ಕುರ್ಲಾದ ಬಾಲಾಜಿ ಮಂದಿರದಲ್ಲಿ ಕೈವಲ್ಯ ಶ್ರೀ: ವಿಶೇಷ ಮಹಾ ಸಭೆ
Team Udayavani, May 22, 2018, 5:58 PM IST
ಮುಂಬಯಿ: ಶುದ್ಧ ಅಂತಃಕರಣದಿಂದ ಮಾಡುವ ದೇವರ ಉಪಾಸನೆ ನೇವರಾಗಿ ದೇವರಿಗೆ ಸಲ್ಲುತ್ತದೆ. ಅಂತೆಯೆ ಮಾನಸಿಕ ವಾಗಿ ನಾವು ಬಲಾಡ್ಯತೆಯನ್ನು ಇದರಿಂದ ಪಡೆಯಬಹುದು. ಆಸ್ತಿಕ ಭಾವನೆಯ, ಶುದ್ಧಚಿತ್ರದ ಭಕ್ತಿಯಿಂದ ದೇವರು ಸಂಪ್ರೀತನಾಗುತ್ತಾನೆ. ಸತ್ಕರ್ಮಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದರೆ ಅದುವೇ ಜ್ಞಾನ ಶುದ್ಧೀಕರಣಕ್ಕೆ ಚೈತನ್ಯ ತುಂಬುತ್ತದೆ. ಲೌಖೀಕ ಜ್ಞಾನಕ್ಕಿಂತ ಪಾರಮಾರ್ಥಿಕ ಜ್ಞಾನವೇ ಶ್ರೇಷ್ಠವಾಗಿದೆ ಎಂದು ಜಿಎಸ್‌ಬಿ ಸಮಾಜದ ಆದಿಮಠ ಗೋವಾ ಪೊಂಡಾದ ಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀಮದ್ ಶಿವಾನಂದ ಸರಸ್ವತಿ ಶ್ರೀಪಾದರು ನುಡಿದರು.
ಕುರ್ಲಾದ ಬಾಲಾಜಿ ಮಂದಿರದಲ್ಲಿ ಸುವರ್ಣ ಗಣೇಶೋತ್ಸವ ವರ್ಷದ ಅಂಗವಾಗಿ ಮೇ 2 ರಂದು ಆಯೋಜಿಸಲಾಗಿದ್ದ ವಿಶೇಷ ಮಹಾ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಜಿಎಸ್‌ಬಿ ಸಮಾಜ ಬಾಂಧವರು ನಿಜವಾಗಿಯೂ ಭಾಗ್ಯವಂತರು, ಅದೃಷ್ಟವಂತರು. ವ್ಯವಹಾರಿಕ ಜ್ಞಾನವಷ್ಟೇ ಅಲ್ಲ, ಆಧ್ಯಾತ್ಮಿಕ ಜ್ಞಾನದಿಂದ ಪ್ರಗತಿಪಥಕ್ಕೆ ಸಾಗುತ್ತಿರುವ ಜಿಎಸ್‌ಬಿ ಸಮುದಾಯವರು ಧನ್ಯರು. ಕುರ್ಲಾ ಬಾಲಾಜಿ ಮಂದಿರ ಹಾಗೂ ಕಾರ್ಯಕರ್ತರ ಶ್ರೇಯಸ್ಸಿಗೆ ದೇವರಲ್ಲಿ ಪ್ರಾರ್ಥಿಸೋಣ ಎಂದು ನುಡಿದರು.
ಧಾರ್ಮಿಕ ಕಾರ್ಯಕ್ರಮವಾಗಿ ಪ್ರಾರಂಭದಲ್ಲಿ ವೇದಮೂರ್ತಿ ತ್ರಿವಿಕ್ರಮ ಆಚಾರ್ಯದಿಂದ ವೇದಘೋಷ, ನಾಮಸ್ಮರಣೆ, ಪಂತ್ರೋಪದೇಶಗೈದು ಶ್ರೀಗಳನ್ನು ವ್ಯಾಸಪೀಠಕ್ಕೆ ಸ್ವಾಗತಿಸಲಾಯಿತು. ಸ್ವಾಮೀಜಿ ಅವರ ಪಾದಪೂಜೆಯ ಬಳಿಕ ಕುರ್ಲಾ ಬಾಲಾಜಿ ಮಂದಿದ ಅಧ್ಯಕ್ಷ ಗಣೇಶ್ ಕಾಮತ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಸಾಧನೆಗಳನ್ನು ವಿವರಿಸಿ ಸ್ವಾಗತಿಸಿದರು.
ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು ಶ್ರೀಗಳು ಗೌರವಿಸಿದರು. ಸುವರ್ಣ ಮಹೋತ್ಸವದ ಕಾರ್ಯಾಧ್ಯಕ್ಷ ವಿವೇಕ್ ಭಂಡಾರಿ ಅವರು 2017, ಸೆಪ್ಟೆಂಬರ್‌ನಿಂದ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಸರ್ವರ ಸಹಕಾರವನ್ನು ಕೋರಿದರು.
ಕುರ್ಲಾ ಬಾಲಾಜಿ ಮಂದಿರ ಹಾಗೂ ಸುವರ್ಣ ಮಹೋತ್ಸವದ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು, ಮುಂಬಯಿಯ ವಿವಿಧ ಜಿಎಸ್‌ಬಿ ಸಮಾಜದ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು, ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕಮಲಾಕ್ಷ ಸರಾಫ್ ಸಹಕರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.