ಶ್ರೀ ಆದಿಶಕ್ತಿ ಕನ್ನಡ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಿಗೆ ಸಮ್ಮಾನ
Team Udayavani, Mar 7, 2019, 2:13 PM IST
ಥಾಣೆ: ಶ್ರೀ ಆದಿಶಕ್ತಿ ಕನ್ನಡ ಸಂಘ ಸಂಚಾಲಿತ ಶ್ರೀ ಆದಿಶಕ್ತಿ ಕನ್ನಡ ಶಾಲೆಯಲ್ಲಿ 36 ವರ್ಷದ ಸೇವೆಯಲ್ಲಿ 28 ವರ್ಷ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾಗಿ ನಿವೃತ್ತರಾದ ರವೀಂದ್ರ ಬಿ. ಅವರ ಬೀಳ್ಕೊಡುವ ಮತ್ತು ಸಮ್ಮಾನ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ಫೆ. 28ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘ ಮತ್ತು ಶಾಲೆಯ ಅಧ್ಯಕ್ಷ ಭಾಸ್ಕರ ಎಂ. ಶೆಟ್ಟಿ ಇವರು ಮಾತನಾಡಿ, ಜಗತ್ತಿನಲ್ಲಿ ಶಿಕ್ಷಕರ ಸ್ಥಾನಮಾನ ಅತ್ಯಂತ ಪವಿತ್ರವಾದುದು. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡಿದ್ದಾರೆ. ರವೀಂದ್ರ ಬಿ. ಅವರು ಓರ್ವ ದಕ್ಷ ಆಡಳಿತಗಾರ ಮತ್ತು ಶಿಸ್ತುಬದ್ಧ ನಿಷ್ಠಾವಂತ ಶಿಕ್ಷಕರಾಗಿದ್ದಾರೆ. ನಮ್ಮ ಶಿಕ್ಷಣ ಸಂಸ್ಥೆಗೆ ಇವರ ಆವಶ್ಯಕತೆ ಮುಂದೆಯೂ ಇದೆ. ಅವರ ಪ್ರತಿಯೊಂದು ಕೆಲಸದಲ್ಲಿಯೂ ಅಚ್ಚುಕಟ್ಟು
ತನವಿದೆ. ಕರ್ತವ್ಯಕ್ಕೆ ಪ್ರಾಮುಖ್ಯ ನೀಡಿ ತಮ್ಮ ಸೇವೆಯನ್ನು ನಿಷ್ಠೆಯಿಂದ ಮಾಡಿ, ಇತರರಿಗೆ ಮಾದರಿಯಾಗಿದ್ದಾರೆ. ವಿದ್ಯಾರ್ಥಿಗಳ ಏಳ್ಗೆ ಗಾಗಿ ಮುಡಿಪಾಗಿಟ್ಟು ಅವರ ಸೇವೆಯನ್ನು ವಿದ್ಯಾರ್ಥಿಗಳು, ಪಾಲಕರು ಮತ್ತು ಸಂಸ್ಥೆ ಮರೆಯಲು ಸಾಧ್ಯವಿಲ್ಲ. ಅವರ ನಿವೃತ್ತ ಜೀವನಸುಖದಿಂದ ಸಾಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಗೌರವ ಕಾರ್ಯದರ್ಶಿ ವಾದಿರಾಜ ಶೆಟ್ಟಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಮಾಧ್ಯಮಿಕ ವಿಭಾಗದ ಮುಖ್ಯ ಶಿಕ್ಷಕಿ ವಿಮಲಾ ಕರ್ಕೇರ ಅವರು ಸ್ವಾಗತಿಸಿದರು. ಶಾಲೆಯ ವಿದ್ಯಾರ್ಥಿಗಳಾದ ಸಂಜಯ್, ರಕ್ಷಾ, ಶ್ರೀಧರ್, ನಂದನ ಮಾತನಾಡಿದರು. ಪಾಲಕ-ಶಿಕ್ಷಕ ಸಂಘಟನೆಯ ವತಿಯಿಂದ ಅಶ್ವಿನಿ ಜವಳಗಿ ಅವರು ಮಾತನಾಡಿದರು.
ಸಂಘದ ಮಾಜಿ ಅಧ್ಯಕ್ಷರಾದ ಜಯರಾಮ ಜಿ. ಶೆಟ್ಟಿ, ಇನ್ನೋರ್ವ ಮಾಜಿ ಅಧ್ಯಕ್ಷ ಶಿಮಂತೂರು ಶಂಕರ ಶೆಟ್ಟಿ, ರಮಾನಾಥ ಐಲ್ ಅವರು ರವೀಂದ್ರ ಬಿ. ಅವರ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಶಾಲಾ ಶಿಕ್ಷಕರಾದ ಪ್ರಕಾಶ್ ಚಿಂತಾಮಣಿ, ಪುಷ್ಪಾ ಆರ್. ಕುಂಬ್ಳೆ, ನಳಿನಿ ಎಸ್. ಶೆಟ್ಟಿ, ಪ್ರಮೋದಾ ಮಾಡಾ, ಸಂತೋಷ್ ದೊಡ್ಡಮನೆ, ವೆಂಕಟರಮಣ ಶೆಣೈ, ನಿವೃತ್ತ ಶಿಕ್ಷಕರಾದ ಚಂದ್ರಾವತಿ ಉದ್ಯಾವರ ಮತ್ತು ಶಾಲಿನಿ ಆರ್. ಶೆಟ್ಟಿ ಅವರು ರವೀಂದ್ರ ಬಿ. ಅವರ ಗುಣಗಾನಗೈದು ಶುಭ ಹಾರೈಸಿದರು.
ಸುಜಯಾ ಎಲ್. ಜೈನ್ ಹಾಗೂ ಮಾಜಿ ಮುಖ್ಯ ಶಿಕ್ಷಕರಾದ ಲೋಕನಾಥ ಜೈನ್ ಅವರು ಸಂದೇಶವನ್ನು ಪ್ರಮೋದಾ ಮಾಡಾ ವಾಚಿಸಿದರು, ಇದೇ ಸಂದರ್ಭದಲ್ಲಿ ರವೀಂದ್ರ ಬಿ. ಅವರಿಗೆ ಸಂಘದ ವತಿಯಿಂದ ಸ್ಮರಣಿಕೆ, ಸಮ್ಮಾನ ಪತ್ರ, ಶಾಲು, ಫಲಪುಷ್ಪವನ್ನಿತ್ತು ಗೌರವಿಸಲಾಯಿತು. ಸಮ್ಮಾನ ಪತ್ರವನ್ನು ಪುಷ್ಪಾ ಆರ್. ಕುಂಬ್ಳೆ ಅವರು ವಾಚಿಸಿದರು. ಶಾಲಾ ಶಿಕ್ಷಕರಿಂದ, ಹಳೆ ವಿದ್ಯಾರ್ಥಿಗಳಿಂದ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಪಾಲಕರ ಸಂಘಟನೆ ಮತ್ತು ವಿದ್ಯಾರ್ಥಿಗಳು ಸ್ಮರಣಿಕೆಯನ್ನಿತ್ತು ಅಭಿನಂದಿಸಿದರು.
ಸಮ್ಮಾನ ಸ್ವೀಕರಿಸಿದ ಮಾತನಾಡಿದ ರವೀಂದ್ರ ಬಿ. ಅವರು, ತಾನು 28 ವರ್ಷ ಈ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಕಾರ್ಯ ನಿರ್ವಹಿಸಲು ಸಹಕರಿಸಿದ ಎಲ್ಲರನ್ನು ಸ್ಮರಿಸಿದರು. ಸಂಘದ ಹಿಂದಿನ ಹಾಗೂ ಪ್ರಸ್ತುತ ಪದಾಧಿಕಾರಿಗಳು ಸಹಕರಿಸಿದ್ದಾರೆ. ಮಾಧ್ಯಮಿಕ ಹಾಗೂ ಪ್ರಾಥಮಿಕ ವಿಭಾಗದ ಸಹೋದ್ಯೋಗಿಗಳ ಪೂರ್ಣ ಸಹಕಾರದಿಂದ 36 ವರ್ಷ ಈ ಶಾಲೆಯಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಯಿತು ಎಂದರು.
ಹಳೆವಿದ್ಯಾರ್ಥಿಗಳಿಗೆ, ಪಾಲಕರಿಗೆ, ಶಿಕ್ಷಕರಿಗೆ ಶಾಲೆಯ ಶ್ರೇಯಸ್ಸಿಗೆ ದುಡಿಯಿರಿ ಎಂದು ಕರೆ ನೀಡಿದ ಅವರು, ಮನುಷ್ಯ ಶಾಶ್ವತವಲ್ಲ. ಆದರೆ ಶಾಲೆ ಹಾಗೂ ಸಂಸ್ಥೆ ಸ್ಥಿರವಾಗಿ ಇರುವ ಒಂದು ಸಂಪತ್ತು. ಹಳೆ ವಿದ್ಯಾರ್ಥಿಗಳು ಎಲ್ಲಾ ರೀತಿಯಿಂದ ಸಹಕರಿಸುತ್ತಾ ಶಾಲೆಯ ಕೀರ್ತಿಯನ್ನು ಬೆಳಗಿಸಿ ಎಂದರು.
ಜಯರಾಮ ಕೆ. ಶೆಟ್ಟಿ, ಅಜಿತ್ ಕರ್ನಂತಾಯ, ಯೋಗೇಶ್ ಶೆಟ್ಟಿ, ಹಳೆವಿದ್ಯಾರ್ಥಿಗಳು, ಪಾಲಕರು, ನಿವೃತ್ತ ಶಿಕ್ಷಕ ರವೀಂದ್ರ ಬಿ. ಅವರ ಪತ್ನಿ ಮತ್ತು ಮಕ್ಕಳು ಉಪಸ್ಥಿತರಿದ್ದರು. ವೆಂಕಟರಮಣ ಶೆಣೈ ಕಾರ್ಯಕ್ರಮ ನಿರ್ವಹಿಸಿದರು. ಪ್ರಕಾಶ್ ಚಿಂತಾಮಣಿ ವಂದಿಸಿದರು. ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕವೃಂದದವರು, ಶಿಕ್ಷಕೇತರ ಸಿಬಂದಿಗಳು, ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಾ. ತುಂಬೆ ಮೊಯ್ದೀನ್ ಅವರಿಗೆ ಪ್ರತಿಷ್ಠಿತ ಗ್ಲೋಬಲ್ ವಿಷನರಿ ಎನ್‌ಆರ್‌ಐ ಪ್ರಶಸ್ತಿ
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Jimmy Carter Life Journey: ಜಿಮ್ಮಿ ಕಾರ್ಟರ್- ಮಾನವೀಯತೆ, ಶಾಂತಿಯ ಶಿಲ್ಪಿ
ವೈಕುಂಠ ಏಕಾದಶಿ: ಅಮೆರಿಕ ದೇವಸ್ಥಾನದಲ್ಲಿ ಆಚರಣೆ