ನವರಾತ್ರಿ ಪ್ರಯುಕ್ತ ಡೊಂಬಿವಲಿಯಲ್ಲಿ ಸೀರೆಗಳ ವಿಶೇಷ ಪ್ರದರ್ಶನ, ಮಾರಾಟ
Team Udayavani, Oct 14, 2021, 6:38 PM IST
ಡೊಂಬಿವಲಿ: ಮೀರಾರೋಡ್ ಪೂರ್ವದ ಶ್ರೀ ಕಟೀಲೇಶ್ವರಿ ಸಾರೀಸ್‌ನವರಿಂದ ನವರಾತ್ರಿ ಪ್ರಯುಕ್ತ ಡೊಂಬಿವಲಿಯಲ್ಲಿ ಸೀರೆಗಳ ವಿಶೇಷ ಪ್ರದರ್ಶನ ಮತ್ತು ಮಾರಾಟವನ್ನು ಅ. 10ರಂದು ಡೊಂಬಿವಲಿಯ ಠಾಕೂರ್ ಹಾಲ್‌ನಲ್ಲಿ ಆಯೊಜಿಸಲಾಗಿತ್ತು.
ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಅನಿತಾ ಬಾಲಕೃಷ್ಣ ಭಂಡಾರಿ ಅವರು ದೀಪ ಪ್ರಜ್ವಲಿಸಿ ಸೀರೆಗಳ ವಿಶೇಷ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ನೀಡಿದರು. ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಉಪಾಧ್ಯಕ್ಷ ಎಕ್ಕಾರು ಆನಂದ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಡೊಂಬಿವಲಿ ಸ್ಥಳೀಯ ಕಚೇರಿಯ ಸಮಾಜ ಕಲ್ಯಾಣ ವಿಭಾಗದ ಕಾರ್ಯಾಧ್ಯಕ್ಷ ರವಿ ಸನಿಲ್, ಜಗಜ್ಯೋತಿ ಕಲಾವೃಂದ ಡೊಂಬಿವಲಿ ಮಾಜಿ ಅಧ್ಯಕ್ಷ ವಸಂತ ಸುವರ್ಣ, ಸುಮಾ ಕರುಣಾಕರ ಶೆಟ್ಟಿ, ದಿವ್ಯಾ ಸುಧಾಕರ ಶೆಟ್ಟಿ, ಸಿರಿನಾಡ ವೆಲ್ಫೆàರ್ ಅಸೋಸಿಯೇಶನ್ ಡೊಂಬಿವಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉದಯ ಜಯರಾಮ್ ಶೆಟ್ಟಿ, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕೋಶಾಧಿಕಾರಿ ಲತಾ ಆನಂದ ಶೆಟ್ಟಿ, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಾಜಿ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಮತ್ತು ಲೀಲಾ ಶೆಟ್ಟಿ, ಸುಜಯಾ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ಥಳೀಯ ತುಳು- ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶುಭ ಹಾರೈಸಿದರು. ಶ್ರೀ ಕಟೀಲೇಶ್ವರಿ ಸಾರೀಸ್ ಸಂಸ್ಥೆಯ ಪಾಲುದಾರರಾದ ಹಂಸರಾಜ್ ಶೆಟ್ಟಿ ಮತ್ತು ಸುರೇಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ವಸಂತ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
ಸುಮಾರು 7 ವರ್ಷಗಳ ಹಿಂದೆ ಮೀರಾರೋಡ್ ರೈಲು ನಿಲ್ದಾಣ ಸಮೀಪದ ಶಾಂತಿ ಶಾಪಿಂಗ್ ಸೆಂಟರ್‌ನಲ್ಲಿ ಸ್ಥಾಪನೆಗೊಂಡ ಶ್ರೀ ಕಟೀಲೇಶ್ವರಿ ಸಾರೀಸ್ ಸಂಸ್ಥೆಯು ಊರ-ಪರವೂರ ಬಾಂಧವರ ಉತ್ತಮ ಮಟ್ಟದ ಸೀರೆಗಳ ಮಾರಾಟ ಮಳಿಗೆ ಎಂದೇ ಪ್ರಶಂಸೆಗೆ ಪಾತ್ರವಾಗಿದೆ. ತನ್ನ ಸೇವಾ ತತ್ಪರತೆಯಲ್ಲಿ ಉತ್ಪಾದನ ಘಟಕಗಳಿಂದಲೇ ಸೀರೆಗಳನ್ನು ತಂದು ಗ್ರಾಹಕರ ಅನುಕೂಲತೆಗೆ ತಕ್ಕಂತೆ ಕೈಗೆಟಕುವ ದರದಲ್ಲಿ ಸೀರೆಗಳನ್ನು ಮಾರಾಟ ಮಾಡುತ್ತಿರುವ ಸಂಸ್ಥೆಯು ಗ್ರಾಹಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಹಬ್ಬದ ಸಂಭ್ರಮಕ್ಕೆ ರಿಯಾಯಿತಿ ದರ :
ಮೀರಾರೋಡ್‌ನಲ್ಲಿರುವ ಶ್ರೀ ಕಟೀಲೇಶ್ವರಿ ಸಾರೀಸ್ ಮಳಿಗೆಯು ಇದೀಗ ಸುಮಾರು 1,200 ಚದರ ಅಡಿಯಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ಗ್ರಾಹಕರಿಗೆ ಗುಣಮಟ್ಟದ ಸೀರೆಗಳ ಖರೀದಿಗೆ ಯೋಗ್ಯ ತಾಣವಾಗಿ ಕಂಗೊಳಿಸುತ್ತಿದೆ. ಕಾಂಜೀವರಂ ಸಿಲ್ಕ್ Õ, ವೈವಿಧ್ಯಮಯ ವಿನ್ಯಾಸಗಳ ಮದುವೆ ಸೀರೆಗಳು, ಸಿಲ್ಕ್ ಸೀರೆಗಳು, ಸಾಫ್ಟ್ ಸಿಲ್ಕ್ಸ್, ಸಿಲ್ಕ್ಸ್ ಕಾಟನ್, ಕಾಂಚಿ ಕಾಟನ್, ಬೆಂಗಳೂರು ಸಿಲ್ಕ್, ಡಿಸೈನರ್ ಸೀರೆಗಳು, ರಾಮ್ ರಾಜ್ ದೋತಿ ಹಾಗೂ ಮಕ್ಕಳ ವಿವಿಧ ಶೈಲಿಯ ವಸ್ತ್ರಗಳು ಮಾತ್ರವಲ್ಲದೆ ನಮ್ಮೂರಿನವರ ಅನೂಕೂಲತೆಗಾಗಿ ಹಬ್ಬದ ಸಂಭ್ರಮದಲ್ಲಿ ವಿಶೇಷ ರಿಯಾಯಿತಿ ದರಗಳಲ್ಲಿ ಮಾರಾಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
-ಚಿತ್ರ-ವರದಿ: ವೈ. ಟಿ. ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.