ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶೇಷ ಮಹಾಸಭೆ
Team Udayavani, Jul 24, 2018, 4:32 PM IST
ಮುಂಬಯಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕ್ರಮ ನಿಬಂಧನೆಗಳಿಗೆ ಮಾಡಿದ ತಿದ್ದುಪಡಿಗಳಿಗೆ ಅಂಗೀಕಾರ ಪಡೆಯಲು ವಿಶೇಷ ಮಹಾಸಭೆಯು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಉಡುಪಿಯ ಶ್ರೀಮತಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆಯಿತು.
ಜಯರಾಮ ಶೆಟ್ಟಿ ಕೊಡಂಕೂರು ಅವರ ಪ್ರಾರ್ಥನೆಯೊಂದಿಗೆ ಸಭೆಯು ಪ್ರಾರಂಭಗೊಂಡಿತು. ಜತೆ ಕಾರ್ಯದರ್ಶಿ ಇಂದ್ರಾಳಿ ಜಯಕರ್ ಶೆಟ್ಟಿ ಅವರು ಸ್ವಾಗತಿಸಿ, ಸೆಪ್ಟಂಬರ್ 9ರಂದು ಜರಗುವ ವಿಶ್ವ ಬಂಟರ ಸಮ್ಮಿಲನ-2018 ಭಾಗ-2 ಇದರ ಪೂರ್ವ ತಯಾರಿಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯದರ್ಶಿ ವಿಜಯಪ್ರಸಾದ್ ಆಳ್ವ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಒಕ್ಕೂಟದ ಸಮಾಜಸೇವೆ ಚಟುವಟಿಕೆಗಳಿಂದ ಆರ್ಥಿಕವಾಗಿ ಅಶಕ್ತ ಕುಟುಂಬಗಳಿಗೆ ಧನಸಹಾಯ ನೀಡಿದ ಬಗ್ಗೆ ವಿವರಣೆ ನೀಡಿದರು. ಅಲ್ಲದೇ 85ಜಿ ನವೀಕರಣವಾಗಿದ್ದು ಮತ್ತು ಭಾರತ ಸರಕಾರದಿಂದ ಸರಕಾರೇತರ ಸೇವಾ ಸಂಸ್ಥೆಯಾಗಿ ನೋಂದಣಿ ಸಂಖ್ಯೆ ಸಿಕ್ಕಿರುತ್ತದೆ. ಇದರಿಂದ ಒಕ್ಕೂಟಕ್ಕೆ ವಿದೇಶಿ ದಾನಿಗಳ ದೇಣಿಗೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕ್ರಮ ನಿಯಮ ನಿಬಂಧನೆಗಳ ತಿದ್ದುಪಡಿ ಸಮಿತಿಯ ವಕೀಲ ಕೆ. ಪೃಥ್ವಿರಾಜ್ ರೈ ಅವರು, ಅಂಗೀಕಾರಕ್ಕೆ ಪ್ರಸ್ತಾವಿಸಿದ ತಿದ್ದುಪಡಿಯ ಸಂಪೂರ್ಣ ವಿವರವನ್ನು ಸಭೆೆಗೆ ತಿಳಿಸಿದರು ಹಾಗೂ ಸದಸ್ಯರಿಂದ ಸಲಹೆ ಸೂಚನೆಯನ್ನು ಕೋರಿದರು. ಅನಂತರ ಅನೇಕ ಸದಸ್ಯರು ತಮ್ಮ ತಮ್ಮ ಸಲಹೆ ಸೂಚನೆಗಳನ್ನು ನೀಡಿ ಕೆಲವು ಬದಲಾವಣೆಯೊಂದಿಗೆ ತಿದ್ದುಪಡಿ ಮಾಡಿ ಕ್ರಮ ನಿಯಮ ನಿಬಂಧನೆಗಳ ತಿದ್ದುಪಡಿಗೆ ಸಭೆಯು ಸರ್ವಾನುಮತದಿಂದ ಅಂಗೀಕಾರ ನೀಡಲಾಯಿತು.
ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಮಾತನಾಡಿ, ಈ ಕ್ರಮ ನಿಯಮ ನಿಬಂಧನೆಗಳ ತಿದ್ದುಪಡಿಗೆ ಸಹಕರಿಸಿದ ತಿದ್ದುಪಡಿ ಸಮಿತಿಯ ಸದಸ್ಯರಿಗೂ, ಸಲಹೆ ಸೂಚನೆ ನೀಡಿದ ಗೌರವಾನ್ವಿತ ಸದಸ್ಯರುಗಳಿಗೂ ಅಭಿನಂದನೆ ಸಲ್ಲಿಸಿದರು. ಇದೇ ವಠಾರದಲ್ಲಿ ಸೆಪ್ಟಂಬರ್‌ನಲ್ಲಿ ನಡೆಯುವ ವಿಶ್ವ ಬಂಟರ ಸಮ್ಮಿಲನ-2018 ಭಾಗ-2 ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಮಾಜ ಬಾಂಧವರು ಭಾಗವಹಿಸಿ ಸಮಾರಂಭವು ವಿಜೃಂಭಣೆೆಯಿಂದ ಜರಗಿ ಯಶಸ್ವಿಯಾಗಲು ಸಹಕಾರ ಹಾಗೂ ಪ್ರೋತ್ಸಾಹವನ್ನು ಕೋರಿದರು. ಒಕ್ಕೂಟದ ವತಿಯಿಂದ ನಿರಂತರವಾಗಿ ಅಶಕ್ತ ಕುಟುಂಬಗಳಿಗೆ ಸಹಾಯ ಹಸ್ತ ನೀಡಲು ಸಹ ಎಲ್ಲರ ಸಹಕಾರ ಕೋರಿದರು.
ಸಭೆಯಲ್ಲಿ ಹಿರಿಯರಾದ ಬಿ. ಜಗನ್ನಾಥ ಶೆಟ್ಟಿ ಬೈಂದೂರು, ಎಸ್. ಜಯರಾಮ ಶೆಟ್ಟಿ ಬೆಳ್ತಂಗಡಿ, ಕರ್ನಲ್ ಎನ್. ಎಸ್. ಭಂಡಾರಿ ಮತ್ತು ಎಂ. ಜೆ. ಶೆಟ್ಟಿ ಸುರತ್ಕಲ್ ಹಾಗೂ ಬಂಟರ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ ಹಾಗೂ ಅನೇಕ ಆಡಳಿತ ಮಂಡಳಿ ಸದಸ್ಯರು ಒಕ್ಕೂಟದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಇತರ ಗಣ್ಯರು ಹಾಜರಿದ್ದರು.
ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ ಅವರು ವಂದಿಸಿದರು. ಸದಸ್ಯ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.