 2019, 5:33 PM IST
ಮುಂಬಯಿ, ಡಿ. 21: ಹೊಟೇಲಿಗರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಆಹಾರ್ ಸಂಸ್ಥೆಯ ಪಾತ್ರ ಮಹತ್ತರವಾಗಿದೆ. ನಾವುಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದರಿಂದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. ಆಹಾರ್ ಎಂಬುವುದು ಹೊಟೇಲಿಗರ ಆರೋಗ್ಯ ಇದ್ದಂತೆ. ಆರೋಗ್ಯ ಉತ್ತಮ ರೀತಿಯಲ್ಲಿದ್ದರೆ. ಹೊಟೇಲಿಗರು ಉತ್ತಮವಾಗಿರಲು ಸಾಧ್ಯ.ಆದ್ದರಿಂದ ಆರೋಗ್ಯ ಭಾಗ್ಯಕ್ಕಾಗಿ ನಾವು ಒಮ್ಮತ ಮತ್ತು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಆಹಾರ್‌ನ ಅಧ್ಯಕ್ಷ ಸಂತೋಷ್ ಆರ್. ಶೆಟ್ಟಿ ನುಡಿದರು.
ಡಿ. 18ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಹೊಟೇಲಿಗರ ಪ್ರತಿಷ್ಠಿತ ಸಂಘಟನೆಯಾಗಿರುವ “ಇಂಡಿಯನ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ‘(ಆಹಾರ್) ಇದರ ರೆಸ್ಟೋರೆಂಟ್ “ಬಿಜಿನೆಸ್ ಎಕ್ಸಿಬಿಷನ್-2019’ ಮತ್ತು ಸಂಸ್ಥೆಯ
40ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಡಳಿತ ಸಮಿತಿಯ ಸಹಕಾರದೊಂದಿಗೆ ಕಳೆದ ಎರಡು ವರ್ಷಗಳಿಂದ ಹೊಟೇಲಿಗರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಿದೆ. ಭವಿಷ್ಯದಲ್ಲೂ ಆಹಾರ್‌ನ ಕೆಲಸ-ಕಾರ್ಯಗಳಿಗೆ ಎಲ್ಲರು ಸಹಕರಿಸಬೇಕು. ನಾನು ಅಧ್ಯಕ್ಷನಾಗಿರದಿದ್ದರೂ ನನ್ನ ಸಹಕಾರ, ಪ್ರೋತ್ಸಾಹ ಸದಾಯಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಆಹಾರ್ ಸಂಸ್ಥೆಯ ಜೀವಮಾನ ಸಾಧಕ ಪ್ರಶಸ್ತಿಯನ್ನು ಹಿರಿಯ ಹೊಟೇಲ್ ಉದ್ಯಮಿ, ಆಹಾರ್‌ನ ಮಾಜಿ ಅಧ್ಯಕ್ಷ, ಸಲಹೆಗಾರ ಸಂತೋಷ್ ಆರ್. ಶೆಟ್ಟಿ ಅವರಿಗೆ ಪ್ರಧಾನಿಸಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಂತೋಷ್ ಆರ್. ಶೆಟ್ಟಿ ಅವರು, 40 ವರ್ಷಗಳ ಹಿಂದೆ ಫೋರ್ಟ್ ಪರಿಸರದ ಫುಟ್‌ಪಾತ್‌ನಲ್ಲಿ ಸ್ಥಾಪನೆಯಾದ ಆಹಾರ್ ಸಂಸ್ಥೆಯು ಪ್ರಸ್ತುತ ನಮ್ಮ ನಿರೀಕ್ಷೆಗೂ ಮೀರಿ ಹೊಟೇಲಿಗರ ಸಮಸ್ಯೆಯನ್ನು ಬಗೆಹರಿಸುವ ಮಹಾನ್ ಸಂಸ್ಥೆಯಾಗಿ ಕಂಗೊಳಿಸುತ್ತಿರುವುದು ಸಂತೋಷದ ಸಂಗತಿ.
ಸಂಸ್ಥೆಯ ಇಷ್ಟೊಂದು ಎತ್ತರಕ್ಕೆ ಬೆಳೆಯುವಲ್ಲಿ ಹೊಟೇಲಿಗರ ಪಾತ್ರ ಮಹತ್ತರವಾಗಿದೆ. ಇದೀಗ ಕೇಂದ್ರ ಸರಕಾರವೂ ಕೂಡಾ ಬಜೆಟ್ ಘೋಷಣೆಯ ಸಂದರ್ಭದಲ್ಲಿ ಆಹಾರ್‌ನ ಅಭಿಪ್ರಾಯವನ್ನು ಪಡೆಯುತ್ತಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ ಎಂದರು.
ಮಹಾಸಭೆಯಲ್ಲಿ ಪ್ರಸಿಡೆಂಟ್ ಅವಾರ್ಡ್‌ನ್ನು ಶಶಿಧರ ಶೆಟ್ಟಿ ಅವರಿಗೆ ಪ್ರದಾನಿಸಲಾಯಿತು. ಹಾಗೂ ಆಹಾರ್ ಸ್ಥಾಪನೆಯಲ್ಲಿ ಮಹತ್ತರ ಪಾತ್ರ ವಹಿಸಿದ ಹಿರಿಯ ಹೊಟೇಲ್ ಉದ್ಯಮಿಗಳಾದ ತ್ರಿಲೋಕ್ ಸಿಂಗ್, ಜಗನ್ನಾಥ ನಾಯಕ್, ಸಂತೋಷ್ ಶೆಟ್ಟಿ, ಜಗದೀಶ್ ಶೆಟ್ಟಿ, ವಸಂತ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಸುಧೀರ್ ವಿ. ಶೆಟ್ಟಿ, ರಘುರಾಮ್ ಶೆಟ್ಟಿ, ಸದಾನಂದ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ವಿವಿಧ ವಲಯಗಳ ಹಿರಿಯ ಹೊಟೇಲ್ ಉದ್ಯಮಿಗಳಾದ ಕೃಷ್ಣ ವಿ. ಶೆಟ್ಟಿ, ಕರುಣಾಕರ ಶೆಟ್ಟಿ, ಗಜಾನನ ಎ. ನಾಯಕ್, ಅಣ್ಣಯ್ಯ ಶೆಟ್ಟಿ, ಶ್ರೀಮತಿ ಸುಜಯಾ ಆರ್. ಶೆಟ್ಟಿ, ಜಯ ಆರ್. ಶೆಟ್ಟಿ, ಮೋಹನ್‌ದಾಸ್ ಶೆಟ್ಟಿ, ಶಂಕರ್ ಶೆಟ್ಟಿ, ರಘುನಾಥ್ ಶೆಟ್ಟಿ, ಲಕ್ಷ್ಮಣ್ ಪಿ. ತಾಮೇಶ್ವರ್, ಸೇಸಾ ಕಾಂತಪ್ಪ ಶೆಟ್ಟಿ, ಬಾಲಕೃಷ್ಣ ಎಸ್. ಶೆಟ್ಟಿ ಅವರನ್ನು ಗೌರವಿಸಲಾಗುವುದು. ಆಹಾರ್‌ನ ಮಾಜಿ ಅಧ್ಯಕ್ಷರುಗಳಾದ ನಾರಾಯಣ ಆಳ್ವ, ಸುಧಾಕರ ಶೆಟ್ಟಿ, ಅರವಿಂದ ಶೆಟ್ಟಿ ಅವರು ತಮ್ಮ ಸಲಹೆ ಸೂಚನೆಗಳನ್ನಿತ್ತು ಸಹಕರಿಸಿದರು. ವೇದಿಕೆಯಲ್ಲಿ ಅಧ್ಯಕ್ಷ ಸಂತೋಷ್ ಶೆಟ್ಟಿ, ಆಹಾರ್‌ನ ಗೌರವ ಪ್ರಧಾನ ಕಾರ್ಯದರ್ಶಿ
ಸುಕೇಶ್ ಎಸ್. ಶೆಟ್ಟಿ, ಗೌರವ ಜತೆ ಕಾರ್ಯದರ್ಶಿ ಸತೀಶ್ ಆರ್. ಶೆಟ್ಟಿ, ಗೌರವ ಕೋಶಾಧಿಕಾರಿ ಶಿವಾನಂದ ಡಿ. ಶೆಟ್ಟಿ, ಗೌರವ ಜತೆ ಕೋಶಾಧಿಕಾರಿ ರಾಜನ್ ಆರ್. ಶೆಟ್ಟಿ, ವಿವಿಧ ವಲಯಗಳ ಉಪಾಧ್ಯಕ್ಷರುಗಳಾದ ಮಹೇಂದ್ರ ಎಸ್. ಕರ್ಕೇರ, ನಿರಂಜನ ಎಲ್. ಶೆಟ್ಟಿ, ವಿಜಯ ಕೆ. ಶೆಟ್ಟಿ, ಸುರೇಶ್ ಎಸ್. ಶೆಟ್ಟಿ ಅಮರ್ ಎಸ್. ಶೆಟ್ಟಿ, ಡಾ| ಸಂತೋಷ್ ಎಂ. ರೈ, ಭುಜಂಗ ಆರ್. ಶೆಟ್ಟಿ, ಜಯದೀಪ್ ಎಂ. ದೇವಾಡಿಗ, ಪ್ರಭಾಕರ ಬಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮಧ್ಯಾಹ್ನ 12.30ರಿಂದ ಮಧ್ಯಾಹ್ನ 1.30ರ ವರೆಗೆ ಹೊಟೇಲ್ ಉದ್ಯಮಕ್ಕೆ ಸಂಬಂಧಿಸಿದ ಸೆಮಿನಾರ್ ನಡೆಯಿತು. ಎಚ್‌ಟಿಐ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ನಿರ್ದೇಶಕ ಡೊಮಿನಿಕ್ ಕೊಸ್ಟಬಿರ್ ಅವರು ಉಪನ್ಯಾಸ ನೀಡಿದರು. ಆಹಾರ್‌ನ ಗೌರವ ಪ್ರಧಾನ ಕಾರ್ಯದರ್ಶಿ ಸುಕೇಶ್ ಎಸ್. ಶೆಟ್ಟಿ, ಗೌರವ ಜತೆ ಕಾರ್ಯದರ್ಶಿ ಸತೀಶ್ ಆರ್. ಶೆಟ್ಟಿ, ಗೌರವ ಕೋಶಾಧಿಕಾರಿ ಶಿವಾನಂದ ಡಿ. ಶೆಟ್ಟಿ, ಗೌರವ ಜತೆ ಕೋಶಾಧಿಕಾರಿ ರಾಜನ್ ಆರ್. ಶೆಟ್ಟಿ ಹಾಗೂ ವಿವಿಧ ವಲಯಗಳ ಉಪಾಧ್ಯಕ್ಷರುಗಳಾದ ವಲಯ ಒಂದರ ಉಪಾಧ್ಯಕ್ಷ ಮಹೇಂದ್ರ ಎಸ್. ಕರ್ಕೇರ, ವಲಯ ಎರಡರ ಉಪಾಧ್ಯಕ್ಷ ನಿರಂಜನ್ ಎಲ್ . ಶೆಟ್ಟಿ, ವಲಯ ಮೂರರ ಉಪಾಧ್ಯಕ್ಷ ವಿಜಯ ಕೆ. ಶೆಟ್ಟಿ, ವಲಯ ನಾಲ್ಕರ ಉಪಾಧ್ಯಕ್ಷ ಸುರೇಶ್ ಎಸ್. ಶೆಟ್ಟಿ, ವಲಯ ಆರರ ಉಪಾಧ್ಯಕ್ಷ ಅಮರ್ ಎಸ್. ಶೆಟ್ಟಿ, ವಲಯ ಏಳರ ಉಪಾಧ್ಯಕ್ಷ ಡಾ| ಸಂತೋಷ್ ಎಂ. ರೈ, ವಲಯ ಎಂಟರ ಉಪಾಧ್ಯಕ್ಷ ಭುಜಂಗ ಆರ್. ಶೆಟ್ಟಿ, ವಲಯ ಒಂಭತ್ತರ ಉಪಾಧ್ಯಕ್ಷ ಜೈದೀಪ್ ಎಂ. ದೇವಾಡಿಗ, ವಲಯ ಹತ್ತರ ಉಪಾಧ್ಯಕ್ಷ ಪ್ರಭಾಕರ ಬಿ. ಶೆಟ್ಟಿ ಹಾಗೂ ಸಲಹಾ ಸಮಿತಿ, ಉಪ ಸಮಿತಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಮಹಾಸಭೆಯು ಯಶಸ್ವಿಯಾಗಿ ನಡೆಯಿತು. ಸತ್ಯಾ ಶೆಟ್ಟಿ ಮತ್ತು ಸೌಮ್ಯಾ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು.
ಆಹಾರ್‌ನ ಪದಾಧಿಕಾರಿಗಳು, ವಿವಿಧ ವಲಯಗಳ ಉಪಾಧ್ಯಕ್ಷರುಗಳನ್ನು ಅಭಿನಂದಿಸಲಾಯಿತು. ದಿನಪೂರ್ತಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸದಸ್ಯ ಬಾಂಧವರು, ಹಿತೈಷಿಗಳು, ವಿವಿಧ ಹೊಟೇಲ್ ಸಂಘಟನೆಗಳ ಪದಾಧಿಕಾರಿಗಳು, ಹೊಟೇಲ್ ಉದ್ಯಮಿಗಳು ಪಾಲ್ಗೊಂಡು ಸಮಾರಂಭದ ಯಶಸ್ಸಿಗೆ ಸಹಕರಿದರು.
ಚಿತ್ರ-ವರದಿ: ಸುಭಾಷ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.