ಮದರ್ ಇಂಡಿಯಾ ಹಳೆವಿದ್ಯಾರ್ಥಿ ಸಂಘ, ಜನತಾ ಶಿಕ್ಷಣ ಸಂಸ್ಥೆ ವಿಶೇಷ ಸಭೆ
Team Udayavani, Aug 5, 2018, 2:56 PM IST
ಮುಂಬಯಿ: ಮದರ್ ಇಂಡಿಯಾ ಹಳೆವಿದ್ಯಾರ್ಥಿ ಸಂಘ ಹಾಗೂ ಜನತಾ ಶಿಕ್ಷಣ ಸಂಘದ ಒಕ್ಕೂಟಕ್ಕೆ ನೂತನವಾಗಿ ಆಯ್ಕೆ ಯಾದ ಪದಾಧಿಕಾರಿಗಳ ಸಭೆಯು ಜು. 29ರಂದು ಫೋರ್ಟ್ ಪರಿಸರದ ಜೀವನ್ ಪ್ರಕಾಶ್ ಕಟ್ಟಡದ ನಾಲ್ಕನೇ ಮಹಡಿಯ ಎಲ್‌ಐಸಿ ಕ್ಯಾಂಟೀನ್‌ನಲ್ಲಿ ನಡೆಯಿತು.
ಸಂಸ್ಥೆಗೆ ಪುನಃರಾಯ್ಕೆಗೊಂಡ ಪ್ರಧಾನ ಕಾರ್ಯದರ್ಶಿ ಹರೀಶ್ ಮೈಂದನ್ ಅವರು ನೂತನ ಸಮಿತಿಗೆ ಆಯ್ಕೆಗೊಂಡ ಸಮಿತಿಯ ಸದಸ್ಯರನ್ನು ಸ್ವಾಗತಿಸಿದರು. ಹಲವಾರು ವರ್ಷಗಳಿಂದ ಮದರ್ ಇಂಡಿಯಾ ಬಳಗದ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಮಂದಾರ್ ಎನ್. ಹೆಗ್ಡೆ ಅವರು ನೂತನ ಕೋಶಾ ಧಿಕಾರಿಯಾಗಿ ಆಯ್ಕೆಗೊಂಡ ಟಿ. ಎನ್. ಪೂಜಾರಿ ಅವರಿಗೆ ಸಂಘದ ಲೆಕ್ಕಪತ್ರಗಳನ್ನು ಹಸ್ತಾಂತರಿಸಿ ಇತರ ವಿವರಗಳನ್ನು ನೀಡಿದರು.
ಸಂಘದ ಮಾಜಿ ಅಧ್ಯಕ್ಷ ಸುಂದರ ಮೊಲಿ ಅವರು ಜನತಾ ಶಿಕ್ಷಣ ಸಂಘದ ಹಾಗೂ ಮದರ್ ಇಂಡಿಯಾ ಶಾಲೆಯ ಹಳೆ ವಿದ್ಯಾರ್ಥಿ ಸಂಘಗಳ ಕೆಲವೊಂದು ಜಂಟಿಯಾಗಿ ಆಯೋಜಿಸುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಸಂಪೂರ್ಣ ವಿವರ ನೀಡಿದರು. ಸ್ಕೌಟ್ ಶಿಕ್ಷಕ ರಾಮದಾಸ್ ನಾಯಕ್, ವಸಾಯಿಯ ಜಯರಾಮ ಪೂಜಾರಿ, ಶೇಖರ ಮೂಲ್ಯ, ಚಂದ್ರಹಾಸ್ ಬೆಳ್ಚಡ, ಗಣೇಶ್ ಕುಂದರ್, ಮಂದಾರ ಎನ್. ಹೆಗ್ಡೆ, ಹೇಮಂತ್ ಪೂಜಾರಿ, ಚಂದ್ರಹಾಸ್ ಶೆಟ್ಟಿ, ಜಯ ಸಿ. ಪೂಜಾರಿ, ಮಂಜುನಾಥ ಕೆ. ಪೂಜಾರಿ, ಸುಂದರ ಜೆ. ಶೆಟ್ಟಿ ಅವರು ಮಾತನಾಡಿ ಸಲಹೆ-ಸೂಚನೆಗಳನ್ನು ನೀಡಿದರು.
ಟಿ. ಎನ್. ಪೂಜಾರಿ ಇವರು ಮಾತನಾಡಿ, ಮದರ್ ಇಂಡಿಯಾ ಬಳಗದ ಹಳೆವಿದ್ಯಾರ್ಥಿಗಳು ಇಲ್ಲಿಯವರೆಗೆ ಯಾವ ರೀತಿಯಲ್ಲಿ ಸಹಕಾರ ನೀಡಿದ್ದೀರಿ ಅದೇ ರೀತಿಯಲ್ಲಿ ಮುಂದೆಯೂ ಪ್ರೋತ್ಸಾಹ ನೀಡಬೇಕು ಎಂದರು.
ಅಧ್ಯಕ್ಷ ಸುರೇಂದ್ರ ಎ. ಪೂಜಾರಿ ಇವರು ನೂತನವಾಗಿ ಆಯ್ಕೆಯಾದ ಸಮಿತಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ, ನಮ್ಮ ಹಳೆವಿದ್ಯಾರ್ಥಿ ಸಂಘವು ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಪುನೀತ್ ಕುಮಾರ್ ಶೆಟ್ಟಿ ಅವರು ಪ್ರತೀ ವರ್ಷ ಶೈಕ್ಷಣಿಕವಾಗಿ ದತ್ತು ಪಡೆದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಸಂಘದ ಮುಖಾಂತರ ಸಹಕರಿಸುತ್ತಿರುವುದು ಅಭಿನಂದನೀಯ. ಇಲ್ಲಿ ಯಾವುದೇ ರೀತಿಯ ಜಾತಿ, ಮತ, ಧರ್ಮ ಎಂದಿಗೂ ಅಡ್ಡಿಯಾಗುವುದಿಲ್ಲ. ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಒಗ್ಗಟ್ಟಾಗಿ ಸಂಸ್ಥೆಯನ್ನು ಮುನ್ನಡೆಸೋಣ. ಸದಸ್ಯ ಒಬ್ಬರಿಗೊಬ್ಬರು ಸಹಕರಿಸುವ ಗುಣವನ್ನು ಹೊಂದಬೇಕು. ತಪ್ಪನ್ನು ತಿದ್ದಿಕೊಂಡು ಮುನ್ನಡೆಯಬೇಕು ಎಂದು ನುಡಿದರು.
ಉಪಾಧ್ಯಕ್ಷ ಉಮೇಶ್ ಶೆಟ್ಟಿ ಅವರು ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ಸಹಕರಿಸೋಣ ಎಂದರು. ಸಂಘದ ಕ್ರೀಡಾ ಸಮಿತಿಯ ಕಾರ್ಯದರ್ಶಿ ಜಯ ಸಿ. ಪೂಜಾರಿ, ಯಶವಂತ್ ಎನ್. ಪೂಜಾರಿ, ಶಂಕರ ಶೆಟ್ಟಿ, ಜಯರಾಮ ಕೆ. ಪೂಜಾರಿ ಅವರು ನವೆಂಬರ್‌ನಲ್ಲಿ ಸಿಬಿಡಿ ಬೇಲಾಪುರದಲ್ಲಿ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುವ ಬಗ್ಗೆ ಮಾಹಿತಿ ನೀಡಿದರು. ಕರುಣಾಕರ ಎಂ. ಪೂಜಾರಿ, ಸಂತೋಷ್ ಶೆಟ್ಟಿ, ಸದಾನಂದ ಶೆಟ್ಟಿ ಅವರು ತಾಲೂಕು ತಂಡಗಳ ಸದಸ್ಯರು ಒಮ್ಮತದಿಂದ ಪಾಲ್ಗೊಳ್ಳಬೇಕು ಎಂದರು. ಜತೆ ಕಾರ್ಯದರ್ಶಿ ಅಶೋಕ್ ಸುವರ್ಣ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.