ತೇರನೆಳೆಯುವವರು ನಾವು ಎಲ್ಲಿದ್ದರೇನಂತೆ…!


Team Udayavani, Jan 26, 2018, 5:06 PM IST

1-aa.jpg

ಗುಂಗುರು ಕೂದಲು, ದುಂಡು ಮುಖದಲ್ಲಿ  ಸದಾ ಮುಗುಳ್ನಗೆ,  ಸುಮಾರು ಐದೂವರೆ ಅಡಿ ಎತ್ತರ,  ತೇಜೋಪೂರ್ಣ ಕಣ್ಣುಗಳು,  ನಿಷ್ಕಪಟ ಸ್ವಭಾವ, ಸರಳ ಜೀವಿ, ಧಾರ್ಮಿಕ ಮನೋಭಾವದ ಶ್ರೀಮಂತ ವ್ಯಕ್ತಿತ್ವ. ತಮ್ಮ ಬದುಕಿನುದ್ದಕ್ಕೂ ಚಲನಶೀಲತೆಯನ್ನು ಕಾಯ್ದುಕೊಂಡು ಬಂದ ಐಕಳ ಹರೀಶ್‌ ಶೆಟ್ಟಿ ಅವರು ನಮ್ಮ ನಡುವಿನ ಪ್ರತಿಭಾನ್ವಿತ ಸಂಘಟಕ.

ನಿಜ ಕಣ್ರಿ …ಯಾವುದೇ ಸಭೆ-ಸಮಾರಂಭಗಳಿಗೆ ಐಕಳ  ಎಂಟ್ರಿ ಕೊಟ್ಟರೆ ಸಾಕು…! ಪಡ್ಡೆ ಹುಡುಗರಿಂದ ಹಿಡಿದು ಎಲ್ಲರು ಒಮ್ಮೆ ಕತ್ತೆತ್ತಿ ನೋಡುವಂತಹ ಗತ್ತು- ಗಾಂಭೀರ್ಯದವರು. ಮಲೆನಾಡ ಮೈಸಿರಿಯನ್ನು ಮೆಚ್ಚದವರಿಲ್ಲ. ಕವಿಗಳು ಮಲೆನಾಡ ಮೈಬಣ್ಣವನ್ನು ಮನದುಂಬಿ ಹೊಗಳಿದ್ದಾರೆ. ಎಲ್ಲ ಕವಿಗಳ ಸಾಹಿತ್ಯದಲ್ಲಿ ಮಲೆನಾಡ ಚಿತ್ರಣಗಳು ತುಂಬಿ ತುಳುಕಿವೆ. ಮಲೆನಾಡಿನ ಪ್ರಕೃತಿ ಸೌಂದರ್ಯದ ಐಕಳದಲ್ಲಿ ಹುಟ್ಟಿ ಬೆಳೆದು, ಮುಂಬಯಿ ಮಹಾನಗರಕ್ಕೆ  ಕಾಲಿಟ್ಟ ಯುವ ಸಂಘಟಕ ಐಕಳ ಹರೀಶ್‌ ಶೆಟ್ಟಿ ಅವರ ಬದುಕ್ಕೊಂದು ಹುಣ್ಣಿಮೆಯ ಚಂದ್ರನಂತೆ. ಮಾಯನಗರಿಯ  ತಮ್ಮ ಕ್ರಿಯಾಶೀಲ ವ್ಯಕ್ತಿತ್ವದಿಂದ ಮನೆಮಾತಾದ ದಕ್ಷ ಸಂಘಟಕ ಐಕಳ ಹರೀಶ್‌ ಶೆಟ್ಟಿ ಅವರು ಕಳೆದ ಹಲವು ವರ್ಷಗಳಿಂದ ಬಂಟ ಸಮಾಜದ ಉನ್ನತಿಯೊಂದಿಗೆ ಕನ್ನಡ ನಾಡು- ನುಡಿ-ಸಾಹಿತ್ಯ, ಸಂಸ್ಕೃತಿಯ ಬಲವರ್ಧನೆಗೆ ಶ್ರಮಿಸುತ್ತಿರುವ ಅಪರೂಪದ ವ್ಯಕ್ತಿ.

“ಸಮುದಾಯ ಎನ್ನುವುದು ಸಂಕುಚಿತ ಮನೋಭಾವನೆಯಲ್ಲ; ಅದೊಂದು ಮಹೋನ್ನತ ತತ್ವ’ ಎಂಬ ದೃಢವಾದ ನಂಬಿಕೆಯಿಂದ ಸಮಸ್ತ ಬಂಟ ಬಾಂಧವರ ಪ್ರಗತಿಗೆ ಶ್ರಮಿಸಿದ ಅವರು ಪ್ರಸ್ತುತ  ಪ್ರತಿಷ್ಠಿತ ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಈ ಸಂದರ್ಭದಲ್ಲಿ  ಅವರೊಂದಿಗೆ ಮಾತಿಗಿಳಿದಾಗ,

ಬಂಟರ ಸಂಘಕ್ಕೆ ಎಂಟ್ರಿ
ನನ್ನ ಕ್ರಿಯಾಶೀಲತೆಯನ್ನು ಕಂಡು ಭುಜಂಗ ಶೆಟ್ಟಿ ಅವರು ಬಂಟರ ಸಂಘಕ್ಕೆ ಆಹ್ವಾನಿಸಿ ಪರಿಚಯಿಸಿ ದರು. ಆ ಸಂದರ್ಭದಲ್ಲೇ ನಾನು ಮತ್ತು ಪತ್ನಿ ಚಂದ್ರಿಕಾ ಸಂಘದ ವಾರ್ಷಿಕ ಕ್ರೀಡೋತ್ಸವದಲ್ಲಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ್ದು ಈಗ ಇತಿಹಾಸ.  ಮುಂದೆ  ಸಂಘದ ಒಂದೊಂದೆ ಸಮಿತಿಗಳಲ್ಲಿ ಗಟ್ಟಿ ನೆಲೆಯೂರಲು ಪ್ರಾರಂಭಿಸಿದೆ. ನನ್ನ  ಕ್ರೀಡಾ ಒಲವುವನ್ನು ಕಂಡು ಸಂಘವು ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷನನ್ನಾಗಿ ನೇಮಿಸಿತು. ಆನಂತರ ಸಂಘದ ಕ್ರೀಡಾ ಕಾರ್ಯಕ್ರಮವು ಕ್ರೀಡಾ ಉತ್ಸವವಾಗಿ ಮಾರ್ಪಟ್ಟು ಕ್ರೀಡೆಯ ಆಯಾಮವೇ ಬದಲಾಯಿತು. ಯುವಪೀಳಿಗೆಯಿಂದ ಹಿಡಿದು, ಹಿರಿಯರ ವರೆಗೆ  ಸಮಾಜ ಬಾಂಧವರನ್ನು ಹೇಗೆ ಸಂಘಟಿಸುವುದು ಎಂಬುವುದನ್ನು ಅರಿತುಕೊಂಡೆ. 2005ರ ಮುಂಬಯಿ ಮುಳುಗಡೆ  ಸಂದರ್ಭದಲ್ಲಿ ಪೀಡಿತ ಸಮಾಜ ಬಾಂಧವರ ಮನೆ-ಮನೆಗಳಿಗೆ ತೆರಳಿ ಅವರಿಗೆ ಅಗತ್ಯ ವಸ್ತುಗಳನ್ನು ಪೂರೈಸಿದ್ದೇವೆ. ಇದರಿಂದ ಸಮಾಜ ಬಾಂಧವರ ಕಷ್ಟ-ಕಾರ್ಪಣ್ಯಗಳನ್ನು ಬಹಳ ಸಮೀಪದಿಂದ ಕಾಣುವ ಅವಕಾಶ ದೊರೆಯಿತು. ಮುಂದೆ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷನಾಗಿ ಆರ್ಥಿಕವಾಗಿ ಹಿಂದುಳಿದ ಬಂಟ ಬಾಂಧವರ ಮಕ್ಕಳಿಗೆ ಎಲ್ಲರ ಸಹಕಾರದಿಂದ ಸಂಘದ ಮುಖಾಂತರ ಹೆಚ್ಚಿನ ನೆರವು ಸಿಗುವಂತೆ ಮಾಡಿದ ಆತ್ಮತೃಪ್ತಿ ನನಗಿದೆ.

ಬಂಟರ ಸಂಘದ ಹೆಸರು ವಿಶ್ವಮಟ್ಟದಲ್ಲಿ
ನಾನು ಅಧ್ಯಕ್ಷನಾಗಿ ಪಟ್ಟ ಏರಿದಾಗ ಇವನು ಸಂಘವನ್ನು ಏನೂ ಮಾಡುತ್ತಾನೋ, ಯಾವ ಮಟ್ಟಕ್ಕೆ ಇಳಿಸಿ ಬಿಡುತ್ತಾನೋ ಎಂದು ಕೆಲವರ ಮನಸ್ಸಿನಲ್ಲಿತ್ತು. ಹಲವರು ಬೆನ್ನ ಹಿಂದೆ ಹೀಯಾಳಿಸಿ ಮಾತನಾಡುತ್ತಿದ್ದರು. ಆದರೆ ನಾನು ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸಿಕೊಂಡು, ಸಂಘದ ಹೆಸರನ್ನು ಉತ್ತುಂಗಕ್ಕೇರಿ ಸಲು ಹಗಲಿರುಳು ಶ್ರಮಿಸಿದೆ. ನನ್ನ ಮನಸ್ಸಿನಲ್ಲಿ ಸಂಘದ ಧ್ಯೇಯೋದ್ದೇಶಗಳು, ಸಮಾಜಪರ ಯೋಜನೆಗಳು ಗ್ರಾಮೀಣ ಪ್ರದೇಶದ ಬಂಟ ಬಾಂಧವರಿಗೆ ತಲುಪಬೇಕು ಎಂಬುವುದಾಗಿತ್ತು.  ಸಂಘವನ್ನು ವಿಶ್ವಮಟ್ಟದಲ್ಲಿ ಬೆಳೆಸುವ ಗುರಿ ನನ್ನದಾಗಿತ್ತು. ಅದಕ್ಕೆ ಸಮಿತಿಯ ಎಲ್ಲ ಸದಸ್ಯರ ಸಹಕಾರ ದೊರೆಯಿತು. ಕಟೀಲೇಶ್ವರಿಯ ಇಚ್ಛೆಯಿಂದ, ದಾನಿಗಳ ಸಹಕಾರದಿಂದ ನಾನು ಎಣಿಸಿದ್ದನ್ನು ಸಾಧಿಸಿ ತೋರಿಸಿದ್ದೇನೆ.

ಸೋರುತ್ತಿತ್ತು ಮನೆಯ ಮಾಳಿಗೆ
ನಾನು  ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಬಂಟರ ಸಂಘವು ಸಾಕಷ್ಟು ಶಿಥಿಲಗೊಂಡಿತ್ತು. ಸಭಾಭವನವು ಮಳೆಗಾಲದಲ್ಲಿ ಸೋರುತ್ತಿತ್ತು. ಬಂಟರ ಸಂಘವು ಆಕರ್ಷಣೀಯವಾಗಿ ಎಲ್ಲರನ್ನು ಕೈಬೀಸಿ ಕರೆಯುವಂತಾಗಬೇಕು ಎಂದು ತಿಳಿದು, ಕಟ್ಟಡದ ಜೀರ್ಣೋದ್ಧಾರಕ್ಕೆ ನಮ್ಮ ಸಮಿತಿಯು  ಮುಂದಾ ಯಿತು. ಆಡಳಿತ ಸಮಿತಿಯವರ ಸಂಪೂರ್ಣ ಪ್ರೋತ್ಸಾ ಹದಿಂದ ದಾನಿಗಳ ಸಹಕಾರ ದೊಂದಿಗೆ ಕೋಟ್ಯಂತರ ರೂ.ಗಳನ್ನು ಸಂಗ್ರಹಿಸಿ ಸೋರುತ್ತಿದ್ದ ಸಂಘಕ್ಕೆ ವಿನೂತನ ರೀತಿಯ ಹೊಳಪು ನೀಡಲಾಯಿತು. ಇನ್ನೊಂದೆಡೆ ಅನೆಕ್ಸ್‌ ಕಟ್ಟಡ ನಿರ್ಮಾಣ, ಪಾರ್ಕಿಂಗ್‌ ವ್ಯವಸ್ಥೆ, ಜ್ಞಾನಮಂದಿರದ ಜೀರ್ಣೋದ್ಧಾರ ಇನ್ನಿತರ ಬೃಹತ್‌ ಯೋಜನೆಗಳು ದಾನಿಗಳ ಸಹಕಾರದಿಂದ ಯಶಸ್ವಿ ಗೊಂಡಿತು. ಪ್ರಸ್ತುತ ಸಂಘಕ್ಕೆ ಆಗಮಿಸಿದರೆ ಫೈವ್‌ಸ್ಟಾರ್‌ ಹೊಟೇಲ್‌ಗೆ ಬಂದ ಅನುಭವವಾಗುತ್ತದೆ. ನಾನು  ಅಧ್ಯಕ್ಷನಾಗಿದ್ದ ಮೂರು ವರ್ಷಗಳಲ್ಲಿ ಸಾಧಿಸಿದ ಸಾಧನೆ  ಸಂಘದ ಇತಿಹಾಸದಲ್ಲೇ ಒಂದು ಮೈಲುಗಲ್ಲು ಎಂದು ಜನರು ಆಡಿಕೊಳ್ಳುವಂತೆ ಮಾಡಿದ್ದೇವೆ.

ಸಂಘದ ನವಗ್ರಹಗಳು
ಒಂದು ಕಾಲದಲ್ಲಿ ಬಂಟರ ಸಂಘಕ್ಕೆ ಶ್ರೀಮಂತರು, ಅದರಲ್ಲೂ ಸ್ವಂತ ವಾಹನ ಇದ್ದವರು ಮಾತ್ರ ಬರುತ್ತಿ ದ್ದರು. ಬಂಟರ ಸಂಘ ಎಂಬುವುದು ಶ್ರೀಮಂತರಿಗೆ ಮಾತ್ರ ಎಂಬ ಮಾತೊಂದಿತ್ತು. ನನ್ನ  ಕಾಲಾವಧಿಯಲ್ಲಿ ಇದನ್ನು ಸುಳ್ಳಾಗಿಸಿದ್ದೇವೆ. ಗ್ರಾಮೀಣ ಪ್ರದೇಶಗಳ ಬಂಟ ಬಾಂಧವರು ಸಂಘದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಧ್ಯೇಯೋದ್ದೇಶದಿಂದ ನವಗ್ರಹಗಳೆಂಬ ಒಂಬತ್ತು ಪ್ರಾದೇಶಿಕ ಸಮಿತಿಗಳನ್ನು ಸ್ಥಾಪಿಸಲು ಮುಂದಾದೆವು. ಇದರ ಮುಖಾಂತರ ಯುವಪೀಳಿಗೆಗೆ ನಾಯಕತ್ವದ ಹಾದಿಯನ್ನು ತೋರಿಸಿದಂತಾಯಿತು. 

ಗ್ರಾಮೀಣ ಪ್ರದೇಶದವರು ಪ್ರಾದೇಶಿಕ ಸಮಿತಿಗಳ ಮೂಲಕ ಸಂಘಕ್ಕೆ ಹತ್ತಿರವಾದರು.  ಸಂಘದ ಶಿಕ್ಷಣ, ವೈದ್ಯಕೀಯ, ಕ್ರೀಡೆ, ಸಮಾಜ ಕಲ್ಯಾಣ, ಸಾಂಸ್ಕೃತಿಕ  ಹೀಗೆ ಎಲ್ಲ ಯೋಜನೆಗಳು ಇಂದು ಗ್ರಾಮೀಣ ಪ್ರದೇಶದ ಬಂಟ ಬಾಂಧವರಿಗೆ ಲಭಿಸುತ್ತಿದೆ. ನಾವು  ಎಣಿಸಿರುವುದಕ್ಕಿಂತ ಅಧಿಕ ರೀತಿಯಲ್ಲಿ ಪ್ರಾದೇಶಿಕ ಸಮಿತಿಗಳು ಅದರಲ್ಲೂ ಸಂಘಕ್ಕೆ ಬದ್ಧವಾಗಿ ಇಂದು ಕಾರ್ಯನಿರ್ವಹಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ.

ಏನಿದು ವಿಶ್ವಬಂಟರ ಸಂಘಗಳ ಒಕ್ಕೂಟ?
ಜಯಪಾಲ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ 1987 ರಲ್ಲಿ ವಿಶ್ವ ಬಂಟರ ಸಂಘಗಳ ಒಕ್ಕೂಟ ಸ್ಥಾಪನೆಗೊಂಡಿತು. ಆನಂತರದ ದಿನಗಳಲ್ಲಿ ಪಳ್ಳಿ ಜಯರಾಮ್‌ ಶೆಟ್ಟಿ, ಐ. ಎಂ. ಜಯರಾಮ ಶೆಟ್ಟಿ, ಸಚ್ಚಿದಾನಂದ ಹೆಗ್ಡೆ  ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ 13 ವರ್ಷಗಳಿಂದ ಅಜಿತ್‌ ರೈ ಮಾಲಾಡಿ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.  ವಿಶ್ವದ  106 ಬಂಟರ ಸಂಘಗಳು ಸದಸ್ಯತ್ವವನ್ನು ಈಗಾಗಲೇ ಒಕ್ಕೂಟವು ಹೊಂದಿದೆ. ಒಂದುವರೆ ಸಾವಿರ ಸದಸ್ಯತ್ವ ವನ್ನು ಹೊಂದಿರುವ ಸಂಘಗಳಿಗೆ ಒಂದು ಸದಸ್ಯತ್ವವನ್ನು ಒಕ್ಕೂಟದಲ್ಲಿ ನೀಡಲಾಗುತ್ತದೆ. ಅವರು ಮತದಾನದ ಹಕ್ಕನ್ನು ಹೊಂದಿದ್ದು, ಇಲ್ಲಿ  ಮ್ಯಾನೇಜಿಂಗ್‌ ಕೌನ್ಸಿಲ್‌ ಸುಪ್ರೀಂ ಆಗಿರುತ್ತದೆ. ಮುಂದಿನ ದಿನಗಳಲ್ಲಿ ಮುಂಬ ಯಿಯ ಎಲ್ಲ ಸಂಘಗಳಿಗೆ ಸದಸ್ಯತ್ವ ನೀಡಿದಲ್ಲಿ ಸುಮಾರು 15 ಸಂಘಟನೆಗಳು ಒಕ್ಕೂಟದ ಸದಸ್ಯತ್ವ ಹೊಂದಲು ಸಾಧ್ಯವಿದೆ. ಭವಿಷ್ಯದಲ್ಲಿ ಅಗತ್ಯ ಬಿದ್ದರೆ ಒಕ್ಕೂಟದ ಬೈಲಾಸ್‌ನ್ನು ಕಾನೂನಿನ ಚೌಕಟ್ಟಿನೊಳಗೆ ಬದಲಾಯಿಸಲಾಗುವುದು.

ನಗರದ ದೇಣಿಗೆ ಹಳ್ಳಿಗೆ ಸಾಗಬೇಕು
ಮೊಟ್ಟ ಮೊದಲು ಒಕ್ಕೂಟಕ್ಕೆ ದೇಣಿಗೆ ಸಂಗ್ರಹ ಮಾಡುವ ಗುರಿಯನ್ನು ಹೊಂದಿದ್ದೇನೆ. ವಿಶ್ವದ ಎಲ್ಲಾ ಬಂಟ ಸಂಘಟನೆಗಳನ್ನು ಒಂದಾಗಿಸಿಕೊಂಡು ಒಕ್ಕೂಟದ ಮುಖಾಂತರ ಗ್ರಾಮೀಣ ಪ್ರದೇಶದ ಬಂಟ ಬಾಂಧವರಿಗೆ ಇದರ ಸದುಪಯೋಗವಾಗಬೇಕು ಎಂಬ ಉದ್ಧೇಶವಿದೆ. ಕುಗ್ರಾಮಗಳಲ್ಲಿ ಇಂದಿಗೂ ಬಂಟ ಸಮಾಜದವರಿಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಿದೆ. 

ಆದ್ದರಿಂದ ನಗರದಲ್ಲಿ ಸಂಗ್ರಹಿಸುವ ದೇಣಿಗೆ ನೇರವಾಗಿ ಗ್ರಾಮೀಣ ಪ್ರದೇ ಶದ ಸಮಾಜದ ಬಡವರ ಮಕ್ಕಳ ಶಿಕ್ಷಣಕ್ಕೆ, ಆರೋಗ್ಯಕ್ಕೆ, ಮದುವೆಗೆ ಆಸರೆಯಾಗಬೇಕು.

ಒಕ್ಕೂಟದ ನೂತನ ಯೋಜನೆಗಳು
ಮುಂಬಯಿಯಲ್ಲಿ ನಾವು ವರ್ಷಕ್ಕೊಂದು ಬಾರಿ ನಡೆಸುವ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮದಂತೆ ವರ್ಷಕ್ಕೊಂದು ಬಾರಿ ಹಳ್ಳಿಹಳ್ಳಿಗೆ ತೆರಳಿ ಅಲ್ಲಿನ ಬಂಟ ಸಂಘಟನೆಗಳ ಮುಖಾಂತರ ಸಮಾಜದ ಬಡ ಮಕ್ಕಳಿಗೆ ಸಹಕರಿಸುವ ಉದ್ದೇಶವನ್ನು ಹೊಂದಲಾಗಿದೆ. ಪ್ರತೀ ವರ್ಷ ಹಳ್ಳಿಹಳ್ಳಿಯಲ್ಲೂ 1 ಲಕ್ಷ ರೂ. ಗಳನ್ನು ಶಿಕ್ಷಣಕ್ಕಾಗಿ ಹಂಚಿದಾಗ ನಮ್ಮ ಶ್ರಮ ಸಾರ್ಥಕವಾಗುತ್ತದೆ. ಶಿಕ್ಷಣ, ಆರೋಗ್ಯ, ಮದುವೆ, ಕ್ರೀಡೆ  ಇನ್ನಿತರ ಬೃಹತ್‌ ಯೋಜನೆಗಳ ನಿಧಿಗಳನ್ನು ಸಂಗ್ರಹಿಸಲಾಗುವುದು. ಐದು ಲಕ್ಷ ರೂ. ದೇಣಿಗೆ ನೀಡುವವರು ಒಕ್ಕೂಟದ  ಪ್ಯಾಟರ್ನ್ ಮೆಂಬರ್‌ ಆಗುತ್ತಾರೆ. 25 ಲಕ್ಷ ರೂ. ಹಾಗೂ ಅದಕ್ಕಿಂತ ಹೆಚ್ಚಿನ ದೇಣಿಗೆ ನೀಡುವ ದಾನಿಗಳು ಒಕ್ಕೂಟದಲ್ಲಿ ಟ್ರಸ್ಟಿ ಗಳಾಗಿದ್ದು,  ಪ್ರತೀ ವರ್ಷ ಅವರ  ಹೆಸರಿನಲ್ಲಿ ಸಮಾ ಜದ ಬಡವರಿಗೆ ಸಹಕರಿಸಲಾಗುವುದು.

ಜಾಗತಿಕ ಮಟ್ಟದಲ್ಲಿ ವಿವಿಧ ವಿಭಾಗಗಳ ಸ್ಥಾಪನೆ…
ಹಿಂದೆ ನಾನು ಮುಂಬಯಿ ಬಂಟರ ಸಂಘದೊಳಗಿದ್ದು, ವಿಶ್ವಮಟ್ಟಕ್ಕೇರಿದ್ದೇನೆ. ಇದೀಗ ವಿಶ್ವ ಮಟ್ಟದ ಒಕ್ಕೂಟದ ಅಧ್ಯಕ್ಷನಾಗಿ ಅದರ ಬೆಲೆ, ನೆಲೆಯನ್ನು ಉಳಿಸಿ-ಬೆಳೆಸಬೇಕಾಗುವುದು ನನ್ನ ಧರ್ಮ. ಮುಂದಿನ ದಿನಗಳಲ್ಲಿ ಜಾಗತಿಕ ಮಹಿಳಾ ವಿಭಾಗ ಹಾಗೂ ಜಾಗತಿಕ ಬಂಟ ಯುವ ವೇದಿಕೆಯನ್ನು ಸ್ಥಾಪಿಸುವ ಇರಾದೆ ಇದೆ. ಯುವ ಪೀಳಿಗೆಗೆ ಏನು ಬೇಕು ಎಂಬುವುದನ್ನು ನಾನು ಚೆನ್ನಾಗಿ ಬಲ್ಲೆ. ಅದನ್ನು ಅರಿತು ಅವರನ್ನು ಆಕರ್ಷಿಸುವ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ವಿಶ್ವಮಟ್ಟದಲ್ಲಿ ಕ್ರೀಡೋತ್ಸವ,  ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಿ ಬಂಟರ ಸಂಸ್ಕೃತಿ-ಸಂಸ್ಕಾರಗಳನ್ನು ಜಗತ್ತಿಗೆ ಸಾರಲಾಗುವುದು. 

ಮೊಟ್ಟ ಮೊದಲು ವಿಶ್ವದ ಎಲ್ಲ ಸಂಘಟನೆಗಳನ್ನು ಒಗ್ಗೂಡಿಸುವ ದೃಷ್ಟಿಯಿಂದ ಫೆಬ್ರವರಿ  24 ರಂದು ಬಂಟ ಸಮಾವೇಶವನ್ನು ಬಂಟರ ಭವನದಲ್ಲಿ ನಡೆಸಲಾಗುವುದು. ಇಲ್ಲಿ ದುಂದು ವೆಚ್ಚಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಲಾಗುವುದು.

ಯಶಸ್ಸಿನ ಗುಟ್ಟು…
ಅಹಂ ಭಾವನೆ ಬೆಳೆಸಿಕೊಂಡಾಗ ಅದರಿಂದ ನಾವು ಬೆಳೆಯಲು ಸಾಧ್ಯವಿಲ್ಲ. ಜನಗಳನ್ನು ನಾವು ಪ್ರೀತಿಸಿದಾಗ ಅವರು ನಮ್ಮನ್ನು ಪ್ರೀತಿಸುತ್ತಾರೆ. ಎಷ್ಟೇ ಕಿರಿಯವರಾದರೂ ಅವರಿಗೆ ನಾವು ಗೌರವ ನೀಡಬೇಕು. ಅವರ ಗೌರವಕ್ಕೆ ನಾವು ಆಪೇಕ್ಷಿಸಬಾರದು. ಜನರು ಹಿಂದೆ ಸಾವಿರ ಮಾತನಾಡುತ್ತಾರೆ. ಅದಕ್ಕೆ ಕಿವಿಗೊಡಬಾರದು. ನನ್ನ ಬಗ್ಗೆ ಕೀಳಾಗಿ ಮಾತನಾಡುವವರನ್ನೂ ನಾನು  ಗೌರವದಿಂದ ಕಾಣುತ್ತೇನೆ. ಕೀಳಾಗಿ ಕಂಡವರು ಕೂಡಾ ಅನಂತರ  ಹೊಗಳಿದವರು ಇದ್ದಾರೆ. ಇದು ಕಾಲಚಕ್ರವಿದ್ದಂತೆ ತಿರುಗುತ್ತಿರುತ್ತದೆ.

ಕಾಲೆಳೆಯುವವರು ಕಾಲ ಕೆಳಗಿರುತ್ತಾರೆ…
ಒಬ್ಬ ವ್ಯಕ್ತಿಯ ಹಿಂದಿನ ಜೀವನ ಹೇಗೆ ಇತ್ತು ಎಂಬುವುದು ಮುಖ್ಯವಲ್ಲ. ಅವನಿಗೆ ಒಂದು ಜವಾಬ್ದಾರಿಯನ್ನು ನೀಡಿದಾಗ ಆತ ಹಿಂದಿನ ಬದುಕನ್ನು ಮರೆತು ಅದನ್ನು ಹೇಗೆ ನಿಭಾಯಿಸಿಕೊಂಡು ಹೋಗುತ್ತಾನೆ ಎಂಬುವುದು  ಬಹಳ ಮುಖ್ಯವಾಗುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ನನಗೂ ಕೂಡಾ ಕಾಲೆಳೆಯುವವರು ಬಹಳಷ್ಟು ಮಂದಿ ಇದ್ದರು… ಈಗಲೂ ಇದ್ದಾರೆ…ಅವರು ಎಷ್ಟು ಕಾಲೆಳೆದಿದ್ದಾರೋ ನಾನು ಅಷ್ಟೇ ಮೇಲೆ ಏರಿದ್ದೇನೆ. ಸಂಘದ ವಿಶ್ವಸ್ತನಾಗಿದ್ದ ನಾನು ಪ್ರಸ್ತುತ  ಕಾರ್ಯಕಾರಿ ಸಮಿತಿಗೆ ಬಂದಿದ್ದೇನೆ. ಕಾಲಕಾಲಕ್ಕೆ ಸಂಘಕ್ಕೆ ಹಾಗೂ ಸ್ಥಳೀಯ ಸಮಿತಿಗಳಿಗೆ ಸಲಹೆಗಳನ್ನು ನೀಡುವ ಅವಕಾಶ ದೊರೆಯುತ್ತದೆ ಎಂಬ ಉದ್ಧೇಶದಿಂದ ಸಮಿತಿಯಲ್ಲಿದ್ದೇನೆ.

ಹೇಗಿದ್ದವರು? ಹೀಗಾದರು…!
ಬಾಲ್ಯದಲ್ಲಿ ಗುಡ್ಡೆ, ನದಿ, ತೊರೆಗಳಲ್ಲಿ ಈಜಾಡಿ, ಹಕ್ಕಿಯಂತೆ ಹಾರಾಡಿ, ನಾಟಕ-ಯಕ್ಷಗಾನಕ್ಕೆ ಹೋಗಿ ನಿದ್ದೆಯಿಲ್ಲದೆ ತೂಕಾಡಿ, ಎಲ್ಲಾ ಮಕ್ಕಳಂತೆ  ಕೇಪುಳ ಹಣ್ಣನ್ನು  ತಿಂದು ಬದುಕು ಕಟ್ಟಿಕೊಂಡವನು ನಾನು. ಕ್ರೀಡೆಯಲ್ಲಿ ವಿಶೇಷ ಆಸಕ್ತಿಯಿಂದರೂ ಪ್ರೋತ್ಸಾಹದ ಕೊರತೆ ನನ್ನನ್ನು ಕಾಡುತ್ತಿತ್ತು. ನಾನು ಹೊಂದಿದ್ದ  ಅತಿಯಾದ ಆತ್ಮವಿಶ್ವಾಸವೇ ಶಾಲಾ-ಕಾಲೇಜು ದಿನಗಳಲ್ಲಿ ಸತತ ಸೋಲಿನಿಂದ ಪಾಠ ಕಲಿಯುವಂತಾಯಿತು. ಇದರಿಂದ ಧೃತಿಗೆಡಲಿಲ್ಲ. ಮತ್ತೆ ಎದ್ದು-ಬಿದ್ದು, ಮೇಲೆದ್ದು ಗುರಿ ತಲುಪಿದ್ದೇನೆ. ಕ್ರೀಡೆ, ಕಬಡ್ಡಿ-ದೇಹದಾಡ್ಯì ಸ್ಪರ್ಧೆಗಳ ಮುಖಾಂತರ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡೆ. ದೇಹ ಬೆಳೆಸಿ ಗಟ್ಟಿ ಜವಾನನಾಗಿ “ಪೆಟ್ಟಿಸ್ಟ್‌’ ಆಗುವ ಹುಚ್ಚು ಕನಸು ನನ್ನಲ್ಲಿದ್ದರು ಕೂಡಾ ಅದರ ಸಂಗಕ್ಕೆ ತಿಲಾಂಜಲಿ ಇತ್ತು ದಾರಿ ತಿರುಗಿಸಿ ಬೆಳೆದೆ. ಒಟ್ಟಿನಲ್ಲಿ ಹಳ್ಳಿಯಲ್ಲಿ ಬೆಳೆದ ನಾನು  ದಿಲ್ಲಿಯ ಕನಸು ಕಂಡು ಅದರಲ್ಲಿ ಯಶಸ್ವಿಯಾಗಿದ್ದೇನೆ ಎಂಬ ಹೆಮ್ಮೆಯಿದೆ.

ಸ್ನೇಹಕ್ಕೂ ಬದ್ಧ-ಸಮರಕ್ಕೂ ಸಿದ್ಧ…

ವಿಶ್ವಮಟ್ಟದಲ್ಲಿ ರಾರಾಜಿಸುತ್ತಿರುವ ಮುಂಬಯಿ ಬಂಟರ ಸಂಘವು ಅಲ್ಲೇ ರಾರಾಜಿಸಬೇಕು ಎಂಬ ಆಶಯ ನನ್ನದು.  ಯಾವುದೇ ಪದವಿಯನ್ನು ಅಲಂಕರಿಸಿದಾಗ ಸಂಘದಲ್ಲಿ ಹಣ ನುಂಗಲು ಆಗುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಅದು ಶುದ್ಧ ಸುಳ್ಳು. ಬಂಟರ ಸಂಘದಲ್ಲಿ ಎಲ್ಲಾ ಕಾನೂನಿನ ಪರಿಧಿಯೊಳಗೆ  ನಡೆಯುತ್ತದೆ. ಎಲ್ಲರಲ್ಲೂ ಐಕಳ ಮತ್ತೂಮ್ಮೆ ಬಂಟರ ಸಂಘದ ಅಧ್ಯಕ್ಷನಾಗಲು ಅಥವಾ ಇತರ ಉಪಸಮಿತಿಗಳ ಪದವಿಗಾಗಿ ಹಾತೊರೆಯುತ್ತಿದ್ದಾರೆ ಎಂಬ ಭಾವನೆ ಇರಬಹುದು. ಖಂಡಿತವಾಗಿಯೂ ಇಲ್ಲ. ಯಾವುದೇ ಪದವಿಗಾಗಿ ಜೋತು ಬಿದ್ದವನು ನಾನಲ್ಲ. ನನ್ನ ಮುಖ್ಯ ಉದ್ಧೇಶ ಸಂಘದ ಬೆಳವಣಿಗೆ. ಸಂಘದ ನೀತಿ ನಿಯಮಗಳಿಗೆ ವಿರುದ್ಧವಾಗಿ ನಡೆದರೆ  ಅದು ಸಂಬಂಧಿಕರಿರಬಹುದು…ಆತ್ಮೀಯರಿರಬಹುದು ನಾನು ಬಿಟ್ಟವನಲ್ಲ. ಮುಂದೆಯೂ ಬಿಡುವುದಿಲ್ಲ. ನನ್ನ ಮುಂದಿನ ನಡೆ ವಿಶ್ವ ಮಟ್ಟದಲ್ಲಿ ಬಂಟರನ್ನು ಒಗ್ಗೂಡಿಸುವುದು.

ಡಾ| ದಿನೇಶ್‌ ಶೆಟ್ಟಿ ರೆಂಜಾಳ

ಚಿತ್ರ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

BJP-BYV–Muni

Egg Thrown: ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ: ಬಿಜೆಪಿ ನಾಯಕರು ಗರಂ

Nandini-Dosa

New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

courts-s

Belthangady: ಬೈಕ್‌ ಸವಾರ ಸಾವು ಪ್ರಕರಣ; ಸರಕಾರಿ ಬಸ್‌ ಚಾಲಕನಿಗೆ ಶಿಕ್ಷೆ;ದಂಡ

BJP-BYV–Muni

Egg Thrown: ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ: ಬಿಜೆಪಿ ನಾಯಕರು ಗರಂ

Nandini-Dosa

New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.